ಸುಶ್ರೀ ಮಧುರಾ ಭೋಸಲೆ ಇವರಿಗೆ ಸನಾತನದ ಮೊದಲನೇ ಬಾಲಸಂತರಾದ ಪೂ. ಭಾರ್ಗವರಾಮ ಭರತ ಪ್ರಭು ಇವರ ಬಗ್ಗೆ ದೊರಕಿದ ಸೂಕ್ಷ್ಮಜ್ಞಾನವನ್ನು ಇಲ್ಲಿ ಕೊಡುತ್ತಿದ್ದೇವೆ : (ಭಾಗ ೧)

೧. ಪೂ. ಭಾರ್ಗವರಾಮ ಇವರು ಕಲಿಯುಗದಲ್ಲಿನ ಭಗವಾನ ಪರಶುರಾಮನ ಅಂಶಾವತಾರವಾಗಿರುವರು
‘ಪೂ. ಭಾರ್ಗವರಾಮರವರು ಜನಿಸಿದ ನಂತರ ಅವರಲ್ಲಿ ಭಗವಾನ ಪರಶುರಾಮರ ಒಂದು ದಿವ್ಯಾಂಶವು ಕೂಡಿಕೊಂಡಿತು. ಆದ್ದರಿಂದ ಪೂ. ಭಾರ್ಗವರಾಮ ಅವರು ಕಲಿಯುಗದ ಭಗವಾನ ಪರಶುರಾಮರ ಅಂಶಾವತಾರವಾಗಿದ್ದಾರೆ. ಭಾರತದ ಪವಿತ್ರ ‘ಪರಶುರಾಮ ಭೂಮಿ’ಯಲ್ಲಿ ಅವರ ಜನ್ಮವಾಗಿದ್ದು, ‘ಅವರಿಗೆ ಪರಶುರಾಮರ ‘ಭಾರ್ಗವರಾಮ’ ಎಂಬ ಹೆಸರು ಪ್ರಾಪ್ತವಾಗುವುದು’ ಈಶ್ವರೀ ಯೋಜನೆಯಾಗಿತ್ತು. ಪೂ. ಭಾರ್ಗವರಾಮರಲ್ಲಿ ಭಗವಾನ ಪರಶುರಾಮರ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಎರಡೂ ಇವೆ. ಆದ್ದರಿಂದ ಯಾವಾಗ ಸೂಕ್ಷ್ಮ ಯುದ್ಧ ನಡೆಯುತ್ತಿರುತ್ತದೆಯೋ, ಆಗ ಅವರು ಕ್ಷಾತ್ರತೇಜದ ಬಲದಿಂದ, ಅಂದರೆ ಸೂಕ್ಷ್ಮದಲ್ಲಿನ ಶಸ್ತ್ರ ಮತ್ತು ಅಸ್ತ್ರಗಳಿಂದ ಅನಿಷ್ಟ ಶಕ್ತಿಗಳೊಂದಿಗೆ ಹೋರಾಡುತ್ತಾರೆ; ಹಾಗೆಯೇ ಅವರು ಬ್ರಾಹ್ಮತೇಜದ ಬಲದಿಂದ ಸಾಧಕರಿಗೆ ಮತ್ತು ಸಮಾಜದ ವ್ಯಕ್ತಿಗಳಿಗೆ ಯೋಗ್ಯ ಮಾರ್ಗದರ್ಶನ ನೀಡಿ ಅವರ ಸಾಧನೆಗೆ ವೇಗವನ್ನು ನೀಡುತ್ತಾರೆ.

೨. ಪೂ. ಭಾರ್ಗವರಾಮ ಪ್ರಭು ಇವರ ವಿವಿಧ ಯುಗಗಳಲ್ಲಿನ ಸಾಧನೆಯ ಪ್ರವಾಸ !

೩. ಪೂ. ಭಾರ್ಗವರಾಮ ಪ್ರಭು ಅವರ ವಿವಿಧ ಗುಣವೈಶಿಷ್ಟ್ಯಗಳು !
೩ ಅ. ಪೂ. ಭಾರ್ಗವರಾಮರವರ ಮನಸ್ಸು ಮಾನಸ ಸರೋವರದಂತೆ ಅತ್ಯಂತ ಶುದ್ಧ ಮತ್ತು ನಿರ್ಮಲವಾಗಿದೆ.
೩. ಆ. ಚಿತ್ತವೃತ್ತಿ ಸ್ಥಿರವಾಗಿರುವುದು : ಪೂ. ಭಾರ್ಗವರಾಮರಲ್ಲಿ ಶ್ರೀವಿಷ್ಣುವಿನ ಪರಶುರಾಮರೂಪಿ ಅಂಶವಿರುವುದರಿಂದ ಅವರ ಚಿತ್ತ, ಅಂದರೆ ಅಂತರ್ಮನಸ್ಸು ಅತ್ಯಂತ ಶಾಂತ ಮತ್ತು ಸ್ಥಿರವಾಗಿದೆ.
೩ ಇ. ಬೃಹಸ್ಪತಿಗಳಂತೆ ಪ್ರಗಲ್ಭ ಬುದ್ಧಿ : ಪೂ. ಭಾರ್ಗವರಾಮ ಇವರ ವಯಸ್ಸಿಗೆ ಹೋಲಿಸಿದರೆ ಅವರ ಬುದ್ಧಿಯು ಅತ್ಯಂತ ತೀಕ್ಷ್ಣ ಮತ್ತು ದೇವ ಗುರು ಬೃಹಸ್ಪತಿಯವರ ಬುದ್ಧಿಯಂತೆ ಅತ್ಯಂತ ಪ್ರಗಲ್ಭ ಮತ್ತು ಚುರುಕಾಗಿದೆ.
೩ ಈ. ಪ್ರೀತಿ ಮತ್ತು ಸಮಷ್ಟಿ ಭಾವ : ಪೂ. ಭಾರ್ಗವರಾಮ ಇವರಲ್ಲಿನ ಪ್ರೀತಿ ಮತ್ತು ಸಮಷ್ಟಿ ಭಾವದಿಂದ ಅವರು ಕೇವಲ ಮನುಷ್ಯರಿಗೆ ಮಾತ್ರವಲ್ಲ, ನಿಸರ್ಗದಲ್ಲಿನ ಪಂಚತತ್ತ್ವಗಳೊಂದಿಗೆ ತಕ್ಷಣ ಹೊಂದಿಕೊಂಡು ಏಕರೂಪವಾಗುತ್ತಾರೆ. ಆದ್ದರಿಂದ ಅವರ ಬಗ್ಗೆ ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲ, ಪಶು-ಪಕ್ಷಿಗಳಿಗೂ ತುಂಬಾ ಆತ್ಮೀಯತೆ, ಪ್ರೀತಿ ಅನಿಸುತ್ತದೆ.
೩ ಉ. ಸಾಕ್ಷಿಭಾವ : ಪೂ. ಭಾರ್ಗವರಾಮ ಇವರು ಶಾಂತವಾಗಿದ್ದರೂ ಅಥವಾ ಸ್ಥೂಲದಿಂದ ಯಾವುದಾದರೊಂದು ಲೀಲೆಯಲ್ಲಿ ತಲ್ಲೀನರಾಗಿದ್ದರೂ, ಅವರು ಸಾಕ್ಷಿಭಾವದಿಂದ ಸ್ಥೂಲ ಮತ್ತು ಸೂಕ್ಷ್ಮ ಈ ಎರಡೂ ಮಟ್ಟಗಳಲ್ಲಿ ಘಟಿಸುವ ಅನೇಕ ಘಟನೆಗಳನ್ನು ನೋಡುತ್ತಿರುತ್ತಾರೆ. ಇದರಿಂದ ಅವರಲ್ಲಿನ ‘ಸಾಕ್ಷಿಭಾವ’, ಎಂಬ ಅಪರೂಪದ ಗುಣದ ಅನುಭೂತಿ ಬರುತ್ತದೆ.
೩ ಊ. ತ್ರಿಕಾಲದರ್ಶಿಗಳು : ಪೂ. ಭಾರ್ಗವರಾಮ ಇವರಿಗೆ ಕೇವಲ ವರ್ತಮಾನಕಾಲವಷ್ಟೇ ಅಲ್ಲ, ಭೂತಕಾಲ ಮತ್ತು ಭವಿಷ್ಯಕಾಲಕ್ಕೆ ಸಂಬಂಧಿಸಿದ ಘಟನೆಗಳ ಜ್ಞಾನವೂ ಇದೆ. ಅವರು ‘ತ್ರಿಕಾಲದರ್ಶಿಗಳು’ ಎಂದು ಮುಂದೆ ಹೆಸರುವಾಸಿಯಾಗುವರು.
೩ ಎ. ಕ್ಷಮಾಶೀಲ ಮತ್ತು ಮುಕ್ತಿದಾತಾ : ಪೂ. ಭಾರ್ಗವರಾಮ ಇವರು ತಮ್ಮ ಸಂಪರ್ಕದಲ್ಲಿ ಬರುವ ಅನೇಕ ಜೀವಗಳೊಂದಿಗೆ ಸೂಕ್ಷ್ಮದಿಂದ ಮಾತನಾಡುತ್ತಿರುತ್ತಾರೆ. ಕೆಲವರು ಪೂ. ಭಾರ್ಗವರಾಮ ಇವರಿಗೆ ಹಿಂದಿನ ಜನ್ಮಗಳಲ್ಲಿ ತೊಂದರೆ ಕೊಟ್ಟಿದ್ದಾರೆ. ಪೃಥ್ವಿಯ ವಾಯುಮಂಡಲದಲ್ಲಿ ಅಲೆದಾಡುತ್ತಿರುವ ಮತ್ತು ಮುಕ್ತಿಗಾಗಿ ತಳಮಳಿಸುತ್ತಿರುವ ಭೂತ, ಪ್ರೇತ, ಪಿಶಾಚಿ ಇತ್ಯಾದಿಗಳೊಂದಿಗೆ ಪಶು-ಪಕ್ಷಿಗಳ ರೂಪದಲ್ಲಿನ ಅನೇಕ ಪಾಪಿ ಜೀವಗಳನ್ನು ಪೂ. ಭಾರ್ಗವರಾಮ ಇವರು ಕ್ಷಮಿಸುತ್ತಾರೆ ಮತ್ತು ಅವರಿಗೆ ಯೋಗ್ಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲು ಹೇಳುತ್ತಾರೆ, ಹಾಗೆಯೇ ಯಾರ ಮುಕ್ತಿಯ ಸಮಯ ಹತ್ತಿರ ಬಂದಿರುವುದೋ, ಅವರಿಗೆ ಮುಕ್ತಿಯನ್ನೂ ನೀಡುತ್ತಾರೆ.
೩ ಐ. ಪರಮ ಉದ್ಧಾರಕ : ಪೂ. ಭಾರ್ಗವರಾಮ ಇವರು ಅನೇಕ ಜೀವಗಳಿಗೆ ಸ್ಥೂಲ ಮತ್ತು ಸೂಕ್ಷ್ಮ, ಹೀಗೆ ಎರಡೂ ಮಟ್ಟಗಳಲ್ಲಿ ಮಾರ್ಗದರ್ಶನ ಮಾಡಿ ಮತ್ತು ದಿವ್ಯ ಸತ್ಸಂಗವನ್ನು ನೀಡಿ ಸಾಧನೆಯ ಮಾರ್ಗವನ್ನು ತೋರಿಸುತ್ತಾರೆ ಮತ್ತು ಅವರನ್ನು ಉದ್ಧರಿಸುತ್ತಾರೆ.
೩ ಓ. ಮನಸ್ಸಿನಲ್ಲಿ ಅಸತ್ಯ ಮತ್ತು ಅಧರ್ಮದ ಬಗ್ಗೆ ಸಿಟ್ಟು ಇರುವುದು : ಪೂ. ಭಾರ್ಗವರಾಮರ ಮನಸ್ಸಿನಲ್ಲಿ ಅಸತ್ಯ ಮತ್ತು ಅಧರ್ಮದ ಬಗ್ಗೆ ಅತೀವ ಸಿಟ್ಟಿದೆ. ಆದ್ದರಿಂದ, ಅವರು ಭವಿಷ್ಯದಲ್ಲಿ ಭೂಮಿಯ ಮೇಲೆ ರಾಮರಾಜ್ಯರೂಪಿ ಧರ್ಮರಾಜ್ಯದ ಸ್ಥಾಪನೆಗಾಗಿ ಅಸತ್ಯ ಮತ್ತು ಅಧರ್ಮದ ವಿರುದ್ಧ ದೃಢವಾಗಿ ನಿಂತು ಯಶಸ್ವಿ ಹೋರಾಟವನ್ನು ನಡೆಸಲಿದ್ದಾರೆ.
೩ ಔ. ಹೋರಾಟದ ವೃತ್ತಿ ಮತ್ತು ಯುದ್ಧ ಕೌಶಲ್ಯ : ಭಗವಾನ ಪರಶುರಾಮನ ಅಂಶವಿರುವುದರಿಂದ ಪೂ. ಭಾರ್ಗವರಾಮ ಅವರಲ್ಲಿ ಹೋರಾಟದ ಮನೋ ಭಾವವಿದೆ. ಹಾಗೆಯೇ, ಸಾಕ್ಷಾತ್ ಪರಶುರಾಮರೇ ಸೂಕ್ಷ್ಮ ರೂಪದಲ್ಲಿ ಹೋರಾಡಲು ಮಾರ್ಗದರ್ಶನ ನೀಡುತ್ತಿರುವುದರಿಂದ, ಅವರಲ್ಲಿ ಅಧರ್ಮದ ವಿರುದ್ಧ ಹೋರಾಡುವ ಅಲೌಕಿಕ ಯುದ್ಧ ಕೌಶಲ್ಯವಿದೆ. ಆದುದರಿಂದ, ಅವರಿಗೆ ಶ್ರೀಮನ್ನಾರಾಯಣನ ಕೈಯಲ್ಲಿರುವ ಸುದರ್ಶನ ಚಕ್ರ, ಶಾರಂಗ ಧನುರ್ಬಾಣ, ಕೌಮುದಿ ಗದೆ ಮತ್ತು ಪರಶುರಾಮನ ಕೈಯಲ್ಲಿರುವ ಕೊಡಲಿಯಂತಹ (ಪರಶು) ಶಸ್ತ್ರಾಸ್ತ್ರಗಳು ಪ್ರಿಯವಾಗಿವೆ. ಈ ‘ಹೋರಾಟದ ಮನೋಭಾವ ಮತ್ತು ಯುದ್ಧಕೌಶಲ್ಯ’ ಎಂಬ ಅವತಾರಿ ಗುಣಗಳ ಆಧಾರದ ಮೇಲೆ ಅವರು ರಾಮರಾಜ್ಯ ಅಥವಾ ಧರ್ಮರಾಜ್ಯದ ಹಾದಿಯಲ್ಲಿ ಬರುವ ಸಮಸ್ತ ವಿಘ್ನಗಳನ್ನು ನಾಶಪಡಿಸಿ, ಧರ್ಮಸಂಸ್ಥಾಪನೆಯ ಹಾದಿಯನ್ನು ನಿಷ್ಕಂಟಕಗೊಳಿಸಲಿದ್ದಾರೆ.
೪. ಪೂ. ಭಾರ್ಗವರಾಮ ಅವರ ಕುರಿತು ಸಾಧಕರಿಗಷ್ಟೇ ಅಲ್ಲ, ಸಮಾಜಕ್ಕೂ ಅನುಭೂತಿ ಬರುತ್ತಿರುವುದು ಮತ್ತು ಮುಂದೆಯೂ ಬರಲಿರುವುದು
ಪೂ. ಭಾರ್ಗವರಾಮ ಅವರಲ್ಲಿ ಅವರ ಹಿಂದಿನ ಜನ್ಮಗಳ ಎಲ್ಲಾ ಗುಣವೈಶಿಷ್ಟ್ಯಗಳು ಈಗಲೂ ಇವೆ. ಕಾಲದ ಅವಶ್ಯಕತೆಗನುಸಾರ ಅವರಲ್ಲಿರುವ ದಿವ್ಯತ್ವ ಮತ್ತು ವಿವಿಧ ಗುಣವೈಶಿಷ್ಟ್ಯಗಳು ಕಾಲಕಾಲಕ್ಕೆ ಪ್ರಕಟವಾಗುತ್ತಿವೆ ಹಾಗೂ ಮುಂದೆಯೂ ಆಗಲಿವೆ. ಆದ್ದರಿಂದ ಕೇವಲ ಸಾಧಕರು ಮಾತ್ರವಲ್ಲ, ಸಮಾಜದ ವಿವಿಧ ಸಾತ್ತ್ವಿಕ ಜನರಿಗೂ ಪೂ. ಭಾರ್ಗವರಾಮ ಅವರ ಬಗ್ಗೆ ಅನೇಕ ರೀತಿಯ ದೈವೀ ಅನುಭೂತಿಗಳು ಬರುತ್ತಿವೆ ಮತ್ತು ಮುಂದೆಯೂ ಬರಲಿವೆ.
– ಸುಶ್ರೀ ಮಧುರಾ ಭೋಸಲೆ (ಸೂಕ್ಷ್ಮ ಜ್ಞಾನವನ್ನು ಪಡೆಯುವ ಸಾಧಕಿ, ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೪.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !