ಮೂರನೇ ಮಹಾಯುದ್ಧದ ಬಗ್ಗೆ ಸೂಕ್ಷ್ಮ ಜ್ಞಾನವನ್ನು ಪಡೆಯುತ್ತಿರುವ ಸಾಧಕ ಶ್ರೀ. ನಿಷಾದ ದೇಶಮುಖ ಇವರಿಗೆ ಸೂಕ್ಷ್ಮದಿಂದ ದೊರಕಿದ ಜ್ಞಾನ !

ಈ ಲೇಖನಮಾಲೆಯಲ್ಲಿ ಇದು ವರೆಗೆ ನಾವು ‘ಮೂರನೇ ಮಹಾಯುದ್ಧದ ಸ್ವರೂಪ, ಸ್ತರ, ಕಾಲಾವಧಿ ಮತ್ತು ಮಹಾಯುದ್ಧದ ಹಂತಗಳಿಗನುಸಾರ ಅದರ ಲಕ್ಷಣಗಳು, ಮೂರನೇ ಮಹಾಯುದ್ಧದ ಸಮಯದಲ್ಲಿ ಸಂಭಾವ್ಯ ಬದಲಾವಣೆಗಳ ಹಿಂದಿನ ಕಾರಣಗಳು ಹಾಗೂ ಮಹಾಯುದ್ಧದ ಸಂದರ್ಭದಲ್ಲಿ ದೊಡ್ಡ ಕೆಟ್ಟ ಶಕ್ತಿಗಳ ಯೋಜನೆ’ ಈ ಅಂಶಗಳನ್ನು ತಿಳಿದುಕೊಂಡೆವು. ಇಂದಿನ ಲೇಖನದಲ್ಲಿ ನಾವು ‘ಪ್ರತ್ಯಕ್ಷ ಯುದ್ಧಕಾಲದಲ್ಲಿ ಸಂತರು ಹೇಗೆ ಯುದ್ಧ ಮಾಡಲಿದ್ದಾರೆ ?’ ‘ಮೂರನೇ ಮಹಾಯುದ್ಧದ ಪರಿಣಾಮವು ಯಾವುದರ ಮೇಲೆ ಅವಲಂಬಿಸಿದೆ ?’ ಈ ಅಂಶಗಳನ್ನು ತಿಳಿದುಕೊಳ್ಳುವವರಿದ್ದೇವೆ. (ಭಾಗ ೪)

ಶ್ರೀ. ನಿಷಾದ ದೇಶಮುಖ

೬. ಪ್ರತ್ಯಕ್ಷ ಯುದ್ಧದ ಕಾಲದಲ್ಲಿ ಸಂತರು ಸಗುಣ-ನಿರ್ಗುಣ ಸ್ತರದಲ್ಲಿ ಯುದ್ಧವನ್ನು ಮಾಡಲಿದ್ದಾರೆ ಮತ್ತು ಅದರ ಪರಿಣಾಮದಿಂದ ಮಾನಸಿಕ ಹಾಗೂ ಬೌದ್ಧಿಕ ಸ್ತರದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ

ಪ್ರತ್ಯಕ್ಷ ಯುದ್ಧಕಾಲವು ಪ್ರಾರಂಭವಾದ ಮೇಲೆ ಈಶ್ವರನ ಲಯಶಕ್ತಿ ಕಾರ್ಯನಿರತವಾಗುವುದು. ಇದರಿಂದ ಈಗಾಗಲೇ ದುರ್ಬಲಗೊಂಡಿರುವ ದೊಡ್ಡ ಕೆಟ್ಟ ಶಕ್ತಿಗಳ ಬಲವು ವೇಗವಾಗಿ ಕುಸಿಯುವುದು. ಪೃಥ್ವಿಯಲ್ಲಿರುವ ಸಮಷ್ಟಿ ಸಂತರು ಮತ್ತು ದೊಡ್ಡ ಕೆಟ್ಟ ಶಕ್ತಿಗಳ ನಡುವೆ ಸಗುಣ-ನಿರ್ಗುಣ ಸ್ತರದಲ್ಲಿನ ಯುದ್ಧವು ಆರಂಭವಾಗಲಿದೆ. ಕೆಟ್ಟ ಶಕ್ತಿಗಳ ಆಕ್ರಮಣದಿಂದ ಜಗತ್ತಿನ ಅಧಿಕಾರ ಕೈಯಲ್ಲಿರುವ ಪ್ರಮುಖ ನಾಯಕರ ಮೇಲೆ ತೊಂದರೆದಾಯಕ ಶಕ್ತಿಗಳ ಆವರಣ ಬರುವುದರಿಂದ, ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಪ್ರತ್ಯಕ್ಷ ಯುದ್ಧದ ತೀವ್ರತೆಯನ್ನು ಹೆಚ್ಚಿಸುವರು. ಆದರೆ ಸಮಷ್ಟಿ ಸಂತರು ಮಾಡುತ್ತಿರುವ ಆಧ್ಯಾತ್ಮಿಕ ಸ್ತರದ ಉಪಾಯ ಗಳಿಂದಾಗಿ ಯುದ್ಧದ ತೀವ್ರತೆ ಕಡಿಮೆಯಾಗಿ ಶಾಂತಿಯ ಮಾರ್ಗವು ಸಿಗಲಿದೆ. ಇಂತಹ ಪ್ರಕ್ರಿಯೆಯು ನಿರಂತರವಾಗಿ ನಡೆಯುವುದರಿಂದ ಜಗತ್ತಿನಲ್ಲಿ ಅಸ್ಥಿರತೆಯ ವಾತಾವರಣ ನಿರ್ಮಾಣವಾಗಿ, ಅದರ ಪರಿಣಾಮವನ್ನು ಕೋಟ್ಯಂತರ ಜನರು ಅನುಭವಿಸಬೇಕಾಗುವುದು. ಇದೇ ಘಟನಾವಳಿಗಳ ಕಾಲದಲ್ಲಿ, ಹಿಂದೂ ಸಮಾಜದ ಬಹುಸಂಖ್ಯಾತ ಜನರ ಮನಸ್ಸು ಮತ್ತು ಬುದ್ಧಿಯ ಮೇಲಿರುವ ತೊಂದರೆದಾಯಕ ಶಕ್ತಿಯ ಆವರಣವು ನಾಶವಾಗುವುದರಿಂದ, ಅವರು ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಒತ್ತಾಯಿಸುವರು. ಆ ಸಮಯದಲ್ಲಿ ದೇವತೆಗಳೂ ಆಡಳಿತಾ ರೂಢ ನಾಯಕರಿಗೆ ಬುದ್ಧಿಯನ್ನು ನೀಡುವುದರಿಂದ, ಪ್ರತ್ಯಕ್ಷ ಯುದ್ಧಕಾಲದಲ್ಲೇ ಭಾರತದಲ್ಲಿ ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು. ಮುಂದಿನ ಕೆಲವು ವರ್ಷಗಳಲ್ಲಿ ಅದು ಆಧ್ಯಾತ್ಮಿಕ ಸ್ತರದ ಹಿಂದೂ ರಾಷ್ಟ್ರವಾಗಿ ರೂಪಾಂತರಗೊಳ್ಳಲಿದೆ.

೭. ಯುದ್ಧದ ಅಂತ್ಯದ ಕಾಲಾಧಿಯಲ್ಲಿ ‘ಪಿತೃಗಳಿಗೆ ಗತಿ ನೀಡುವುದು ಮತ್ತು ಕೆಟ್ಟ ಶಕ್ತಿಗಳ ತೊಂದರೆಯಿಂದ ರಕ್ಷಿಸುವುದು’ ಇವುಗಳಿಗಾಗಿ ಸಮಷ್ಟಿ ಸಂತರು ಸಮಾಜದಿಂದ ಧರ್ಮಾಚರಣೆಯನ್ನು ಮಾಡಿಸಿಕೊಳ್ಳಬೇಕಾಗುವುದು

ಪ್ರತ್ಯಕ್ಷ ಯುದ್ಧವು ಮುಕ್ತಾಯದ ಹಂತಕ್ಕೆ ತಲುಪುತ್ತಿರುವಾಗ, ಯುದ್ಧದಲ್ಲಿ ಮೃತರಾದ ಜೀವಗಳು ಪೂರ್ವಜರ ರೂಪದಲ್ಲಿ ಮತ್ತು ಕೆಟ್ಟ ಶಕ್ತಿಗಳಾಗಿ ಬದಲಾಗುವರು. ಈ ಕೆಟ್ಟ ಶಕ್ತಿಗಳ ತೊಂದರೆಯಿಂದಾಗಿ ಜಗತ್ತಿನಾದ್ಯಂತ ಸಾಧನೆಯನ್ನು ಮಾಡದ ಜನರ ಆಧ್ಯಾತ್ಮಿಕ ತೊಂದರೆಗಳು ಬಹಳಷ್ಟು ಹೆಚ್ಚಾಗುತ್ತವೆ. ಇಂತಹ ಸಮಯದಲ್ಲಿ ಸಮಷ್ಟಿ ಸಂತರು ಈ ಪೂರ್ವಜರಿಗೆ ಮತ್ತು ಕೆಟ್ಟ ಶಕ್ತಿಗಳಾದ ಜೀವಗಳಿಗೆ ಗತಿ ನೀಡಲು ಹಾಗೂ ಅವುಗಳ ತೊಂದರೆಯಿಂದ ಸಮಷ್ಟಿಯನ್ನು ರಕ್ಷಿಸಲು ‘ಯಜ್ಞ, ಸಾಮೂಹಿಕ ಶ್ರಾದ್ಧ ವಿಧಿ, ಶ್ರೀ ದತ್ತಾತ್ರೇಯರ ಸಾಮೂಹಿಕ ನಾಮಜಪ’ ಮುಂತಾದ ವಿವಿಧ ಪ್ರಯತ್ನಗಳನ್ನು ಸಮಷ್ಠಿಯಿಂದ ಮಾಡಿಸಿಕೊಳ್ಳಬೇಕಾಗಬಹುದು. ಸಾಧನೆಯನ್ನು ಮಾಡದ ಕೆಲವು ಜೀವಗಳು ದೊಡ್ಡ ಕೆಟ್ಟ ಶಕ್ತಿಗಳಾಗಿ ಇಡೀ ಜಗತ್ತಿಗೆ ತೊಂದರೆ ನೀಡಲು ಪ್ರಯತ್ನಿಸಬಹುದು. ಅವರೊಂದಿಗೆ ‘ಪರಾತ್ಪರ ಗುರು’ ಮಟ್ಟದ ಸಮಷ್ಟಿ ಸಂತರು, ಅಂದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸೂಕ್ಷ್ಮದಲ್ಲಿ ಯುದ್ಧ ಮಾಡುವರು. ಈ ಕಾಲದಲ್ಲಿ ಹೆಚ್ಚಿದ ಆಧ್ಯಾತ್ಮಿಕ ತೊಂದರೆಯನ್ನು ದೂರ ಮಾಡಲು ಸಂತರು ಮಾಡುತ್ತಿರುವ ಪ್ರಯತ್ನಗಳಿಂದ ಸಮಾಜಕ್ಕೆ ಧರ್ಮಾಚರಣೆಯ ಮಹತ್ವವು ಮನವರಿಕೆಯಾಗುವುದು ಮತ್ತು ಜನರು ಅಧ್ಯಾತ್ಮವನ್ನು ಸ್ವೀಕರಿಸುವ ಹಂತಕ್ಕೆ ಬರುವರು. ಸಮಾಜಕ್ಕೆ ಅಧ್ಯಾತ್ಮಶಾಸ್ತ್ರವನ್ನು ಕಲಿಸುವ ಕಾರ್ಯವನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಮಾಡುವುದು. ಇದರಿಂದ ಆಧ್ಯಾತ್ಮಿಕ ಹಿಂದೂ ರಾಷ್ಟ್ರದ ನಿರ್ಮಿತಿಯ ಪ್ರಕ್ರಿಯೆಗೆ ವೇಗ ದೊರೆಯುವುದು.

೮. ಸರಿಯಾದ ಕ್ರಿಯಮಾಣದ ಮೇಲೆ, ಅಂದರೆ ಸಾಧನೆಯ ಮೇಲೆ ಮೂರನೇ ಮಹಾಯುದ್ಧದ ಪರಿಣಾಮವು ಅವಲಂಬಿಸಿದೆ

ಮಹಾಯುದ್ಧದ ಕಾಲವು ನ್ಯಾಯತತ್ತ್ವ್ವಕ್ಕೆ ಸಂಬಂಧಿಸಿದ್ದು, ಅದಕ್ಕೆ ನ್ಯಾಯದ ದೇವತೆಯಾಗಿರುವ ಶನಿದೇವನ ಅಧಿಷ್ಠಾನ ಇರುತ್ತದೆ. ಆದ್ದರಿಂದ ಈ ಕಾಲದಲ್ಲಿ ಮಾಡಿದ ಕರ್ಮಗಳ ಫಲವು ತಕ್ಷಣವೇ ದೊರೆತು ಅದರಿಂದ ಅಧೋಗತಿ ಅಥವಾ ಉನ್ನತಿಯಾಗುವುದು. ಮಹಾಭಾರತದ ಯುದ್ಧದ ಸಮಯದಲ್ಲಿ ಅದರಲ್ಲಿ ಭೀಷ್ಮರಂತಹ ಜ್ಞಾನಿ ಮತ್ತು ತಪಸ್ವಿಗಳೂ ಅಧರ್ಮದ ಪಕ್ಷದಲ್ಲಿದ್ದುದರಿಂದ ಅವರು ಸೋಲನ್ನು ಅನುಭವಿಸಬೇಕಾಯಿತು. ಇದಕ್ಕೆ ವಿರುದ್ಧವಾಗಿ, ಭೀಮನ ಪುತ್ರ ಘಟೋತ್ಕಚನು ರಾಕ್ಷಸ ನಾಗಿದ್ದರೂ ಧರ್ಮದ ಪರವಾಗಿ ಹೋರಾಡಿದ್ದರಿಂದ ಅವನಿಗೆ ಸದ್ಗತಿ ದೊರೆಯಿತು. ಅದೇ ರೀತಿ, ಮೂರನೇ ಮಹಾಯುದ್ಧದ ಆಪತ್ಕಾಲದಲ್ಲಿ ‘ಜೀವದ ಆಧ್ಯಾತ್ಮಿಕ ಮಟ್ಟ ಎಷ್ಟಿದೆ ?’ ಎಂಬುದಕ್ಕೆ ತುಲನಾತ್ಮಕವಾಗಿ ಗೌಣ ಮಹತ್ವವಿದ್ದು, ‘ಅವನ ಕ್ರಿಯಮಾಣವು ಸರಿಯಿದೆಯೇ ಅಥವಾ ತಪ್ಪಿದೆಯೇ ?’ ಎಂಬುದರ ಆಧಾರದ ಮೇಲೆ ಅವನಿಗೆ ಫಲ ಸಿಗಲಿದೆ. ಇಲ್ಲಿ ಸರಿಯಾದ ಕ್ರಿಯಮಾಣ ಎಂದರೆ ಸಮಷ್ಟಿ ಸಂತರ ಮಾರ್ಗದರ್ಶನದಂತೆ ಮತ್ತು ಕಾಲಕ್ಕನುಗುಣವಾಗಿ ಸಾಧನೆ ಮಾಡುವುದು. ಮೂರನೇ ಮಹಾಯುದ್ಧದ ಆಪತ್ಕಾಲದಲ್ಲಿ ಸಮಾಜದ ಕೆಲವು ವ್ಯಷ್ಟಿ ಸಂತರು ಸಹ ತಪ್ಪು ವಿಚಾರಧಾರೆಗೆ ಬಲಿಯಾಗಿ ವರ್ತಿಸುವುದರಿಂದ ಅವರ ಆಧ್ಯಾತ್ಮಿಕ ಮಟ್ಟವು ಕಡಿಮೆಯಾಗಿ ಅವರು ಆಪತ್ಕಾಲದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ, ಆದರೆ ಸಮಷ್ಟಿ ಸಾಧನೆ ಮಾಡುವ ಕೆಲವು ಭಕ್ತರು ನಿಷ್ಠೆಯಿಂದ ಪ್ರಯತ್ನಿಸುವುದರಿಂದ ಅವರಿಗೆ ಭಗವಂತನ ಕೃಪೆ ಲಭಿಸಿ ಅವರ ಉದ್ಧಾರವಾಗುವುದು.

೯. ಮಹಾಭಾರತಕ್ಕೆ ಸಾಮ್ಯವಿರುವ ಕೃತಿಗಳನ್ನು ಕಲಿಯುಗದಲ್ಲಿ ಸ್ಥೂಲದಲ್ಲಿ ಮಾಡುವ ಬಗ್ಗೆ ಮಹರ್ಷಿಗಳು ನಾಡಿಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ

ಈ ರೀತಿ ಮಹಾಭಾರತಕ್ಕೆ ಸಾಮ್ಯವಿರುವ ಕೃತಿಗಳನ್ನು ಕಲಿಯುಗದಲ್ಲಿ ಸ್ಥೂಲದಲ್ಲಿ ಮಾಡುವ ಬಗ್ಗೆ ಮಹರ್ಷಿಗಳು ನಾಡಿಪಟ್ಟಿಗಳಲ್ಲಿ ಉಲ್ಲೇಖಿಸಿದ್ದಾರೆ. ಈ ಮಾಧ್ಯಮದಿಂದ ಸಮಾಜಕ್ಕೆ ಮುಂದಿನ ಸಂಕೇತವು ಲಭಿಸುತ್ತಿದೆ,

‘ಭಗವಾನ ಶ್ರೀಕೃಷ್ಣನು ಮಹಾಭಾರತ ಯುದ್ಧದಲ್ಲಿ ಪ್ರತ್ಯಕ್ಷದಲ್ಲಿ ಯುದ್ಧವನ್ನು ಮಾಡಲಿಲ್ಲ; ಆದರೆ ಸೂಕ್ಷ್ಮ ರೂಪದಲ್ಲಿ ಎಲ್ಲಾ ದೊಡ್ಡ ಕೆಟ್ಟ ಶಕ್ತಿಗಳನ್ನು ನಾಶಪಡಿಸಿದ ಮತ್ತು ಸ್ಥೂಲದಿಂದ ಅರ್ಜುನನಿಗೆ ಮಾರ್ಗದರ್ಶನ ಮಾಡಿದ್ದನು. ಅದೇ ರೀತಿ ಆಧ್ಯಾತ್ಮಿಕ ಸ್ತರದ ಯುದ್ಧವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೋರಾಡುತ್ತಿದ್ದು, ಇದರ ಪ್ರತಿಧ್ವನಿಯು ಶೀಘ್ರದಲ್ಲೇ ಸ್ಥೂಲದಲ್ಲಿ (ಭೂಮಿಯ ಮೇಲೆ) ಕಂಡುಬಂದು ಸ್ಥೂಲದಲ್ಲಿ ಯುದ್ಧವು ಸಂಭವಿಸಲಿದೆ. ಆ ಯುದ್ಧದಲ್ಲಿ ಯಾರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಶರಣಾಗುತ್ತಾರೋ, ಅವರಿಗೆ ಆಪತ್ಕಾಲದ ಸ್ಥೂಲ ಯುದ್ಧದಲ್ಲಿ ಆಧ್ಯಾತ್ಮಿಕ ಗತಿ ಅಥವಾ ವಿಜಯವು ಲಭಿಸಲಿದೆ ಮತ್ತು ಸಾತ್ತ್ವಿಕ ಜನರ ವಿಜಯವಾಗಿ ಧರ್ಮಸಂಸ್ಥಾಪನೆಯ ಕಾರ್ಯವು ನಡೆಯಲಿದೆ.’

೧೦. ಕೃತಜ್ಞತೆ ಮತ್ತು ಪ್ರಾರ್ಥನೆ

ಶಿಷ್ಯರಿಗೆ ಗುರುಗಳ ಮೇಲೆ ಎಂತಹ ಶ್ರದ್ಧೆ ಮತ್ತು ಭಕ್ತಿ ಇರಬೇಕೆಂದರೆ, ಶಿಷ್ಯರು ವರ್ತಮಾನ ಕಾಲದಲ್ಲಿದ್ದು ಪ್ರತಿಯೊಂದು ಪರಿಸ್ಥಿತಿಯನ್ನು ಸ್ವೀಕರಿಸಿ ಜೀವಿಸಬೇಕು. ಶಿಷ್ಯನಲ್ಲಿ ಅಂತಹ ಭಕ್ತಿ ಇಲ್ಲದಿದ್ದರೂ, ‘ಶಿಷ್ಯನಿಗೆ ಆಧ್ಯಾತ್ಮಿಕ ಹಾನಿಯಾಗಬಾರದು’ ಎಂಬ ಕಾರಣಕ್ಕಾಗಿ ಗುರುಗಳು ಅವನಿಗೆ ಮುಂದಿನ ಆಪತ್ಕಾಲದ ಬಗ್ಗೆ ತಿಳಿಸಿ ಅವನನ್ನು ಸಿದ್ಧಗೊಳಿಸುತ್ತಾರೆ. ‘ಶ್ರೀ ಗುರುಗಳ ಕೃಪೆಯಿಂದಲೇ ಈ ಜ್ಞಾನ ಪಡೆಯಲು ಸಾಧ್ಯವಾಯಿತು’, ಇದಕ್ಕಾಗಿ ಕೋಟಿ ಕೋಟಿ ಕೃತಜ್ಞತೆಗಳು ! (ಮುಕ್ತಾಯ)

– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೩), ಫೋಂಡಾ, ಗೋವಾ. (೨೮.೯.೨೦೨೫)

  • ಸೂಕ್ಷ್ಮ-ಜಗತ್ತು : ಯಾವುದು ಸ್ಥೂಲ ಪಂಚಜ್ಞಾನೇಂದ್ರಿಯಗಳಿಗೆ (ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿಗಳಿಗೆ) ತಿಳಿಯುವುದಿಲ್ಲವೋ; ಆದರೆ ಯಾವುದರ ಅಸ್ತಿತ್ವದ ಜ್ಞಾನವು ಸಾಧನೆ ಮಾಡುವವನಿಗೆ ಆಗುತ್ತದೆಯೋ, ಅದನ್ನು ‘ಸೂಕ್ಷ್ಮ-ಜಗತ್ತು’ ಎಂದು ಕರೆಯುತ್ತಾರೆ.
  • ಸೂಕ್ಷ್ಮ-ಪರೀಕ್ಷಣೆ : ಯಾವುದಾದರೂ ಘಟನೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅನಿಸುತ್ತದೆಯೋ, ಅದನ್ನು ‘ಸೂಕ್ಷ್ಮ-ಪರೀಕ್ಷಣೆ’ ಎನ್ನುತ್ತಾರೆ.