೧. ಭಾರತೀಯರೇ, ಚೀನಾದ ಈ ಹೇಳಿಕೆಯನ್ನು ಸುಳ್ಳಾಗಿಸಿ !
ಚೀನಾದ ಉತ್ಪಾದನೆಗಳು ಸಾಮಾನ್ಯ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ ಮತ್ತು ಅದನ್ನು ತೆಗೆದು ಹಾಕಲು ಕಷ್ಟವಿದೆ. ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆಯು ಸಂಪೂರ್ಣ ವಿಫಲವಾಗಲಿದೆ ಎಂದು ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಲೇಖನವೊಂದರಲ್ಲಿ ತಿಳಿಸಲಾಗಿದೆ.
೨. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !
ಕಾಶ್ಮೀರದ ೪೦ ವರ್ಷದ ಸರಪಂಚ ಅಜಯ ಪಂಡಿತಾ ಅವರನ್ನು ಜೂನ್ ೮ ರಂದು ಸಂಜೆ ಅನಂತನಾಗ ಜಿಲ್ಲೆಯ ಲಾರ್ಕಿಪೊರಾ ಪ್ರದೇಶದಲ್ಲಿ ಕೆಲವು ಉಗ್ರರು ಹತ್ಯೆ ಮಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಿದ್ದರು.
೩. ಕೇಂದ್ರ ಸರಕಾರ ಸಹ ಇಂತಹ ಕಾನೂನು ರೂಪಿಸಬೇಕು !
ಉತ್ತರ ಪ್ರದೇಶ ಸರಕಾರ ೧೯೫೬ ರಲ್ಲಿ ಗೋಹತ್ಯೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರ ಪ್ರಕಾರ, ಗೋವುಗಳನ್ನು ಕೊಲ್ಲುವವರಿಗೆ ಈಗ ೭ ರ ಬದಲು ೧೦ ವರ್ಷ ಜೈಲು ಶಿಕ್ಷೆ ಮತ್ತು ೩ ರ ಬದಲು ೫ ಲಕ್ಷ ರೂ. ದಂಡ ವಿಧಿಸಲಾಗಿದೆ.
೪. ಭಾರತ ವಿರೋಧಿ ನೇಪಾಳ ಸರಕಾರವನ್ನು ವಿರೋಧಿಸಿದ್ದಕ್ಕಾಗಿ ನೇಪಾಳದ ಸಂಸದೆ ಸರಿತಾ ಗಿರಿ ಅವರಿಗೆ ಅಭಿನಂದನೆಗಳು !
ನೇಪಾಳ ಸರಕಾರವು ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು. ಭಾರತದ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಾಧುರಾ ಈ ಮೂರು ಭಾಗಗಳನ್ನು ತನ್ನ ಹೊಸ ನಕಾಶೆಯಲ್ಲಿ ತೋರಿಸಿದೆ. ನೇಪಾಳದ ಮಹಿಳಾ ಸಂಸದೆ ಸರಿತಾ ಗಿರಿ ಅವರು ವಿರೋಧಿಸಿದ ನಂತರ ಅವರ ಮನೆಯ ಮೇಲೆ ಹಲ್ಲೆ ನಡೆಸಲಾಯಿತು.
೫. ನೇಪಾಳದ ಭಾರತ ವಿರೋಧಿ ಕೃತ್ಯವನ್ನು ತಿಳಿಯಿರಿ !
ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದ ನಡೆಯುತ್ತಿರುವಾಗ, ಬಿಹಾರದ ಸೀತಾಮಡಿ ಈ ಗಡಿಯಲ್ಲಿ ನೇಪಾಳ ಸಶಸ್ತ್ರ ಪಡೆಗಳು ಗುಂಡಿನ ದಾಳಿ ನಡೆಸಿದವು. ಇದರಲ್ಲಿ ಓರ್ವ ಭಾರತೀಯನು ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
೬. ತಮಿಳುನಾಡಿನ ಎಐಎಡಿಎಂಕೆ ಸರಕಾರಕ್ಕೆ ಅಂತಹ ಧೈರ್ಯ ಹೇಗೆ ಬರುತ್ತೆ ?
ತಮಿಳುನಾಡಿನ ತೆಂಕಾಸಿ ಎಂಬಲ್ಲಿ ಮತಾಂಧರು ದೂರು ನೀಡಿದ ನಂತರ ಕಟ್ಟಪ್ಪಸ್ಪಾತಿ ಮಾದಾಸ್ವಾಮಿ ದೇವಾಲಯವನ್ನು ಪೊಲೀಸರು ಮತ್ತು ಜಿಲ್ಲಾಡಳಿತ ನೆಲಸಮ ಮಾಡಿದೆ.
೭. ನೇಪಾಳ ಸರಕಾರದ ಸುಳ್ಳುತನವನ್ನು ತಿಳಿಯಿರಿ !
ಸಂಸತ್ತಿನ ಕೆಳಮನೆಯಲ್ಲಿ ನಕಲಿ ನಕಾಶೆಯನ್ನು ಅನುಮೋದಿಸಿದ ನಂತರ, ನೇಪಾಳ ಸರಕಾರವು ಒಂದು ಸಮಿತಿಯನ್ನು ಸ್ಥಾಪಿಸಿ ಭಾರತಕ್ಕೆ ಸಂಬಂಧಪಟ್ಟ ಲಿಪುಲೆಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಈ ಪ್ರದೇಶಗಳು ನೇಪಾಳದ ಭಾಗವಾಗಿದೆ ಎಂಬುದಕ್ಕೆ ಪುರಾವೆಗಳನ್ನು ಸಂಗ್ರಹಿಸಲು ಹೇಳಿದೆ. ಇದನ್ನು ನೇಪಾಳದಲ್ಲಿಯೇ ವಿರೋಧವಾಗುತ್ತಿದೆ.