೧. ಬಾಹ್ಯ ಪ್ರಾಣಾಯಾಮ

೧. ಎರಡೂ ಕೈಗಳ ಅಂಗೈಗಳನ್ನು ಎರಡೂ ಮೊಣಕಾಲುಗಳ ಮೇಲಿಡಿ.
೨. ದೀರ್ಘ ಶ್ವಾಸ ತೆಗೆದುಕೊಳ್ಳಿ.
೩. ಶ್ವಾಸಕೋಶಗಳಲ್ಲಿನ ಪೂರ್ಣ ಗಾಳಿ ಹೊರಗೆ ಹೋಗುವವರೆಗೆ ಜೋರಾಗಿ ಶ್ವಾಸವನ್ನು ಹೊರಗೆ ಬಿಡಿರಿ.
೪. ಮೂಲ, ಉಡ್ಡಿಯಾನ ಮತ್ತು ಜಾಲಂಧರ ಬಂಧಗಳನ್ನು ಹಚ್ಚಿ ಎಷ್ಟು ಸಮಯ ನಿಲ್ಲಲು ಸಾಧ್ಯವಿದೆಯೋ ಅಷ್ಟು ಸಮಯ ನಿಲ್ಲಿ.
೫. ಕ್ಷಮತೆ ಮುಗಿದ ನಂತರ ಬಂಧಗಳನ್ನು ಬಿಡಿರಿ. ಬಂಧಗಳನ್ನು ಬಿಡುವಾಗ ಮೊದಲು ಮೂಲಬಂಧ, ನಂತರ ಉಡ್ಡಿಯಾನ ಬಂಧ ಮತ್ತು ನಂತರ ಜಾಲಂಧರ ಬಂಧವನ್ನು ಬಿಡಬೇಕು.
೬. ನಿಧಾನವಾಗಿ ದೀರ್ಘಶ್ವಾಸವನ್ನು ತೆಗೆದುಕೊಳ್ಳಿ ಮತ್ತು ಬಿಡಿರಿ.
|
ಲಾಭ ಹೊಟ್ಟೆಯ ಸಮಸ್ಯೆಗಳು, ಮಲಬದ್ಧತೆ, ಎದೆಯುರಿ, ಹರ್ನಿಯಾ, ಮೂತ್ರದ ಕಾಯಿಲೆಗಳು, ಪ್ರೊಸ್ಟೇಟ್ ಸಮಸ್ಯೆ, ಪ್ರೋಲ್ಯಾಪ್ಸ್ (ಅವಯವಗಳು ಕೆಳಗೆ ಸರಿಯುವುದು) ಮತ್ತು ಸ್ಥಗಿತವಾಗಿರುವ ಫೆಲೋಪಿಯನ್ ಟ್ಯೂಬ್‌ಗಳ ಸಮಸ್ಯೆಗೆ ಉಪಯುಕ್ತ. ಉತ್ಸಾಹ ಮತ್ತು ಶಕ್ತಿ ಹೆಚ್ಚುತ್ತದೆ. ಎಲ್ಲಾ ಪ್ರಕಾರದ ಮಧುಮೇಹ ನಿವಾರಣೆಗೆ ಉಪಯುಕ್ತ. (ಗರ್ಭಿಣಿಯರು, ಹೃದಯರೋಗ ಮತ್ತು ಅಧಿಕ ರಕ್ತದೊತ್ತಡ ಇರುವವರು ತಜ್ಞರ ಮಾರ್ಗದರ್ಶನದಲ್ಲಿ ಇದನ್ನು ಮಾಡಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು.) |
೨. ಶೀತಲಿ ಪ್ರಾಣಾಯಾಮ

೧. ನಾಲಿಗೆಯನ್ನು ಕೊಳವೆಯಂತೆ ಮಾಡಿ (ನಾಲಿಗೆಯನ್ನು ಎರಡೂ ಬದಿಗಳಿಂದ ಒಳಭಾಗಕ್ಕೆ ಮಡಚಿ) ತುಟಿಗಳಿಂದ ಹೊರಗೆ ತೆಗೆಯಿರಿ.
೨. ಅದರಿಂದ ದೀರ್ಘ ಶ್ವಾಸ ತೆಗೆದುಕೊಳ್ಳಿ ಮತ್ತು ನಾಲಿಗೆಯನ್ನು ಒಳಗೆ ತೆಗೆದುಕೊಳ್ಳಿ.
೩. ಎಷ್ಟು ಕ್ಷಣ ನಿಲ್ಲಲು ಸಾಧ್ಯವೋ ಅಷ್ಟು ಸಮಯ ಶ್ವಾಸ ತಡೆದು ಹಿಡಿಯಿರಿ.
೪. ನಂತರ ನಿಧಾನವಾಗಿ ಮೂಗಿನಿಂದ ಶ್ವಾಸವನ್ನು ಹೊರಗೆ ಬಿಡಿ.
೫. ೫ ರಿಂದ ೧೦ ಬಾರಿ ಈ ಕ್ರಿಯೆಯನ್ನು ಮಾಡಬಹುದು.
| ಲಾಭ ಶರೀರದ ವ್ಯವಸ್ಥೆಯನ್ನು ತಂಪುಗೊಳಿಸಲು ಸಹಾಯಕಾರಿ, ಕಣ್ಣಿನ ಸಮಸ್ಯೆಗಳಿಗೆ ಗುಣಕಾರಿ, ಪಿತ್ತವನ್ನು ದೂರ ಮಾಡಲು ಉಪಯುಕ್ತ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಉಪಯುಕ್ತ, ಹಲ್ಲು, ಬಾಯಿ ಮತ್ತು ನಾಲಿಗೆಯ ರೋಗಗಳು ಗುಣವಾಗಲು ಲಾಭದಾಯಕ, ಹಸಿವು ಮತ್ತು ಬಾಯಾರಿಕೆಯನ್ನು ನಿಯಂತ್ರಣದಲ್ಲಿಡಬಹುದು.(ನೆಗಡಿ, ಕೆಮ್ಮು ಮತ್ತು ಟಾನ್ಸಿಲ್ಸ್ ಇತ್ಯಾದಿ ತೊಂದರೆಗಳಿದ್ದರೆ, ಶ್ವಾಸ ತೆಗೆದುಕೊಳ್ಳಲು ತೊಂದರೆಯಾಗುತ್ತಿದ್ದರೆ, ಅಸ್ತಮಾ ಇರುವವರು ಮತ್ತು ಚಳಿಗಾಲದಲ್ಲಿ ಈ ಪ್ರಾಣಾಯಾಮವನ್ನು ಮಾಡಬಾರದು.) |
೩. ಉಜ್ಜಯಿ ಪ್ರಾಣಾಯಾಮ

೧. ಹೊಟ್ಟೆಯಿಂದ ಎದೆಯನ್ನು ಮೇಲೆತ್ತಿರಿ. ಎದೆಯಿಂದ ಹೆಗಲುಗಳನ್ನು ಮೇಲೆತ್ತಿರಿ. ಕತ್ತನ್ನು ನೇರವಾಗಿಡಿ.
೨. ಗಂಟಲಿಗೆ ಗಾಳಿ ಸ್ಪರ್ಶ ಆಗುವಂತೆ ಮೂಗಿನಿಂದ ದೀರ್ಘ ಶ್ವಾಸ ತೆಗೆದುಕೊಳ್ಳಿ. ಆ ಸಮಯದಲ್ಲಿ ಗಂಟಲಿನಿಂದ ಧ್ವನಿ ಹೊರಡಿಸಿ.
೩. ಗಂಟಲಿಗೆ ಗಾಳಿಯ ಸ್ಪರ್ಶವಾಗುವಂತೆ ದೀರ್ಘವಾಗಿ ಶ್ವಾಸ ಬಿಡಿ. ಆ ಸಮಯದಲ್ಲಿ ಗಂಟಲಿನಿಂದ ಧ್ವನಿ ಹೊರಡಿಸಿ.
೪. ನಿಧಾನವಾಗಿ ೫೦ ರ ಸಂಖ್ಯೆಯ ವರೆಗೆ ಇದನ್ನು ಹೆಚ್ಚಿಸಬಹುದು.
| ಲಾಭ
ಸೈಕೋ ಸೊಮ್ಯಾಟಿಕ್ ಡಿಸಾರ್ಡರ್ (ಮಾನಸಿಕ ಕಾರಣಗಳಿಂದಾಗಿ ಅಥವಾ ತೊಂದರೆಗಳಿಂದ ಶಾರೀರಿಕ ಕಾಯಿಲೆಗಳಾಗಿ ಮಾರ್ಪಟ್ಟ ರೋಗಗಳು)ಗಳಂತಹ ಕಾಯಿಲೆಗಳಿಗೆ ಮತ್ತು ಇತರ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಗುಣವಾಗುತ್ತವೆ, ನರಮಂಡಲ ವ್ಯವಸ್ಥೆಯನ್ನು ಶಾಂತಗೊಳಿಸುತ್ತದೆ. ಅಲ್ಲಿನ ಚೇತನ ವ್ಯವಸ್ಥೆಯನ್ನು ಉದ್ದೀಪನಗೊಳಿಸುತ್ತದೆ, ರಕ್ತದೊತ್ತಡ ಮತ್ತು ಹೃದಯದ ಬಡಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಥೈರಾಯ್ಡ್ ಗ್ರಂಥಿಯ ಕಾಯಿಲೆಯನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. |
– ಸೌ. ವೈದೇಹಿ ಕುಲಕರ್ಣಿ, ಯೋಗಶಿಕ್ಷಕಿ, ಮೆಡಿಕಲ್ ಯೋಗ ಥೆರಪಿಸ್ಟ್, ನ್ಯೂರೋಥೆರಪಿಸ್ಟ್, ಪುಣೆ.
ನಿಧನ ವಾರ್ತೆ
ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ರೋಗಗಳಿಗೆ ಯೋಗಾಭ್ಯಾಸ
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ