
ಭಾರತದ ಚಲನಚಿತ್ರಗಳಿಂದ ಮನೋರಂಜನೆಯನ್ನು ಮೀರಿ ಲಕ್ಷಾಂತರ ಜನರ ಸಾಂಸ್ಕೃತಿಕ ಗುರುತಿನ ಮೇಲೆ ಒಂದು ಅದ್ವಿತೀಯ ಮತ್ತು ದೂರಗಾಮಿ ಪ್ರಭಾವವಿದೆ. ಅನೇಕ ಬಾರಿ ಯಾವುದನ್ನು ಬಾಲಿವುಡ್ ಎಂದು ಕರೆಯಲಾಗುತ್ತದೆಯೋ, ಅದು ಒಂದು ವ್ಯಾಪಕ ಚಲನಚಿತ್ರರಂಗದ ಕೇವಲ ಒಂದು ಭಾಗವಾಗಿದೆ; ಅದರಲ್ಲಿ ವಿವಿಧ ಪ್ರಾದೇಶಿಕ ಚಿತ್ರೋದ್ಯಮಗಳು ಸೇರಿವೆ. ಅವುಗಳಲ್ಲಿ ಪ್ರತಿಯೊಂದು ಉದ್ಯಮವೂ ಒಂದು ಸಾಮೂಹಿಕ ಸಾಂಸ್ಕೃತಿಕ ಅಭಿವ್ಯಕ್ತಿಗೆ ತನ್ನದೇ ಆದ ಒಂದು ಕೊಡುಗೆಯನ್ನು ಕೊಡುತ್ತದೆ. ಇವೆಲ್ಲವೂ ಒಟ್ಟಾಗಿ ಸೇರಿ ಭಾರತೀಯ ಚಲನಚಿತ್ರವನ್ನು ರೂಪಿಸುತ್ತವೆ. ಇದೊಂದು ವ್ಯಾಪಕ ಚಲನಚಿತ್ರ ಪರಂಪರೆಯಾಗಿದ್ದು, ಭಾಷೆ, ಪ್ರದೇಶ ಮತ್ತು ಗಡಿಗಳನ್ನು ದಾಟಿ ಭಾರತದಾದ್ಯಂತ ಹಾಗೂ ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ತಲುಪುತ್ತದೆ. ಇದರಲ್ಲಿ ವಿಶಾಲವಾದ ಭಾರತೀಯ ಡಯಾಸ್ಪೋರಾ (ವಿದೇಶದಲ್ಲಿರುವ ಭಾರತೀಯ ಸಮುದಾಯ) ಕೂಡ ಸೇರಿದೆ.
೧. ಕಥಾತ್ಮಕ ಅಭಿವ್ಯಕ್ತಿಯ ಆಧುನಿಕರೂಪವೆಂದರೆ ಚಲನಚಿತ್ರ !
ಈ ಪರಂಪರೆಯ ಬೇರುಗಳು ಚಲನಚಿತ್ರದ ಉಗಮಕ್ಕಿಂತಲೂ ಹಳೆಯದಾಗಿವೆ. ವೇದಗಳು ಮತ್ತು ಇತಿಹಾಸಗಳ ಮೌಖಿಕ ಪರಂಪರೆಯಿಂದ ಹಿಡಿದು ಶಾಸ್ತ್ರೀಯ ನಾಟ್ಯಕಲೆ, ದೇವಸ್ಥಾನದ ಕಲೆಗಳು, ಜಾನಪದ ಕಥೆಗಳು, ಸಂಗೀತ ಮತ್ತು ನೃತ್ಯದ ವರೆಗೆ ಭಾರತವು ತಲೆಮಾರುಗಳಿಂದ ಮೌಲ್ಯಗಳು, ಜ್ಞಾನ, ನೈತಿಕತೆ ಹಾಗೂ ಸಾಂಸ್ಕೃತಿಕ ನಿರಂತರತೆಯನ್ನು ಹಸ್ತಾಂತರಿಸುವ ಸಾಧನವಾಗಿ ಕಥಾನಕ ಅಭಿವ್ಯಕ್ತಿಯನ್ನು ಬಹಳ ಹಿಂದಿನಿಂದಲೂ ಬಳಸುತ್ತಾ ಬಂದಿದೆ. ಚಲನಚಿತ್ರವು ಇದೇ ಪರಂಪರೆಯ ಒಂದು ಆಧುನಿಕ ವಿಸ್ತರಣೆಯಾಗಿ ಹೊರಹೊಮ್ಮಿದೆ. ಇದು ದೃಶ್ಯ, ಧ್ವನಿ, ಭಾಷೆ, ಸಂಗೀತ ಮತ್ತು ಪ್ರದರ್ಶನವನ್ನು ಒಟ್ಟುಗೂಡಿಸಿ ಸಮಕಾಲೀನ ಯುಗದ ಅತ್ಯಂತ ಪ್ರಭಾವಿ ಸಾಂಸ್ಕೃತಿಕ ಮಾಧ್ಯಮಗಳಲ್ಲಿ ಒಂದಾಗಿದೆ. ವಿದೇಶಗಳಲ್ಲಿ ವಾಸಿಸುವ ಭಾರತೀಯ ಮೂಲದ ಅನೇಕ ವ್ಯಕ್ತಿಗಳಿಗೆ ಚಲನಚಿತ್ರಗಳು ತಮ್ಮ ಪರಂಪರೆಯೊಂದಿಗೆ ಸಂಪರ್ಕಿಸುವ ಒಂದು ಜೀವಂತ ಸೇತುವೆ ಆಗಿದೆ. ಚಲನಚಿತ್ರಗಳ ಅನುವಾದ, ಡಬ್ಬಿಂಗ್ (ಧ್ವನಿ ಸಂಯೋಜನೆ ಅಥವಾ ಧ್ವನಿ ನೀಡುವುದು) ಮತ್ತು ವ್ಯಾಪಕ ಪ್ರಸಾರದ ಮೂಲಕ ಈ ಸಂಬಂಧವು ತಲೆಮಾರುಗಳ ವರೆಗೆ ಉಳಿದುಕೊಂಡು ಬರುತ್ತದೆ.
೨. ವಿದೇಶಿ ನಾಗರಿಕರ ಮೇಲೂ ಭಾರತೀಯ ಚಲನಚಿತ್ರದ ಪ್ರಭಾವ
ಭಾರತೀಯ ಚಲನಚಿತ್ರದ ಪ್ರಭಾವವು ಕೇವಲ ವಿದೇಶಿ ಭಾರತೀಯರಿಗಷ್ಟೇ ಸೀಮಿತವಾಗಿರದೆ ಅದನ್ನೂ ಮೀರಿ ಹರಡಿದೆ. ಮಧ್ಯಪ್ರಾಚ್ಯ, ಆಫ್ರಿಕಾ, ದಕ್ಷಿಣ ಅಮೇರಿಕ ಮತ್ತು ಕೆರಿಬಿಯನ್ ನಂತಹ ಪ್ರದೇಶಗಳಲ್ಲಿ ಭಾರತದ ಚಲನಚಿತ್ರಗಳು ಆಳವಾದ ಪ್ರಭಾವ ಬೀರಿದ್ದು, ಅಲ್ಲಿನ ಜನಪ್ರಿಯ ಸಂಗೀತ, ಫ್ಯಾಷನ್ ಹಾಗೂ ಸಾಮಾಜಿಕ ಅಭಿವ್ಯಕ್ತಿಯ ವಿವಿಧ ಆಯಾಮಗಳಿಗೆ ಒಂದು ರೂಪವನ್ನು ನೀಡಿವೆ. ಈ ವ್ಯಾಪಕತೆಯು ಕೇವಲ ಅದರ ಕಲಾತ್ಮಕ ಆಕರ್ಷಣೆಯೊಂದಿಗೆ, ಅದರ ವಿಷಯಗಳ ಸಾರ್ವತ್ರಿಕತೆಯನ್ನು ಕೂಡ ತೋರಿಸುತ್ತದೆ. ಮೂಲತಃ ಚಲನಚಿತ್ರವು ಕೇವಲ ಕಥೆ ಹೇಳುವುದನ್ನು ಮೀರಿ ದೃಷ್ಟಿಕೋನವನ್ನು ಕೊಡುತ್ತದೆ. ಪ್ರೇಕ್ಷಕರು ಪರದೆಯ ಮೇಲೆ ಪದೇ ಪದೇ ಏನನ್ನು ನೋಡುತ್ತಾರೋ, ಅದು ಅವರ ದೃಷ್ಟಿಯಲ್ಲಿ ಯಾವುದು ಅರ್ಥಪೂರ್ಣ, ಯಾವುದು ಅಪೇಕ್ಷಣೀಯ ಮತ್ತು ಯಾವುದನ್ನು ಸಾಧಿಸಬೇಕು ಎಂಬುದರ ಮೇಲೆ ಪ್ರಭಾವ ಬೀರಲು ಪ್ರಾರಂಭಿಸುತ್ತದೆ.
೩. ಚಲನಚಿತ್ರದ ಪ್ರಭಾವವನ್ನು ಕೇವಲ ಆದಾಯ ಅಥವಾ ಪ್ರಸಿದ್ಧಿಯಿಂದಲ್ಲ, ಅದು ನೀಡಿದ ಮೌಲ್ಯಗಳಿಂದ ಅಳೆಯುವುದು ಮಹತ್ವದ್ದಾಗಿದೆ !
ಇಂತಹ ಪ್ರಭಾವದ ಜೊತೆಗೆ ಜವಾಬ್ದಾರಿಯೂ ಬರುತ್ತದೆ. ಚಲನಚಿತ್ರದ ಕಥೆಗಳು ವಿಭಜನೆ, ಸಂಘರ್ಷ ಅಥವಾ ಸಂಕುಚಿತ ಅಸ್ಮಿತೆಗೆ ಒತ್ತು ನೀಡಿದಾಗ, ಸಮಾಜದಲ್ಲಿ ಬಿರುಕುಗಳು ಮತ್ತಷ್ಟು ಆಳವಾಗುವ ಅಪಾಯವಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಚಲನಚಿತ್ರಗಳು ಸಹಕಾರ, ನಿಸ್ವಾರ್ಥ ಸೇವೆ ಮತ್ತು ಸಾಮೂಹಿಕ ಉದ್ದೇಶಕ್ಕೆ ಮಹತ್ವ ನೀಡಿದಾಗ, ಅವು ಒಗ್ಗಟ್ಟು ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಕೊಡುಗೆ ನೀಡಬಲ್ಲವು. ಆದ್ದರಿಂದ ಚಲನಚಿತ್ರದ ಪ್ರಭಾವವನ್ನು ಕೇವಲ ಆದಾಯ ಅಥವಾ ಪ್ರಸಿದ್ಧಿಯ ಆಧಾರದಲ್ಲಿ ಅಳೆಯದೇ ಅದು ಸಮಾಜದಲ್ಲಿ ಯಾವ ಮೌಲ್ಯಗಳನ್ನು ಗಟ್ಟಿಗೊಳಿಸುತ್ತದೆ ಎಂಬುದರ ಆಧಾರದಲ್ಲಿ ಅಳೆಯಬೇಕು.
೪. ಚಲನಚಿತ್ರಕ್ಕೆ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸಮಾಜವನ್ನು ಒಂದುಗೂಡಿಸುವ ಸಾಮರ್ಥ್ಯವಿದೆ
ಭಾರತದಂತಹ ವೈವಿಧ್ಯಮಯ ರಾಷ್ಟ್ರದಲ್ಲಿ, ಎಲ್ಲಿ ಅನೇಕ ಸಂಸ್ಕೃತಿಗಳು, ಭಾಷೆಗಳು ಮತ್ತು ಪರಂಪರೆಗಳು ಒಟ್ಟಿಗೆ ಬಾಳುತ್ತವೆಯೋ, ಅಲ್ಲಿ ಚಲನಚಿತ್ರದ ಪಾತ್ರವು ವಿಶೇಷವಾಗಿ ಮಹತ್ವ ದ್ದಾಗಿರುತ್ತದೆ. ಅದರಲ್ಲಿ ಕೇವಲ ಸಮಾಜದ ಪ್ರತಿಬಿಂಬವನ್ನು ತೋರಿಸುವುದರ ಜೊತೆಗೆ, ಸಮಾಜವನ್ನು ಒಟ್ಟಿಗೆ ಹಿಡಿದಿಡುವ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಾಮರ್ಥ್ಯವೂ ಇದೆ. ದೇಶಭಕ್ತಿಯು ಕೇವಲ ನಮ್ಮ ರಾಷ್ಟ್ರದ ಮೇಲಿನ ಪ್ರೀತಿಯನ್ನು ಮಾತ್ರವಲ್ಲ, ಅಲ್ಲಿನ ಜನರ ಕಲ್ಯಾಣಕ್ಕಾಗಿ ಇರುವ ಸಾಮೂಹಿಕ ಜವಾಬ್ದಾರಿಯ ಭಾವನೆಯನ್ನೂ ದರ್ಶಿಸುತ್ತದೆ. ವೈಯಕ್ತಿಕ ಕ್ರಿಯೆಗಳು ಸಾಮೂಹಿಕ ಫಲಿತಾಂಶಗಳಿಗೆ ಕೊಡುಗೆ ನೀಡುತ್ತವೆ ಎಂಬುದನ್ನು ಅದು ಗುರುತಿಸುತ್ತದೆ.
ಈ ದೃಷ್ಟಿಕೋನವು ಧರ್ಮದ ಜಾಗತಿಕ ಸಂಕಲ್ಪನೆಗೆ ಪೂರಕವಾಗಿದೆ. ಇದೊಂದು ಸಕಾರಾತ್ಮಕ ಜೀವನ ಪದ್ಧತಿಯಾಗಿದ್ದು, ಸಮತೋಲನ, ಜವಾಬ್ದಾರಿ ಮತ್ತು ಜೀವನದ ಉದ್ದೇಶದೊಂದಿಗೆ ಏಕರೂಪತೆಯನ್ನು ಉತ್ತೇಜಿಸುತ್ತದೆ. ಧಾರ್ಮಿಕ ಜೀವನಶೈಲಿಯು ಜೀವನವಿಜ್ಞಾನದ ಅಡಿಪಾಯವಾಗಿದೆ; ಇದು ಉದ್ದೇಶ, ಆಯ್ಕೆ, ಮಾತು ಮತ್ತು ಕೃತಿಗಳನ್ನು ಕಲ್ಯಾಣದ ಒಂದು ಸುಸಂಗತ ಮಾರ್ಗದಲ್ಲಿ ಒಟ್ಟುಗೂಡಿಸುತ್ತದೆ.
೫. ಭಾರತೀಯ ಸಾಂಸ್ಕೃತಿಕ ಪರಂಪರೆಯ ಜಾಗತಿಕ ಸ್ತರದ ಪ್ರಭಾವ
ಧರ್ಮದ ಈ ತಿಳುವಳಿಕೆಯು ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಆಳವಾಗಿ ಬೇರೂರಿದೆ. ಭಾರತದ ವೈದಿಕ ತಳಹದಿಯಿಂದ ಇಂತಹ ಜ್ಞಾನಪದ್ಧತಿಗಳು ಉಗಮಿಸಿದ್ದು, ಅವು ಜಗತ್ತಿನಾದ್ಯಂತ ಪಸರಿಸಿವೆ. ವೇದಗಳಲ್ಲಿ ಬೇರೂರಿರುವ ಪರಂಪರೆಗಳು, ಅಂದರೆ ಯೋಗ, ಧ್ಯಾನ ಮತ್ತು ಆಯುರ್ವೇದ ದಂತಹ ಪದ್ಧತಿಗಳು ಸೇರಿವೆ. ಅವುಗಳು ಜಾಗತಿಕ ಮಟ್ಟದಲ್ಲಿ ಆರೋಗ್ಯ, ಜೀವನಶೈಲಿ ಹಾಗೂ ಆಂತರಿಕ ಸಮತೋಲನದ ದೃಷ್ಟಿಕೋನಗಳ ಮೇಲೆ ಪ್ರಭಾವ ಬೀರಿವೆ. ಇಂದು ಈ ತತ್ತ್ವಗಳನ್ನು ವ್ಯಾಪಕವಾಗಿ ಸ್ವೀಕರಿಸಲಾಗುತ್ತಿದ್ದು, ಅನೇಕ ಬಾರಿ ಅವುಗಳ ಮೂಲ ಉದ್ದೇಶವನ್ನು ಹಾಗೇ ಉಳಿಸಿಕೊಂಡು ಸ್ಥಳೀಯ ಸಂಸ್ಕೃತಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
೬. ವಸುಧೈವ ಕುಟುಂಬಕಮ್ ಎಂಬ ಸತ್ಯದತ್ತ ಕೊಂಡೊಯ್ಯುವ ಭಾರತದ ಸಂಸ್ಕೃತಿ
ಭಾರತದ ಸಂಸ್ಕೃತಿ ಮತ್ತು ಚಲನಚಿತ್ರರಂಗದ ವ್ಯಾಪಕ ಜನಪ್ರಿಯತೆಯು ಒಂದು ಆಳವಾದ ಸತ್ಯದ ಕಡೆಗೆ ಬೆರಳು ಮಾಡಿ ತೋರಿಸುತ್ತದೆ; ಅದೆಂದರೆ ಭಾಷೆ, ಪ್ರದೇಶ ಅಥವಾ ರಾಷ್ಟ್ರೀಯತೆಯನ್ನು ಮೀರಿ ಮಾನವಕುಲವು ಪರಸ್ಪರ ಹೆಣೆಯಲ್ಪಟ್ಟಿದೆ. ಜಗತ್ತನ್ನು ಒಂದು ಕುಟುಂಬವಾಗಿ ನೋಡ ಬಹುದು, ಅಂದರೆ ವಸುಧೈವ ಕುಟುಂಬಕಮ್ (ಸಂಪೂರ್ಣ ಪೃಥ್ವಿ ಒಂದು ಕುಟುಂಬ) ಎಂಬ ಸಂಸ್ಕೃತ ಪರಿಕಲ್ಪನೆಯಿಂದ ವ್ಯಕ್ತವಾದ ಒಂದು ಜಾಗತಿಕ ಸಮಾಜ. ಆದ್ದರಿಂದ, ಯಾರು ಭಾರತೀಯ ಚಲನಚಿತ್ರವನ್ನು ನಿರ್ಮಿಸುತ್ತಾರೋ ಮತ್ತು ಅದಕ್ಕೆ ಕೊಡುಗೆ ನೀಡುತ್ತಾರೋ, ಅವರು ಕೇವಲ ಮನರಂಜನೆ ನೀಡುತ್ತಿಲ್ಲ; ಬದಲಿಗೆ ವ್ಯಕ್ತಿಗಳ ಗುರುತು, ಉದ್ದೇಶ ಮತ್ತು ಸಹಬಾಳ್ವೆಯ ತಿಳುವಳಿಕೆಯನ್ನು ರೂಪಿಸುವಂತಹ ಒಂದು ಜಾಗತಿಕ ಸಾಂಸ್ಕೃತಿಕ ಸಂವಾದದಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ.
೭. ಚಲನಚಿತ್ರಕ್ಕೆ ಸಾಮಾಜಿಕ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ನಿರ್ಮಿಸುವ ಸಾಮರ್ಥ್ಯವಿದೆ
ಚಲನಚಿತ್ರಕ್ಕೆ ಜನರ ಆಕಾಂಕ್ಷೆಗಳಿಗೆ ಒಂದು ರೂಪ ನೀಡುವ ಪ್ರಭಾವವಿದ್ದರೆ, ಅದನ್ನು ಉನ್ನತೀಕರಿಸುವ ಸಾಮರ್ಥ್ಯವೂ ಅದಕ್ಕಿದೆ. ಪ್ರಾಮಾಣಿಕತೆ, ಕರುಣೆ, ಸೇವೆ, ಸಾಮೂಹಿಕ ಜವಾಬ್ದಾರಿ ಮತ್ತು ಸಕಾರಾತ್ಮಕತೆಯ ಮೇಲೆ ಬೆಳಕು ಚೆಲ್ಲುವ ಕಥೆಗಳು ಪ್ರೇಕ್ಷಕರನ್ನು ಸಮಾಜದಲ್ಲಿ ತಮ್ಮ ಪಾತ್ರದ ಕುರಿತು ಚಿಂತಿಸುವಂತೆ ಪ್ರೇರೇಪಿಸುತ್ತವೆ. ಸಾಮರ್ಥ್ಯ ಎಂಬುದು ಕೇವಲ ಪ್ರಾಬಲ್ಯ ಅಥವಾ ಸಂಘರ್ಷದಿಂದ ಮಾತ್ರವಲ್ಲ, ಬದಲಿಗೆ ಸಂಯಮ, ಸಹಕಾರ ಮತ್ತು ಸಾಮೂಹಿಕ ಕಲ್ಯಾಣದ ಕಡೆಗಿನ ವಚನಬದ್ಧತೆಯಿಂದಲೂ ವ್ಯಕ್ತವಾಗುತ್ತದೆ ಎಂಬುದನ್ನು ಸೂಚಿಸುತ್ತವೆ. ಇಂತಹ ಕಥೆ ಹೇಳುವ ಶೈಲಿಯ ಪ್ರಭಾವವು ಸಮಾಜವು ಯಶಸ್ಸನ್ನು ಹೇಗೆ ವ್ಯಾಖ್ಯಾನಿಸುತ್ತದೆ ಎಂಬುದರ ಮೇಲೆ ಪ್ರಭಾವ ಬೀರಬಹುದು. ಕೇವಲ ಸಂಪತ್ತು, ಪ್ರತಿಷ್ಠೆ ಅಥವಾ ವೈಯಕ್ತಿಕ ಸಂತೋಷದಿಂದ ಸಿಗುವ ತೃಪ್ತಿಯ ಬದಲಾಗಿ, ಚಲನಚಿತ್ರಕ್ಕೆ ಕೊಡುಗೆ, ಜವಾಬ್ದಾರಿ, ಗೌರವ ಮತ್ತು ಇತರರೊಂದಿಗಿನ ಸಾಮರಸ್ಯಕ್ಕೆ ಒತ್ತು ನೀಡುವ ಸಾಮರ್ಥ್ಯವಿದೆ. ಹೀಗೆ ಮಾಡುವಾಗ, ಸಮಾಜದ ಒಬ್ಬ ಜವಾಬ್ದಾರಿಯುತ ಸದಸ್ಯನಾಗಿ ಅರ್ಥಪೂರ್ಣ ಜೀವನವನ್ನು ನಡೆಸುವುದೆಂದರೇನು ಎಂಬ ತಿಳುವಳಿಕೆಯನ್ನು ಅದು ಮತ್ತಷ್ಟು ವ್ಯಾಪಕಗೊಳಿಸುತ್ತದೆ.
ಚಲನಚಿತ್ರ ಸಾಮೂಹಿಕ ಮೌಲ್ಯಗಳ ಆಧಾರದಲ್ಲಿ ಸಮಾಜ ನಿರ್ಮಿತಿಗೆ ಸಹಾಯಕವಾಗಿದೆ. ಅಂತಹ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಒಂದು ದೊಡ್ಡ ಸಮೂಹದ ಭಾಗವಾಗಿ ಗುರುತಿಸಲಾಗುತ್ತದೆ. ಭಾರತೀಯ ಚಲನಚಿತ್ರ ತನ್ನ ವ್ಯಾಪ್ತಿ ಮತ್ತು ಪ್ರಭಾವದಲ್ಲಿ ಬೆಳೆಯುತ್ತಿರುವಂತೆಯೇ, ಅದು ರಾಷ್ಟ್ರೀಯ ಏಕತೆಯನ್ನು ಸಶಕ್ತಗೊಳಿಸುವ ಹಾಗೂ ಮತ್ತಷ್ಟು ಸಾಮರಸ್ಯದ ಮತ್ತು ಶಾಂತಿಯುತ ಜಾಗತಿಕ ಸಮಾಜಕ್ಕೆ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಲೇಖಕರು : ಆನಂದಾ ಮ್ಯಾಥ್ಯೂಜ, ಹಾಲಿವುಡ್ (ಚಲನಚಿತ್ರೀಕರಣ ತಜ್ಞರು), ಇನ್ ಕ್ವೆಸ್ಟ್ ಆಫ್ ಗುರು ಪುಸ್ತಕದ ಲೇಖಕರು, ಗೋವಾ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (‘ಪಿ.ಸಿ.ಒ.ಡಿ.’) ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (‘ಪಿ.ಸಿ.ಓ.ಸಿ.’) ಮತ್ತು ಆಯುರ್ವೇದ !
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !