ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಜನ್ಮೋತ್ಸವ ನಿಮಿತ್ತ ಯಜ್ಞ ಸಂಸ್ಕೃತಿ ವಿಶೇಷಾಂಕ

ವೇದ ಪರಂಪರೆಯ ಚಿರಕಾಲದ ಸ್ವತ್ತನ್ನು ಅದೇ ರೀತಿ ಶಾಶ್ವತ ಸ್ವರೂಪವನ್ನು ದರ್ಶಿಸುವ ಹಾಗೂ ದೇವತೆಗಳು, ಪ್ರಕೃತಿ ಮತ್ತು ಸಮಾಜವನ್ನು ಜೋಡಿಸುವ ಮಾಧ್ಯಮಗಳೆಂದರೆ ಯಜ್ಞಗಳು ! ಯಜ್ಞ ಎಂಬುದು ಕೇವಲ ಕರ್ಮಕಾಂಡವಲ್ಲ, ಬದಲಿಗೆ ಪ್ರಾಚೀನ ಭಾರತೀಯ ವಿಜ್ಞಾನಾಧಾರಿತ ಆಧ್ಯಾತ್ಮಿಕ ಸ್ತರದ ಸನಾತನ ಪರಂಪರೆಯ ದೈವೀ ಕೊಡುಗೆಯಾಗಿದೆ !
ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಮತ್ತು ರಾಜರು ಅನೇಕ ಯಜ್ಞಗಳನ್ನು ಮಾಡಿರುವ ಉಲ್ಲೇಖಗಳು ಧರ್ಮಗ್ರಂಥಗಳಲ್ಲಿ ಸಿಗುತ್ತವೆ. ಇಂದಿಗೂ ಕಲಿಯುಗದಲ್ಲಿ ಯಜ್ಞ ಪರಂಪರೆಯನ್ನು ಅವಿರತವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ವಿದ್ವಾಂಸ ಪಂಡಿತರು ಈ ಭಾರತ ಭೂಮಿಯ ಮೇಲಿದ್ದಾರೆ, ಇದು ನಮ್ಮ ಪರಮ ಸೌಭಾಗ್ಯವೇ ಸರಿ !
ಸನಾತನ ಸಂಸ್ಥೆಯ ವತಿಯಿಂದ ತಪೋಭೂಮಿ ಭಾರತಕ್ಕೆ ರಕ್ಷಾಕವಚ ಸಿಗಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂಬ ವ್ಯಾಪಕ ಉದ್ದೇಶದಿಂದ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಪ್ರೇರಣೆಯಿಂದ ಮೇ ೧೭, ಅಂದರೆ ಅಧಿಕ ಜ್ಯೇಷ್ಠ ಶುಕ್ಲ ಪ್ರತಿಪದೆಯ ದಿನದಂದು ಶ್ರೀ ರಾಜಮಾತಂಗಿ ಮಹಾಯಜ್ಞವು ಮುಂಬೈನ ಪ್ರಭಾದೇವಿಯಲ್ಲಿ ಸಂಪನ್ನವಾಯಿತು !

ಶ್ರೀ ರಾಜಮಾತಂಗಿ ಮಹಾಯಜ್ಞವು ಯಶಸ್ವೀ ಸಂಪನ್ನ !
ತಮಿಳುನಾಡಿನ ಈರೋಡ್‌ನ ಶಿವಾಗಮ ವಿದ್ಯಾನಿಧಿ ಆಗಮಾಚಾರ್ಯ ಶ್ರೀ. ಅರುಣಕುಮಾರ್ ಗುರುಮೂರ್ತಿ ಮತ್ತು ಯಜ್ಞದ ಮುಖ್ಯ ಆಚಾರ್ಯ ಶ್ರೀ. ಗುರುಮೂರ್ತಿ ಶಿವಾಚಾರ್ಯ ಹಾಗೂ ಅವರ ಸಹಪುರೋಹಿತರು, ಹಾಗೆಯೇ ಯಜ್ಞದ ಮುಖ್ಯ ಯಜಮಾನರಾಗಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸದ್ಗುರು ನೀಲೇಶ ಸಿಂಗಬಾಳ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಅವರಂತಹ ಉನ್ನತ ಕೋಟಿಯ ಸಂತರ ಈ ದೈವದುರ್ಲಭ ಯೋಗವು ಮುಂಬೈಯಲ್ಲಿ ಕೂಡಿ ಬಂತು ಮತ್ತು ಶ್ರೀ ರಾಜಮಾತಂಗಿ ಮಹಾಯಜ್ಞವು ಯಥಾಸಾಂಗವಾಗಿ ನೆರವೇರಿತು ! ೮ ಸಾವಿರಕ್ಕೂ ಹೆಚ್ಚು ಪ್ರತ್ಯಕ್ಷವಾಗಿ ಮತ್ತು ೪೦ ದೇಶಗಳ ೫೮ ಸಾವಿರಕ್ಕೂ ಹೆಚ್ಚು ‘ಆನ್‌ಲೈನ್ ಮೂಲಕ ಜೋಡಿಸಲ್ಪಟ್ಟ ಭಕ್ತರು ಈ ಯಜ್ಞದ ಲಾಭವನ್ನು ಪಡೆದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ತಮ್ಮ ರಾಷ್ಟ್ರ ಮತ್ತು ಧರ್ಮ ಕಾರ್ಯವನ್ನು ೨೫ ವರ್ಷಗಳ ಹಿಂದೆ ಯಾವ ಮುಂಬೈಯಿಂದ ಆರಂಭಿಸಿದ್ದರೋ, ಅದೇ ನಗರದಿಂದ ಒಂದು ರೀತಿಯಲ್ಲಿ ಭಾವಿ ರಾಮರಾಜ್ಯದ ಸಂಕಲ್ಪದ ಶ್ರೀಗಣೇಶವು ಮಹಾಯಜ್ಞದ ಸಂಕಲ್ಪದ ಮೂಲಕ ಆಯಿತು !

‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಡುಗೆಮನೆ