ಹಿಂದೂ ರಾಷ್ಟ್ರದ ಸಂಕಲ್ಪವನ್ನು ಮಾಡುವ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಜ್ಯೋತಿಷ್ಯ ಶಾಸ್ತ್ರೀಯ ವಿಶ್ಲೇಷಣೆ !

ಶ್ರೀ. ರಾಜ ಧನಂಜಯ ಕರ್ವೆ

‘ಮಹರ್ಷಿಗಳು ನಾಡಿಭವಿಷ್ಯದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರು ‘ಶ್ರೀವಿಷ್ಣುವಿನ ಅವತಾರವಾಗಿದ್ದಾರೆ, ಎಂದು ಹೇಳಿದ್ದಾರೆ. ಮಹರ್ಷಿಗಳು ಪರಾತ್ಪರ ಗುರು ಡಾಕ್ಟರರ ದಿವ್ಯತ್ವದ ಪರಿಚಯವನ್ನು ಸಾಧಕರಿಗೆ ಮಾಡಿಕೊಟ್ಟರು. ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯ ವರು ‘ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪವನ್ನು ಮಾಡಿದ್ದಾರೆ. ಇದಕ್ಕಾಗಿ ಅವರು ಅವಿರತವಾಗಿ ಕಾರ್ಯನಿರತರೂ ಆಗಿದ್ದಾರೆ. ಅವರು ಮಾಡುತ್ತಿರುವ ವ್ಯಾಪಕ ಕಾರ್ಯವನ್ನು ಅವಲೋಕಿಸಿದಾಗ ‘ಇಂತಹ ಕಾರ್ಯವನ್ನು ಕೇವಲ ಅವತಾರಿ ಜೀವವೇ ಮಾಡಬಹುದು, ಎಂಬುದರ ಮನವರಿಕೆಯಾಗುತ್ತದೆ. ಅವರ ಜಾತಕದಲ್ಲಿನ “ಉಚ್ಚ ಆಧ್ಯಾತ್ಮಿಕ ಯೋಗದ ಸಂದರ್ಭದಲ್ಲಿನ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

೧. ಪರಾತ್ಪರ ಗುರು ಡಾ. ಆಠವಲೆಯವರ ಜಾತಕದಲ್ಲಿನ ಉಚ್ಚ ಆಧ್ಯಾತ್ಮಿಕ ಯೋಗ !

ಪರಾತ್ಪರ ಗುರು ಡಾ. ಆಠವಲೆಯವರ ಜಾತಕ ದಲ್ಲಿ ಪ್ರಥಮಸ್ಥಾನದಲ್ಲಿ ಮಿಥುನ ರಾಶಿ (ಲಗ್ನ ರಾಶಿ)ಇದೆ.  ಜಾತಕದಲ್ಲಿ ಬುಧ, ಗುರು, ಶನಿ ಹಾಗೂ ಹರ್ಷಲ ಈ ೪ ಗ್ರಹಗಳು ಹನ್ನೆರಡನೇಯ (ಮೋಕ್ಷ) ಸ್ಥಾನದಲ್ಲಿವೆ. ಈ ಗ್ರಹಸ್ಥಿತಿಯಿಂದ ಜಾತಕದಲ್ಲಿ ಉಚ್ಚ ಆಧ್ಯಾತ್ಮಿಕ ಯೋಗಗಳು ನಿರ್ಮಾಣವಾಗಿವೆ. ಅದೇ ರೀತಿ ಜಾತಕದಲ್ಲಿ ರವಿ ಗ್ರಹವೂ ಉಚ್ಚ ರಾಶಿಯಲ್ಲಿದೆ. ಈ ಯೋಗಗಳ ವಿವರಣೆಯನ್ನು ಮುಂದೆ ನೀಡಲಾಗಿದೆ.

೧ ಅ. ಜಾತಕದಲ್ಲಿ ‘ಬುಧ ಹಾಗೂ ಗುರು ಈ ಗ್ರಹಗಳು ಒಟ್ಟಾಗಿರುವುದು, ಈ ಯೋಗವು ಗ್ರಂಥಗಳ ನಿರ್ಮಿತಿಗೆ ಅನುಕೂಲವಾಗಿದೆ : ಬುಧ ಗ್ರಹವು ಲೇಖನ, ಸಂಕಲನ, ಪ್ರಕಾಶನ ಮತ್ತು ಪ್ರಸಾರ ಮಾಧ್ಯಮಗಳ ಕಾರಕವಾಗಿದೆ ಮತ್ತು ಗುರು ಗ್ರಹವು ಜ್ಞಾನದ ಕಾರಕವಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರ ಜಾತಕದಲ್ಲಿ ‘ಬುಧ ಹಾಗೂ ಗುರು ಗ್ರಹಗಳು ಒಟ್ಟಾಗಿರುವುದು, ಈ ಯೋಗವು ಗ್ರಂಥನಿರ್ಮಿತಿಗಾಗಿ ಅನುಕೂಲವಾಗಿದೆ. ಪರಾತ್ಪರ ಗುರು ಡಾಕ್ಟರರು ಇಂದಿನವರೆಗೆ ಅಧ್ಯಾತ್ಮ, ಆಚಾರಧರ್ಮ, ದೇವತೆಗಳು ಹಾಗೂ ಅವರ ಉಪಾಸನೆ, ಭಾವಿ ಆಪತ್ಕಾಲದಲ್ಲಿನ ಸಂಜೀವಿನಿ ಇತ್ಯಾದಿ ವಿವಿಧ ವಿಷಯಗಳ ಬಗ್ಗೆ ೩೦೦ ಕ್ಕೂ ಹೆಚ್ಚು ಗ್ರಂಥಗಳನ್ನು ನಿರ್ಮಿಸಿದ್ದಾರೆ. ಪರಾತ್ಪರ ಗುರು ಡಾಕ್ಟರರು ಪ್ರಾರಂಭಿಸಿದ ‘ಸನಾತನ ಪ್ರಭಾತ ನಿಯತಕಾಲಿಕೆ ಹಾಗೂ ಜಾಲ ತಾಣಗಳ ಮಾಧ್ಯಮದಿಂದ ಅಧ್ಯಾತ್ಮಪ್ರಚಾರದ ಕಾರ್ಯವು ಪ್ರಭಾವಶಾಲಿ ನಡೆದಿದೆ.

೧ ಆ. ಜಾತಕದಲ್ಲಿ ಬುಧ, ಶನಿ ಹಾಗೂ ಹರ್ಷಲ ಈ ಗ್ರಹಗಳು ಒಟ್ಟಾಗಿರುವುದರಿಂದ ಅದ್ವಿತೀಯ ಆಧ್ಯಾತ್ಮಿಕ ಸಂಶೋಧನೆ ಮಾಡುವುದು : ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಬುಧ ಹಾಗೂ ಶನಿ ಈ ಗ್ರಹಗಳು ಒಟ್ಟಾಗಿವೆ, ಈ ಯೋಗವು, ಜಿಜ್ಞಾಸೆ, ಉತ್ತಮ ನಿರೀಕ್ಷಣಾ ಕ್ಷಮತೆ ಹಾಗೂ ಸಂಶೋಧಕ ಬುದ್ಧಿ ಈ ವೈಶಿಷ್ಟ್ಯಗಳನ್ನು ತೋರಿಸುತ್ತದೆ. ಈ ಯೋಗವು ಹನ್ನೆರಡನೇಯ ಸ್ಥಾನದಲ್ಲಿ, ಅಂದರೆ ಅಧ್ಯಾತ್ಮಕ್ಕೆ ಸಂಬಂಧಿಸಿದ ಸ್ಥಾನ ದಲ್ಲಿರುವುದರಿಂದ ಪರಾತ್ಪರ ಗುರು ಡಾಕ್ಟರರು ಅಪಾರ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡಿದ್ದಾರೆ. ‘ಆಧ್ಯಾತ್ಮಿಕ ಕಾರಣಗಳಿಂದ ವ್ಯಕ್ತಿಗಾಗುವ ತೊಂದರೆಗಳು, ಸಾಧನೆಯಿಂದ ವ್ಯಕ್ತಿ, ವಾಸ್ತು ಮತ್ತು ವಸ್ತು ಇವುಗಳಲ್ಲಿ ಪಂಚತತ್ತ್ವಗಳ ಸ್ತರದಲ್ಲಾಗುವ ದೈವೀ ಬದಲಾವಣೆಗಳು, ‘ಉಚ್ಚ ಲೋಕದಲ್ಲಿ ಜನ್ಮಪಡೆದ ದೈವೀ ಬಾಲಕರನ್ನು ಗುರುತಿಸುವುದು ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ವೈಶಿಷ್ಟ್ಯಪೂರ್ಣ ಸಂಶೋಧನೆಗಳನ್ನು ಮಾಡಿದ್ದಾರೆ. ಜಾತಕದಲ್ಲಿ ಬುಧ ಹಾಗೂ ಶನಿ ಗ್ರಹಗಳೊಂದಿಗೆ ‘ಹರ್ಷಲಗ್ರಹ ಕೂಡ ಇದೆ. ‘ಹರ್ಷಲ ಗ್ರಹವು ನಾವಿನ್ಯ ಪೂರ್ಣ ಸಂಶೋಧನೆಯಕಾರಕವಾಗಿದೆ. ಪರಾತ್ಪರ ಗುರು ಡಾಕ್ಟರರು ‘ರೋಗ-ನಿರ್ಮೂಲನೆಗಾಗಿ ಖಾಲಿ ಪೆಟ್ಟಿಗೆಗಳ ಉಪಾಯ, ‘ರೋಗ- ನಿರ್ಮೂಲನೆಗಾಗಿ ನಾಮಜಪ, ‘ಪ್ರಾಣಶಕ್ತಿವಹನ ವ್ಯೂಹದಲ್ಲಿನ ಅಡಚಣೆಗಳಿಂದ ಆಗುವ ರೋಗಗಳ ಮೇಲೆ ಮಾಡ ಬೇಕಾಗಿರುವ ಉಪಾಯ ಇತ್ಯಾದಿ ಹೊಸ  ಉಪಾಯ ಪದ್ಧತಿಗಳನ್ನು ವಿಕಸಿತಗೊಳಿಸಿದ್ದಾರೆ. ಇದರಿಂದ ಮುಂಬರುವ ಆಪತ್ಕಾಲದಲ್ಲಿ ವೈದ್ಯರು, ಔಷಧಿ ಇತ್ಯಾದಿಗಳು ಲಭ್ಯವಿಲ್ಲದಿರುವಾಗ ವ್ಯಕ್ತಿಗಾಗುವ ತೊಂದರೆಗಳ ಮೇಲೆ ಸ್ವತಃ ಉಪಾಯಗಳನ್ನು ಮಾಡಿಕೊಳ್ಳಬಹುದು.

೧ ಇ. ಜಾತಕದಲ್ಲಿ ಗುರು ಮತ್ತು ಶನಿ ಈ ಗ್ರಹಗಳು ಒಟ್ಟಾಗಿರುವುದರಿಂದ ‘ಗುರುಕೃಪಾಯೋಗ ಸಾಧನಾ ಮಾರ್ಗವನ್ನು ನಿರ್ಮಿಸುವುದು : ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಗುರು ಹಾಗೂ ಶನಿ ಗ್ರಹಗಳು ಒಟ್ಟಾಗಿವೆ. ಗುರು ಗ್ರಹವು ಸಾಧನೆಯ ಹಾಗೂ ಶನಿ ಗ್ರಹವು ಸಮಾಜದ ಕಾರಕವಾಗಿದೆ. ಗುರು ಹಾಗೂ ಶನಿ ಈ ಗ್ರಹಗಳು ಒಟ್ಟಾಗಿದ್ದರೆ ‘ಪರಿವರ್ತನ ಯೋಗವಾಗುತ್ತದೆ. ಜಾತಕದಲ್ಲಿ ಉಚ್ಚ ದರ್ಜೆಯದ್ದಾಗಿದ್ದು ಜಾತಕದಲ್ಲಿ ‘ಪರಿವರ್ತನ ಯೋಗವಿದ್ದರೆ ವ್ಯಕ್ತಿಯು ದೊಡ್ಡ ಸಾಮಾಜಿಕ ಪರಿವರ್ತನೆಯನ್ನು ಮಾಡು ತ್ತಾನೆ.  ಪರಾತ್ಪರ ಗುರು ಡಾಕ್ಟರರ ಜಾತಕವು ಆಧ್ಯಾತ್ಮಿಕ ದೃಷ್ಟಿಯಿಂದ ಉಚ್ಚ ಮಟ್ಟದ್ದಾಗಿದ್ದು ಜಾತಕದಲ್ಲಿ ‘ಪರಿವರ್ತನ ಯೋಗವಿರುವುದರಿಂದ ಅವರು ‘ಗುರುಕೃಪಾಯೋಗ ಎಂಬ ಸಾಧನೆಯ ಮಾರ್ಗವನ್ನು ನಿರ್ಮಿಸಿದರು. ಈಶ್ವರಪ್ರಾಪ್ತಿಯಾಗಲು ಗುರುಕೃಪೆಯಿಲ್ಲದೆ ಬೇರೆ ಮಾರ್ಗವಿಲ್ಲ. ‘ಗುರುಕೃಪಾಯೋಗ ನುಸಾರ ಸಾಧನೆಯನ್ನು ಮಾಡುವುದರಿಂದ ಶೀಘ್ರ ಗುರುಪ್ರಾಪ್ತಿಯಾಗಿ ಗುರುಕೃಪೆಯು ಸತತವಾಗಿ ಆಗುತ್ತಿರುತ್ತದೆ.  ‘ಗುರುಕೃಪಾಯೋಗನುಸಾರ ಸಾಧನೆಯನ್ನು ಮಾಡಿ ಇಂದಿನವರೆಗೆ ೧ ಸಾವಿರಕ್ಕಿಂತ ಹೆಚ್ಚು ಸಾಧಕರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿದ್ದಾರೆ. ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ‘ಗುರು ಹಾಗೂ ಶನಿ ಗ್ರಹಗಳು ಒಟ್ಟಾಗಿರುವುದು, ಈ ಯೋಗವು ಆಶ್ರಮ ನಿರ್ಮಿತಿಯನ್ನು ದರ್ಶಿಸುತ್ತದೆ. ‘ಸಾಧನೆಗೆ ಅನುಕೂಲ ವಾತಾವರಣ ಸಿಗಲಿ, ಎಂಬ ಉದ್ದೇಶದಿಂದ ಪರಾತ್ಪರ ಗುರು ಡಾಕ್ಟರರು ಸನಾತನದ ಆಶ್ರಮಗಳನ್ನು ನಿರ್ಮಿಸಿದರು. ಸನಾತನದ ಆಶ್ರಮದಲ್ಲಿದ್ದು ಸಾಧಕರು ಪೂರ್ಣ ಸಮಯ ಸಾಧನೆ ಮಾಡುತ್ತಿದ್ದಾರೆ.

೧ ಈ. ಬುಧ ಗ್ರಹವು ಬುದ್ಧಿಯ, ಗುರು ಗ್ರಹವು ಶಿಕ್ಷಣ, ವಿದ್ಯಾ, ವಿಶ್ವ ವಿದ್ಯಾಲಯ ಇತ್ಯಾದಿಗಳ ಹಾಗೂ ಶನಿ ಗ್ರಹವು ಅಧ್ಯಾತ್ಮದ ಕಾರಕವಾಗಿದೆ. ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಹನ್ನೆರಡನೇಯ ಸ್ಥಾನದಲ್ಲಿ ಬುಧ, ಗುರು ಹಾಗೂ ಶನಿ ಗ್ರಹಗಳು ಒಟ್ಟಿಗಿವೆ. ಈ ಯೋಗವು ಆಧ್ಯಾತ್ಮಿಕ ವಿಶ್ವವಿದ್ಯಾಲಯದ ನಿರ್ಮಾಣವನ್ನು ತೋರಿಸುತ್ತದೆ. ‘ಹಿಂದೂ ಧರ್ಮದಲ್ಲಿ ಹೇಳಿದ ೧೪ ವಿದ್ಯೆ ಹಾಗೂ ೬೪ ಕಲೆಗಳ ಮೂಲಕ ಈಶ್ವರ ಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು ?, ಎಂಬುದನ್ನು ಕಲಿಸುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವನ್ನು ಅವರು ಸ್ಥಾಪಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮಾಧ್ಯಮದಿಂದ ಜಗತ್ತಿನಾದ್ಯಂತ ಅಧ್ಯಾತ್ಮದ ಪ್ರಚಾರವಾಗುತ್ತಿದೆ.

೧ ಉ. ಜಾತಕದಲ್ಲಿ ಉಚ್ಚ ಆಧ್ಯಾತ್ಮಿಕ ಯೋಗದ ಜೊತೆಗೆ ರವಿ ಗ್ರಹವು ಬಲಿಷ್ಠವಾಗಿರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಅಧ್ಯಾತ್ಮದಲ್ಲಿ ‘ಸರ್ವೋಚ್ಚ ಪದವಿ ಯಲ್ಲಿ ವಿರಾಜಮಾನವಾಗಿರುವುದು : ರವಿ ಗ್ರಹವು ಆತ್ಮ, ರಾಜ ಮತ್ತು ನೇತೃತ್ವ ಇವುಗಳ ಕಾರಕವಾಗಿದೆ. ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ರವಿ ಗ್ರಹವು ಉಚ್ಚರಾಶಿಯಲ್ಲಿದೆ, ಅಂದರೆ ಬಲವರ್ಧಕವಾಗಿರುವುದರಿಂದ ‘ಪರಾತ್ಪರ ಗುರು ಡಾ. ಆಠವಲೆಯವರು ಅಧ್ಯಾತ್ಮದಲ್ಲಿನ ಸರ್ವೋಚ್ಚ ಪದವಿಯಲ್ಲಿ ವಿರಾಜ ಮಾನರಾಗಿದ್ದಾರೆ, ಎಂಬುದನ್ನು ಈ ಯೋಗವು ತೋರಿಸುತ್ತದೆ !

– ಶ್ರೀ. ರಾಜ ಧನಂಜಯ ಕರ್ವೇ, ಜ್ಯೋತಿಷ್ಯ ವಿಶಾರದರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೧.೫.೨೦೨೦)