
೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಲೇಖನ
‘ಸಾಮಾನ್ಯ ಮನುಷ್ಯನಿಗೆ ಒಂದು ನಿರ್ದಿಷ್ಠ ವಯಸ್ಸಿನ ನಂತರ ಪೃಥ್ವಿಯಲ್ಲಿರಲು ಬೇಸರವಾಗುತ್ತದೆ. ಇದರಿಂದ ‘ಇಂತಹ ಪೃಥ್ವಿಯಲ್ಲಿ ಅವತಾರ ತಾಳುವ ಶ್ರೀವಿಷ್ಣುವು ಎಷ್ಟು ಶ್ರೇಷ್ಠನಾಗಿದ್ದಾನೆ !’, ಎಂಬುದು ತಿಳಿಯುತ್ತದೆ. ದೇವರು ಬೇಸರ ಮತ್ತು ಉತ್ಸಾಹ ಇವೆರಡರ ಆಚೆಗೆ ಇರುತ್ತಾರೆ. ‘ಮಾನವನಿಗೆ ಇದನ್ನು ಸಾಧಿಸಲು ಸಾಕಷ್ಟು ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳುವುದು ಆವಶ್ಯಕವಾಗಿದೆ’, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.’
(ಚೈತ್ರ ಕೃಷ್ಣ ಪಕ್ಷ ೧೦, ಕಲಿಯುಗ ವರ್ಷ ೫೧೧೫ (೪.೫.೨೦೧೩)
೨. ಮೇಲಿನ ವಿಷಯದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೨ ಅ. ಸಾಮಾನ್ಯ ವ್ಯಕ್ತಿಯ ಜೀವನ ಮತ್ತು ದೇವತೆಗಳ ನಡುವಿನ ವ್ಯತ್ಯಾಸ : ‘ಸಾಮಾನ್ಯ ವ್ಯಕ್ತಿಗೆ ವಯಸ್ಸಾದಂತೆ ಅನೇಕ ಶಾರೀರಿಕ ಮಿತಿಗಳು ಬರತೊಡಗುತ್ತವೆ, ಹಾಗೆಯೇ ವಿವಿಧ ಕಾಯಿಲೆಗಳೂ ಉಲ್ಬಣಿಸುತ್ತವೆ. ಆಗ ಅವನ ಮನೋಬಲವು ಕಡಿಮೆ ಆಗಿರುತ್ತದೆ. ಆದ್ದರಿಂದ ಒಂದು ನಿರ್ದಿಷ್ಟ ವಯಸ್ಸಿನ ನಂತರ ಆ ವ್ಯಕ್ತಿಗೆ ಉಂಟಾಗುವ ದುಃಖದ ಪ್ರಮಾಣ ಹೆಚ್ಚಾಗಿರುತ್ತದೆ. ಅದರಿಂದ ಅವನಿಗೆ ಜೀವನ ನಡೆಸಲು ಬೇಸರವಾಗುತ್ತದೆ. ಅದರ ತುಲನೆಯನ್ನು ಮಾಡಿದರೆ ದೇವತೆಗಳು ಅನಾದಿಕಾಲದಿಂದಲೂ ಕಾರ್ಯನಿರತರಾಗಿದ್ದಾರೆ. ಅವರು ಸರ್ವಜ್ಞರು ಮತ್ತು ಸರ್ವಶಕ್ತಿವಂತರಾಗಿರುತ್ತಾರೆ. ಅವರಿಗೆ ಕಾರ್ಯ ಮಾಡುವಾಗ ಸ್ಥೂಲ ದೇಹದ ಅಥವಾ ಯಾವುದೇ ಮಿತಿ ಇರುವುದಿಲ್ಲ. ಅವರಲ್ಲಿ ಅದ್ಭುತ ಮತ್ತು ಅಲೌಕಿಕ ಸಾಮರ್ಥ್ಯವಿರುತ್ತದೆ. ಅವರು ಆನಂದ ಸ್ವರೂಪರಾಗಿರುತ್ತಾರೆ. ಆದ್ದರಿಂದ ಅವರಿಗೆ ಪೃಥ್ವಿಗೆ ಬಂದು ಕಾರ್ಯ ಮಾಡಲು ಎಂದಿಗೂ ಬೇಸರವಾಗುವುದಿಲ್ಲ. ದೇವತೆಗಳು ಆನಂದ ಸ್ವರೂಪರಾಗಿರುವುದರಿಂದ ಅವರು ಬೇಸರ ಮತ್ತು ಉತ್ಸಾಹದ ಆಚೆಗೆ ಇರುತ್ತಾರೆ.

೨ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅವತಾರಿ ಕಾರ್ಯ
೨ ಆ ೧. ಕೆಟ್ಟ ಶಕ್ತಿಗಳೊಂದಿಗೆ ನಡೆಯುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸೂಕ್ಷ್ಮ ಯುದ್ಧ : ‘ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಾರ್ಯವಾಗಿದೆ. ಆದ್ದರಿಂದ ಅವರು ‘ಹಿಂದೂಗಳ ಸಂಘಟನೆ, ಸಾಧನೆಯನ್ನು ಹೇಳುವುದು ಹಾಗೂ ಅವರಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೇಮವನ್ನು ಜಾಗೃತಗೊಳಿಸುವುದು’ ಮುಂತಾದ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದರ ಪರಿಣಾಮದಿಂದ ೨೦೦೧ ರಿಂದ ಸಪ್ತಪಾತಾಳಗಳಲ್ಲಿನ ಕೆಟ್ಟ ಶಕ್ತಿಗಳು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೇಲೆ ಸೂಕ್ಷ್ಮದಿಂದ ಆಕ್ರಮಣಗಳನ್ನು ಮಾಡುತ್ತಿವೆ. ಯಾವಾಗ ಕೆಟ್ಟ ಶಕ್ತಿಗಳು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೇಲೆ ಸೂಕ್ಷ್ಮದಿಂದ ಆಕ್ರಮಣಗಳನ್ನು ಮಾಡುತ್ತವೆಯೋ, ಆಗ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ದೇಹದ ಮೂಲಕ ಪ್ರಕ್ಷೇಪಿಸಲ್ಪಡುವ ಚೈತನ್ಯದಿಂದಾಗಿ ಆ ಕೆಟ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ಈ ಸೂಕ್ಷ್ಮ ಯುದ್ಧದಿಂದಾಗಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ‘ಪ್ರಾಣಶಕ್ತಿ ಕಡಿಮೆಯಾಗುವುದು, ಬಹಳ ಆಯಾಸವಾಗುವುದು, ಮಂಪರು ಬಂದು ಅನಿಯಂತ್ರಿತ ನಿದ್ದೆ ಬರುವುದು, ಮಾತನಾಡುವಾಗ ಶಬ್ದಗಳ ಉಚ್ಚಾರಣೆ ಅಸ್ಪಷ್ಟವಾಗುವುದು, ಉಸಿರಾಟದಲ್ಲಿ ಅಡಚಣೆ ನಿರ್ಮಾಣವಾಗುವುದು’ ಇತ್ಯಾದಿ ತೊಂದರೆಗಳು ಸತತವಾಗಿ ಆಗುತ್ತಿರುತ್ತವೆ. ದೊಡ್ಡ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೇಲೆ ಮಾರಣಾಂತಿಕ ಆಕ್ರಮಣಗಳನ್ನು ಮಾಡುತ್ತಿರುತ್ತವೆ.
೨ ಆ ೨. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ದೀರ್ಘಕಾಲದಿಂದ ಆಗುವ ಸಮಷ್ಟಿ ತೊಂದರೆಗಳು ಮತ್ತು ಇಳಿವಯಸ್ಸಿನಿಂದಾಗಿ ಧರ್ಮಕಾರ್ಯದ ಬಗ್ಗೆ ಬೇಸರ ಬಾರದಿರಲು ಕಾರಣ : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಕೆಟ್ಟ ಶಕ್ತಿಗಳ ಸೂಕ್ಷ್ಮ ಆಕ್ರಮಣಗಳಿಂದ ಉಂಟಾಗುವ ತೊಂದರೆಗಳನ್ನು ದೀರ್ಘಕಾಲದಿಂದ ಅನುಭವಿಸುತ್ತಿದ್ದಾರೆ. ದೊಡ್ಡ ಕೆಟ್ಟ ಶಕ್ತಿಗಳ ಹಿಂದೆ ಅವುಗಳ ಸಾವಿರಾರು ವರ್ಷಗಳ ಸಾಧನೆಯ ಬಲವಿದೆ ಹಾಗೂ ಅವುಗಳಿಗೆ ಪ್ರತಿಕೂಲ ಕಾಲದ ಬೆಂಬಲವೂ ಇದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಶರೀರದ ಮೇಲೆ ಈ ಸೂಕ್ಷ್ಮ ಯುದ್ಧದ ಅತ್ಯಧಿಕ ನಕಾರಾತ್ಮಕ ಪರಿಣಾಮವು ಆಗುತ್ತದೆ. ಈ ತೊಂದರೆಗಳು ಅಸಹನೀಯ ಸ್ವರೂಪದ್ದಾಗಿರುತ್ತವೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಈಶ್ವರಸ್ವರೂಪರಾಗಿದ್ದು ಆನಂದಮಯ ಸ್ಥಿತಿಯಲ್ಲಿ ಇರುವುದರಿಂದ, ಅವರಿಗೆ ಶಾರೀರಿಕ ತೊಂದರೆಗಳು ಆಗುತ್ತಿದ್ದರೂ ಮತ್ತು ವಯಸ್ಸಾಗಿದ್ದರೂ ಎಂದಿಗೂ ಬೇಸರವಾಗುವುದಿಲ್ಲ. ಶ್ರೀವಿಷ್ಣುವು ಯುಗಯುಗಾಂತರಗಳಿಂದ ಪೃಥ್ವಿಯಲ್ಲಿ ಅವತಾರಿ ಕಾರ್ಯಕ್ಕಾಗಿ ಬರುತ್ತಾನೆ, ಈ ಬಗ್ಗೆ ಅವನಿಗೆ ಎಂದಿಗೂ ಬೇಸರವಾಗುವುದಿಲ್ಲ. ಅದೇ ರೀತಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸ್ಥಿತಿಯಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ‘ಗುರುಗಳ ಆಜ್ಞಾಪಾಲನೆ, ಸಾಧನೆ ಮತ್ತು ಭಕ್ತಿ’ಯ ಮೂಲಕ ಇಂತಹ ಸರ್ವೋಚ್ಚ ಆಧ್ಯಾತ್ಮಿಕ ಸ್ಥಿತಿಯನ್ನು ಸಾಧ್ಯ ಮಾಡಿಕೊಂಡಿದ್ದಾರೆ.
೨ ಆ ೩. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಲೇಖನದಲ್ಲಿ ದೇವರು ಮತ್ತು ಮನುಷ್ಯರ ನಡುವೆ ತುಲನೆಯನ್ನು ಮಾಡಲು ಕಾರಣ : ಸಾಮಾನ್ಯ ವ್ಯಕ್ತಿಯು ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡಿದರೆ, ಕಾಲಾಂತರದಲ್ಲಿ ಅವನಲ್ಲೂ ದೇವತ್ವವು ನಿರ್ಮಾಣವಾಗುತ್ತದೆ. ಸಾಧಕನು ಹೆಚ್ಚು ಸಾಧನೆ ಮಾಡಿದರೆ ಅವನಿಗೆ ಚಿರಂತನ ಆನಂದ ಪ್ರಾಪ್ತವಾಗುತ್ತದೆ. ಆದ್ದರಿಂದ ಅಂತಹ ಸಾಧಕನಿಗೆ ನಿರ್ದಿಷ್ಟ ವಯಸ್ಸಾದ ನಂತರ ಜೀವನದ ಬಗ್ಗೆ ಬೇಸರ ಬರುವುದಿಲ್ಲ; ಏಕೆಂದರೆ ಅವನು ಸತತವಾಗಿ ಆನಂದವನ್ನು ಅನುಭವಿಸುತ್ತಿರುತ್ತಾನೆ ಮತ್ತು ಈಶ್ವರನ ಕಾರ್ಯವನ್ನು ಮಾಡುವುದರಲ್ಲಿ ಮಗ್ನನಾಗಿರುತ್ತಾನೆ.
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ತಮ್ಮ ಲೇಖನದಲ್ಲಿ ದೇವರು ಮತ್ತು ಮನುಷ್ಯರಲ್ಲಿ ತುಲನೆಯನ್ನು ಮಾಡಿದ್ದಾರೆ. ಇದರ ಮೂಲಕ ಅವರು ಹೇಳಬಯಸುವುದೇನೆಂದರೆ, ‘ವ್ಯಕ್ತಿಯು ಜೀವನದ ಅಸಂಖ್ಯಾತ ಅಡಚಣೆಗಳಿಂದ ಮುಕ್ತಿ ಪಡೆಯಲು ಹೆಚ್ಚೆಚ್ಚು ಸಾಧನೆಯನ್ನು ಮಾಡಿ ಆನಂದಮಯ ಜೀವನವನ್ನು ಪಡೆದು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು.’
– ಶ್ರೀ. ರಾಮ ಹೊನಪ ಸೂಕ್ಷ್ಮಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವ ಸಾಧಕ), ಸನಾತನ ಆಶ್ರಮ, ರಾಮನಾಥಿ, ಗೋವಾ.
ಗುರುಪೂರ್ಣಿಮೆಯ ನಿಮಿತ್ತ ಸಂದೇಶ
ಆಪತ್ಕಾಲದಲ್ಲಿ ನಮ್ಮೆಲ್ಲರ ರಕ್ಷಣೆಯಾಗಬೇಕಾದರೆ ಎಲ್ಲರೂ ಈಶ್ವರನ ಭಕ್ತರಾಗಬೇಕು !
ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನದಂತೆಯೇ ಆಗಿದೆ !
ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಭಾವದೋಷ, ಪ್ರಮಾದ ಮತ್ತು ಗೊಂದಲವನ್ನು ದೂರಗೊಳಿಸಿ !
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ