
೧. ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆಯವರ ಬರವಣಿಗೆ
೧ ಅ. ಇದಂ ನ ಮಮ : ‘ವಿವಿಧ ವಿಷಯಗಳ ಮೇಲೆ ಸೂಕ್ಷ್ಮಜ್ಞಾನವನ್ನು ಪಡೆಯುವ ಸಾಧಕರಿಗೆ ಸೂಕ್ಷ್ಮದಿಂದ ಲಭಿಸಿದ ಜ್ಞಾನ, ಹಾಗೆಯೇ ವಿವಿಧ ಗ್ರಂಥಗಳಿಂದ ಸಂಗ್ರಹಿಸಿದ ಬರವಣಿಗೆಯಿಂದಾಗಿ’, ನನ್ನಿಂದ ಗ್ರಂಥಗಳು ಸಿದ್ಧವಾಗುತ್ತಿವೆ. ಸಂಗೀತಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಸೌ. ಅಂಜಲಿ ಗಾಡಗೀಳ (ಈಗಿನ ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆಯವರ ಒಬ್ಬ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ) ಇವರು ಬರೆಯುತ್ತಾರೆ. ಕಲೆ ಮತ್ತು ಅಕ್ಷರಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಸೌ. ಜಾಹ್ನವಿ ಶಿಂದೆ ಇವರು ಬರೆಯುತ್ತಾರೆ. ಇದರಲ್ಲಿ ನನ್ನದೇನೂ ಇಲ್ಲ. ಇದಂ ನ ಮಮ.’ (ಅಂದರೆ, ‘ಇದು ನನ್ನದಲ್ಲ.’) (೧೨.೨.೨೦೦೭)
೨. ಮೇಲಿನ ಬರವಣಿಗೆಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !

೨ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆಯವರ ಜ್ಞಾನಕಾರ್ಯ : ಸದ್ಯದ ಕಲಿಯುಗದಲ್ಲಿ ರಜ-ತಮ ಮತ್ತು ಕೆಟ್ಟ ಶಕ್ತಿಗಳ ಪ್ರಭಾವ ಬಹಳ ಹೆಚ್ಚಿದೆ. ಸಾಧಾರಣ ಸಮಾಜದ ಸಾತ್ತ್ವಿಕತೆಯು ಕಡಿಮೆಯಾಗಿದೆ. ಆದ್ದರಿಂದ ಸಾಧನೆ ಮತ್ತು ಧರ್ಮಾಚರಣೆಯ ಮಹತ್ವವನ್ನು ಸಮಾಜದ ಮನಸ್ಸಿನ ಮೇಲೆ ಸರಳ ಮತ್ತು ಆಧ್ಯಾತ್ಮಿಕ ಭಾಷೆಯಲ್ಲಿ ಬಿಂಬಿಸುವುದು ಮಹತ್ವದ್ದಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಜ್ಞಾನದ ಮೂಲಕ ಸನಾತನ ಧರ್ಮವನ್ನು ಉಳಿಸುವ ಕಾರ್ಯವು ಅವತಾರಿ ಸ್ವರೂಪದ್ದಾಗಿದೆ. ಅವರ ಈ ಜ್ಞಾನಕಾರ್ಯದ ಆಧ್ಯಾತ್ಮಿಕ ಲಾಭವು ಈಗಿನ ಮತ್ತು ಮುಂದಿನ ಪೀಳಿಗೆಗಳಿಗೂ ಲಭಿಸಲಿದೆ. ಈ ಜ್ಞಾನವು ದೀರ್ಘಕಾಲದ ವರೆಗೆ ಉಳಿಯಲಿದೆ.
೨ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆಯವರ ಸಂಕಲ್ಪದಿಂದ ಅನೇಕ ಸಾಧಕರಿಗೆ ಗ್ರಂಥಗಳ ಬರವಣಿಗೆಯ ಪ್ರೇರಣೆ ಸಿಗುವುದು ಮತ್ತು ಸಾಧಕರ ವ್ಯಷ್ಟಿ ಸಾಧನೆಯೊಂದಿಗೆ ಸಮಷ್ಟಿ ಸಾಧನೆಯೂ ಪರಿಣಾಮಕಾರಿಯಾಗಿ ಆಗುವುದು : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಜ್ಞಾನಕಾರ್ಯದ ಸಂಕಲ್ಪದಿಂದ ಕೆಲವು ಸಾಧಕರಿಗೆ ವಿವಿಧ ವಿಷಯಗಳ ಬಗ್ಗೆ ಸೂಕ್ಷ್ಮ ಜ್ಞಾನವು ಲಭಿಸುತ್ತದೆ, ಹಾಗೆಯೇ ಕೆಲವು ಸಾಧಕರಿಗೆ ಹೊಸ ವಿಷಯಗಳ ಬಗ್ಗೆ ಬರೆಯಲು ಸ್ಫೂರ್ತಿ ಸಿಗುತ್ತದೆ. ಈ ಕಾರ್ಯವನ್ನು ಮಾಡಲು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಾಧಕರಿಗೆ ದಿಶೆ ಮತ್ತು ಶಕ್ತಿಯನ್ನು ನೀಡುತ್ತಾರೆ. ಈ ಪ್ರಕ್ರಿಯೆಯ ಮೂಲಕ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಇಂತಹ ಸಾಧಕರ ಆಧ್ಯಾತ್ಮಿಕ ಕ್ಷಮತೆಯನ್ನು ಹೆಚ್ಚಿಸಿ ಅವರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುತ್ತಾರೆ. ಆದ್ದರಿಂದ ಆ ಸಾಧಕರ ವ್ಯಷ್ಟಿ ಸಾಧನೆಯೊಂದಿಗೆ ಸಮಷ್ಟಿ ಸಾಧನೆಯೂ ಪರಿಣಾಮಕಾರಿಯಾಗಿ ಆಗುತ್ತದೆ.
೨ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆಯವರ ಅಹಂ ರಹಿತ ಸ್ಥಿತಿಯಿಂದಾಗಿ ಜ್ಞಾನಕಾರ್ಯದ ಶ್ರೇಯಸ್ಸನ್ನು ಅವರು ಸಾಧಕರಿಗೆ ಕೊಡುತ್ತಾರೆ : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಆಶೀರ್ವಾದದಿಂದ ಕೆಲವು ಸಾಧಕರಿಂದ ಜ್ಞಾನಕಾರ್ಯ ಘಟಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಲ್ಲಿ ‘ಎಲ್ಲವನ್ನೂ ಈಶ್ವರನೇ ಮಾಡುತ್ತಾನೆ’ ಎಂಬ ಭಾವವಿದ್ದು, ಅವರ ಸ್ಥಿತಿಯು ಅಹಂರಹಿತವಾಗಿದೆ. ಆದ್ದರಿಂದ ಎಲ್ಲವೂ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಂದಲೇ ನಡೆಯುತ್ತಿದ್ದರೂ ಅವರು ಜ್ಞಾನಕಾರ್ಯದ ಶ್ರೇಯಸ್ಸನ್ನು ಜ್ಞಾನಕಾರ್ಯವನ್ನು ಮಾಡುವ ಕೆಲವು ಸಾಧಕರಿಗೆ ನೀಡುತ್ತಾರೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಅಹಂರಹಿತ ಸ್ಥಿತಿಯಿಂದಾಗಿ ಅವರ ಮನಸ್ಸಿನಲ್ಲಿ ‘ಇದಂ ನ ಮಮ’ (ಅಂದರೆ, ‘ಇದು ನನ್ನದಲ್ಲ.’), ಎಂಬ ವಿಚಾರ ಬರುತ್ತದೆ. ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಜ್ಞಾನಕಾರ್ಯ ಮತ್ತು ಅದರ ಪರಿಣಾಮವು ಅನೇಕ ಪಟ್ಟು ಹೆಚ್ಚಾಗುತ್ತದೆ.’
– ಶ್ರೀ. ರಾಮ ಹೊನಪ (ಸೂಕ್ಷ್ಮಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವ ಸಾಧಕ), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ಪಡೆದ ದಿನಾಂಕ : ೪.೨.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !