ಗೂಗಲ್‌ನ ಚೀನಾದ ಪ್ರೇಮ ಮತ್ತು ಭಾರತದ್ವೇಷವನ್ನು ತಿಳಿಯಿರಿ !

೧. ಇಂತಹ ಕ್ರಮಗಳು ಇತರ ಧರ್ಮಗಳ ಧಾರ್ಮಿಕ ಸ್ಥಳಗಳಲ್ಲಿ ಎಂದಾದರೂ ನಡೆಯುತ್ತವೆಯೇ ?

ಮಹಾರಾಷ್ಟ್ರದ ಲೋಣಂದ (ಸಾತಾರಾ ಜಿಲ್ಲೆ) ಇಲ್ಲಿನ ಪ್ರಸಿದ್ಧ ಶ್ರೀ ಭೈರವನಾಥ ಬೆಟ್ಟದ ಮೇಲೆ ನಿರ್ಮಿಸಲಾದ ಸಭಾಮಂಟಪವನ್ನು ಅರಣ್ಯ ಇಲಾಖೆಯು ಅನಧಿಕೃತವೆನ್ನುತ್ತಾ ಕಿತ್ತುಹಾಕಿದೆ.

೨. ಕೇರಳದ ಆಡಳಿತಾರೂಢ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕರ ಗೂಂಡಾಗಿರಿಯನ್ನು ತಿಳಿಯಿರಿ !

ಕೇರಳ ರಾಜ್ಯದ ಆಡಳಿತಾರೂಢ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕರು ವಂದಿಪೆರಿಯಾರ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಜೀವಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ. ತಮ್ಮ ಬಂಧನವನ್ನು ತಪ್ಪಿಸಲು ಈ ನಾಯಕರು ಪರಾರಿಯಾಗಿದ್ದಾರೆ.

೩. ಹಿಂದುತ್ವನಿಷ್ಠರನ್ನು ರಕ್ಷಿಸಿ !

ನವ ದೆಹಲಿಯಲ್ಲಿ ಬಿಜೆಪಿ ನಾಯಕ ರಾಹುಲ್ ಸಿಂಗ್ ಊರ್ಫ್ ಭುರು ಸಿಂಹ ಅವರನ್ನು ಅಜ್ಞಾತ ಹಲ್ಲೆಕೋರರು ಗುಂಡಿಕ್ಕಿ ಕೊಂದಿದ್ದಾರೆ. ಎಂಟು ತಿಂಗಳ ಹಿಂದೆಯೂ ರಾಹುಲ್ ಸಿಂಗ್ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ವಿವಾದದಿಂದ ಅವರ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ.

೪. ಗೂಗಲ್‌ನ ಚೀನಾದ ಪ್ರೇಮ ಮತ್ತು ಭಾರತದ್ವೇಷವನ್ನು ತಿಳಿಯಿರಿ !

ಗೂಗಲ್ ತನ್ನ ‘ಪ್ಲೇ ಸ್ಟೋರ್ನಿಂದ ‘ರಿಮೂವ್ ಚೈನಾ ಆಪ್ ಅನ್ನು ತೆಗೆದು ಹಾಕಿದೆ, ಚೀನಾದ ವಿವಿಧ ‘ಅಪ್ಲಿಕೇಶನ್ಗಳ ವಿರುದ್ಧ ತಯಾರಿಸಲಾಗಿದ್ದ ಈ ‘ಆಪ್ ಕಳೆದ ಕೆಲವು ವಾರಗಳಲ್ಲಿ ೫೦ ಲಕ್ಷಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ.

೫. ಇಂತಹವರನ್ನು ಸೆರೆಮನೆಯಲ್ಲಿಡಬೇಕು !

ಖಾಸಗಿ ವಿಮಾನಯಾನ ಸಂಸ್ಥೆಯಾದ ‘ಗೋಏರ್’‌ನ ಅಧಿಕಾರಿ ಆಸಿಫ್ ಖಾನ್‌ನು ಸೀತಾ ಮಾತೆ, ಹಿಂದೂ ಧರ್ಮ ಮತ್ತು ಸಂಸ್ಕೃತ ಭಾಷೆಯ ಬಗ್ಗೆ ಟ್ವಿಟರ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಹಿಂದೂಗಳು ಅದನ್ನು ವಿರೋಧಿಸಿದ ನಂತರ ಖಾನ್‌ನನ್ನು ‘ಗೋ ಏರ್ ಕೆಲಸದಿಂದ ವಜಾ ಮಾಡಿದೆ.

೬. ಕೇರಳದ ಅಲ್ಪಸಂಖ್ಯಾತರ ಬಗ್ಗೆ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಸರಕಾರದ ಪ್ರೇಮವನ್ನು ತಿಳಿಯಿರಿ !

ಕೇರಳದಲ್ಲಿ ಪಟಾಕಿ ಸ್ಫೋಟದಲ್ಲಿ ಗರ್ಭಿಣಿ ಆನೆಯ ಸಾವು ‘ಮಲ್ಲಪುರಂ ಬದಲು ‘ಪಲ್ಲಕಡ್ದಲ್ಲಿ ನಡೆದಿದೆ ಎಂದು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ಹೇಳಿದೆ. ಮಲ್ಲಪುರಂದಲ್ಲಿ ಮುಸಲ್ಮಾನರು ಬಹುಸಂಖ್ಯೆಯಲ್ಲಿದ್ದರೆ, ಪಲ್ಲಕಡ್‌ದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ.

೭. ಭದ್ರತಾ ಪಡೆಗಳನ್ನು ಅವಮಾನಿಸುವವರನ್ನು ಸೆರೆಮನೆಯಲ್ಲಿಡಬೇಕು !

ನಿರ್ಮಾಪಕಿ ಏಕತಾ ಕಪೂರ್ ತಮ್ಮ ‘ಎಕ್ಸ್.ಎಕ್ಸ್.ಎಕ್ಸ್. – ೨ ಈ ವೆಬ್ ಸಿರೀಸ್‌ನಲ್ಲಿ ಆಕ್ಷೇಪಾರ್ಹ ದೃಶ್ಯ ತೋರಿಸಿದ ಪ್ರಕರಣದಲ್ಲಿ ಭಾರತೀಯ ಭದ್ರತಾ ಪಡೆಯವರಲ್ಲಿ ಕ್ಷಮೆಯಾಚಿಸಿ ಆ ದೃಶ್ಯಗಳನ್ನು ತೆಗೆದುಹಾಕಿದ್ದಾರೆಂದು ಮಾಹಿತಿ ನೀಡಿದ್ದಾರೆ. ಈ ದೃಶ್ಯದಲ್ಲಿ, ಸೇನಾಧಿಕಾರಿಯ ಪತ್ನಿಯನ್ನು ಇತರ ಪುರುಷರೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ತೋರಿಸಲಾಗಿತ್ತು.