ಉಪಸ್ಥಿತ ಸದ್ಗುರುಗಳು ಮತ್ತು ಸಂತರಿಂದ ಶ್ರೀ ಸಿದ್ಧಿವಿನಾಯಕನ ಭಾವಪೂರ್ಣ ದರ್ಶನ !

ಮುಂಬಯಿ – ‘ಸಧ್ಯದ ಯುದ್ಧಕಾಲದಲ್ಲಿ ತಪೋಭೂಮಿಯಾದ ಭಾರತಕ್ಕೆ ಸಂರಕ್ಷಾಕವಚ ಲಭಿಸಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ’ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ಮೇ 17 ರಂದು ಮುಂಬಯಿಯ ಪ್ರಭಾದೇವಿಯ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ‘ಶ್ರೀ ರಾಜಮಾತಂಗಿ ಮಹಾಯಾಗ’ದ ಭವ್ಯ ಆಯೋಜನೆ ಮಾಡಲಾಗಿತ್ತು. ಈ ಯಾಗವು ನಿರ್ವಿಘ್ನವಾಗಿ ನೆರವೇರಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರವರೊಂದಿಗೆ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಹಾಗೂ ಸಂತರು ಮೇ 16 ರಂದು ಪ್ರಭಾದೇವಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಸಿದ್ಧಿವಿನಾಯಕನ ಭಾವಪೂರ್ಣ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ಆರೋಗ್ಯ ಲಭಿಸಲಿ, ಆಪತ್ಕಾಲದಿಂದ ಸಾಧಕರ ರಕ್ಷಣೆಯಾಗಲಿ, ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರದಲ್ಲೇ ಆಗಲಿ’ ಎಂಬುದರೊಂದಿಗೆ ‘ಶ್ರೀ ಸಿದ್ಧಿವಿನಾಯಕನು ಯಾಗದಲ್ಲಿ ಉಪಸ್ಥಿತರಿರುವುದರೊಂದಿಗೆ ರಾಜಮಾತಂಗಿ ಮಹಾಯಾಗವು ನಿರ್ವಿಘ್ನವಾಗಿ ಸಂಪನ್ನಗೊಳ್ಳಲಿ, ದೇಶದ ರಕ್ಷಣೆಯಾಗಲಿ ಮತ್ತು ಜನರ ಆರೋಗ್ಯ ಉತ್ತಮವಾಗಿರಲಿ’ ಎಂದು ಉಪಸ್ಥಿತರಿದ್ದ ಸದ್ಗುರುಗಳು ಹಾಗೂ ಸಂತರು ಮನಃಪೂರ್ವಕವಾಗಿ ಪ್ರಾರ್ಥಿನೆ ಮಾಡಿದರು.
ಈ ಸಂದರ್ಭದಲ್ಲಿ ಪೂ. (ಸೌ.) ಸಂಗೀತಾ ಜಾಧವ, ಸದ್ಗುರು ಅನುರಾಧಾ ವಾಡೇಕರ, ಸದ್ಗುರು ಸ್ವಾತಿ ಖಾಡಯೆ, ಸದ್ಗುರು ನೀಲೇಶ ಸಿಂಗಬಾಳ, ಸದ್ಗುರು ನಂದಕುಮಾರ ಜಾಧವ, ಸದ್ಗುರು ಡಾ. ಮುಕುಲ ಗಾಡಗೀಳ, ಸದ್ಗುರು ಸತ್ಯವಾನ ಕದಮ, ಪೂ. ಅಶೋಕ ಪಾತ್ರಿಕರ, ಹಾಗೆಯೇ ಕು. ವೈದೇಹಿ ಖಾಡಯೆ, ಸೌ. ಸಾಯಲಿ ಕರಂದೀಕರ ಮತ್ತು ಶ್ರೀ. ಶ್ರೀಹರಿ ನೀಲೇಶ ಸಿಂಗಬಾಳರವರು ಉಪಸ್ಥಿತರಿದ್ದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!