‘ಸನಾತನ ಸಂಸ್ಥೆಯು ಅಧ್ಯಾತ್ಮವನ್ನು ವೈಜ್ಞಾನಿಕ ಭಾಷೆಯಲ್ಲಿ ಪ್ರಸಾರ ಮಾಡುವ ಸಂಸ್ಥೆಯಾಗಿದೆ. ಸನಾತನ ಸಂಸ್ಥೆಯ ವತಿಯಿಂದ ಅಧ್ಯಾತ್ಮ ಪ್ರಸಾರದ ನಿಮಿತ್ತ ವಿವಿಧೆಡೆಗಳಲ್ಲಿ ಪ್ರವಚನ ಮತ್ತು ಗ್ರಂಥ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ.
೧. ಪ್ರವಚನಗಳು

ಆನಂದಮಯ, ಒತ್ತಡರಹಿತ ಮತ್ತು ವ್ಯಸನಮುಕ್ತ ಜೀವನ ನಡೆಸುವುದು, ಯುವಕರು ವ್ಯಕ್ತಿತ್ವ ವಿಕಸನವನ್ನು ಸಾಧಿಸುವುದು, ಹಾಗೆಯೇ ವಿದ್ಯಾರ್ಥಿಗಳು ಶಾಲಾ ಅಭ್ಯಾಸದಲ್ಲಿ ಏಕಾಗ್ರತೆಯನ್ನು ಪಡೆದುಕೊಳ್ಳುವುದು ಮುಂತಾದವುಗಳಿಗಾಗಿ ಅಧ್ಯಾತ್ಮ ಮತ್ತು ಸಾಧನೆ ಮಹತ್ವದ್ದಾಗಿದೆ. ಪ್ರಸ್ತುತ ಯುದ್ಧದಂತಹ ಪರಿಸ್ಥಿತಿ ಮತ್ತು ಅದರಿಂದಾಗಿ ಅನೇಕ ದೇಶಗಳಲ್ಲಿ ಉಂಟಾಗಿರುವ ಸಾಮಾಜಿಕ ಅಸ್ಥಿರತೆಯಿಂದಾಗಿ ವಿಶ್ವಾದ್ಯಂತ ಆತಂಕ ಮತ್ತು ನಿರಾಶಾದಾಯಕ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ‘ಸಾಧನೆಯು ವ್ಯಕ್ತಿಯನ್ನು ಮಾನಸಿಕವಾಗಿ ಸ್ಥಿರವಾಗಿಡುವ ಮತ್ತು ಆತನ ಆತ್ಮಬಲವನ್ನು ಹೆಚ್ಚಿಸುವ ಪ್ರಮುಖ ಕೀಲಿಕೈಯಾಗಿದೆ. ಇದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಸಮಾಜದ ವಿವಿಧ ವರ್ಗಗಳಿಗಾಗಿ ಪ್ರವಚನಗಳನ್ನು ಆಯೋಜಿಸಲಾಗುತ್ತದೆ.
೧ ಅ. ಸಮಾಜದ ವಿವಿಧ ವರ್ಗಗಳಿಗಾಗಿ ಆಯೋಜಿಸಲಾಗುವ ಪ್ರವಚನಗಳು : ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಸರಕಾರಿ ನೌಕರರು, ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು, ವಕೀಲರು, ಹಾಗೆಯೇ ಪೊಲೀಸ್ ಮತ್ತು ಸೈನಿಕ ಪಡೆಗಳು ಇತ್ಯಾದಿ.
೧ ಆ. ವಿವಿಧ ವಿಷಯಗಳ ಬಗ್ಗೆ ನೀಡಲಾಗುವ ಪ್ರವಚನಗಳು
೧ ಆ ೧. ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ : ನಾವು ಪ್ರತಿದಿನ ಪ್ರತಿಯೊಂದು ಕೃತಿಯನ್ನು ಆನಂದವನ್ನು ಪಡೆಯಲು ಮಾಡುತ್ತೇವೆ; ಆದರೆ ‘ನಿಜವಾದ ಆನಂದ ಪಡೆಯುವುದು ಹೇಗೆ, ಇದಕ್ಕಾಗಿ ಸಾಧನೆಯ ಮಹತ್ವವೇನು ? ಎಂಬ ಬಗ್ಗೆ ‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ ಎಂಬ ಪ್ರವಚನವನ್ನು ನೀಡಲಾಗುತ್ತದೆ.
೧ ಆ ೨. ಒತ್ತಡ ಮುಕ್ತಿಗೆ ಅಧ್ಯಾತ್ಮ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಪ್ರತಿಯೊಬ್ಬರೂ ವಿವಿಧ ಒತ್ತಡದಲ್ಲಿದ್ದಾರೆ. ಕೆಲವು ಬಾರಿ ಈ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಅನೇಕರು ಆತ್ಮಹತ್ಯೆಯಂತಹ ತೀವ್ರ ಹೆಜ್ಜೆಯನ್ನು ಇಟ್ಟಿರುವ ಬಗ್ಗೆ ನಾವು ಕೇಳುತ್ತೇವೆ. ಇಂತಹ ಒತ್ತಡವನ್ನು ನಿಯಂತ್ರಿಸಲು ಸ್ವಯಂಸೂಚನೆ ನೀಡುವುದು ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ಪ್ರಯತ್ನಿಸುವುದು, ಎಂಬ ಬಗ್ಗೆ ‘ಒತ್ತಡ ಮುಕ್ತಿಗೆ ಅಧ್ಯಾತ್ಮ ಪ್ರವಚನಗಳ ಮೂಲಕ ಕಲಿಸಲಾಗುತ್ತದೆ.
೧ ಆ ೩. ವ್ಯಸನಮುಕ್ತಿಗಾಗಿ ಸಾಧನೆ : ಪ್ರಸ್ತುತ ಸಮಾಜದಲ್ಲಿ ವ್ಯಸನಾಧೀನತೆ ತುಂಬಾ ಹೆಚ್ಚಾಗಿದೆ. ಇದರಿಂದ ವ್ಯಸನಿಗಳ ಕುಟುಂಬ, ವ್ಯವಹಾರ ಮತ್ತು ಸಾಮಾಜಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತಿದೆ. ವ್ಯಸನಗಳಿಂದ ಮುಕ್ತರಾಗಲು ‘ಸಾಧನೆ ಒಂದು ಪರಿಣಾಮಕಾರಿ ಮಾಧ್ಯಮವಾಗಿದ್ದು, ಅದರ ಬಗ್ಗೆ ‘ವ್ಯಸನಮುಕ್ತಿಗಾಗಿ ಸಾಧನೆ ಎಂಬ ಪ್ರವಚನಗಳನ್ನು ನೀಡಲಾಗುತ್ತದೆ.
೧ ಆ ೪. ವ್ಯಕ್ತಿತ್ವ ವಿಕಸನಕ್ಕಾಗಿ ಸಾಧನೆ : ಇಂದಿನ ಯುವ ಪೀಳಿಗೆಯು ಪರಿಣಾಮಕಾರಿ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಲು ಒಲವು ತೋರುತ್ತಿದೆ. ‘ಚೆನ್ನಾಗಿ ಕಾಣಿಸುವುದು, ಒಳ್ಳೆಯ ಉಡುಪು ಧರಿಸುವುದು ಅಥವಾ ಸಂವಹನಕೌಶಲ್ಯವನ್ನು ಮೈಗೂಡಿಸಿಕೊಳ್ಳುವುದು ಎಂದರೆ ‘ವ್ಯಕ್ತಿತ್ವ ವಿಕಸನ, ಎಂದು ಇಂದಿನ ಯುವ ಪೀಳಿಗೆ ಭಾವಿಸಿದೆ. ವಾಸ್ತವದಲ್ಲಿ ಈ ಪರಿಕಲ್ಪನೆಯು ಅತ್ಯಂತ ಮೇಲ್ಮಟ್ಟದ ಮತ್ತು ಆಳವಿಲ್ಲದ್ದಾಗಿದೆ. ನಮ್ಮ ವ್ಯಕ್ತಿತ್ವವು ಪರಿಣಾಮಕಾರಿಯಾಗಲು ‘ನಮ್ಮ ಸ್ವಭಾವದಲ್ಲಿನ ದೋಷಗಳು, ಅಂದರೆ ನಮ್ಮ ವ್ಯಕ್ತಿತ್ವವು ಆದರ್ಶವಾಗಲು ಅಡ್ಡಿಯಾಗುವ ಮೂಲ ಸ್ವಭಾವದೋಷಗಳನ್ನು ಗುರುತಿಸಿ ನಿರ್ಮೂಲನೆ ಮಾಡಿ ಸದ್ಗುಣಗಳನ್ನು ವೃದ್ಧಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಅಳವಡಿಸಿಕೊಳ್ಳಬೇಕಾದ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆ ಹಾಗೂ ಸಾಧನೆಯ ಪ್ರಯತ್ನಗಳ ಕುರಿತು ‘ವ್ಯಕ್ತಿತ್ವ ವಿಕಸನಕ್ಕಾಗಿ ಸಾಧನೆ ಪ್ರವಚನಗಳನ್ನು ನೀಡಲಾಗುತ್ತದೆ.
೧ ಆ ೫. ಹಬ್ಬಗಳು ಮತ್ತು ಉತ್ಸವಗಳ ನಿಮಿತ್ತ ಪ್ರವಚನಗಳು : ವ್ಯಕ್ತಿಯು ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಂಡು ಅದರಂತೆ ಹಬ್ಬಗಳು ಮತ್ತು ಉತ್ಸವಗಳನ್ನು ಆಚರಿಸಿದರೆ ಆತನಿಗೆ ಆಧ್ಯಾತ್ಮಿಕ ಮಟ್ಟದಲ್ಲಿ ಲಾಭವಾಗುತ್ತದೆ. ಧರ್ಮ ಶಾಸ್ತ್ರದ ಪ್ರಕಾರ ಆದರ್ಶ ರೀತಿಯಲ್ಲಿ ಹಬ್ಬ ಮತ್ತು ಉತ್ಸವಗಳನ್ನು ಹೇಗೆ ಆಚರಿಸಬೇಕು, ಅದರಿಂದ ಜೀವಕ್ಕೆ (ವ್ಯಕ್ತಿಗೆ) ಸಿಗುವ ಲಾಭ ಇತ್ಯಾದಿಗಳ ಬಗ್ಗೆ ಈ ಪ್ರವಚನಗಳ ಮೂಲಕ ಮಾರ್ಗದರ್ಶನ ನೀಡಲಾಗುತ್ತದೆ. ಮಕರ ಸಂಕ್ರಾಂತಿ, ಮಹಾಶಿವರಾತ್ರಿ, ರಾಮನವಮಿ, ಹನುಮಾನ ಜಯಂತಿ, ದತ್ತ ಜಯಂತಿ, ದಸರಾ, ದೀಪಾವಳಿ ಮುಂತಾದ ಹಬ್ಬಗಳು ಹಾಗೂ ಗಣೇಶೋತ್ಸವ, ನವರಾತ್ರಿ ಉತ್ಸವ, ಹೋಲಿಕೋತ್ಸವ ಮುಂತಾದ ಉತ್ಸವಗಳ ಸಮಯದಲ್ಲಿ ಈ ಪ್ರಾಸಂಗಿಕ ಪ್ರವಚನಗಳನ್ನು ಆಯೋಜಿಸಲಾಗುತ್ತದೆ.
ಜನವರಿಯಿಂದ ಮಾರ್ಚ್ ೨೦೨೬ ರ ಅವಧಿಯಲ್ಲಿ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿವಿಧ ಪ್ರವಚನಗಳಿಗೆ ದೊರೆತ ಪ್ರತಿಕ್ರಿಯೆ ಈ ಕೆಳಗಿನಂತಿದೆ.

೧ ಈ. ಈ ಪ್ರವಚನಗಳಲ್ಲಿ ಉಪಸ್ಥಿತರಿದ್ದ ಜಿಜ್ಞಾಸುಗಳ ಪೈಕಿ ೯೧೫ ಜಿಜ್ಞಾಸುಗಳು ಸಂಸ್ಥೆಯ ವಿವಿಧ ಉಪಕ್ರಮಗಳಲ್ಲಿ ಭಾಗವಹಿಸಿದರು. ಈ ೧ ಸಾವಿರದ ೩೨೬ ಪ್ರವಚನಗಳಿಗೆ ಉಪಸ್ಥಿತರಿದ್ದ ವ್ಯಕ್ತಿಗಳು ಸನಾತನ ಸಂಸ್ಥೆಯ ಮುಂದಿನ ಸತ್ಸಂಗ ಮತ್ತು ವರ್ಗಗಳನ್ನು ತಮ್ಮ ಭಾಗದಲ್ಲಿ ನಡೆಸಿಕೊಡಬೇಕೆಂದು ವಿನಂತಿಸಿದರು.
೨. ಗ್ರಂಥ ಪ್ರದರ್ಶನಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಮಾನವಕುಲದ ಕಲ್ಯಾಣಕ್ಕಾಗಿ ‘ಅಧ್ಯಾತ್ಮ, ಸಾಧನೆ, ದೇವತೆಗಳ ಉಪಾಸನೆ, ಸಂಸ್ಕೃತಿಯ ಆಚರಣೆ, ಆಧ್ಯಾತ್ಮಿಕ ಉಪಾಯಗಳು, ಈಶ್ವರಪ್ರಾಪ್ತಿಗಾಗಿ ಕಲೆ, ಹಾಗೆಯೇ ರಾಷ್ಟ್ರರಕ್ಷಣೆ, ಧರ್ಮಜಾಗೃತಿ, ಹಿಂದೂ ರಾಷ್ಟ್ರ, ಆಪತ್ಕಾಲೀನ ಉಪಚಾರ ಮುಂತಾದ ವಿವಿಧ ವಿಷಯಗಳ ಕುರಿತಾದ ಗ್ರಂಥಗಳನ್ನು ಸಂಕಲನ ಮಾಡಿದ್ದಾರೆ. ಏಪ್ರಿಲ್ ೨೦೨೬ ರ ವರೆಗೆ ಸನಾತನ ಸಂಸ್ಥೆಯು ೩೭೦ ಗ್ರಂಥಗಳ ೧೩ ಭಾಷೆಗಳಲ್ಲಿ ೧ ಕೋಟಿ ೨ ಲಕ್ಷದ ೪೬ ಸಾವಿರ ಪ್ರತಿಗಳನ್ನು ಪ್ರಕಟಿಸಿದೆ.
೨ ಅ. ಪ್ರತಿದಿನ, ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ, ಹಾಗೆಯೇ ಪ್ರತಿ ವರ್ಷ ಮತ್ತು ರಾಜ್ಯ ಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುವ ಗ್ರಂಥ ಪ್ರದರ್ಶನಗಳು : ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಸನಾತನದ ಗ್ರಂಥಗಳ ಪ್ರದರ್ಶನಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಗ್ರಂಥ ಪ್ರದರ್ಶನವನ್ನು ಪ್ರತಿದಿನ, ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಅದೇ ರೀತಿ ಪ್ರತಿ ವರ್ಷ ದೆಹಲಿ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಪುಸ್ತಕ ಮೇಳಗಳಲ್ಲಿಯೂ ಸನಾತನ ಗ್ರಂಥಗಳ ಪ್ರದರ್ಶನದ ಮೂಲಕ ಈ ಜ್ಞಾನಶಕ್ತಿಯನ್ನು ಪ್ರಸಾರ ಮಾಡಲಾಗುತ್ತದೆ.
೨ ಆ. ಜನವರಿಯಿಂದ ಮಾರ್ಚ್ ೨೦೨೬ ರ ಅವಧಿಯಲ್ಲಿ ಸಂಸ್ಥೆಯ ವತಿಯಿಂದ ವಿವಿಧ ಸ್ಥಳಗಳಲ್ಲಿ ಆಯೋಜಿಸಲಾದ ಗ್ರಂಥ ಪ್ರದರ್ಶನಗಳಿಗೆ ದೊರೆತ ಪ್ರತಿಕ್ರಿಯೆ ಈ ಕೆಳಗಿನಂತಿದೆ.
ಜನವರಿಯಿಂದ ಮಾರ್ಚ್ ೨೦೨೬ ರ ಅವಧಿಯಲ್ಲಿ ಆಯೋಜಿಸಲಾದ ಗ್ರಂಥ ಪ್ರದರ್ಶನಗಳು

೨ ಇ. ಗ್ರಂಥ ಪ್ರದರ್ಶನಗಳಿಗೆ ಭೇಟಿ ನೀಡಿದ ಗಣ್ಯರು : ವಿವಿಧ ರಾಜ್ಯಗಳಲ್ಲಿ ಆಯೋಜಿಸಲಾಗಿದ್ದ ಗ್ರಂಥ ಪ್ರದರ್ಶನಗಳಿಗೆ ಗೋವಾದ ರಾಜ್ಯಪಾಲರಾದ ಪಶುಪತಿ ಅಶೋಕ್ ಗಜಪತಿ ರಾಜು, ಶಾಸಕಿ ಸೌ. ಶಶಿಕಲಾ ಜೊಲ್ಲೆ, ಸಂಸದೆ ಬಾನ್ಸುರಿ ಸ್ವರಾಜ್ ಮುಂತಾದ ವಿವಿಧ ಜನಪ್ರತಿನಿಧಿಗಳು, ಹಿಂದುತ್ವನಿಷ್ಠರು ಮತ್ತು ಧರ್ಮಪ್ರೇಮಿಗಳು ಭೇಟಿ ನೀಡಿದರು.
ನಿಮಗೂ ನಿಮ್ಮ ಭಾಗದಲ್ಲಿ ಸನಾತನ ಸಂಸ್ಥೆಯ ವತಿಯಿಂದ ನಡೆಸಲಾಗುವ ಪ್ರವಚನಗಳು ಅಥವಾ ಗ್ರಂಥ ಪ್ರದರ್ಶನಗಳನ್ನು ಆಯೋಜಿಸಲು ಇಚ್ಛೆಯಿದ್ದರೆ ೭೦೫೮೮೮೫೬೧೦ ಸಂಖ್ಯೆಗೆ ಸಂಪರ್ಕಿಸಿ.
– ಅಶ್ವಿನಿ ಅನಂತ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೪.೨೦೨೬)
ಗುರುಪೂರ್ಣಿಮೆಯ ನಿಮಿತ್ತ ಸಂದೇಶ
ಆಪತ್ಕಾಲದಲ್ಲಿ ನಮ್ಮೆಲ್ಲರ ರಕ್ಷಣೆಯಾಗಬೇಕಾದರೆ ಎಲ್ಲರೂ ಈಶ್ವರನ ಭಕ್ತರಾಗಬೇಕು !
ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನದಂತೆಯೇ ಆಗಿದೆ !
ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಭಾವದೋಷ, ಪ್ರಮಾದ ಮತ್ತು ಗೊಂದಲವನ್ನು ದೂರಗೊಳಿಸಿ !
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಅನೇಕ ಸಂತರು ವಿವಿಧ ಕಾರಣಗಳಿಗಾಗಿ ನೀಡಿದ ನಾಮಜಪಗಳ ಬದಲು ಗುರುಮಂತ್ರದಿಂದಲೇ ಶಾಂತಿಯ ಅನುಭೂತಿ ಬರುತ್ತದೆ’
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !