
ಸದ್ಯ ಪಾಕಿಸ್ತಾನ-ಅಫ್ಘಾನಿಸ್ತಾನ, ಇರಾನ್-ಅಮೇರಿಕಾ ಮತ್ತು ಇಸ್ರೈಲ್, ರಶಿಯಾ-ಉಕ್ರೇನ್ ಇವುಗಳ ನಡುವೆ ಯುದ್ಧದ ಕಿಡಿ ಹೊತ್ತಿದೆ. ಇತರೆ ಸಣ್ಣ ದೊಡ್ಡ ದೇಶಗಳಲ್ಲಿಯೂ ಯುದ್ಧ ನಡೆಯುತ್ತಲೇ ಇದೆ. ಒಟ್ಟಾರೆ ಪರಿಸ್ಥಿತಿಯನ್ನು ನೋಡಿದರೆ, ಭಾರತವೂ ಈ ಯುದ್ಧದಲ್ಲಿ ಯಾವಾಗ ಬೇಕಾದರೂ ಧುಮುಕಬೇಕಾಗಬಹುದು ಅಥವಾ ಕನಿಷ್ಠ ಸ್ವರಕ್ಷಣೆಗಾಗಿಯಾದರೂ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕಾಗಬಹುದು. ಒಟ್ಟಾರೆಯಾಗಿ ಹೇಳುವುದಾದರೆ, ಮೂರನೇ ಮಹಾಯುದ್ಧ ಯಾವಾಗ ಪ್ರಾರಂಭವಾಗುತ್ತದೆಯೆಂದು ಹೇಳಲು ಸಾಧ್ಯವಿಲ್ಲ. ಬದಲಾಗಿ ‘ಪ್ರಾರಂಭವಾಗಿದೆ’ ಎಂದು ಹೇಳಲೂ ಅಭ್ಯಂತರವಿಲ್ಲ. ಈ ಯುದ್ಧದ ಪರಿಸ್ಥಿತಿಯಲ್ಲಿ ಭಾರತ ಸರಕಾರ ಮತ್ತು ಸೈನ್ಯವು ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತವೆ ಇದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಸಂದರ್ಭದಲ್ಲಿ ರಾಷ್ಟ್ರದ ನಾಗರಿಕರಾಗಿ ಕೆಲವು ಪ್ರಮುಖ ವಿಷಯಗಳನ್ನು ಪಾಲಿಸುವ ಮೂಲಕ ನಾವು ನಮ್ಮ ಸರಕಾರದ ಬೆನ್ನಿಗೆ ದಿಟ್ಟವಾಗಿ ನಿಲ್ಲುವುದು ಮತ್ತು ಸೈನ್ಯದ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಪ್ರಯತ್ನಿಸುವುದು ಅತ್ಯಗತ್ಯವಾಗಿದೆ. ಆ ಪ್ರಯತ್ನಗಳೆಂದರೆ ನಿಖರವಾಗಿ ಏನು ಮಾಡಬೇಕು ಎನ್ನುವುದನ್ನು ನಾವು ಎಲ್ಲೋ ಓದಿರಬಹುದು ಅಥವಾ ಕೇಳಿರಬಹುದು. ಅಂತಹ ಕೆಲವು ಅಂಶಗಳನ್ನು ಈ ಲೇಖನದಲ್ಲಿ ಮೆಲುಕು ಹಾಕುತ್ತಿದ್ದೇವೆ.
ಪರಸ್ಪರರಲ್ಲಿನ ವಿವಾದಗಳನ್ನು ಮರೆತು ಸಂಘಟಿತರಾಗಿ ಶತ್ರುವನ್ನು ಎದುರಿಸುವುದು ಆವಶ್ಯಕ
ದೇಶ ಸಂಕಟದಲ್ಲಿರುವಾಗ ನಾಗರಿಕರು ಹೇಗೆ ನಡೆದು ಕೊಳ್ಳಬೇಕು ಎಂಬ ಬಗ್ಗೆ ಹಿಂದೂ ಧರ್ಮಶಾಸ್ತ್ರದಲ್ಲಿ ಅತ್ಯಂತ ಸ್ಪಷ್ಟವಾದ ಮಾರ್ಗದರ್ಶಕ ವಿಚಾರಗಳನ್ನು ಮಂಡಿಸಲಾಗಿದೆ. ಮಹಾಭಾರತ ಕಾಲದಲ್ಲಿ ಪಾಂಡವರು ವನವಾಸದಲ್ಲಿರುವಾಗ ಕೌರವರು ಅವರನ್ನು ಅಣಕಿಸಲು ಹುಡುಕಿಕೊಂಡು ಅರಣ್ಯಕ್ಕೆ ಬಂದಿದ್ದರು. ಒಂದೆಡೆ ಗಂಧರ್ವರು ವಿಹರಿಸುವಾಗ ಕೌರವರು ಅವರೊಂದಿಗೆ ವಾದಕ್ಕಿಳಿದರು. ಆಗ ಚಿತ್ರಸೇನ ಗಂಧರ್ವನು ಕೌರವರನ್ನು ಕಟ್ಟಿಹಾಕಿದನು. ಈ ಕಠಿಣ ಪ್ರಸಂಗದಲ್ಲಿ ಕೌರವ ಸೇನೆಯು ಪಾಂಡವರ ಸಹಾಯವನ್ನು ಯಾಚಿಸಿದಾಗ, ಧರ್ಮರಾಜ ಯುಧಿಷ್ಠಿರನು ಭೀಮ ಮತ್ತು ಅರ್ಜುನರನ್ನು ಗಂಧರ್ವರೊಂದಿಗೆ ಹೋರಾಡಲು ಕಳುಹಿಸಿದನು ಮತ್ತು ಕೌರವರನ್ನು ಬಿಡಿಸಿದನು. ಆಗ ಯುಧಿಷ್ಠರನು ಭೀಮ ಮತ್ತು ಅರ್ಜುನರಿಗೆ ದೃಷ್ಟಿಕೋನವನ್ನು ನೀಡುತ್ತಾ, ಹೀಗೆ ಹೇಳಿದನು, ‘ವಯಮ್ ಪಂಚಾಧಿಕಮ್ ಶತಮ್’ ಅಂದರೆ ನಮ್ಮೊಳಗೆ ವಾದವಿದ್ದಾಗ ನಾವು ೫ ಪಾಂಡವರು ಮತ್ತು ಅವರು ೧೦೦ ಕೌರವರು ಬೇರೆ ಬೇರೆ; ಆದರೆ ಯಾವುದೇ ಬಾಹ್ಯ ಶತ್ರು ದಾಳಿ ಮಾಡಿದಾಗ, ನಾವು ಒಟ್ಟು ೧೦೫ ಜನರಾಗಿದ್ದೇವೆ’. ಈ ತತ್ತ್ವದಂತೆ ಇಂದು ನಮಗೆ ಎಷ್ಟೇ ಆಂತರಿಕ ವಿವಾದಗಳಿದ್ದರೂ, ಈ ವಿವಾದಗಳ ಲಾಭವನ್ನು ಶತ್ರುಗಳು ಪಡೆಯದಂತೆ ನೋಡಿಕೊಳ್ಳುವುದು ಸೂಕ್ತವಾಗಿರುತ್ತದೆ. ಈ ದೃಷ್ಟಿಯಿಂದ ನಾಗರಿಕರು ತಮ್ಮ ಮನೆಗಳ ವಿವಾದಗಳನ್ನು ಮರೆತು ಇಡೀ ಸಮಾಜವು ಒಂದು ವಜ್ರಮುಷ್ಟಿಯಂತೆ ಎದುರಿಸಬೇಕು. ಯುದ್ಧಕಾಲದಲ್ಲಿ ನಾಗರಿಕರು ‘ಸಮಾಜದಲ್ಲಿ ಒಡಕು ಉಂಟಾಗುವ’ ಯಾವುದೇ ಕೃತ್ಯವನ್ನು ಮಾಡಬಾರದು. ಬದಲಿಗೆ ಎಲ್ಲರ ಕಲ್ಯಾಣಕ್ಕಾಗಿ ಒಗ್ಗೂಡಿ ಕೊಡುಗೆ ನೀಡಬೇಕು. ‘ನಾವೆಲ್ಲರೂ ಒಟ್ಟಾಗಿ ನಡೆಯೋಣ. ಒಮ್ಮತದಿಂದ ಮಾತಾಡೋಣ ಮತ್ತು ಎಲ್ಲರ ವಿಚಾರಗಳು ಒಂದೇ ಆಗಿರಲಿ’ ಎಂಬ ಆಚರಣೆಯು ಅಪೇಕ್ಷಿತವಾಗಿದೆ. ಈ ದೃಷ್ಟಿಯಿಂದ ಯುದ್ಧಕಾಲದಲ್ಲಿ ಜಾತಿ ಧರ್ಮ ಮರೆತು ಒಬ್ಬ ‘ಭಾರತೀಯ’ನಾಗಿ ಒಂದಾಗುವುದು ಆವಶ್ಯಕವಾಗಿದೆ.
ವೈಯಕ್ತಿಕ ಹಿತಕ್ಕಿಂತ ರಾಷ್ಟ್ರಹಿತಕ್ಕೆ ಆದ್ಯತೆ ನೀಡಬೇಕು
ರಾಷ್ಟ್ರದ ಮೇಲೆ ಸಂಕಟ ಬಂದಾಗ ವೈಯಕ್ತಿಕ ಹಿತಕ್ಕಿಂತ ‘ರಾಷ್ಟ್ರಹಿತವೇ ಸರ್ವೋಚ್ಚ’ ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ನಮ್ಮ ಸಣ್ಣ ಪುಟ್ಟ ಬೇಡಿಕೆಗಳನ್ನು ತಾತ್ಕಾಲಿಕವಾಗಿ ಬದಿಗಿಡಬೇಕು; ಏಕೆಂದರೆ ಆ ಬೇಡಿಕೆಗಳ ಹೆಚ್ಚುವರಿ ಮಾನಸಿಕ ಹೊರೆ ಸರಕಾರದ ಮೇಲೆ ಬೀಳಬಹುದು. ಹಿಂದೂ ದರ್ಶನದ ಪ್ರಕಾರ ‘ವ್ಯಕ್ತಿಯು ಸಮಾಜದ ಒಂದು ಸಣ್ಣ ಭಾಗ. ಒಂದು ವೇಳೆ ಸಮಾಜ ಅಥವಾ ರಾಷ್ಟ್ರವೇ ಸುರಕ್ಷಿತವಾಗಿರದಿದ್ದರೆ, ವ್ಯಕ್ತಿಯ ಸ್ವಾರ್ಥವು ಎಂದಿಗೂ ಪೂರ್ಣಗೊಳ್ಳಲು ಸಾಧ್ಯವಿಲ್ಲ’. ಉದಾಹರಣೆಗೆ ಒಂದು ನೌಕೆಗೆ ರಂಧ್ರ ಬಿದ್ದರೆ, ನೌಕೆಯಲ್ಲಿನ ಪ್ರಯಾಣಿಕರು ತಮ್ಮ ಸಾಮಾನುಗಳನ್ನು ಉಳಿಸಿಕೊಳ್ಳುವ ಬದಲು ಮೊದಲು ಆ ರಂಧ್ರವನ್ನು ಮುಚ್ಚಲು ಸಹಾಯ ಮಾಡುವುದು ಮುಖ್ಯವಾಗಿದೆ. ನೌಕೆಯು ಮುಳುಗಿದರೆ ಅವನ ಸಾಮಾನುಗಳೂ ಉಳಿಯುವುದಿಲ್ಲ. ಹಾಗೆಯೇ ರಾಷ್ಟ್ರವು ಸಂಕಟದಲ್ಲಿದ್ದರೆ ನಾಗರಿಕರ ಸಂಪತ್ತು ಮತ್ತು ಸುಖವು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ
‘ರಾಷ್ಟ್ರವು ಹೇಗೆ ಉಳಿಯುವುದು ?’
ಎಂಬ ವಿಚಾರವು ಮೊಟ್ಟ ಮೊದಲು ಮೂಡಬೇಕು. ನಮ್ಮ ವೈಯಕ್ತಿಕ ಸುಖ-ಸೌಲಭ್ಯ ಅಥವಾ ಭಯಕ್ಕಿಂತ ದೇಶದ ರಕ್ಷಣೆ ಮುಖ್ಯವಾಗಿದೆ. ಕಾರಣ ರಾಷ್ಟ್ರವು ಉಳಿದರೆ ನಾವು ನಮಗಾಗಿ ಯಾವಾಗ ಬೇಕಾದರೂ ಸಂಪತ್ತನ್ನು ಸಂಗ್ರಹಿಸಬಹುದು ಅಥವಾ ಸರಕಾರದ ಮುಂದೆ ನಮ್ಮ ಬೇಡಿಕೆಗಳಿಗಾಗಿ ನಂತರ ಯಾವಾಗ ಬೇಕಾದರೂ ಆಗ್ರಹಿಸಬಹುದು.
ಪ್ರತಿಯೊಬ್ಬರೂ ದೇಶಕ್ಕಾಗಿ ನಾನೇನು ಮಾಡಲೆಂದು ವಿಚಾರ ಮಾಡಬೇಕು !
ಕೆಲವರಿಗೆ ‘ನನ್ನ ವಯಸ್ಸು ಹೆಚ್ಚಾಗಿದೆ ಅಥವಾ ನನಗೆ ಅನಾರೋಗ್ಯವಿದೆ, ನನ್ನ ಶಾರೀರಿಕ ಕ್ಷಮತೆ ಇಲ್ಲ. ಹೀಗಿರುವಾಗ ನಾವು ದೇಶಕ್ಕಾಗಿ ಏನು ಮಾಡಲು ಸಾಧ್ಯ ?’ ಎಂದು ಅನಿಸಬಹುದು. ಇಂತಹ ಚಿಂತೆ ಮಾಡುವುದು ವ್ಯರ್ಥವಾಗಿದೆ. ನಾವು ನಮ್ಮ ದೇಶದ ಸೈನ್ಯ, ಸ್ವಂತ ದೇಶ, ದೇಶದ ನಾಗರಿಕರು, ದೇಶದ ಸಂಪತ್ತು ಸುರಕ್ಷಿತವಾಗಿರಲಿ ಮತ್ತು ಸೈನಿಕರಿಗೆ ಯುದ್ಧಕ್ಕಾಗಿ ಬಲ ಸಿಗಲಿ ಎಂದು ಭಗವಂತನ ಚರಣಗಳಲ್ಲಿ ಪ್ರಾರ್ಥನೆ ಮತ್ತು ನಾಮಜಪ ಮಾಡುವುದು ಅತಿ ದೊಡ್ಡ ಕೊಡುಗೆಯಾಗಿದೆ.
ಉಪಾಸನೆಯಿಂದ ಸೈನ್ಯ ಮತ್ತು ದೇಶಕ್ಕೆ ಆಧ್ಯಾತ್ಮಿಕ ಬಲ ದೊರೆತು ಭಗವಂತನ ಕೃಪೆಯಿಂದ ಅವರ ರಕ್ಷಣೆಯಾಗುವುದು
ನಮ್ಮ ಉಪಾಸನೆಯಿಂದ ಸೈನ್ಯ ಮತ್ತು ದೇಶಕ್ಕೆ ಆಧ್ಯಾತ್ಮಿಕ ಬಲ ಪ್ರಾಪ್ತಿಯಾಗಿ ಭಗವಂತನ ಕೃಪೆಯಿಂದ ಅವರ ರಕ್ಷಣೆಯಾಗುವುದು. ಅರ್ಥಾತ್ ಇದಕ್ಕಾಗಿ ನಾವು ಯುದ್ಧ ಆರಂಭವಾಗುವ ವರೆಗೆ ಕಾಯಬೇಕಾಗಿಲ್ಲ. ಈ ಕೊಡುಗೆಯನ್ನು ನಾವು ಇಂದಿನಿಂದಲ್ಲ, ಬದಲಾಗಿ ಈಗಿನಿಂದಲೇ ಆರಂಭಿಸಬಹುದು. ಎಷ್ಟೇ ಉಪಾಯ ಯೋಜನೆಗಳನ್ನು ಮಾಡಿದರೂ ಮತ್ತು ಕರ್ತವ್ಯಗಳನ್ನು ಪಾಲಿಸಲು ನಿರ್ಧರಿಸಿದರೂ, ಮಾನವನ ಪ್ರಯತ್ನಗಳಿಗೆ ಮಿತಿಗಳಿವೆ. ಕೇವಲ ಭಗವಂತನ ಕೃಪೆಯಿಂದಲೇ ನಮ್ಮ ರಕ್ಷಣೆ ಸಾಧ್ಯ. ಅದಕ್ಕಾಗಿ ಆತನ ಚರಣಗಳಲ್ಲ್ಲಿ ಪ್ರಾರ್ಥಿಸುವುದು ಮುಖ್ಯವಾಗಿದೆ.
ಸಮಾಜದ ಮನೋಬಲ ಕಾಪಾಡಿಕೊಳ್ಳುವುದು ಆವಶ್ಯಕ
ಯುದ್ಧಕಾಲದಲ್ಲಿ ದೇಶವು ಸಂಕಟದಲ್ಲಿದ್ದಾಗ ಪ್ರತಿಯೊಬ್ಬ ನಾಗರಿಕನು ತನಗೆ ವಹಿಸಿದ ಜವಾಬ್ದಾರಿಯನ್ನು, ಉದಾಹರಣೆಗೆ ವೈದ್ಯ, ಸೈನಿಕ, ರೈತ ಅಥವಾ ಸಾಮಾನ್ಯ ನಾಗರಿಕನಾಗಿ ಅಚ್ಚುಕಟ್ಟಾಗಿ ನಿಭಾಯಿಸುವುದೇ ಧರ್ಮವಾಗಿದೆ. ಸಂಕಟದ ಸಮಯದಲ್ಲಿ ಗೊಂದಲಕ್ಕೀಡಾಗದೆ ‘ರಾಷ್ಟ್ರಸೇವೆ’ಯೇ ತನ್ನ ಮುಖ್ಯ ಗುರಿ ಎಂದು ಭಾವಿಸಿ ಕಾರ್ಯನಿರ್ವಹಿಸಬೇಕು. ನಾವು ವಾಸಿಸುವ ಸಮಾಜದ ವಿವಿಧ ರೀತಿಯ ಋಣಗಳು ನಮ್ಮ ಮೇಲಿರುತ್ತವೆ. ಸಮಾಜ ಎಂದರೆ ನಮ್ಮ ದೊಡ್ಡ ಕುಟುಂಬವೇ ಆಗಿರುತ್ತದೆ. ಸಂಕಟದ ಸಮಯದಲ್ಲಿ ಮನೋಬಲ ಕುಸಿದು ಸಮಾಜವು ಧೈರ್ಯವನ್ನು ಕಳೆದುಕೊಳ್ಳುತ್ತದೆ. ತತ್ತರಿಸುತ್ತದೆ. ಆಗ ನಾವು ಸ್ವತಃ ಸ್ಥಿರವಾಗಿದ್ದು ಸಮಾಜಕ್ಕೆ ಧೈರ್ಯ ನೀಡಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಯಾವುದಾದರೊಂದು ಕೌಶಲ್ಯ ಇದ್ದೇ ಇರುತ್ತದೆ. ಯುದ್ಧಕಾಲದಲ್ಲಿ ಈ ಕೌಶಲ್ಯವನ್ನು ನಿಸ್ವಾರ್ಥವಾಗಿ ದೇಶಹಿತಕ್ಕಾಗಿ ಬಳಸಬೇಕು. ಉದಾಹರಣೆಗೆ ಯಾರಾದರೂ ರೋಗಿಗಳ ಶುಶ್ರೂಷೆ ಮಾಡುವ ಕೌಶಲ್ಯ ಹೊಂದಿದ್ದರೆ ಅವರು ಯುದ್ಧದಲ್ಲಿ ಗಾಯಗೊಂಡ ನಾಗರಿಕರಿಗೆ ಸಹಾಯ ಮಾಡಬೇಕು. ಕೆಲವರಿಗೆ ವಾಹನ ಚಾಲನೆ ತಿಳಿದಿರುತ್ತದೆ, ಅವರು ನಾಗರಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯಲು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ‘ವಸುಧೈವ ಕುಟುಂಬಕಮ್ (ಅರ್ಥ : ಪೃಥ್ವಿಯೇ ನನ್ನ ಕುಟುಂಬ)’ ಇದು ಭಾರತೀಯ ಸಂಸ್ಕ್ರತಿಯ ವೈಶಿಷ್ಟ್ಯವಾಗಿದೆ. ಹಾಗೆಯೇ ಒಬ್ಬರಿಗೊಬ್ಬರು ಸಹಾಯ ಮಾಡೋಣ. ಎಲ್ಲರೂ ಸನ್ಮಾರ್ಗದಲ್ಲಿ ನಡೆಯೋಣ ಎಂದೂ ಹೇಳಲಾಗಿದೆ.
ಈ ಎರಡೂ ವಚನಗಳಂತೆ ಸಮಾಜದ ಎಲ್ಲಾ ವರ್ಗದವರು ಪರಸ್ಪರ ಸಹಾಯ ಮಾಡಬೇಕು. ವೈದ್ಯರು, ರೈತರು, ಧಾನ್ಯ ವ್ಯಾಪಾರಿಗಳು ಮುಂತಾದವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಅನುಭವ ಹೊಂದಿರುತ್ತಾರೆ. ಇಂತಹವರು ತಮ್ಮ ಜ್ಞಾನವನ್ನು ಅಗತ್ಯವಿರುವವರ ಸಹಾಯಕ್ಕಾಗಿ ಬಳಸಬಹುದು. ಉದಾಹರಣೆಗೆ ವೈದ್ಯರು ಔಷಧೀಯ ಸಸ್ಯಗಳ ಬೆಳೆ ಬಗ್ಗೆ ರೈತರು ಹಣ್ಣ್ಣು, ತರಕಾರಿ ಮುಂತಾದ ಬೆಳೆಗಳ ಬಗ್ಗೆ ಮತ್ತು ಧಾನ್ಯದ ವ್ಯಾಪಾರಿಗಳು ಆಹಾರ ಧಾನ್ಯಗಳ ಉತ್ತಮ ಸಂಗ್ರಹಣೆಯ ಬಗ್ಗೆ ಅಗತ್ಯವಿರುವವರಿಗೆ ಮಾಹಿತಿ ನೀಡಬಹುದು.
ರಾಷ್ಟ್ರೀಯ ಸಂಪತ್ತನ್ನು ರಕ್ಷಿಸಬೇಕು !
ಯುದ್ಧಕಾಲದಲ್ಲಿ ದೇಶದ ಸಂಪತ್ತನ್ನು ರಕ್ಷಿಸುವುದು ಕೇವಲ ಸರಕಾರ ಅಥವಾ ಸೈನ್ಯದ ಜವಾಬ್ದಾರಿಯಲ್ಲ, ಬದಲಾಗಿ ಪ್ರತಿಯೊಬ್ಬ ನಾಗರಿಕನ ಹೊಣೆಯೂ ಆಗಿದೆ. ಆರ್ಯ ಚಾಣಕ್ಯರು ರಾಷ್ಟ್ರದ ಭದ್ರತೆಗೆ ಸರ್ವೋಚ್ಚ ಆದ್ಯತೆ ನೀಡಿದ್ದಾರೆ. ಅವರ ಪ್ರಕಾರ ‘ರಾಷ್ಟ್ರಕ್ಕೆ ಸಂಕಟ ಬರುವ ಮೊದಲೇ ಅದರ ಸುಳಿವು ನಾಗರಿಕರಿಗೆ ತಿಳಿಯಬೇಕು ಮತ್ತು ಅವರು ಜಾಗರೂಕರಾಗಿರಬೇಕು. ಪ್ರತಿಯೊಬ್ಬ ನಾಗರಿಕನು ಶತ್ರುಗಳ ಗುಪ್ತ ಚಲನವಲನಗಳ ಮೇಲೆ ನಿಗಾ ಇಡಬೇಕು. ಯಾವುದೇ ಪರಿಸ್ಥಿತಿಯಲ್ಲಿ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಬಾರದು; ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದ ಮೂಲೆ ಮೂಲೆಗಳಲ್ಲಿ ರಾಷ್ಟ್ರವಿರೋಧಿ ದುಷ್ಟ ಪ್ರವೃತ್ತಿಗಳಿವೆ. ಈ ದುಷ್ಟ ಶಕ್ತಿಗಳು ಯುದ್ಧಕಾಲದಲ್ಲಿ ಅಂತರ್ಯುದ್ಧವನ್ನು ಆರಂಭಿಸಬಹುದು. ಇಂತಹ ಸಮಯ ದಲ್ಲಿ ಭಾರತೀಯ ಸೈನಿಕರ ಮೇಲೆ ದ್ವಿಗುಣ ಒತ್ತಡ ಬರಬಹುದು. ಈ ದೃಷ್ಟಿಯಿಂದ ನಾಗರಿಕರೂ ದೇಶದ ಆಸ್ತಿ ಮತ್ತು ಜನರ ರಕ್ಷಣೆಯ ಜವಾಬ್ದಾರಿಯನ್ನು ಶಕ್ತಿಗನುಸಾರ ಹೊರಬೇಕು.
– ಶ್ರೀ. ಯೋಗೇಶ ಜಲತಾರೆ, ಸಂಪಾದಕರು ‘ಸನಾತನ ಪ್ರಭಾತ’ ಪ್ರಸಾರ ಮಾಧ್ಯಮ ಸಮೂಹ (೫.೩.೨೦೨೬)
ಯುದ್ಧಕಾಲದಲ್ಲಿ ಏನು ಮಾಡಬೇಕು ?
‘ನಾವೆಲ್ಲರೂ ಭಾರತೀಯರು ಎಂದು ಒಂದಾಗುವುದು ಆವಶ್ಯಕ. ನೀರು, ವಿದ್ಯುತ್, ಆಹಾರವನ್ನು ಮಿತವಾಗಿ ಬಳಸಬೇಕು ರಕ್ತದಾನ ಮಾಡಿ, ಹಾಗೆಯೇ ಆಹಾರ, ಔಷಧಿ ಮತ್ತು ಇತರ ಸಹಾಯವನ್ನು ನೀಡಿರಿ ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ. ರಾಷ್ಟ್ರಹಿತಕ್ಕಾಗಿ ವೈಯಕ್ತಿಕ ವಿಷಯಗಳನ್ನು ತ್ಯಾಗ ಮಾಡಿರಿ.
ಯುದ್ಧಕಾಲದಲ್ಲಿ ಏನು ಮಾಡಬಾರದು ?
ಸಮಾಜದಲ್ಲಿ ಒಡಕು ಉಂಟಾಗುವ ಯಾವುದೇ ಕೃತ್ಯವನ್ನು ಮಾಡಬಾರದು ! ವದಂತಿಗಳನ್ನು ಹರಡಬೇಡಿರಿ. ಆಹಾರ ಧಾನ್ಯಗಳನ್ನು ಮನೆಯಲ್ಲಿ ತುಂಬಾ ಸಂಗ್ರಹಿಸಬೇಡಿ ! ತುರ್ತು ಪರಿಸ್ಥಿತಿಯಲ್ಲಿ ಅನಗತ್ಯವಾಗಿ ಜನಸಂದಣಿಯನ್ನು ಮಾಡಬೇಡಿ. ಕಾನೂನು ಭಂಗ ಮಾಡಿ ಸಮಾಜದ್ರೋಹ ಮಾಡಬೇಡಿ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ