ವೈದಿಕ ಧರ್ಮದು ನಂಬಲಾಗಿದೆ. ಋಷಿಮುನಿಗಳು ಯಜ್ಞಸಂಸ್ಕೃತಿಯ ಮೂಲಕ ವಿಶ್ವ ಕಲ್ಯಾಣದ ಮಾರ್ಗವನ್ನು ತೋರಿಸಿಕೊಟ್ಟರು. ಆ ಪರಂಪರೆಯನ್ನು ಮುಂದುವರಿಸುತ್ತಾ ಗುಪರಂಪರೆಯಲ್ಲಿ ಯಜ್ಞ ಎಂಬುದು ಕೇವಲ ಒಂದು ಧಾರ್ಮಿಕ ಕ್ರಿಯೆಯಾಗಿರದೆ, ಅದು ಸಮಷ್ಟಿ ಕಲ್ಯಾಣಕ್ಕಾಗಿ ಮಾಡುವ ದಿವ್ಯ ಸಾಧನೆ ಎಂರುದೇವರು ಇದುವರೆಗೆ ವಿವಿಧ ಯಜ್ಞಗಳನ್ನು ಆಯೋಜಿಸಿದ್ದಾರೆ. ಈ ಯಜ್ಞಗಳ ಹಿಂದೆ ಕೇವಲ ವೈಯಕ್ತಿಕ ಅಥವಾ ಸ್ಥಳೀಯ ಹಿತಾಸಕ್ತಿ ಇರದೆ, ಸಾಧಕರ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗೆ ಆವಶ್ಯಕವಾಗಿರುವ ಆಧ್ಯಾತ್ಮಿಕ ಬಲವು ಪ್ರಾಪ್ತವಾಗಬೇಕು, ಎಂಬ ಅತ್ಯಂತ ವ್ಯಾಪಕ ಹಾಗೂ ಉದಾತ್ತ ಉದ್ದೇಶವಾಗಿದೆ.

೧. ಸೂಕ್ಷ್ಮ ಮಾರ್ಗದರ್ಶನ !
ಯಜ್ಞಪರಂಪರೆಯು ಕೇವಲ ಗ್ರಂಥಾಧಾರಿತವಾಗಿರದೆ ಅದು ಋಷಿಮುನಿಗಳ ಸಜೀವ ಮಾರ್ಗದರ್ಶನದಿಂದ ವಿಕಸನ ಗೊಂಡಿರುವ ಪರಂಪರೆಯಾಗಿದೆ. ಜೀವನಾಡಿಪಟ್ಟಿ ವಾಚನದಲ್ಲಿ ಕಾಲಕಾಲಕ್ಕೆ ವಿವಿಧ ಯಜ್ಞಗಳನ್ನು ಹೇಳಲಾಯಿತು. ಆ ಯಜ್ಞಗಳಿಂದ ಲಭಿಸಿದ ಪರಿಣಾಮಗಳೂ ಅನುಭವದಿಂದ ಸ್ಪಷ್ಟವಾಗಿವೆ.
ನಾಡಿಪಟ್ಟಿಯ ಬರಹಗಳ ಮೂಲಕ ಸನಾತನ ಸಂಸ್ಥೆಯ ಧರ್ಮಕಾರ್ಯಕ್ಕೆ ಮಾರ್ಗದರ್ಶನ ಸಿಗುತ್ತಿರುವುದು, ಇದು ಅತ್ಯಂತ ಅಮೂಲ್ಯ ಮತ್ತು ದುರ್ಲಭ ವಿಷಯವಾಗಿದೆ. ಸೂಕ್ಷ್ಮ ಮಾರ್ಗದರ್ಶನದಿಂದಾಗಿ ಯಜ್ಞಗಳ ಸ್ವರೂಪ, ಪದ್ಧತಿ ಮತ್ತು ಉದ್ದೇಶಗಳು ಹೆಚ್ಚು ಸ್ಪಷ್ಟ ಹಾಗೂ ಪರಿಣಾಮಕಾರಿಯಾಗುತ್ತವೆ. ಆದ್ದರಿಂದ ಯಜ್ಞಕಾರ್ಯವು ಕೇವಲ ಕರ್ಮಕಾಂಡವಾಗಿ ಉಳಿಯದೆ, ದೈವಿ ಸಂಕಲ್ಪವನ್ನು ಪೂರ್ಣಗೊಳಿಸುವ ಸಾಧನೆಯಾಗುತ್ತದೆ.
೨. ನಿಷ್ಕರ್ಷ
ಯಜ್ಞವು ಕೇವಲ ಕರ್ಮಕಾಂಡದ ಪ್ರಕ್ರಿಯೆಯಾಗಿರದೆ, ಅದು ಸಮಷ್ಟಿಯ ಉನ್ನತಿ, ಸಾಧಕರ ರಕ್ಷಣೆ ಮತ್ತು ಧರ್ಮ ಸಂವರ್ಧನೆಯ ಪ್ರಭಾವಿ ಸಾಧನೆಯಾಗಿದೆ. ಗುರುದೇವರು ಮಾಡಿದ ಯಜ್ಞಗಳು ನಾಡಿಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ವ್ಯಾಪಕ ಹಿತದ ಸಂಕಲ್ಪದಿಂದ ಪ್ರೇರಿತವಾಗಿದ್ದು, ಅವುಗಳ ಮೂಲಕ ಸಾಧಕರಿಗೆ ಆಧ್ಯಾತ್ಮಿಕ ಬಲವು ಲಭಿಸಿ ಧರ್ಮ ಕಾರ್ಯವು ಇನ್ನಷ್ಟು ಸಮರ್ಥವಾಗಿ ಮುನ್ನಡೆಯುತ್ತಿದೆ.
– ಶ್ರೀ. ಅಮರ ಜೋಶಿ, ಸನಾತನ ವೇದಪಾಠಶಾಲೆ

ಸನಾತನ ಆಶ್ರಮದಲ್ಲಿನ ಯಜ್ಞಕಾರ್ಯದ ವ್ಯಾಪ್ತಿ !
ಗುರುದೇವರ ಮಾರ್ಗದರ್ಶನದಲ್ಲಿ ಆಶ್ರಮದಲ್ಲಿ ಇದು ವರೆಗೆ ೫೦೦ ಕ್ಕೂ ಹೆಚ್ಚು ಯಜ್ಞಗಳು ನಡೆದಿವೆ. ಅವುಗಳಲ್ಲಿ ವಿವಿಧ ದೇವತೆಗಳು ಮತ್ತು ತತ್ವಗಳನ್ನು ಉದ್ದೇಶಿಸಿ ಮಾಡಿದ ಯಜ್ಞಗಳು ಸೇರಿವೆ, ಉದಾಹರಣೆಗೆ: ದಶಮಹಾವಿದ್ಯಾ ಯಜ್ಞ, ಚಂಡಿ ಹೋಮ, ವಾರಾಹಿ ಹೋಮ, ನರಸಿಂಹ ಹೋಮ, ಇಂದ್ರಾಕ್ಷಿ ಹೋಮ, ಹನುಮಾನ ಕವಚ ಯಜ್ಞ, ಪಂಚಮಹಾಭೂತ ಯಜ್ಞ ಇತ್ಯಾದಿ. ಈ ಯಜ್ಞಗಳ ಮೂಲಕ ಸೂಕ್ಷ್ಮ ಸ್ತರದಲ್ಲಿ ವ್ಯಾಪಕ ಕಾರ್ಯಗಳು ಸಾಧ್ಯವಾಗಿವೆ.

೧. ವಿಶ್ವಶಾಂತಿಗಾಗಿ ಸಂಕಲ್ಪ
ಪ್ರತಿಯೊಂದು ಯಜ್ಞದಲ್ಲಿ ಸಂಕಲ್ಪ ಮಾಡುವಾಗ ಸಮಷ್ಟಿ ಕಲ್ಯಾಣ ಮತ್ತು ವಿಶ್ವಶಾಂತಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಯಜ್ಞದಿಂದ ನಿರ್ಮಾಣವಾಗುವ ಸಾತ್ತ್ವಿಕ ಶಕ್ತಿಯು ಸೂಕ್ಷ್ಮ ಸ್ತರದಲ್ಲಿ ಎಲ್ಲೆಡೆ ಪ್ರಸಾರವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
೨. ಯಜ್ಞ ಸಂಸ್ಕೃತಿಯ ರಕ್ಷಣೆ
ಇಂದು ಯಜ್ಞ ಸಂಸ್ಕೃತಿಯು ಲೋಪವಾಗುತ್ತಿರುವಾಗ ಇಂತಹ ಯಜ್ಞಗಳಿಂದ ಅದರ ರಕ್ಷಣೆ ಮತ್ತು ಪುನರುಜ್ಜೀವನವಾಗುತ್ತದೆ. ವೇದಾಧಾರಿತ ವಿಧಿಗಳು, ಮಂತ್ರಗಳು ಮತ್ತು ಆಚಾರಗಳ ಸಂರಕ್ಷಣೆಯಾಗುತ್ತದೆ.
೩. ಸಾಧಕರಿಗೆ ಚೈತನ್ಯಪ್ರಾಪ್ತಿ ಮತ್ತು ಆಧ್ಯಾತ್ಮಿಕ ಸಂರಕ್ಷಣೆ
ಯಜ್ಞ ನಡೆಯುವ ಸ್ಥಳದಲ್ಲಿ ಅಲ್ಲಿನ ಸಾಧಕರಿಗೆ ಚೈತನ್ಯದ ಲಾಭವಾಗುತ್ತದೆ. ಯಜ್ಞದಿಂದ ನಿರ್ಮಾಣವಾಗುವ ಸಾತ್ತ್ವಿಕ ಲಹರಿಗಳಿಂದಾಗಿ ಸಾಧಕರ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗಲು ಸಹಾಯವಾಗುತ್ತದೆ.
೪. ಅನುಭೂತಿಗಳಿಂದ ಶ್ರದ್ಧೆ ಹೆಚ್ಚಾಗುವುದು
ಯಜ್ಞದ ಸಮಯದಲ್ಲಿ ಸಾಧಕರಿಗೆ ವಿವಿಧ ಆಧ್ಯಾತ್ಮಿಕ ಅನುಭೂತಿಗಳು ಬರುತ್ತವೆ. ಅದರಿಂದಾಗಿ ಅವರ ಶ್ರದ್ಧೆಯು ದೃಢವಾಗಿ, ಸಾಧನೆಯು ಹೆಚ್ಚು ಭಾವಪೂರ್ಣವಾಗುತ್ತದೆ.
೫. ಸ್ಥಳಶುದ್ಧಿ ಮತ್ತು ಸಾತ್ತ್ವಿಕತೆಯ ವೃದ್ಧಿ
ಯಜ್ಞ ಮಾಡಿದ ಸ್ಥಳದ ಸೂಕ್ಷ್ಮ ಶುದ್ಧಿಯಾಗಿ ಆ ಸ್ಥಳದಲ್ಲಿ ಸಾತ್ತ್ವಿಕತೆ ಹೆಚ್ಚಾಗುತ್ತದೆ. ವಾತಾವರಣವು ಹೆಚ್ಚು ಪವಿತ್ರ ಮತ್ತು ಸಾಧನೆಗೆ ಅನುಕೂಲಕರವಾಗುತ್ತದೆ.
೬. ಹವಿರ್ಭಾಗದ ದೀರ್ಘಕಾಲೀನ ಪರಿಣಾಮಗಳು
ಯಜ್ಞದಲ್ಲಿ ಅರ್ಪಿಸಲಾಗುವ ಹವಿರ್ಭಾಗದ ಪರಿಣಾಮಗಳು ದೀರ್ಘಕಾಲದ ವರೆಗೆ ಇರುತ್ತವೆ. ವಾತಾವರಣ ದಲ್ಲಿ ಸೂಕ್ಷ್ಮ ಸಮತೋಲನವು ಏರ್ಪಟ್ಟು ಉತ್ತಮ ಮಳೆಯಾಗುವಂತಹ ಪರಿಣಾಮಗಳೂ ಉಂಟಾಗುತ್ತವೆ. ಸೋಮಯಾಗದ ಮೂಲಕ ಮುಂಬರುವ ದಿನಗಳಲ್ಲಿ ಮಳೆಗೆ ಪೂರಕವಾದ ವಾತಾವರಣ ನಿರ್ಮಾಣವಾಗುವುದು, ಇದು ಅದರ ಉತ್ತಮ ಉದಾಹರಣೆಯಾಗಿದೆ.
– ಶ್ರೀ. ಅಮರ ಜೋಶಿ, ಸನಾತನ ವೇದಪಾಠಶಾಲೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !