
೧. ಉದಕುಂಭದ (ಉದಕಕುಂಭದ) ದಾನ
ಈ ದಿನ ದೇವರನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಬ್ರಾಹ್ಮಣರಿಗೆ ಉದಕಕುಂಭವನ್ನು ದಾನ ಮಾಡಬೇಕು. ಉದಕಕುಂಭವನ್ನೇ ‘ಸರ್ವ ಸಮಾವೇಶಕ ಸ್ತರದಲ್ಲಿನ ನಿರ್ಗುಣಪಾತ್ರೆ’ ಎನ್ನುತ್ತಾರೆ.
೨. ಉದ್ದೇಶ
ಅ. ಉದಕಕುಂಭದ ದಾನ, ಅಂದರೆ ಕುಂಭದಲ್ಲಿನ ಜಲವನ್ನು ಪವಿತ್ರವೆಂದು ಭಾವಿಸಿ ತನ್ನ ಎಲ್ಲ ರೀತಿಯ ದೇಹಸದೃಶ, ಹಾಗೆಯೇ ಕರ್ಮ ಸದೃಶ ವಾಸನೆಗಳ ಸ್ಥೂಲ ಹಾಗೂ ಸೂಕ್ಷ್ಮಲಹರಿಗಳನ್ನು ಅದರಲ್ಲಿ ವಿಸರ್ಜಿಸುವುದು ಮತ್ತು ಈ ರೀತಿಯಲ್ಲಿ ತನ್ನ ದೇಹವನ್ನು ಆಸಕ್ತಿರಹಿತ ಕರ್ಮದಿಂದ ಶುದ್ಧಗೊಳಿಸಿ ಅನಂತರ ಉದಕಕುಂಭದ ಮೂಲಕ ಎಲ್ಲ ವಾಸನೆಗಳನ್ನು ಪಿತೃಗಳ ಮತ್ತು ದೇವರ ಚರಣಗಳಲ್ಲಿ ಬ್ರಾಹ್ಮಣರ ಮೂಲಕ ಅರ್ಪಿಸುವುದು
ಆ. ಪಿತೃಗಳು ಮಾನವಯೋನಿಗೆ ಸಂಬಂಧಿಸಿದ್ದಾರೆ. ಅವರ ಚರಣಗಳಲ್ಲಿ ಉದಕಕುಂಭವನ್ನು ದಾನ ನೀಡುವುದರಿಂದ ಅವರು ನಮ್ಮ ಸ್ಥೂಲ ವಾಸನೆ ಗಳನ್ನು ನಾಶಪಡಿಸುತ್ತಾರೆ.
ಇ. ದೇವರ ಕೃಪಾಶೀರ್ವಾದವು ಪ್ರಾರಬ್ಧಜನ್ಯ ಸೂಕ್ಷ್ಮ ಕರ್ಮದಲ್ಲಿನ ಪಾಪಗಳು ನಾಶಪಡಿಸುವುದರಿಂದ ಸೂಕ್ಷ್ಮ ಕರ್ಮಜನ್ಯ ವಾಸನೆಗಳು ದೇವರ ಚರಣಗಳಲ್ಲಿ ಈ ದಾನದ ಮೂಲಕ ಅರ್ಪಿಸಲಾಗುತ್ತದೆ.
೩. ಉದಕುಂಭ ದಾನದ ಮಂತ್ರ
ಬ್ರಾಹ್ಮಣರಿಗೆ ಉದಕುಂಭದ ದಾನವನ್ನು ನೀಡುವಾಗ ಮುಂದಿನ ಮಂತ್ರವನ್ನು ಹೇಳಬೇಕು.
ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |
ಅಸ್ಯ ಪ್ರದಾನಾತ್ ತೃಪ್ಯನ್ತು ಪಿತರೋಽಪಿ ಪಿತಾಮಹಾಃ ||
ಗನ್ಧೋದಕತಿಲೈರ್ಮಿಶ್ರಂ ಸಾನ್ನಂ ಕುಮ್ಭಂ ಫಲಾನ್ವಿತಮ್ |
ಪಿತೃಭ್ಯಃ ಸಮ್ಪ್ರದಾಸ್ಯಾಮಿ ಅಕ್ಷಯ್ಯಮುಪತಿಷ್ಠತು ||
– ಧರ್ಮಸಿನ್ಧು
ಅರ್ಥ : ಬ್ರಹ್ಮ, ವಿಷ್ಣು ಮತ್ತು ಶಿವ ಇವರು ಯಾವುದರಲ್ಲಿ ಸಮಾವಿಷ್ಟವಾಗಿದ್ದಾರೆಯೋ, ಅಂತಹ ಈ ಧರ್ಮಕುಂಭವನ್ನು ನಾನು ಬ್ರಾಹ್ಮಣನಿಗೆ ದಾನ ನೀಡಿದ್ದೇನೆ. ದಾನದಿಂದ ನನ್ನ ಪಿತೃಗಳು ಮತ್ತು ದೇವತೆಗಳು ತೃಪ್ತರಾಗಲಿ. ಗಂಧ, ಉದಕ, ಎಳ್ಳು, ಜವೆಗೋದಿ, ಹಣ್ಣುಗಳಿಂದ ತುಂಬಿದ ಈ ಕುಂಭವನ್ನು ನಾನು ಪಿತೃಗಳಿಗೆ ನೀಡುತ್ತಿದ್ದೇನೆ. ಈ ಕುಂಭವು ನನಗೆ ನಿರಂತರ ಅಕ್ಷಯವಾಗಿರಲಿ (ಎಂದಿಗೂ ನಾಶವಾಗದಿರಲಿ.)
೪. ಶಾಸ್ತ್ರ
ಈ ದಿನದಂದು ಬ್ರಹ್ಮಾಂಡದಲ್ಲಿ ಅಖಂಡ ರೂಪದಲ್ಲಿನ ಹಾಗೂ ಏಕಸಮಾನ ಗತಿಶೀಲತೆಯನ್ನು ತೋರಿಸುವ ಸತ್ತ್ವ-ರಜ ಲಹರಿಗಳ ಪ್ರಭಾವವು ಹೆಚ್ಚು ಪ್ರಮಾಣದಲ್ಲಿರುವುದರಿಂದ ಲಹರಿಗಳ ಪ್ರವಾಹಯೋಗದಿಂದ ಪಿತೃಗಳಿಗೆ ಮತ್ತು ದೇವರನ್ನು ಉದ್ದೇಶಿಸಿ ಬ್ರಾಹ್ಮಣರಿಗೆ ನೀಡಿದ ದಾನವು ಪುಣ್ಯದಾಯಕವಾಗಿರುತ್ತದೆ. ಹಿಂದಿನ ಜನ್ಮದ ಕೊಡುಕೊಳ್ಳುವ ಲೆಕ್ಕಾಚಾರಕ್ಕೆ ಅನುಗುಣವಾಗಿ ಕರ್ಮ-ಅಕರ್ಮಗಳು ನಿರ್ಧಾರ ವಾಗುವುದರಿಂದ ಕ್ಷಯವಾಗದಿರುವ ಲಹರಿಗಳ ಸಹಾಯದಿಂದ ಮಾಡಿದ ದಾನವು ಅತ್ಯಂತ ಮಹತ್ವದ್ದಾಗಿರುತ್ತದೆ. – ಜ್ಯೋತಿಷಿ ರಾಹುಲ ನಾರಾಯಣರಾವ ಪುರಾಣಿಕ ಮತ್ತು ಜ್ಯೋತಿಷಿ ಆಕಾಶ ನಾರಾಯಣರಾವ ಪುರಾಣಿಕ, ಜಾಲನಾ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ಭಕ್ತಿಯ ಪ್ರಸಾರ ಮಾಡಿದ ರಾಮಾನುಜಾಚಾರ್ಯರು !
ಅಸಾಮಾನ್ಯ ಮೇಧಾವಿ ಮತ್ತು ಸ್ಮರಣಶಕ್ತಿಯ ಆದಿ ಶಂಕರಾಚಾರ್ಯರು !
ಪರಶುರಾಮ ಜಯಂತಿ (ಏಪ್ರಿಲ್ ೧೯)