
ಜಿನೀವಾ (ಸ್ವಿಟ್ಜರ್ಲೆಂಡ್) – ಕೊರೊನಾ ಸಾಂಕ್ರಾಮಿಕ ರೋಗದ ನಂತರ, ಈಗ ಜಗತ್ತಿನಾದ್ಯಂತ ಹಂತಾ ವೈರಸ್ ಬಗ್ಗೆ ಆತಂಕ ಹೆಚ್ಚಾಗತೊಡಗಿದೆ. ಈ ವೈರಸ್ ಇಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ವಿಶ್ವದಾದ್ಯಂತ ಇದುವರೆಗೆ 8 ಶಂಕಿತ ರೋಗಿಗಳು ಕಂಡುಬಂದಿದ್ದು, ಅವುಗಳಲ್ಲಿ 5 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 3 ರೋಗಿಗಳು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಈ ವೈರಸ್‌ನಿಂದಾಗಿ 28 ಜನರು ಪ್ರಾಣ ಕಳೆದುಕೊಂಡಿದ್ದರು.
1. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಅವರು ನೀಡಿರುವ ಮಾಹಿತಿಯ ಪ್ರಕಾರ, ‘ಎಂ.ವಿ. ಹೊಂಡಿಯಸ್ ಲಕ್ಸುರಿ ನೌಕೆ’ಯಲ್ಲಿದ್ದ ಪ್ರಯಾಣಿಕರಿಗೆ ಈ ವೈರಸ್ ಸೋಂಕು ತಗುಲಿದೆ. ಈ ನೌಕೆಯು ಪ್ರಸ್ತುತ ಆಫ್ರಿಕಾ ಖಂಡದ ಕೇಪ್ ವರ್ಡೆ ದೇಶದಲ್ಲಿ ತಂಗಿದ ನಂತರ ಸ್ಪೇನ್‌ನ ಕ್ಯಾನರಿ ದ್ವೀಪದ ಕಡೆಗೆ ಸಾಗುತ್ತಿದೆ.
2. ಸ್ಪೇನ್‌ನ ಆರೋಗ್ಯ ಸಚಿವಾಲಯವು ನೌಕೆಗೆ ತಂಗಲು ಅನುಮತಿ ನೀಡಿದೆ. ನೌಕೆಯು ಮೇ 9 ರಂದು ಸ್ಪೇನ್ ಬಂದರನ್ನು ತಲುಪಲಿದೆ. ಇದರಲ್ಲಿರುವ 110 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿವರವಾದ ತಪಾಸಣೆಗೆ ಒಳಪಡಿಸಲಾಗುವುದು ಹಾಗೂ ನೌಕೆಯನ್ನು ಸೋಂಕುಮುಕ್ತಗೊಳಿಸಲಾಗುವುದು.
3. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ, ಅಮೆರಿಕಾ ಮತ್ತು ಕೆನಡಾ ಸೇರಿದಂತೆ 12 ದೇಶಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಎರಡೂ ದೇಶಗಳ 80 ಪ್ರಯಾಣಿಕರು ಆ ನೌಕೆಯಲ್ಲಿದ್ದರು. ಏಪ್ರಿಲ್ 24-25 ರಂದು ಈ ನೌಕೆಯಲ್ಲಿದ್ದ ಪ್ರಯಾಣಿಕರು ತಮ್ಮ ದೇಶಗಳಿಗೆ ಮರಳಿದ್ದರು.
4. ಈ ನೌಕೆಯಲ್ಲಿ ಇಬ್ಬರು ಭಾರತೀಯ ಸಿಬ್ಬಂದಿಗಳಿದ್ದಾರೆ, ಇದು ಭಾರತದ ಆತಂಕವನ್ನೂ ಹೆಚ್ಚಿಸಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !