ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪ್ರವಾಸ

ಬೀಜಿಂಗ (ಚೀನಾ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಅವರು ಮೇ ೧೪ ರಂದು ಚೀನಾದ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರನ್ನು ಭೇಟಿಯಾದರು. ಉಭಯ ನಾಯಕರ ನಡುವೆ ೨ ಗಂಟೆಗಳ ಕಾಲ ಸಭೆ ನಡೆಯಿತು. ಇದರಲ್ಲಿ ಇರಾನ್ ಯುದ್ಧ, ಉಕ್ರೇನ್ ಬಿಕ್ಕಟ್ಟು ಮತ್ತು ಇತರ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯ ಆರಂಭದಲ್ಲಿ ಶೀ ಜಿನ್‌ಪಿಂಗ್ ಮಾತನಾಡಿ, ಇಡೀ ಜಗತ್ತು ಈ ಸಭೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು ಜಾಗತಿಕ ಸ್ಥಿರತೆಗಾಗಿ ಅಮೆರಿಕ-ಚೀನಾ ಸಂಬಂಧಗಳು ಅತ್ಯಂತ ಪ್ರಮುಖವಾಗಿವೆ. ಉಭಯ ದೇಶಗಳು ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಹೇಳಿದರು.
Beijing: “America and China should be partners, not rivals!” – Chinese President Xi Jinping during U.S. President Donald Trump’s visit to China 🇨🇳🇺🇸
Can the world really trust such statements from two nations known for pursuing only their strategic interests?
No matter what is… pic.twitter.com/htTIPUOAfx
— Sanatan Prabhat (@SanatanPrabhat) May 14, 2026
ಈ ಸಂದರ್ಭದಲ್ಲಿ ಟ್ರಂಪ್ ಮಾತನಾಡಿ, ನಿಮ್ಮ ಮಿತ್ರರಾಗಿರುವುದು ನಮಗೆ ಗೌರವದ ವಿಷಯವಾಗಿದೆ. ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧಗಳು ಮೊದಲಿಗಿಂತಲೂ ಉತ್ತಮವಾಗಲಿವೆ. ಜಗತ್ತಿನ ಕೆಲವು ಪ್ರಮುಖ ಉದ್ಯಮ ನಾಯಕರನ್ನು ಇಲ್ಲಿಗೆ ಕರೆತರಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿದರು.
ಅಮೆರಿಕ-ಚೀನಾ ಸಂಬಂಧಗಳಲ್ಲಿ ತೈವಾನ್ ಅತ್ಯಂತ ಪ್ರಮುಖ ವಿಷಯ! – ಶೀ ಜಿನ್‌ಪಿಂಗ್
ಸಭೆಯಲ್ಲಿ ಶೀ ಜಿನ್‌ಪಿಂಗ್ ಅವರು ಟ್ರಂಪ್ ಅವರಿಗೆ, ಅಮೆರಿಕ-ಚೀನಾ ಸಂಬಂಧಗಳಲ್ಲಿ ತೈವಾನ್ ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಹೇಳಿದರು. ಈ ವಿಷಯವನ್ನು ತಪ್ಪು ರೀತಿಯಲ್ಲಿ ನಿರ್ವಹಿಸಿದರೆ ಪರಿಸ್ಥಿತಿ ಅಪಾಯಕಾರಿಯಾಗಬಹುದು. ತೈವಾನ್ ನ ಸ್ವಾತಂತ್ರ್ಯ ಮತ್ತು ತೈವಾನ್ ಜಲಸಂಧಿಯಲ್ಲಿನ ಶಾಂತಿ ಇವು ಅಸಮಂಜಸ ವಿಷಯಗಳಾಗಿವೆ ಎಂದು ತಿಳಿಸಿದರು.
ಪ್ರಾದೇಶಿಕ ಅಸ್ಥಿರತೆಗೆ ಚೀನಾ ಏಕೈಕ ಕಾರಣ! – ತೈವಾನ್ ಪ್ರತ್ಯುತ್ತರ
ಶೀ ಜಿನ್‌ಪಿಂಗ್ ಅವರ ಹೇಳಿಕೆಗೆ ತೈವಾನ್ ಪ್ರತ್ಯುತ್ತರ ನೀಡಿದೆ. ಚೀನಾದ ಮಿಲಿಟರಿ ಚಟುವಟಿಕೆಗಳೇ ತೈವಾನ್ ಜಲಸಂಧಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಅಸ್ಥಿರತೆಗೆ ಮುಖ್ಯ ಕಾರಣ ಎಂದು ತೈವಾನ್ ಸರಕಾರವು ಹೇಳಿದೆ. ತೈವಾನ್ ಸಚಿವ ಸಂಪುಟದ ವಕ್ತಾರ ಮಿಶೆಲ್ ಲೀ ಮಾತನಾಡಿ, ಚೀನಾದ ಮಿಲಿಟರಿ ಬೆದರಿಕೆಯೇ ಪ್ರಾದೇಶಿಕ ಉದ್ವಿಗ್ನತೆಗೆ ಏಕೈಕ ಕಾರಣವಾಗಿದೆ. ಸುರಕ್ಷತೆಯನ್ನು ಕಾಪಾಡಿಕೊಳ್ಳಲು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವುದು ಅತ್ಯಗತ್ಯ ಎಂದು ಹೇಳಿದರು.
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers