ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಪ್ರತಿಷ್ಠಿತ ಸಂಸ್ಥೆಯಿಂದ ಮುಸಲ್ಮಾನರ ಓಲೈಕೆಯ ಪ್ರಯತ್ನ
೩೦ ವರ್ಷಗಳಿಂದ ನಡೆಯುತ್ತಿದೆ

ನವದೆಹಲಿ – ನಾಸಿಕ್ ‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್’ನಲ್ಲಿ ನಡೆದ ಅಸಹ್ಯಕರ ಘಟನೆಯಿಂದ ‘ಕಾರ್ಪೊರೇಟ್ ಜಿಹಾದ್’ನ ವಿಕೃತ ಮುಖ ಈಗ ಹೊರ ಬಂದಿದೆ. ಈಗ ಇದೇ ಟಾಟಾ ಸಂಸ್ಥೆಯ ‘ಟಾಟಾ ಎಥಿಕಲ್ ಫಂಡ್’ ಎಂಬ ‘ಮ್ಯೂಚುವಲ್ ಫಂಡ್’ ಮಾದರಿಯ ಹೂಡಿಕೆ ಯೋಜನೆಯು ಶರಿಯಾ ಕಾನೂನನ್ನು ಪಾಲಿಸುತ್ತಿದೆ, ಅಂದರೆ ಇದು ಹಲಾಲ್ ಪ್ರಮಾಣಿತವಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಯೋಜನೆಯನ್ನು ಹಿಂದೂಗಳ ತಲೆಗೂ ಕಟ್ಟಲಾಗುತ್ತಿರುವುದರಿಂದ ಹಿಂದೂಗಳಲ್ಲಿ ಆಕ್ರೋಶದ ಅಲೆ ಎದ್ದಿದೆ.
🚨 Sharia-Based ‘Ethical Fund’ by Tata Under Scrutiny
The renowned Tata Group in Hindu-majority India faces criticism for pursuing Muslim appeasement through such schemes
The scheme has been operational for 30 years
Following the revelation of a conspiracy to convert Hindus at… pic.twitter.com/LHwgb9JIGd
— Sanatan Prabhat (@SanatanPrabhat) April 24, 2026
‘ಟಾಟಾ ಎಥಿಕಲ್ ಫಂಡ್’ ಶರಿಯಾ ಅನ್ವಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ!
‘ಟಾಟಾ ಮ್ಯೂಚುವಲ್ ಫಂಡ್’ನ ಜಾಲತಾಣದಲ್ಲಿ ‘ಟಾಟಾ ಎಥಿಕಲ್ ಫಂಡ್’ನ ಎಲ್ಲಾ ಸೌಲಭ್ಯಗಳ ಮಾಹಿತಿಯನ್ನು ಸ್ಪಷ್ಟಪಡಿಸಲಾಗಿದೆ. ಅದರಲ್ಲಿ,
೧. ಇಸ್ಲಾಂ ಧರ್ಮದ ಪ್ರಕಾರ ಮದ್ಯ, ತಂಬಾಕು, ಜೂಜು ಅಥವಾ ಬಡ್ಡಿದರದ ಆಧಾರಿತ ಸಾಲದಂತಹ ಹೂಡಿಕೆ ಸಾಧನಗಳಲ್ಲಿ ಹಣ ಹೂಡುವುದನ್ನು ‘ಹರಾಮ್’ (ಇಸ್ಲಾಂ ವಿರೋಧಿ) ಎಂದು ಪರಿಗಣಿಸಲಾಗಿದೆ. ‘ಟಾಟಾ ಎಥಿಕಲ್ ಫಂಡ್’ ಇಂತಹ ವಸ್ತುಗಳಲ್ಲಿ ಹಣ ಹೂಡುವುದಿಲ್ಲ. ಈ ಯೋಜನೆಯು ಹಿಂದೂಗಳಿಗೂ ಲಭ್ಯವಿದೆ.
೨. ‘ಟಾಟಾ ಎಥಿಕಲ್ ಫಂಡ್’ ಸಂಸ್ಥೆಯು ಮಾಹಿತಿ ತಂತ್ರಜ್ಞಾನ, ಔಷಧ ವ್ಯವಹಾರ (ಫಾರ್ಮಾ) ಮತ್ತು ನಿರ್ಮಾಣ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುತ್ತದೆ. ‘ಈ ಮೂಲಕ ನಿಮ್ಮ ಹಣವು ಹಲಾಲ್ ಪ್ರಮಾಣಿತವಾಗುತ್ತದೆ’ ಎಂಬ ಭರವಸೆಯನ್ನು ಕೂಡ ‘ಟಾಟಾ’ ನೀಡಿದೆ.
ಶರಿಯಾ ಅನ್ವಯ ಇಂತಹ ಹೂಡಿಕೆ ಯೋಜನೆಗಳನ್ನು ಟಾಟಾ ಸಂಸ್ಥೆಯ ಹೊರತಾಗಿ ‘ಟಾರಸ್ ಮ್ಯೂಚುವಲ್ ಫಂಡ್’, ‘ನಿಪ್ಪಾನ್ ಇಂಡಿಯಾ’, ‘ಕ್ವಾಂಟಮ್ ಎಥಿಕಲ್ ಫಂಡ್’ ಮುಂತಾದ ಸಂಸ್ಥೆಗಳು ಕೂಡ ನಡೆಸುತ್ತಿವೆ.
ಅಂಕಿ-ಅಂಶಗಳಲ್ಲಿ ‘ಟಾಟಾ ಎಥಿಕಲ್ ಫಂಡ್’ ಎಂಬ ಭಯಾನಕ ಷಡ್ಯಂತ್ರದ ವಾಸ್ತವ!
೧. ಭಾರತದಲ್ಲಿ ಶರಿಯಾ ಅನ್ವಯ ನಡೆಯುತ್ತಿರುವ ಅತಿದೊಡ್ಡ ‘ಮ್ಯೂಚುವಲ್ ಫಂಡ್’ ಯೋಜನೆ ಇದಾಗಿದೆ.
೨. ೧೯೯೬ ರಲ್ಲಿ ಇದರ ಪ್ರಾರಂಭವಾಯಿತು.
೩. ೩,೭೩೯ ಕೋಟಿ ರೂಪಾಯಿಗಳ ಹೂಡಿಕೆ (೧೯ ಏಪ್ರಿಲ್ ೨೦೨೬ ರವರೆಗೆ).
೪. ಶೇ. ೨೫% ರಷ್ಟು ಮೊತ್ತವನ್ನು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗಿದೆ.
೫. ‘ಟಾಟಾ ಎಥಿಕಲ್ ಫಂಡ್’ ಅನ್ನು ಅತಿ ಹೆಚ್ಚು ಬಳಸುವ ಮೊದಲ ೫ ಸಂಸ್ಥೆಗಳು – ಇನ್ಫೋಸಿಸ್ (ಶೇ. ೮%), ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಶೇ. ೫.೪೧%), ಟೆಕ್ ಮಹೀಂದ್ರಾ (ಶೇ. ೩.೬೧%), ಹಿಂದೂಸ್ತಾನ್ ಯೂನಿಲಿವರ್ (ಶೇ. ೩.೪೫%) ಮತ್ತು ಜಿಂದಾಲ್ ಸ್ಟೀಲ್ (ಶೇ. ೨.೯೫%).
೬. ವಿಶೇಷವೆಂದರೆ, ಭಾರತದ ಪ್ರತಿಷ್ಠಿತ ‘ಐಐಟಿ’ ಮತ್ತು ‘ಐಐಎಂ’ ಗಳಲ್ಲಿ ಶಿಕ್ಷಣ ಪಡೆದ ಅಭಿನವ ಶರ್ಮಾ ಎಂಬ ಹಿಂದೂ ಅಧಿಕಾರಿಯು ಈ ಫಂಡ್ ನ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಿದ್ದಾರೆ. ಇಂತಹ ‘ಸೆಕ್ಯುಲರ್’ ಹಿಂದೂಗಳಿಗೆ ದೇಶದ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಈ ಯೋಜನೆಯನ್ನು ಭಾರತೀಯರು ವಿರೋಧಿಸುವುದು ಹೇಗೆ?
೧. ಈ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಲು ಭಾರತೀಯರು ಸರಕಾರದ ಮೇಲೆ ಒತ್ತಡ ಹೇರಬೇಕು.
೨. ಟಾಟಾ ಸಂಸ್ಥೆಯು ಈ ಯೋಜನೆಯನ್ನು ಹಿಂಪಡೆಯದಿದ್ದರೆ, ಭಾರತೀಯರು ಅದರ ಷೇರುಗಳನ್ನು ಮಾರಾಟ ಮಾಡಿ ಆ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಿಳಿಸಬೇಕು. ಆರ್ಥಿಕ ಪೆಟ್ಟು ನೀಡಿದಾಗಲೇ ಇಂತಹ ‘ಕಾರ್ಪೊರೇಟ್ ಜಿಹಾದಿಗಳು’ ಸರಿದಾರಿಗೆ ಬರುವರು ಎಂಬುದನ್ನು ಮರೆಯಬಾರದು.
೩. ‘ಟಾಟಾ ಮ್ಯೂಚುವಲ್ ಫಂಡ್’ಗೆ ನ್ಯಾಯೋಚಿತ ಮಾರ್ಗದಲ್ಲಿ ಪ್ರತಿಭಟನೆ ಅಥವಾ ಅಸಮಾಧಾನ ದಾಖಲಿಸಲು ಸಂಪರ್ಕಿಸಿ: (೦೨೨) ೬೨೮೨ ೭೭೭೭, (೦೨೨) ೬೬೫೭ ೮೨೮೨ (ಸೋಮವಾರದಿಂದ ಶನಿವಾರ ಬೆಳಿಗ್ಗೆ ೯ ರಿಂದ ಸಂಜೆ ೫.೩೦) ಟೋಲ್ ಫ್ರೀ ಸಂಖ್ಯೆ: ೧೮೦೦ ೨೨೦ ೧೦೧
ಇ-ಮೇಲ್ : [email protected]
ಮ್ಯೂಚುವಲ್ ಫಂಡ್ ಎಂದರೇನು?
ಇದು ಒಂದು ಹೂಡಿಕೆ ಪದ್ಧತಿಯಾಗಿದ್ದು, ನಿಧಿ ವ್ಯವಸ್ಥಾಪನಾ ಸಂಸ್ಥೆಯು (‘ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ’) ಜನರಿಂದ ಹಣ ಹೂಡಿಕೆ ಮಾಡಲು ಆಹ್ವಾನಿಸುತ್ತದೆ. ಈ ಸಂಸ್ಥೆಯ ಬಳಿ ಜನರ ಹಣ ಬಂದ ಮೇಲೆ ಆ ನಿಧಿಯನ್ನು ಇತರ ಸಂಸ್ಥೆಗಳ ಷೇರುಗಳು, ಬಾಂಡ್‌ಗಳು ಇತ್ಯಾದಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದನ್ನು ‘ಇಕ್ವಿಟಿ ಫಂಡ್’ ಎಂದು ಕರೆಯಲಾಗುತ್ತದೆ. ಇದಲ್ಲದೆ ‘ಡೆಟ್ ಫಂಡ್’ಗಳಲ್ಲಿಯೂ ನಿಧಿ ಹೂಡಿಕೆ ಮಾಡಬಹುದು. ಇದರ ಅಡಿಯಲ್ಲಿ ಸರಕಾರ ಅಥವಾ ದೊಡ್ಡ ನಿರ್ಮಾಣ ಸಂಸ್ಥೆಗಳಿಗೆ ಈ ನಿಧಿಯನ್ನು ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣದಂತಹ ಯೋಜನೆಗಳಲ್ಲಿ ಬಳಸಲು ನೀಡಲಾಗುತ್ತದೆ. ‘ಟಾಟಾ ಎಥಿಕಲ್ ಫಂಡ್’ ವಿಷಯದಲ್ಲಿ ಇಸ್ಲಾಂ ಧರ್ಮಕ್ಕೆ ನಿಷೇಧಿತವಾಗಿರುವ ಮದ್ಯ, ತಂಬಾಕು, ಜೂಜು ಅಥವಾ ಬಡ್ಡಿದರದ ಆಧಾರಿತ ಸಾಲಗಳಲ್ಲಿ ಈ ನಿಧಿಯನ್ನು ಹೂಡಿಕೆ ಮಾಡಲಾಗುವುದಿಲ್ಲ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ