ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !

ಎಡಗಡೆಯ ಛಾಯಾಚಿತ್ರದಲ್ಲಿ ಹಣೆಯಲ್ಲಿ ಮೂಡಿದ ಕಮಲದ ಚಿಹ್ನೆ ಕಾಣಿಸುತ್ತಿದೆ. ಬಲಗಡೆಯ ಛಾಯಾಚಿತ್ರದಲ್ಲಿ ಅದನ್ನು ಸ್ಪಷ್ಟಪಡಿಸಲಾಗಿದೆ. (ಮಾರ್ಚ್ ೨೦೨೩)

ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿರುವ ಕಮಲವು ಸ್ಪಷ್ಟವಾಗಿ ಕಾಣಲು ಕಾರಣವೇನು ?

೨೦೧೧ ಮತ್ತು ೨೦೧೨ ರ ಅವಧಿಯಲ್ಲಿ ಆ ಕಮಲದ ೪ ದಳಗಳು ಅಸ್ಪಷ್ಟವಾಗಿ ಕಾಣಿಸುತ್ತಿದ್ದವು ಮತ್ತು ೨೦೧೩ ರಲ್ಲಿ ಅವು ಸ್ಪಷ್ಟವಾಗಿ ಕಾಣಲಾರಂಭಿಸಿದವು. ‘ಕಮಲವು ಎದ್ದು ಕಾಣುವುದು’ ಏನನ್ನು ಸೂಚಿಸುತ್ತದೆ ?

ಶ್ರೀ. ರಾಮ ಹೋನಪ :

೧. ಸಂತರ ಹಣೆಯ ಮೇಲೆ ಮೂಡಿದ ಕಮಲ ಸ್ಪಷ್ಟವಾಗಿ ಕಾಣಲು ಕಾರಣ

ವ್ಯಕ್ತಿಯ ಸಾಧನೆಯು ಮೂಲಾಧಾರ ಚಕ್ರದಿಂದ ಆರಂಭ ಆಗುತ್ತದೆ. ‘ವ್ಯಕ್ತಿಯ ಸಾಧನೆ ಮತ್ತು ಭಗವಂತನ ಕೃಪೆ’ಯಿಂದ ಅವರ ಕುಂಡಲಿನಿಯು ಮೇಲೆ ಮೇಲೆ ಹೋಗುತ್ತದೆ. ವ್ಯಕ್ತಿಯ ಆಧ್ಯಾತ್ಮಿಕ ಪ್ರಗತಿಯು ಸುಷುಮ್ನಾ ನಾಡಿಯ ಮೂಲಕ ನಡೆಯುತ್ತದೆ. ಸಂತರ ಆಧ್ಯಾತ್ಮಿಕ ಪ್ರಗತಿಯ ಅಂತಿಮ ಹಂತದಲ್ಲಿ ಸುಷುಮ್ನಾ ನಾಡಿಯು ‘ಬ್ರಹ್ಮನಾಡಿ’ ಆಗಿ ರೂಪಾಂತರಗೊಳ್ಳುತ್ತದೆ. ಬ್ರಹ್ಮನಾಡಿಯು ಸಹಸ್ರಾರ ಚಕ್ರದಲ್ಲಿರುವ ಆನಂದದೊಂದಿಗೆ ವಿಲೀನವಾಗುತ್ತದೆ. ಈ ಪ್ರಕ್ರಿಯೆಯು ಪೂರ್ಣಗೊಂಡಾಗ, ಸಹಸ್ರಾರಚಕ್ರದಲ್ಲಿ ಆನಂದದ ಪ್ರಕಟೀಕರಣವು ಕಮಲದ ಆಕಾರದಲ್ಲಿ ಆಗುತ್ತದೆ. ಇದನ್ನು ‘ಬ್ರಹ್ಮಕಮಲ’ ಎಂದು ಕರೆಯಲಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಕಾರ್ಯವು ಸಮಷ್ಟಿಗೆ (ಸಮಾಜಕ್ಕೆ) ಸಂಬಂಧಿಸಿರುವುದರಿಂದ, ಅದನ್ನು ‘ವಿಶ್ವಕಮಲ’ಕ್ಕೆ ಹೋಲಿಸಲಾಗಿದೆ.

೧ ಅ. ಸುಷುಮ್ನಾ ನಾಡಿ ಮತ್ತು ಬ್ರಹ್ಮನಾಡಿ ಇವುಗಳ ನಡುವಿನ ವ್ಯತ್ಯಾಸ : ಸುಷುಮ್ನಾ ನಾಡಿಯಲ್ಲಿನ ಸ್ವಲ್ಪ ಶಕ್ತಿಯು ‘ಸಂತರ ಶರೀರ, ಮನಸ್ಸು ಮತ್ತು ಬುದ್ಧಿ’ಯ ಕಾರ್ಯಗಳಿಗಾಗಿ ವ್ಯಯವಾಗುತ್ತದೆ; ಆದರೆ ಬ್ರಹ್ಮನಾಡಿಯು ಜೀವಕ್ಕೆ ಕೇವಲ ಆನಂದವನ್ನು ನೀಡುವ ಕಾರ್ಯವನ್ನು ಮಾಡುತ್ತದೆ. ಬ್ರಹ್ಮನಾಡಿಯ ಕಾರ್ಯವು ‘ಜೀವಕ್ಕೆ ಬ್ರಹ್ಮಾನಂದವನ್ನು ನೀಡುವುದು’ ಆಗಿರುತ್ತದೆ.

ಶ್ರೀ. ರಾಮ ಹೊನಪ

೨. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಹಣೆಯ ಮೇಲೆ ಕಾಣಿಸುವ ಕಮಲದ ದಳಗಳ ಪೈಕಿ ೪ ದಳಗಳ ವೈಶಿಷ್ಟ್ಯಗಳು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಹಣೆಯ ಮೇಲೆ ಕಾಣಿಸುವ ಕಮಲದ ದಳಗಳ ಪೈಕಿ ೪ ದಳಗಳ ಹೆಸರು ಮತ್ತು ಕಾರ್ಯವನ್ನು ಮುಂದೆ ನೀಡಲಾಗಿದೆ.

೨ ಅ. ಸಚೇತಾ : ‘ಸ’ ಎಂದರೆ ‘ಸಹ’ ಮತ್ತು ‘ಚೇತಾ’ ಎಂದರೆ ‘ಚೇತನಾ’ ಅಥವಾ ‘ಚೈತನ್ಯ’. ಕಮಲದ ಒಂದು ದಳವು ಚೈತನ್ಯದೊಂದಿಗೆ ಕಾರ್ಯವನ್ನು ಮಾಡುತ್ತದೆ. ಅದನ್ನು ‘ಸಚೇತಾ’ ಎಂದು ಕರೆಯಲಾಗುತ್ತದೆ.

೨ ಆ. ಪ್ರಚೇತಾ : ‘ಪ್ರ’ ಎಂದರೆ ‘ಜಾಗೃತ’. ಕಮಲದ ಯಾವ ದಳದಲ್ಲಿನ ಚೈತನ್ಯವು ಕಾಲಕ್ಕನುಗುಣ ಜಾಗೃತವಾಗುತ್ತದೆಯೋ, ಅದನ್ನು ‘ಪ್ರಚೇತಾ’ ಎಂದು ಕರೆಯಲಾಗುತ್ತದೆ.

೨ ಇ. ನಿತ್ಯಾ : ‘ನಿತ್ಯ’ ಎಂದರೆ ‘ಯಾವಾಗಲೂ.’ ಕಮಲದ ಒಂದು ದಳವು ಯಾವಾಗಲೂ ಕಾರ್ಯನಿರತವಾಗಿರುತ್ತದೆ. ಆ ದಳವನ್ನು ‘ನಿತ್ಯಾ’ ಎಂದು ಕರೆಯುತ್ತಾರೆ.

೨ ಈ. ಅನಿತ್ಯಾ : ‘ಅನಿತ್ಯಾ’ ಎಂದರೆ ‘ಯಾವಾಗಲಾದರೊಮ್ಮೆ’. ಕಮಲದ ಒಂದು ದಳವು ವಿಶಿಷ್ಟ ಕಾರ್ಯಕ್ಕಾಗಿ ಮಾತ್ರ ಜಾಗೃತವಾಗುತ್ತದೆ, ಅದನ್ನು ‘ಅನಿತ್ಯಾ’ ಎಂದು ಕರೆಯಲಾಗುತ್ತದೆ.

೩. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಹಣೆಯ ಮೇಲೆ ಕಮಲದ ದಳಗಳು ‘ಮೊದಲು ಅಸ್ಪಷ್ಟವಾಗಿ ಕಾಣುವುದು ಮತ್ತು ನಂತರ ಸ್ಪಷ್ಟವಾಗಿ ಕಾಣುವುದು’ ಇದರ ಕಾರಣ

‘೨೦೧೧ ಮತ್ತು ೨೦೧೨ ರ ಅವಧಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬ್ರಹ್ಮನಾಡಿಯ ಮೂಲಕ ಪರಮೇಶ್ವರನೊಂದಿಗೆ ಮಿಲನದ ಪ್ರಕ್ರಿಯೆಯು ನಡೆಯುತ್ತಿತ್ತು. (‘೨೦೧೧ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಾಧನೆಯ ಮೂಲಕ ಶೇ. ೯೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದರು, ಅಂದರೆ ‘ಪರಾತ್ಪರ ಗುರು’ ಪದವಿಯನ್ನು ಪಡೆದರು. ನಂತರ ೨೦೧೨ ರಲ್ಲಿ ಅವರು ಶೇ. ೯೨ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದರು.’ – ಸಂಕಲನಕಾರರು). ಈ ಪ್ರಕ್ರಿಯೆಯು ಅಪೂರ್ಣವಾಗಿದ್ದರಿಂದ ಅವರ ಹಣೆಯ ಮೇಲೆ ೪ ದಳಗಳು ಅಸ್ಪಷ್ಟವಾಗಿ ಕಾಣುತ್ತಿದ್ದವು. ೨೦೧೩ ರಲ್ಲಿ ಈ ಪ್ರಕ್ರಿಯೆಯು ಪೂರ್ಣಗೊಂಡಿತು. ಆದ್ದರಿಂದ ಅವರ ಹಣೆಯ ಮೇಲೆ ಕಮಲದ ದಳಗಳು ಸ್ಪಷ್ಟವಾಗಿ ಕಾಣತೊಡಗಿದವು.

– ಶ್ರೀ. ರಾಮ ಹೊನಪ (ಸೂಕ್ಷ್ಮ ಜ್ಞಾನದಿಂದ ಪ್ರಾಪ್ತವಾದ ಮಾಹಿತಿ), ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೧೧.೨೦೨೫)

  • ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ
  • ಸೂಕ್ಷ್ಮ-ಜ್ಞಾನದ ಬಗೆಗಿನ ಚಿತ್ರ : ಕೆಲವು ಸಾಧಕರಿಗೆ ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಏನು ಅರಿವಾಗುತ್ತದೆಯೋ ಮತ್ತು ಅಂತರ್ದೃಷ್ಟಿಯಿಂದ ಏನು ಕಾಣಿಸುತ್ತದೆಯೋ, ಆ ಕುರಿತು ಅವರು ಕಾಗದದ ಮೇಲೆ ಬಿಡಿಸಿದ ಚಿತ್ರವನ್ನು ‘ಸೂಕ್ಷ್ಮ-ಜ್ಞಾನದ ಬಗೆಗಿನ ಚಿತ್ರ’ ಎಂದು ಕರೆಯುತ್ತಾರೆ.
  • ಸೂಕ್ಷ್ಮ-ಪರೀಕ್ಷಣೆ : ಯಾವುದಾದರೂ ಘಟನೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅನಿಸುತ್ತದೆಯೋ, ಅದನ್ನು ‘ಸೂಕ್ಷ್ಮ-ಪರೀಕ್ಷಣೆ’ ಎನ್ನುತ್ತಾರೆ.