ಇತ್ತೀಚೆಗಷ್ಟೇ ರಸ್ತೆ ದಾಟುತ್ತಿದ್ದ ಯುವತಿಯೊಬ್ಬಳು ಬಸ್ಸಿಗೆ ಬಲಿಯಾದ ಘಟನೆ ನಡೆಯಿತು. ಈ ಘಟನೆಯು ಕೇವಲ ಒಂದು ಅಪಘಾತವಲ್ಲ, ಬದಲಾಗಿ ಇದು ಆಡಳಿತ ವ್ಯವಸ್ಥೆಯ ವೈಫಲ್ಯದ ಸಂಕೇತವಾಗಿದೆ. ‘ನಗರಗಳನ್ನು ’ಸ್ಮಾರ್ಟ್’ (ಆಧುನಿಕ) ಮಾಡುವ ಅವಸರದಲ್ಲಿ ನಾವು ಮಾನವ ಜೀವನದ ಮೌಲ್ಯವನ್ನು ಮರೆಯುತ್ತಿದ್ದೇವೆಯೇ ?’, ಎಂಬ ಪ್ರಶ್ನೆಯು ಇಂದು ಪ್ರತಿಯೊಬ್ಬ ಪ್ರಯಾಣಿಕನನ್ನು ಕಾಡುತ್ತಿದೆ.

೧. ವೇಗದ ಸ್ಪರ್ಧೆ ಮತ್ತು ಮೃತ್ಯುಮುಖಕ್ಕೆ ತಳ್ಳಲ್ಪಡುವ ಸಾಮಾನ್ಯ ನಾಗರಿಕರು
ಕರಾವಳಿಯ ಹೆದ್ದಾರಿಗಳಲ್ಲಿ, ವಿಶೇಷವಾಗಿ ಉಡುಪಿ ಮತ್ತು ಮಂಗಳೂರು ನಗರಗಳಲ್ಲಿ ಸಂಚರಿಸುವ ಬಸ್ಸುಗಳ ನಡುವಿನ ಸ್ಪರ್ಧೆಯು ಭಯಾನಕವಾಗಿದೆ.
ಅ. ನಿಮಿಷಗಳ ಲೆಕ್ಕಾಚಾರ : ಪ್ರತಿ ೫ ನಿಮಿಷಕ್ಕೊಮ್ಮೆ ಬಸ್ಸು ಬಿಡುವ ಅವಸರದಲ್ಲಿ ಮತ್ತು ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿಕೊಳ್ಳುವ ಆತುರತೆಯಿಂದ ಚಾಲಕರು ರಸ್ತೆಯನ್ನು ’ರೇಸ್ ಟ್ರ್ಯಾಕ್’ (ಸ್ಪರ್ಧೆಯ ಹಾದಿ) ನಂತೆ ಬಳಸುತ್ತಿದ್ದಾರೆ.

ಆ. ನಿಯಮಗಳ ಉಲ್ಲಂಘನೆ : ಅಯೋಗ್ಯ ಪದ್ಧತಿಯಲ್ಲಿ ’ಓವರ್ ಟೇಕ್’, ಕರ್ಣಕಕಶ ಹಾರ್ನ್ ಬಳಕೆ ಮತ್ತು ರಾತ್ರಿಯ ಸಮಯದಲ್ಲಿ ’ಹೈ-ಬೀಮ್ ಲೈಟ್ಸ್’ ಬಳಕೆಯಿಂದ ಎದುರಿನ ವಾಹನ ಸವಾರರ ಕಣ್ಣು ಕೋರೈಸುವಂತೆ ಮಾಡುವುದು ನಿತ್ಯದ ಕೆಲಸವಾಗಿದೆ. ರಸ್ತೆಗಳು ಎಷ್ಟು ’ಸ್ಮಾರ್ಟ್’ ಆದಂತೆ ಅಷ್ಟೇ ವೇಗವೂ ಹೆಚ್ಚುತ್ತಿದೆ; ಆದರೆ ಸುರಕ್ಷತೆಯು ಮಾತ್ರ ಮಾಯವಾಗುತ್ತಿದೆ.

೨. ಯುವ ಪೀಳಿಗೆ ಮತ್ತು ’ಸ್ಟಂಟ್’ ವಿಕೃತಿ
ಮತ್ತೊಂದೆಡೆ ಇಂದಿನ ಯುವ ಪೀಳಿಗೆಗೆ ರಸ್ತೆಯು ಸಾಹಸ ಪ್ರದರ್ಶನದ ವೇದಿಕೆಯಾಗಿದೆ. ಶಿರಸ್ತ್ರಾಣವಿಲ್ಲದೆ (ಹೆಲ್ಮೆಟ್) ವೇಗವಾಗಿ ದ್ವಿಚಕ್ರ ವಾಹನ ಚಾಲನೆ, ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವುದು ಮತ್ತು ಕೇವಲ ಆಕರ್ಷಣೆಗಾಗಿ ಅಥವಾ ಪ್ರಸಿದ್ಧಿಗಾಗಿ ಅಪಾಯಕಾರಿ ’ಸ್ಟಂಟ್’ (ಜನರ ಗಮನ ಸೆಳೆಯಲು ಮಾಡುವ ಸಾಹಸ) ಮಾಡುವುದು ದೈನಂದಿನ ದೃಶ್ಯಗಳಾಗಿವೆ.
ಅನೇಕ ಬಾರಿ ಶ್ರೀಮಂತ ಅಥವಾ ಪ್ರಭಾವಿ ವ್ಯಕ್ತಿಗಳ ಮಕ್ಕಳು ವಾಹನ ಚಾಲನೆಯ ತರಬೇತಿ ಅಥವಾ ಪರವಾನಗಿ (ಲೈಸೆನ್ಸ್) ಪಡೆಯುವ ಮೊದಲೇ ದೊಡ್ಡ ವಾಹನಗಳನ್ನು ರಸ್ತೆಗೆ ತಂದು ಇತರರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಲ್ಲಿ ಪ್ರೀತಿಗಿಂತ ಪೋಷಕರ ಬೇಜವಾಬ್ದಾರಿಯೇ ಹೆಚ್ಚು ಗೋಚರಿಸುತ್ತದೆ.
೩. ವ್ಯವಸ್ಥೆಯ ಮೌನ ಮತ್ತು ನೈತಿಕತೆಯ ಅಧಃಪತನ
ಸಾರಿಗೆ ಪೊಲೀಸರು ಕೆಲವೊಮ್ಮೆ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಒಳಗಾಗಿ ನಿರ್ಲಕ್ಷ್ಯ ವಹಿಸುತ್ತಾರೆ, ಇದರಿಂದಾಗಿ ತಪ್ಪು ಮಾಡುವವರ ಧೈರ್ಯ ಹೆಚ್ಚಾಗುತ್ತದೆ; ಆದರೆ ಈ ಎಲ್ಲದರ ಮೂಲವು ನಮ್ಮ ನೈತಿಕ ಮೌಲ್ಯಗಳ ಅವನತಿಯಾಗಿದೆ.
ರಸ್ತೆಯಲ್ಲಿ ಹೋಗುವ ವ್ಯಕ್ತಿಯೂ ಒಬ್ಬ ಮನುಷ್ಯ ಮತ್ತು ಆತನ ಕುಟುಂಬವು ಅವನಿಗಾಗಿ ಕಾಯುತ್ತಿರುತ್ತದೆ ಎಂಬ ಕನಿಷ್ಠ ’ಮಾನವೀಯ ಪ್ರಜ್ಞೆ’ ಇಂದು ಕಣ್ಮರೆಯಾಗುತ್ತಿದೆ. ’ಬದುಕಿ ಮತ್ತು ಇತರರನ್ನು ಬದುಕಲು ಬಿಡಿ’ ಎಂಬ ಸಂಸ್ಕಾರ ನೀಡುವ ಶಿಕ್ಷಣದ ಕೊರತೆಯು ಈ ಅವ್ಯವಸ್ಥೆಗೆ ಕಾರಣವಾಗಿದೆ.
೪. ಉಪಾಯಯೋಜನೆ
ಅ. ಕೇವಲ ರಸ್ತೆಗಳನ್ನು ಅಗಲಗೊಳಿಸಿದರೆ ಸಾಲದು, ನಮ್ಮ ಮನಸ್ಸುಗಳೂ ಅಗಲವಾಗುವ (ವಿಸ್ತಾರವಾಗುವ) ಆವಶ್ಯಕತೆಯಿದೆ.
ಆ. ಎಲ್ಲ ಬಸ್ಸುಗಳಲ್ಲಿ ’ಜಿ.ಪಿ.ಎಸ್.’ (ಗ್ಲೋಬಲ್ ಪೋಸಿಷನಿಂಗ್ ಸಿಸ್ಟಮ್ – ಉಪಗ್ರಹ ಆಧಾರಿತ ಯಂತ್ರದ ವ್ಯವಸ್ಥೆ) ಮತ್ತು ವೇಗ ನಿಯಂತ್ರಕಗಳನ್ನು ಅಳವಡಿಸಿ ನಿಯಮ ಮುರಿಯುವವರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸುವ ನಿಬಂಧನೆ ಕಾಯಿದೆಯಲ್ಲಿ ಇರಬೇಕು.
ಇ. ’ಸ್ಮಾರ್ಟ್ ಸಿಟಿ’ ಅಡಿಯಲ್ಲಿ ಪಾದಚಾರಿಗಳಿಗಾಗಿ ಪ್ರತ್ಯೇಕ ಮಾರ್ಗ ಮತ್ತು ಸುರಕ್ಷಿತವಾಗಿ ರಸ್ತೆ ದಾಟುವ ಸೌಲಭ್ಯವನ್ನು ಕಡ್ಡಾಯಗೊಳಿಸಬೇಕು.
ಈ. ಸಾಮಾಜಿಕ ಜಾಗೃತಿ : ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತಬೇಕು. ಪೋಷಕರು ತಮ್ಮ ಮಕ್ಕಳಿಗೆ ವಾಹನ ನೀಡುವ ಮೊದಲು ಅವರಿಗೆ ಜವಾಬ್ದಾರಿಯ ಅರಿವು ಮೂಡಿಸಬೇಕು.
೫. ತೀರ್ಮಾನ
ಅಭಿವೃದ್ಧಿ ಎಂದರೆ ಕೇವಲ ಕಾಂಕ್ರಿಟ್ ರಸ್ತೆಗಳಲ್ಲ, ಬದಲಾಗಿ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಹೋಗುವ ವ್ಯಕ್ತಿ ಅಥವಾ ಶಿಕ್ಷಣಕ್ಕಾಗಿ ಹೋಗುವ ಮಗು ಸುರಕ್ಷಿತವಾಗಿ ಮನೆಗೆ ಮರಳಬೇಕು, ಆಗಲೇ ನಾವು ನಿಜವಾದ ಅರ್ಥದಲ್ಲಿ ’ಸ್ಮಾರ್ಟ್ ಸಿಟಿ’ ನಿರ್ಮಿಸಲು ಸಾಧ್ಯ. ಪಶ್ಚಾತ್ತಾಪಕ್ಕಿಂತ ಮುನ್ನೆಚ್ಚರಿಕೆ ಯಾವಾಗಲೂ ಒಳ್ಳೆಯದು !
– ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು. (೧೮.೨.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು