ಇಂತಹ ಘಟನೆಗಳು ಯಾವಾಗ ನಿಲ್ಲುವವು ?

೧. ಇಂತಹ ಘಟನೆಗಳನ್ನು ತಡೆಯಲು ಕಠಿಣ ಕ್ರಮಕೈಗೊಳ್ಳಬೇಕು !

ಮಹಾರಾಷ್ಟ್ರದ ಮುಂಬಯಿಯ ಶಿವಾಜಿನಗರ ಪ್ರದೇಶದಲ್ಲಿ ಸಂಚಾರನಿಷೇಧ ಇರುವಾಗಲೂ ಶಹಿದೆ ಆಜಮ್ ಮಸೀದಿಯ ಹತ್ತಿರ ಸೇರಿದ್ದ ಮತಾಂಧರಿಗೆ ಪೊಲೀಸರು ಇಲ್ಲಿಂದ ತೆರಳುವಂತೆ ಸೂಚನೆ ನೀಡಿದಾಗ ಅವರು ಪೊಲೀಸರ ಮೇಲೆ ಕಲ್ಲುತೂರಾಟ ಮಾಡಿದರು ಮತ್ತು ಓರ್ವ ಪೊಲೀಸನ ಮೇಲೆ ಕಬ್ಬಿಣ ಸರಳಿನಿಂದ ಮಾರಣಾಂತಿಕ ಹಲ್ಲೆ ನಡೆಸಿದರು.

೨. ಕಾಂಗ್ರೆಸ್ಸಿನ ಉಗ್ರವಾದಿಪ್ರೇಮವನ್ನು ತಿಳಿಯಿರಿ !

ಪಂಜಾಬ ಪೊಲೀಸರು ಹಿಜಬುಲ್ ಮುಜಾಹಿದ್ದೀನ್‌ನ ಓರ್ವ ಉಗ್ರನನ್ನು ಬಂಧಿಸಿದ ನಂತರ ಆ ಕುರಿತು ವಿವರವನ್ನು ನೀಡುವಾಗ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಉಗ್ರನನ್ನು ‘ಟೆರರಿಸ್ಟ್ (ಉಗ್ರವಾದಿ) ಎನ್ನದೇ ‘ಆಕ್ಟಿವಿಸ್ಟ್’ (ಕಾರ್ಯಕರ್ತ) ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಟೀಕೆಯಾದ ನಂತರ ಈ ಪದವನ್ನು ತೆಗೆಯಲಾಯಿತು.

೩. ಇಂತಹ ಘಟನೆಗಳು ಯಾವಾಗ ನಿಲ್ಲುವವು ?

ಸಂಚಾರ ನಿಷೇಧ (ಲಾಕ್‌ಡೌನ್) ಇರುವಾಗ ಬಂಗಾಲದ ಹಾವಡಾದಲ್ಲಿಯ ಮತಾಂಧರು ಬಹುಸಂಖ್ಯೆಯಲ್ಲಿರುವ ಟಿಕಿಯಾಪಾಡಾ ಪ್ರದೇಶದಲ್ಲಿ ಮತಾಂಧರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಮತಾಂಧರು ಪೊಲೀಸರನ್ನು ಥಳಿಸುತ್ತ ಅವರ ಮೇಲೆ ಕಲ್ಲು ತೂರಾಟ ಮಾಡಿದರು. ಇದರಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡರು. ಪೊಲೀಸರ ೨ ವಾಹನಗಳನ್ನೂ ಧ್ವಂಸ ಗೊಳಿಸಲಾಯಿತು.

೪. ಮಂದಿರಗಳ ಸರಕಾರೀಕರಣದಿಂದಾಗುವ ಹಾನಿಯನ್ನು ತಿಳಿಯಿರಿ !

ತಮಿಳುನಾಡು ಸರಕಾರವು ಅದರ ಅಧೀನದಲ್ಲಿರುವ ಸುಮಾರು ೩೬ ಸಾವಿರ ದೇವಸ್ಥಾನಗಳ ಪೈಕಿ ೪೭ ದೊಡ್ಡ ದೇವಸ್ಥಾನಗಳಿಗೆ ಕೊರೋನಾಕ್ಕಾಗಿ ‘ಮುಖ್ಯಮಂತ್ರಿ ಸಹಾಯ ನಿಧಿ’ಗೆ ಕೋಟ್ಯಂತರ ರೂಪಾಯಿಗಳನ್ನು ಜಮಾ ಮಾಡಲು ನಿರ್ದೇಶನ ನೀಡಿತು; ಆದರೆ ಚರ್ಚ್ ಅಥವಾ ಮಸೀದಿಗಳಿಗೆ ಹೀಗೆ ನಿರ್ದೇಶನವನ್ನು ನೀಡಿಲ್ಲ.

೫. ಇಂತಹವರನ್ನು ಕಾರಾಗೃಹಕ್ಕೆ ತಳ್ಳಿರಿ !

ತೆಲಂಗಾಣದ ಭಾಗ್ಯನಗರದಲ್ಲಿ ಮಸೀದಿಯಲ್ಲಿ ಕೇವಲ ೫ ರ ಬದಲು ೧೦ ಜನರು ನಮಾಜ ಪಠಣಕ್ಕಾಗಿ ತೆರಳುತ್ತಿರುವಾಗ ಅವರಿಗೆ ಪೊಲೀಸರು ತಡೆದಾಗ ಎಮ್.ಐ.ಎಮ್. ದ ನಗರಸೇವಕ ಮುರ್ತಜಾ ಅಲೀ ಇವರು ಪೊಲೀಸರಿಗೆ ಬೆದರಿಕೆಯೊಡ್ಡಿದರು.

೬. ಇಂತಹ ಬೇಡಿಕೆಯನ್ನು ಕಾನೂನು ಮಾರ್ಗದಿಂದ ವಿರೋಧ ಮಾಡಬೇಕು !

ಮಹಾರಾಷ್ಟ್ರದ ಪುಣೆಯಲ್ಲಿಯ ಕಾಂಗ್ರೆಸನ ನಗರಸೇವಕ ಮತ್ತು ಮಾಜಿ ಮಹಾಪೌರ ಆಬಾ ಬಾಗೂಲ್ ಇವರು ಮಹಸೂಲ ಪ್ರಾಪ್ತಿಗಾಗಿ ಮದ್ಯ ಮರಾಟಕ್ಕೆ ಅನುಮತಿ ನೀಡುವುದಕ್ಕಿಂತ ರಾಜ್ಯದಲ್ಲಿಯ ದೇವಸ್ಥಾನಗಳ ಶೇ. ೮೦ ರಷ್ಟು ಹಣ ಬಡ್ಡಿರಹಿತ ಬಳಸಬೇಕು, ಎಂಬ ವಿಚಾರವನ್ನೊಳಗೊಂಡ ನಿವೇದನೆಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದಾರೆ.

೭. ಕಾಂಗ್ರೆಸ್‌ನವರ ಮತಾಂಧ ಪ್ರೇಮವನ್ನು ತಿಳಿಯಿರಿ !

ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಹ ಇವರು ‘ಸಿಕ್ಖ್ ತೀರ್ಥಯಾತ್ರಿಕರಿಗೆ ಕೊರೋನಾ ತಗಲಿದ್ದರಿಂದಾಗಿ ಪಂಜಾಬದಲ್ಲಿ ಗಂಡಾಂತರವುಂಟಾಗಿದೆ. ಇದನ್ನು ತಬಲೀಗಿ ಸಮುದಾಯದೊಂದಿಗೆ ಹೋಲಿಸಬಹುದೇ ?, ಎಂಬುದಾಗಿ ಚುಚ್ಚು ಮಾತು ಟ್ವೀಟ್ ಮಾಡಿ ವ್ಯಕ್ತಪಡಿಸಿದ್ದಾರೆ.