ಸನಾತನದ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಜನ್ಮೋತ್ಸವವು ೭ ಜುಲೈರಂದು ಇದೆ, ಆ ನಿಮಿತ್ತ...

೧. ಪ.ಪೂ. ಭಕ್ತರಾಜ ಮಹಾರಾಜರು ಸೇವೆಯ ಮೂಲಕ ಸಾಧಕನನ್ನು ತನ್ನವನನ್ನಾಗಿ ಮಾಡಿಕೊಳ್ಳುವುದು
‘೧೯೯೨ ರಲ್ಲಿ ನಾನು ಪ್ರತಿವಾರ ಸ್ವಾರಗೇಟನಿಂದ (ಪುಣೆ) ಆಳೇಫಾಟ ಎಂಬ ಊರಿಗೆ ದಂತವೈದ್ಯನೆಂದು ರೋಗಿಗಳನ್ನು ಪರೀಕ್ಷಿಸಲು ಹೋಗುತ್ತಿದ್ದೆ. ಪ.ಪೂ. ಭಕ್ತರಾಜ ಮಹಾರಾಜರ ಭಕ್ತರಾದ ಡಾ. ಅರುಣ ಪಾಟೀಲ ಅವರು ರೋಗಿಗಳನ್ನು ನನ್ನ ಬಳಿಗೆ ಪರೀಕ್ಷಣೆಗೆ ಕಳುಹಿಸುತ್ತಿದ್ದರು. ಅವರು ‘ರೋಗಿಗಳಿಂದ ಹಣ ಪಡೆಯಬೇಡಿ’, ಎಂದು ಹೇಳುತ್ತಿದ್ದರು. ಆರಂಭದಲ್ಲಿ ‘ಈ ರೋಗಿಗಳು ಡಾ. ಪಾಟೀಲ ಅವರ ಸಂಬಂಧಿಕರು ಇರಬಹುದು,’ ಎಂದೆನಿಸಿತು. ನಂತರ ಆ ರೋಗಿಗಳು ಬೇರೆ ಬೇರೆ ಕುಟುಂಬದವರು ಎಂದು ತಿಳಿಯಿತು. ಆ ಬಗ್ಗೆ ಡಾ. ಪಾಟೀಲ ಅವರು, ‘ಇವರು ನನ್ನ ಗುರುಬಂಧುಗಳಾಗಿದ್ದು, ನಮ್ಮ ಗುರುಗಳು ಪ.ಪೂ. ಭಕ್ತರಾಜ ಮಹಾರಾಜರಾಗಿದ್ದಾರೆ (ಪ.ಪೂ. ಬಾಬಾ)’, ಎಂದರು.
ಒಮ್ಮೆ ಪ.ಪೂ. ಬಾಬಾರವರು ಅವರ ಭಕ್ತರಾದ (ದಿ.) ದತ್ತಾತ್ರೆಯ ಜೋಶಿಕಾಕಾ ಅವರ ಮನೆಗೆ ಬಂದಿದ್ದರು. ಒಂದು ಸಂದೇಶ ನೀಡಲು ನಾನು ಅಲ್ಲಿಗೆ ಹೋದೆ. ಆಗ ಓರ್ವ ಭಕ್ತನು ಪ.ಪೂ. ಬಾಬಾ ಅವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಅತ್ಯಂತ ಆತ್ಮೀಯವಾಗಿ ಅವರು ನನ್ನನ್ನು ವಿಚಾರಿಸಿದರು. ‘ನಾನು ದಂತವೈದ್ಯನಿದ್ದೇನೆ’, ಎಂದು ತಿಳಿದಾಗ ಅವರು ತಮ್ಮ ಹಲ್ಲುಕಟ್ಟನ್ನು ನನಗೆ ಕೊಟ್ಟು, ‘ಇದನ್ನು ಸ್ವಚ್ಛಗೊಳಿಸಿ ತಂದು ಕೊಡುವಿರಾ ?’ ಎಂದು ಕೇಳಿದರು. ಪ.ಪೂ. ಬಾಬಾ ಅವರು ನನಗೆ ಜೋಶಿಕಾಕಾ ಅವರ ಮನೆಗೆ ದ್ವಿಚಕ್ರ ವಾಹನ ಕೊಟ್ಟು ನನ್ನ ಜೊತೆಗೆ ಡಾ. ಮಿಲಿಂದ ಖರೆ ಅವರನ್ನು ಜೋಡಿಸಿಕೊಟ್ಟರು. ನಾವು ಚಿಕಿತ್ಸಾಲಯಕ್ಕೆ ಹೋಗಿ ಹಲ್ಲುಕಟ್ಟು ಸ್ವಚ್ಛ ಮಾಡಿ ಬಂದೆವು. ಅಷ್ಟರಲ್ಲಿ ಪ.ಪೂ. ಬಾಬಾರವರು ತಮ್ಮ ಭಕ್ತನ ಮನೆಗೆ (ಶ್ರೀ. ಅಂಜನಿಕುಮಾರ) ಭಜನೆ ಮಾಡಲು ಹೋಗಿದ್ದರು. ಅಲ್ಲೇ ಇದ್ದ ಒಬ್ಬ ಭಕ್ತನು ‘ಪ.ಪೂ. ಬಾಬಾರವರು ತಮ್ಮ ಚತುಶ್ಚಕ್ರ ವಾಹನವನ್ನು ನಿಮಗಾಗಿ (ನಾನು ಮತ್ತು ಡಾ. ಮಿಲಿಂದ ಖರೆ ಇವರಿಗಾಗಿ) ಇಲ್ಲಿ ಬಿಟ್ಟು ಹೋಗಿದ್ದಾರೆ ಮತ್ತು ನಿಮಗೆ ಭಜನೆಗೆ ಬರಲು ಹೇಳಿದ್ದಾರೆ, ಎಂದನು. ನಾವು ಅಲ್ಲಿ ಹೋದೆವು. ಪ.ಪೂ. ಬಾಬಾರವರಿಗೆ ಹಲ್ಲುಕಟ್ಟನ್ನು ಕೊಟ್ಟೆವು. ಅವರು ಅದನ್ನು ಹಾಕಿದರು ಮತ್ತು ಮಹಾಪ್ರಸಾದ ಸಮಯದಲ್ಲಿ ‘ಹಲ್ಲುಕಟ್ಟು ಚೆನ್ನಾಗಿ ಹೊಂದಿಕೆಯಾಗಿದೆ’ ಎಂದರು.
ಮಹಾಪ್ರಸಾದ ಮುಗಿದ ನಂತರ ಪ.ಪೂ. ಬಾಬಾರವರು ಭಜನೆಗೆ ಆರಂಭಿಸಿದರು. ನನಗೆ ‘ಭಜನಾಮೃತ’ ಗ್ರಂಥ ಕೊಟ್ಟಿದ್ದರು. ಆ ಗ್ರಂಥವನ್ನು ನೋಡಿ ನಾನು ಭಜನೆ ಹೇಳುತ್ತಿದ್ದೆ. ‘ಆ ಆನಂದದಲ್ಲಿ ನನಗೆ ೨ ಗಂಟೆ ಹೇಗೆ ಕಳೆಯಿತು ?’ ಎಂದು ಗೊತ್ತಾಗಲಿಲ್ಲ. ಆಗ ನಾನು ಬಾಹ್ಯ ಜಗತ್ತನ್ನು ಮರೆತಿದ್ದೆ. ‘ಹಲ್ಲುಕಟ್ಟು ಸ್ವಚ್ಛ ಮಾಡಿಸಿಕೊಳ್ಳುವುದು’ ಒಂದು ನಿಮಿತ್ತವಾಗಿತ್ತು ಎಂದು ಈಗ ನನಗೆ ಅರಿವಾಯಿತು. ಭಾನುವಾರ ನಾನು ಅಳೆಫಾಟಾಗೆ ರೋಗಿಗಳನ್ನು ಪರೀಕ್ಷಿಸಲು ಹೋದರೆ ‘ಡಾ. ಅರುಣ ಪಾಟೀಲ ಅವರು “ಇವತ್ತು ಪ.ಪೂ. ಬಾಬಾ ಕಾಂದಳಿಯಲ್ಲಿದ್ದಾರೆ. ನೀವು ಬರುತ್ತೀರಾ ?”
ಎಂದು ಕೇಳುತ್ತಿದ್ದರು ಅಥವಾ ಪುಣೆಯಲ್ಲಿ ಪ.ಪೂ. ಬಾಬಾರವರು ಜೋಶಿಕಾಕಾರ ಮನೆಗೆ ಬಂದಾಗ, ಡಾ. ಪಾಟೀಲ ಅವರು ನನಗೆ ಅಲ್ಲಿ ಬರಲು ಹೇಳುತ್ತಿದ್ದರು. ನನಗೂ ಪ.ಪೂ. ಬಾಬಾರ ದರ್ಶನದ ಸೆಳೆತ ಇದ್ದದ್ದರಿಂದ ನಾನು ಆನಂದದಿಂದ ಹೊಗುತ್ತಿದ್ದೆ.
೨. ಪ.ಪೂ. ಬಾಬಾರವರ ಒಡನಾಟದಲ್ಲಿ ಬೇರೆಯೇ ಆನಂದ ಸಿಗುವುದು
ವರ್ಷ ೧೯೯೨ ರಿಂದ ೧೯೯೪ ರ ಕಾಲಾವಧಿಯಲ್ಲಿ ನಾನು ಸುಮಾರು ೪ ರಿಂದ ೬ ಬಾರಿ ಕಾಂದಳಿಗೆ ಹೋಗಿರಬಹುದು. ಅಲ್ಲಿಗೆ ಹೋದಾಗ ನನಗೆ ಒಂದು ರೀತಿಯ ಆನಂದ ಸಿಗುತ್ತಿತ್ತು. ಪ.ಪೂ. ಬಾಬಾರವರು ನನ್ನ ಜೊತೆಗೇನು ಮಾತಾಡುತ್ತಿದ್ದರೆಂದಿಲ್ಲ; ಆದರೆ ಅವರ ಅಸ್ತಿತ್ವದಿಂದ ಅಲ್ಲಿಯ ವಾತಾವರಣ ಬದಲಾಗುತ್ತಿತ್ತು. ಬಹಳಷ್ಟು ಸಲ ನಾಮಸ್ಮರಣೆಯಿಂದಲೂ ಮನಸ್ಸು ನಿರ್ವಿಚಾರ ಆಗುತ್ತಿರಲಿಲ್ಲ. ಅಂದರೆ ಮಾಯೆಯ ವಿಚಾರ ಗಳು ಬರುತ್ತಲೇ ಇದ್ದವು; ಆದರೆ ಪ.ಪೂ. ಬಾಬಾರವರ ಸಾನಿಧ್ಯದಲ್ಲಿ ಸ್ವಲ್ಪ ಸಮಯ ಕಳೆದರೂ ಮಾಯೆಯ ವಿಚಾರಗಳು ತಾನಾಗಿಯೇ ಕಡಿಮೆಯಾಗುತ್ತಿದ್ದವು.
೩. ಪ.ಪೂ. ಬಾಬಾರವರು ‘ಸೇವೆ ಮಾಡುವಾಗ ನಾಮಸ್ಮರಣೆ ಮಾಡಿ ಎನ್ನುವುದು
ಒಮ್ಮೆ ಪ.ಪೂ ಬಾಬಾರವರು ‘ಆಲೂಗಡ್ಡೆ ಗಳನ್ನು ಪರಿಶೀಲಿಸಿ ಸ್ವಚ್ಛ ಮಾಡಿಡಲು ಹೇಳಿದರು’. ಅಲ್ಲಿದ್ದ ನಾವೆಲ್ಲರೂ ಆಲೂಗೆಡ್ಡೆ ಗಳನ್ನು ಪರಿಶೀಲಿಸಿ ಸ್ವಚ್ಛ ಮಾಡಿ ಮೊರ ದಲ್ಲಿ ತೆಗೆದುಕೊಂಡು ಗೋಣಿಚೀಲಕ್ಕೆ ತುಂಬತೊಡಗಿದೆವು. ಅರ್ಧ ಗೋಣಿಚೀಲ ತುಂಬಿದಾಗ ಪ.ಪೂ. ಬಾಬಾರವರು ನಮ್ಮನ್ನು ನೋಡಿದರು. ಆಗ ಅವರು ನಮಗೆ ಬೈದು ತುಂಬಿದ ಗೋಣಿಚೀಲದಲ್ಲಿದ್ದ ಬಟಾಟೆಗಳನ್ನು ಹೊರತೆಗೆಯಲು ಹೇಳಿ, ‘ಒಮ್ಮೆಲೆ ಎಲ್ಲ ಆಲೂಗೆಡ್ಡೆಗಳನ್ನು ಗೋಣಿಚೀಲದಲ್ಲಿ ಏಕೆ ತುಂಬುತ್ತೀರಾ ? ಒಂದೊಂದೆ ಆಲೂಗೆಡ್ಡೆಯನ್ನು ಚೀಲದಲ್ಲಿ ತುಂಬಿ’ ಎಂದರು. ಅದರಂತೆ ನಾವು ಒಂದೊಂದೇ ಆಲುಗಡ್ಡೆಯನ್ನು ಚೀಲದಲ್ಲಿ ತುಂಬತೊಡಗಿದೆವು. ಆಗ ನನ್ನ ಮನಸ್ಸಿನಲ್ಲಿ ‘ಒಂದೇಸಾರಿ ಎಲ್ಲ ಆಲೂಗಡ್ಡೆ ಗಳನ್ನು ತುಂಬಿದರೆ, ಗೋಣಿಚೀಲ ಬೇಗ ತುಂಬುವುದು, ಒಂದೊಂದಾಗಿ ತುಂಬಲು ಸಮಯ ಹಿಡಿಯುತ್ತದೆ’ ಎನ್ನುವ ವಿಚಾರ ಬರುತ್ತಿರುವಾಗಲೇ ಪ.ಪೂ. ಬಾಬಾ ಮತ್ತೆ ಬೈದು, ‘ನಾಮಸ್ಮರಣೆ ಮಾಡುವುದಿಲ್ಲ, ಏನೂ ಮಾಡುವುದಿಲ್ಲ. ಒಂದೊಂದು ಆಲೂಗಡ್ಡೆ ಗೋಣಿಚೀಲದಲ್ಲಿ ತುಂಬುವಾಗ ನಾಮಸ್ಮರಣೆ ಮಾಡಿರಿ’, ಎಂದರು.
೪. ‘ಅಖಂಡ ನಾಮಸ್ಮರಣೆ ಆಗಬೇಕು’, ಎನ್ನುವುದನ್ನು ಕಲಿಸುವುದು
ಒಮ್ಮೆ ಯಾರೋ ಒಬ್ಬರು ಜಾಮೂನು ತಂದಿದ್ದರು. ಆಗ ಪ.ಪೂ. ಬಾಬಾರವರು ಪ್ರತಿಯೊಬ್ಬರಿಗೂ ಒಂದೊಂದು ಜಾನೂನು ತಿನ್ನಲು ಕೊಟ್ಟರು. ನಾವೆಲ್ಲರೂ ಜಾಮೂನನ್ನು ಚಮಚದಿಂದ ತುಂಡು ಮಾಡಿ ತಿನ್ನುತ್ತಿದ್ದೆವು; ಏಕೆಂದರೆ ಜಾಮೂನಿನ ಆಕಾರ ದೊಡ್ಡದಾಗಿತ್ತು. ಆಗ ಪ.ಪೂ. ಬಾಬಾ ಅವರು ಸಿಟ್ಟಿನಿಂದ ನಮಗೆ ಹೇಳಿದರು, “ಯಾಕೆ ತುಂಡು ಮಾಡಿ ತಿನ್ನುತ್ತಿದ್ದೀರ ? ಇಡೀ (ಅಖಂಡ) ಜಾಮೂನು ತಿನ್ನಬೇಕಲ್ಲ ?’ ಆಗ ಎಲ್ಲರೂ ಜಾಮೂನು ದೊಡ್ಡದಾಗಿದ್ದರೂ ಇಡಿ ಜಾಮೂನು (ಅಖಂಡ) ಬಾಯಲ್ಲಿ ಹಾಕಿದರು. ನನ್ನ ಮನಸ್ಸಿನಲ್ಲಿ ‘ಪ.ಪೂ. ಬಾಬಾರವರು ಹೀಗೇಕೆ ಹೇಳುತ್ತಿದ್ದಾರೆ ?’ ಎನ್ನುವ ವಿಚಾರ ಬಂದಿತು, ಅಷ್ಟರಲ್ಲಿ ಪ.ಪೂ. ಬಾಬಾರವರು, ‘ದೇವರ ನಾಮಸ್ಮರಣೆ ಅಖಂಡವಾಗಿ ಮಾಡಬೇಕು. ತುಂಡು ತುಂಡಾಗಿ ಅಲ್ಲ’, ಎಂದರು.
೫. ಸಾಧಕನ ಮನಸ್ಸಿನಲ್ಲಿ ಬರುವ ವಿಚಾರವನ್ನು ಗುರುತಿಸುವುದು
ಒಮ್ಮೆ ಬೆಳಗಿನ ಸಮಯದಲ್ಲಿ ಚಿಕಿತ್ಸಾಲಯದ ಕೆಲಸ ಮಾಡುವಾಗ ನನ್ನ ಮನಸ್ಸಿನಲ್ಲಿ, ‘ಪ.ಪೂ. ಬಾಬಾರವರು ಇಷ್ಟೆಲ್ಲಾ ಭಕ್ತರಲ್ಲಿ ನನ್ನನ್ನು ಗುರುತಿಸುತ್ತಿರಬಹುದಾ ?’ ಎಂಬ ವಿಚಾರ ಬಂದಿತು. ನಂತರ ಸಾಯಂಕಾಲ ಸುಮಾರು ೬ ಗಂಟೆಗೆ ಪ.ಪೂ. ಬಾಬಾರವರ ಓರ್ವ ಭಕ್ತರು ನನ್ನ ಚಿಕಿತ್ಸಾಯಕ್ಕೆ ಬಂದು “ಪ.ಪೂ. ಬಾಬಾರವರಿಗೆ ಹಲ್ಲುಕಟ್ಟು ಸರಿಯಾಗಿ ಕೂಡುತ್ತಿಲ್ಲ. ಆದರಿಂದ ಅವರಿಗೆ ತಿನ್ನಲು ಆಗುತ್ತಿಲ್ಲ; ಅದಕ್ಕಾಗಿ ಅವರು ನಿಮ್ಮನ್ನು ಕರೆದಿದ್ದಾರೆ”, ಎಂದರು. ನಾನು ಪ.ಪೂ. ಬಾಬಾರವರ ಬಳಿಗೆ ಹೋಗಿ ಅವರ ಹಲ್ಲುಕಟ್ಟಿಗೆ ಏನು ತೊಂದರೆ ಇದೆ ? ಹಲ್ಲುಕಟ್ಟು ಹಾಕಿಕೊಂಡ ಮೇಲೆ ಅವರಿಗೆ ತಿನ್ನಲು ಏಕೆ ತೊಂದರೆ ಆಗುತ್ತದೆ ? ಇವೆಲ್ಲವನ್ನೂ ನಾನು ನೋಡುತ್ತಿದ್ದೆ. ಆಗ ಅವರು ಮೇಲಿನ ಹಲ್ಲುಕಟ್ಟುನ್ನು ಹೊಸದಾಗಿ ಮಾಡಿಸಿದ್ದರು ಮತ್ತು ಕೆಳಗಿನ ಹಲ್ಲುಕಟ್ಟು ಹಳೆಯದೆ ಇತ್ತು. ಅದರಿಂದ ಅವರಿಗೆ ತಿನ್ನಲು ತೊಂದರೆ ಆಗುತ್ತಿತ್ತು, ಎಂದು ತಿಳಿಯಿತು. ಮೇಲಿನ ಮತ್ತು ಕೆಳಗಿನ ಎರಡೂ ಹೊಸದಾಗಿರುವ ಹಲ್ಲುಕಟ್ಟುಗಳನ್ನು ಬಳಸಬೇಕಾಗಿತ್ತು. ನಾನು ಅದನ್ನು ಪ.ಪೂ. ಬಾಬಾರವರಿಗೆ ಹೇಳಿದ ಮೇಲೆ ಅವರು ನನ್ನ ಕಡೆ ನೋಡಿದರು. ಅವರು ಮಂದಸ್ಮಿತ ಮಾಡಿ, “ಹೌದಾ ?”, ಎಂದರು. ಆಗ ನನಗೆ ಇದೆಲ್ಲ ಪ.ಪೂ. ಬಾಬಾರವರಿಗೆ ಗೊತ್ತಿತ್ತು, ನನ್ನ ಸಾಧನೆಗಾಗಿ ಇದೆಲ್ಲ ನಡೆಯಿತು ಎಂದು ಅನಿಸಿತು. ಇಂದು ಬೆಳಗ್ಗೆ ನನ್ನ ಮನಸ್ಸಿನಲ್ಲಿ ‘ಪ.ಪೂ. ಬಾಬಾರವರು ನನ್ನನ್ನು ಗುರುತಿಸುತ್ತಿರಬಹುದಾ ?’ ಎಂಬ ವಿಚಾರ ಬಂದಿತ್ತು, ನನ್ನ ಮನಸ್ಸಿನಲ್ಲಿ ಬಂದ ಈ ವಿಚಾರ ಗುರುತಿಸಿ ಪ.ಪೂ. ಬಾಬಾರವರು ಹಲ್ಲುಕಟ್ಟಿನ ನಿಮಿತ್ತ ಮಾಡಿ ನನ್ನನ್ನು ಕರೆಸಿಕೊಂಡರು, ಎಂದೆನಿಸಿತು.
ಪ.ಪೂ. ಬಾಬಾ ಮತ್ತು ಪ.ಪೂ. ಡಾಕ್ಟರ ಇವರ ಅಪಾರ ಕೃಪೆಯಿಂದ ನನಗೆ ಇದು ಅನುಭವಿಸಲು ಬಂದಿತು. ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞನಾಗಿರುವೆನು.’
– ಡಾ. ನರೇಂದ್ರ ದಾತೆ (ಆಧ್ಯಾತ್ಮಿಕ ಮಟ್ಟ ೬೬, ವಯಸ್ಸು ೬೭ ವರ್ಷ) ಸನಾತನ ಆಶ್ರಮ, ದೇವದ, ಪನವೇಲ. (೨.೧೧.೨೦೨೫)
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಪ.ಪೂ. ಭಕ್ತರಾಜ ಮಹಾರಾಜ ಜನ್ಮೋತ್ಸವ, ಇಂದೋರ್, ಮ.ಪ್ರ. (೭.೭.೨೦೨೬)
ಆಜಾದ ಹಿಂದ ಸೇನಾ ಸ್ಥಾಪನಾದಿನ ೫.೭.೨೦೨೬
ಸಂವಿಧಾನ ಮತ್ತು ರಾಜರು ಮೋಸಕ್ಕೊಳಗಾದ ಕಥೆ