ಕಲಿಯುಗದಲ್ಲಿನ ಭಗವಾನ ಪರಶುರಾಮನ ಅಂಶಾವತಾರವಾಗಿರುವ ಪೂ. ಭಾರ್ಗವರಾಮ ಪ್ರಭು (ಸನಾತನದ ಮೊದಲನೇ ಬಾಲಸಂತರು, ವಯಸ್ಸು ೯ ವರ್ಷ) ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳು !

ಸುಶ್ರೀ ಮಧುರಾ ಭೋಸಲೆ ಇವರಿಗೆ ಸನಾತನದ ಮೊದಲನೇ ಬಾಲಸಂತರಾದ ಪೂ. ಭಾರ್ಗವರಾಮ ಭರತ ಪ್ರಭು ಇವರ ‘ವಿವಿಧ ಯುಗಗಳಲ್ಲಿನ ಸಾಧನಾಪ್ರವಾಸ ಮತ್ತು ಅವರ ಗುಣವೈಶಿಷ್ಟ್ಯಗಳು’, ಈ ಕುರಿತು ದೊರಕಿದ ಸೂಕ್ಷ್ಮದಲ್ಲಿನ ಜ್ಞಾನ ೨೧.೫.೨೦೨೬ ರ ಲೇಖನದಲ್ಲಿ  ತಿಳಿದುಕೊಂಡೆವು. ಈ ವಾರ ಅದರ ಮುಂದಿನ ಭಾಗವನ್ನು ತಿಳಿದುಕೊಳ್ಳೋಣ. (ಭಾಗ ೨)

 ಹಿಂದಿನ ಲೇಖನದ ಭಾಗ ೨ ಓದಲು ಇಲ್ಲಿ ಕ್ಲಿಕ್‌ ಮಾಡಿ : https://sanatanprabhat.org/kannada/180976.html

೫. ಪೂ. ಭಾರ್ಗವರಾಮ ಇವರ ‘ಬ್ರಹ್ಮೋಪದೇಶ’, ಅಂದರೆ ‘ಉಪನಯನ ಸಂಸ್ಕಾರ’ದ ಸಮಯದಲ್ಲಿ ಸೂಕ್ಷ್ಮ ಸ್ತರದಲ್ಲಿ ನಡೆದ ವೈಶಿಷ್ಟ್ಯಪೂರ್ಣ ಘಟನೆಗಳು !

ಉಪನಯನ ಸಂಸ್ಕಾರ ಸಮಾರಂಭದಲ್ಲಿನ ಪೂ. ಭಾರ್ಗವರಾಮ ಪ್ರಭು ಇವರ ಭಾವಮುದ್ರೆ

‘೫.೨.೨೦೨೬ ರಂದು ಪೂ. ಭಾರ್ಗವರಾಮ ಇವರ ‘ಬ್ರಹ್ಮೋಪ ದೇಶ’, ಅಂದರೆ ‘ಉಪನಯನ ಸಂಸ್ಕಾರ’ ನೆರವೇರಿತು. ಆಗ ಸೂಕ್ಷ್ಮ ರೂಪದಲ್ಲಿ ಈ ಕೆಳಗಿನ ದಿವ್ಯ ಘಟನೆ ಗಳು ಸಂಭವಿಸಿದವು.

೫ ಅ. ಶ್ರೀ ಗಣೇಶನು ಕಾರ್ಯಕ್ರಮದ ಸ್ಥಳವನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸುವುದು : ವಿಧಿಯ ಆರಂಭದಿಂದ ವಿಧಿಯು ಪೂರ್ಣಗೊಳ್ಳುವ ವರೆಗೆ ಶ್ರೀ ಗಣೇಶನ ತತ್ತ್ವವು ಕಾರ್ಯಕ್ರಮದ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಈ ಧಾರ್ಮಿಕ ವಿಧಿಯಲ್ಲಿ ವಿಘ್ನಗಳನ್ನು ತರಲು ಕೆಟ್ಟ ಶಕ್ತಿಗಳು ಬಹಳ ಪ್ರಯತ್ನಿಸಿದವು. ಆಗ ವಿಧಿಯ ಮೊದಲು ಮಾಡಿದ ‘ಗಣಹೋಮ’ದಿಂದ ಶ್ರೀ ಗಣೇಶನ ‘ವಿಘ್ನಹರ್ತ’ ರೂಪವು ಪ್ರಕಟವಾಯಿತು ಮತ್ತು ಅವನು ಕಾರ್ಯಕ್ರಮದ ಸ್ಥಳದಲ್ಲಿ ಚೈತನ್ಯದಾಯಕವಾದ ಅಭೇದ್ಯ ರಕ್ಷಾಕವಚವನ್ನು ನಿರ್ಮಿಸಿ, ಕೆಟ್ಟ ಶಕ್ತಿಗಳಿಂದ ಕಾರ್ಯಕ್ರಮದ ಸ್ಥಳವನ್ನು ರಕ್ಷಿಸಿದನು.

ಪೂ. ಭಾರ್ಗವರಾಮ ಪ್ರಭು

೫ ಆ. ವರುಣದೇವನ ಆಜ್ಞೆಯಂತೆ ಪವಿತ್ರ ಸಪ್ತನದಿಗಳು ಪೂ. ಭಾರ್ಗವರಾಮ ಅವರಿಗೆ ಸೂಕ್ಷ್ಮ ರೂಪದಲ್ಲಿ ಸ್ನಾನ ಮಾಡಿಸುವುದು ಮತ್ತು ಸಪ್ತಸರಸ್ವತಿಯರು ಜಲಾಭಿಷೇಕ ಮಾಡುವುದು : ಪೂ. ಭಾರ್ಗವರಾಮ ಇವರ ಸ್ನಾನದ ಸಮಯದಲ್ಲಿ ವರುಣದೇವನ ಆಜ್ಞೆಯಂತೆ ೧. ಗಂಗಾ, ೨. ಯಮುನಾ, ೩. ಸರಸ್ವತಿ, ೪. ಗೋದಾವರಿ, ೫. ನರ್ಮದಾ, ೬. ಸಿಂಧು ಮತ್ತು ೭. ಕಾವೇರಿ ಈ ಸಪ್ತನದಿಗಳು ಸೂಕ್ಷ್ಮ ರೂಪದಲ್ಲಿ ಪ್ರಕಟಗೊಂಡವು ಹಾಗೂ ಅವು ವಾತ್ಸಲ್ಯಭಾವದಿಂದ ಪೂ. ಭಾರ್ಗವರಾಮರಿಗೆ ಸ್ನಾನ ಮಾಡಿಸಿದವು. ಇದರಿಂದ ಪೂ. ಭಾರ್ಗವರಾಮ ಇವರ ಸ್ಥೂಲ ಮತ್ತು ಸೂಕ್ಷ್ಮ ದೇಹಗಳೆಲ್ಲವೂ ಶುದ್ಧವಾದವು. ಪುರೋಹಿತರು ಸ್ಥೂಲದಲ್ಲಿ ಅವರ ಮೇಲೆ ಅಭಿಮಂತ್ರಿಸಿದ ನೀರಿನಿಂದ ಪ್ರೋಕ್ಷಣೆ ಮಾಡುತ್ತಿದ್ದಾಗ, ವರುಣದೇವನು ಆ ಅಭಿಮಂತ್ರಿಸಿದ ಜಲದಲ್ಲಿ ಮೊದಲು ಆಕಾಶಗಂಗೆಯ ತೀರ್ಥವನ್ನು ಬೆರೆಸಿದನು. ನಂತರ ಅವನು ಬ್ರಹ್ಮದೇವನ ಕಮಂಡಲುವಿನಲ್ಲಿದ್ದ ‘ಸುಪ್ರಭಾ, ಕಾಂಚನಾಕ್ಷಿ, ವಿಶಾಲಾ, ಮನೋರಮಾ, ಓಘವತಿ, ಸುರೇಣು ಮತ್ತು ವಿಮಲೋದಕಾ’ ಎಂಬ ಸಪ್ತಸರಸ್ವತಿಯರನ್ನು ಆವಾಹನೆ ಮಾಡಿ, ಅವರ ಸಂಯೋಜಿತ ತೀರ್ಥದಿಂದ ಪೂ. ಭಾರ್ಗವರಾಮ ಇವರಿಗೆ ಮಂಗಳಕರ ಜಲಾಭಿಷೇಕವನ್ನು ಮಾಡಿದನು. ಇದರಿಂದ ಪೂ. ಭಾರ್ಗವರಾಮ ಅವರ ಸುತ್ತಲೂ ಹಳದಿ ಮಿಶ್ರಿತ ಚಿನ್ನದ ಬಣ್ಣದ ದಿವ್ಯ ಪ್ರಭಾಮಂಡಲವು ಕಾರ್ಯನಿರತವಾಯಿತು ಮತ್ತು ಅವರು ಮತ್ತಷ್ಟು ತೇಜಸ್ವಿಯಾಗಿ ಕಾಣಿಸತೊಡಗಿದರು.

೫ ಇ. ಪೂ. ಭಾರ್ಗವರಾಮ ಇವರು ಜನಿವಾರ ಧರಿಸಿದಾಗ ಅವರ ಸೂರ್ಯನಾಡಿಯಲ್ಲಿ ಸೂರ್ಯನ ತೇಜ, ಚಂದ್ರನಾಡಿಯಲ್ಲಿ ಚಂದ್ರನ ಶೀತಲತೆ ಮತ್ತು ಸುಷುಮ್ನನಾಡಿಯಲ್ಲಿ ಸಾಕ್ಷಾತ್ ಆದಿಶಕ್ತಿಯ ದಿವ್ಯ ತೇಜವು ಕಾರ್ಯನಿರತವಾಯಿತು.

೫ ಈ. ವಿವಿಧ ದೇವತೆಗಳು ಮತ್ತು ಋಷಿಮುನಿಗಳು ಸೂಕ್ಷ್ಮರೂಪದಲ್ಲಿ ಸಮಾರಂಭದ ಸ್ಥಳದಲ್ಲಿ ಉಪಸ್ಥಿತರಿರುವುದು : ಈ ಸಂಪೂರ್ಣ ಸಮಾರಂಭದಲ್ಲಿ ಇಂದ್ರಾದಿ ದೇವತೆಗಳು ಮತ್ತು ದೇವರ್ಷಿ ನಾರದರು ಸೂಕ್ಷ್ಮ ರೂಪದಲ್ಲಿ ಉಪಸ್ಥಿತರಿದ್ದರು, ಹಾಗೆಯೇ ದೇವಗುರು ಬೃಹಸ್ಪತಿ ಮತ್ತು ದೇವರ್ಷಿ ನಾರದರು ಪುರೋಹಿತರ ಮಾಧ್ಯಮದಿಂದ ವಿವಿಧ ಮಂತ್ರೋಪಚಾರಗಳನ್ನು ಮಾಡಿ ವಿಧಿಯಲ್ಲಿ ಭಾಗವಹಿಸಿದರು. ಈ ಸಂಪೂರ್ಣ ವಿಧಿಯನ್ನು ಮಹರ್ಷಿ ಭೃಗು ಇವರು ಮುಖ್ಯ ಪುರೋಹಿತರ ರೂಪದಲ್ಲಿ ಮಾಡಿದರು; ಏಕೆಂದರೆ ಆಧ್ಯಾತ್ಮಿಕದೃಷ್ಟಿಯಲ್ಲಿ ಪೂ. ಭಾರ್ಗವರಾಮ ಇವರು ಭೃಗುವಂಶದಲ್ಲಿನ ಉತ್ತರಾಧಿಕಾರಿಯಾಗಿದ್ದಾರೆ.

ಸುಶ್ರೀ ಮಧುರಾ ಭೋಸಲೆ

೫ ಉ. ಸನಾತನದ ಮೂರು ಮಂದಿ ಮೋಕ್ಷಗುರುಗಳು ಸಂಪೂರ್ಣ ಕಾರ್ಯಕ್ರಮದಲ್ಲಿ ಸೂಕ್ಷ್ಮರೂಪದಲ್ಲಿ ಉಪಸ್ಥಿತರಿದ್ದರು : ಸನಾತನ ಸಂಸ್ಥೆಯ ಮೂರು ಮಂದಿ ಮೋಕ್ಷಗುರುಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀ ಮಹಾಲಕ್ಷ್ಮಿ ಸ್ವರೂಪಿಣಿಯಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಇವರು ಸಂಪೂರ್ಣ ಸಮಾರಂಭದಲ್ಲಿ ಸೂಕ್ಷ್ಮರೂಪದಲ್ಲಿ ಉಪಸ್ಥಿತರಿದ್ದರು.

೫ ಉ ೧. ಮೂರು ಮಂದಿ ಮೋಕ್ಷಗುರುಗಳು ಪೂ. ಭಾರ್ಗವರಾಮ ಇವರಿಗೆ ಸೂಕ್ಷ್ಮ ರೂಪದಲ್ಲಿ ಧರ್ಮದಂಡವನ್ನು ನೀಡುವುದು : ಪೂ. ಭಾರ್ಗವರಾಮ ಇವರಿಗೆ ಮೂರು ಮೋಕ್ಷಗುರುಗಳ ಕೈಗಳಿಂದ ಸೂಕ್ಷ್ಮರೂಪದಲ್ಲಿ ಧರ್ಮದಂಡ ಲಭಿಸಿತು. ಆಗ ದೇವತೆಗಳು ಸೂಕ್ಷ್ಮರೂಪದಲ್ಲಿ ಪೂ. ಭಾರ್ಗವರಾಮ ಇವರ ಮೇಲೆ ದೈವೀ ಪರಿಮಳ (ಸುಗಂಧಭರಿತ) ಹೂವುಗಳ ಮಳೆಯನ್ನು ಸುರಿಸಿದರು. ಇದರ ಅನುಭೂತಿಯಾಗಿ ಸಮಾರಂಭದ ಸ್ಥಳದಲ್ಲಿ ಕೆಂಪು, ಗುಲಾಬಿ, ನವಿಲುಗರಿ, ಕೇಸರಿ, ಬೆಳ್ಳಿ, ಚಿನ್ನ ಮುಂತಾದ ಬಣ್ಣಗಳ ದೈವೀ ಕಣಗಳು ಕಂಡುಬಂದವು. ಪೂ. ಭಾರ್ಗವರಾಮ ಇವರ ಉಪನಯನ ಸಂಸ್ಕಾರದ ಸಮಯದಲ್ಲಿ ತೆಗೆದ ಛಾಯಾಚಿತ್ರಗಳನ್ನು ನೋಡಿದಾಗ ಧರ್ಮದಂಡ ಮತ್ತು ಕೇಸರಿ ವಸ್ತ್ರಗಳನ್ನು ಧರಿಸಿದ ೮ ವರ್ಷದ ಆದಿ ಶಂಕರಾಚಾರ್ಯರ ದಿವ್ಯ ಸ್ವರೂಪವು ಪೂ. ಭಾರ್ಗವರಾಮ ಇವರಲ್ಲಿ ದರ್ಶನವಾಯಿತು. ಪೂ. ಭಾರ್ಗವರಾಮ ಇವರು ಮುಂದೆ ಧರ್ಮಗುರುಗಳ ರೂಪದಲ್ಲಿ ಕಾರ್ಯಪ್ರವೃತ್ತರಾಗಿ ಪೃಥ್ವಿಯಲ್ಲಿ ಧರ್ಮಸಂಸ್ಥಾಪನೆ ಮಾಡಲಿದ್ದಾರೆ.

೫ ಉ ೨. ಮೂರು ಮಂದಿ ಮೋಕ್ಷಗುರುಗಳು ಪೂ. ಭಾರ್ಗವರಾಮ ಇವರಿಗೆ ವಿವಿಧ ಆಶೀರ್ವಾದವನ್ನು ನೀಡುವುದು : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಪೂ. ಭಾರ್ಗವರಾಮ ಇವರಿಗೆ ಭಕ್ತಿಯಿಂದ ಸಂಪನ್ನರಾಗಲು, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದಿವ್ಯ ಶಕ್ತಿಯಿಂದ ಸಂಪನ್ನರಾಗಲು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆತ್ಮಜ್ಞಾನದೊಂದಿಗೆ ಬ್ರಹ್ಮಜ್ಞಾನದಿಂದ ಸುಸಂಪನ್ನರಾಗಲು ಕೃಪಾಶೀರ್ವಾದವನ್ನು ಮಾಡಿದರು. ಮೂರು ಮೋಕ್ಷಗುರುಗಳು ಪೂ. ಭಾರ್ಗವರಾಮ ಇವರಿಗೆ ಜ್ಞಾನ, ಭಕ್ತಿ ಮತ್ತು ವೈರಾಗ್ಯದ ವರವನ್ನು ನೀಡಿ ಉತ್ತಮ ಮೋಕ್ಷಪ್ರಾಪ್ತಿಯ ಆಶೀರ್ವಾದವನ್ನು ನೀಡಿದರು.

೬. ಭವಿಷ್ಯದಲ್ಲಿ ಪೂ. ಭಾರ್ಗವರಾಮ ಇವರು ಮುಕ್ತಿ ಮತ್ತು ಮೋಕ್ಷವನ್ನು ನೀಡುವ ‘ಸಮಷ್ಟಿ ಮೋಕ್ಷಗುರುಗಳು’ ಆಗಲಿದ್ದಾರೆ

ಪೂ. ಭಾರ್ಗವರಾಮ ಇವರ ಕಾರ್ಯವು ಎಷ್ಟೊಂದು ಸೂಕ್ಷ್ಮ ಮತ್ತು ಅವ್ಯಕ್ತವಾಗಿದೆ ಎಂದರೆ, ಅದನ್ನು ನಮ್ಮ ಅಲ್ಪಬುದ್ದಿಯಿಂದ ತಿಳಿದುಕೊಳ್ಳುವುದು ಕಠಿಣವಾಗಿದೆ. ಅವರ ಲೀಲೆಯು ಮೂರು ಮೋಕ್ಷಗುರುಗಳಿಗೆ ಮಾತ್ರ ತಿಳಿಯುತ್ತದೆ. ಮುಂಬರುವ ಭೀಕರ ಆಪತ್ಕಾಲದಲ್ಲಿ ಪೂ. ಭಾರ್ಗವರಾಮ ಇವರ ಸತ್ಸಂಗ ಮತ್ತು ಸಂಕಲ್ಪದಿಂದ ಅನೇಕ ಸಾತ್ತ್ವಿಕ ಜೀವಗಳ ಪ್ರಾಣಗಳ ರಕ್ಷಣೆ ಆಗಲಿದೆ. ಪೂ. ಭಾರ್ಗವರಾಮ ಇವರಿಗೆ ಅನೇಕ ಜೀವಗಳ ಕರ್ಮ, ಕರ್ಮಫಲ ಮತ್ತು ಭಾಗ್ಯದ ಬಗ್ಗೆ ಗೂಢಜ್ಞಾನವಿದೆ. ಆದ್ದರಿಂದ ಮುಂದೆ ಅವರು ಯಾವಾಗ ಸಮಷ್ಟಿ ಸ್ತರದಲ್ಲಿನ ಉಚ್ಚ ಆಧ್ಯಾತ್ಮಿಕ ಉತ್ತರಾಧಿಕಾರಿ ಆಗುತ್ತಾರೆಯೋ, ಆಗ ಅವರು ಮೋಕ್ಷಗುರುಗಳ ರೂಪದಲ್ಲಿ ಅನೇಕ ಜೀವಗಳಿಗೆ ಕರ್ಮಬಂಧನದಿಂದ ಮುಕ್ತಿ ನೀಡಿ ಅನೇಕರಿಗೆ ಮುಕ್ತಿ ಮತ್ತು ಮೋಕ್ಷವನ್ನು ನೀಡುವರು. ಇದರಿಂದ ಅವರು ಸಂಪೂರ್ಣ ಜಗತ್ತಿನಲ್ಲಿ ಅತ್ಯಂತ ಜನಪ್ರಿಯರಾಗುವರು.

೭. ಇಂತಹ ದಿವ್ಯ ಅಂಶಾವತಾರಕ್ಕೆ ನಮ್ಮ ಕೋಟಿ ಕೋಟಿ ನಮನಗಳು |

ಬಾಹುಗಳಲ್ಲಿದೆ (ಭುಜಗಳಲ್ಲಿದೆ) ಪರಶುರಾಮನ ಕ್ಷಾತ್ರತೇಜ |

ಮತ್ತು ವಾಣಿಯಲ್ಲಿ ಕಂಗೊಳಿಸುತ್ತಿರುವ ಬ್ರಾಹ್ಮತೇಜ || ೧ ||

ದಿವ್ಯ ಜ್ಞಾನದಿಂದ ಯುಕ್ತವಾಗಿದೆ ಅವರ ಜ್ಞಾನತೇಜ |

ಮತ್ತು ಧರ್ಮಜ್ಞಾನದಿಂದ ಸಂಪೃಕ್ತವಾಗಿದೆ ಅವರ ಧರ್ಮತೇಜ || ೨ ||

ನಾವು ವಂದಿಸುತ್ತೇವೆ ಇಂತಹ ದಿವ್ಯ ತೇಜಕ್ಕೆ |

ಇಂತಹ ದಿವ್ಯ ಅಂಶಾವತಾರಕ್ಕೆ ನಮ್ಮ ಕೋಟಿ ನಮನಗಳು || ೩ ||

೮. ಕೃತಜ್ಞತೆ

‘ಶ್ರೀ ಗುರುಕೃಪೆಯಿಂದ ನನಗೆ ಇಂತಹ ದಿವ್ಯ ಅಂಶಾವತಾರದ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ತಿಳಿದವು’, ಅದಕ್ಕಾಗಿ ನಾನು ಶ್ರೀ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.’

– ಸುಶ್ರೀ ಮಧುರಾ ಭೋಸಲೆ (ಸೂಕ್ಷ್ಮದಿಂದ ಜ್ಞಾನವನ್ನು ಪಡೆಯುವ ಸಾಧಕಿ, ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೪.೨೦೨೬) 

ಸೂಕ್ಷ್ಮ-ಪರೀಕ್ಷಣೆ : ಯಾವುದಾದರೂ ಘಟನೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅನಿಸುತ್ತದೆಯೋ, ಅದನ್ನು ‘ಸೂಕ್ಷ್ಮ-ಪರೀಕ್ಷಣೆ’ ಎನ್ನುತ್ತಾರೆ.