ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ವಾಣಿಯಿಂದ ಭಕ್ತಿಸತ್ಸಂಗದಲ್ಲಿ ಹರಿದುಬಂದ ಅಮೃತಬಿಂದು !

ಸತ್ಸಂಗ, ಶಾಸ್ತ್ರ, ಗುರು ಅಥವಾ ಗುರುಗಳ ಸಮಷ್ಟಿ ರೂಪದಿಂದ ಸಿಗುವ ಮಾರ್ಗದರ್ಶನವನ್ನು ಏಕಾಗ್ರತೆಯಿಂದ ಕೇಳಿಸಿಕೊಳ್ಳದಿದ್ದರೆ ನಮಗೆ ಅದರ ಅರ್ಥ ಸ್ಪಷ್ಟವಾಗುವುದಿಲ್ಲ. ಪರಿಣಾಮವಾಗಿ ನಮ್ಮ ಸಾಧನೆಯ ಮಾರ್ಗವೂ ತಪ್ಪಬಹುದು. ಅದಕ್ಕಾಗಿ ಸಾಧನೆಯಲ್ಲಿ ಹೇಳಿದ್ದನ್ನು ಕೇಳುವವೃತ್ತಿ ಎಂಬ ಗುಣದ ಅವಶ್ಯಕತೆ ಇದೆ.
೧. ಹೇಳಿದ್ದನ್ನು ಕೇಳಿಸಿಕೊಳ್ಳಲು ಮನಸ್ಸು ಮುಕ್ತ ಮತ್ತು ಗ್ರಹಣಶೀಲವಾಗಿರಬೇಕು !
ಮಳೆಯ ನೀರು ಭೂಮಿಯಲ್ಲಿ ಇಂಗಬೇಕಾದರೆ, ಭೂಮಿಯು ಮುಕ್ತ ಮತ್ತು (ಸಡಿಲವಾಗಿರಬೇಕು) ಮೃದುವಾಗಿರಬೇಕು. ಅದು ಕಲ್ಲಿನಂತೆ ಗಟ್ಟಿಯಾಗಿದ್ದರೆ, ಅಲ್ಲಿ ಏನೂ ಬೆಳೆಯುವುದಿಲ್ಲ, ಹಾಗೆಯೇ ನಮ್ಮ ಮನೋಭೂಮಿಯು ಉತ್ತಮ ಸಂಸ್ಕಾರಗಳಿಂದ ಸಂವರ್ಧಿತವಾಗಿದ್ದರೆ, ಆ ಮನೋಭೂಮಿಯಲ್ಲಿ ಜ್ಞಾನವು ಸಹಜವಾಗಿ ಬೇರೂರುತ್ತದೆ; ಆದ್ದರಿಂದಲೇ ಹೇಳಿದ ಜ್ಞಾನವು ನಮ್ಮ ಮನಸ್ಸಿನೊಳಗೆ ಇಳಿಯಲು (ಪಕ್ವವಾಗಲು) ಮನಸ್ಸನ್ನು ಮುಕ್ತವಾಗಿ ಮತ್ತು ಗ್ರಹಣಶೀಲವಾಗಿಟ್ಟುಕೊಂಡು ಕೇಳಿಸಿಕೊಳ್ಳಬೇಕು. ಆಗಲೇ ಅದರಲ್ಲಿ ಜ್ಞಾನವು ಮೊಳಕೆ ಒಡೆಯುತ್ತದೆ.
೨. ಹೇಳಿದ್ದನ್ನು ಕೇಳುವ ವೃತ್ತಿಯ ಬೀಜ ಬಿತ್ತುವುದರಿಂದಲೇ ಆತ್ಮಜ್ಞಾನದ ವೃಕ್ಷವು ಫಲ ನೀಡುತ್ತದೆ
ಬೀಜ ಬಿತ್ತದ ಹೊರತು ವೃಕ್ಷವು ಮೊಳಕೆಯೊಡೆಯುವುದಿಲ್ಲ, ಹಾಗೆಯೇ ಹೇಳಿದ್ದನ್ನು ಕೇಳದಿದ್ದರೆ ಆತ್ಮಜ್ಞಾನದ ವೃಕ್ಷವು ಹೇಗೆ ತಾನೇ ಫಲ ನೀಡುವುದು ? ಆದ್ದರಿಂದ ಗುರುಗಳು ಹೇಳುವ ಪ್ರತಿಯೊಂದು ಅಂಶವನ್ನು ಅಂತರ್ಮನಸ್ಸಿನಿಂದ ಗಮನಕೊಟ್ಟು ಆಲಿಸಿ ಹೃದಯವೆಂಬ ಭೂಮಿಯಲ್ಲಿ ‘ಹೇಳಿದ್ದನ್ನು ಕೇಳುವ ವೃತ್ತಿ’ಯ ಬೀಜವನ್ನು ಬಿತ್ತಬೇಕು. ಚಿಂತನೆ ಮತ್ತು ಮನನ ಮಾಡುವುದರ ಮೂಲಕ ಅದಕ್ಕೆ ಗೊಬ್ಬರ-ನೀರನ್ನು ಒದಗಿಸಬೇಕು. ಆಗಲೇ ಬಿತ್ತಿದ ಬೀಜವು ಮೊಳೆಕೆಯೊಡೆಯುತ್ತದೆ. ನಂತರ ಅದಕ್ಕೆ ಚಿಗುರು ಒಡೆಯುತ್ತದೆ, ಅಂದರೆ ಸಾಧಕನ ಸಾಧನೆಯು ಆರಂಭವಾಗುತ್ತದೆ. ‘ಹೇಳಿದ್ದನ್ನು ಕೇಳುವುದು ಮತ್ತು ಅದಕ್ಕನುಸಾರ ಕೃತಿ (ಆಚರಣೆ) ಮಾಡುವುದು’ ಇದರಿಂದ ಸಾಧಕನು ಸಾಧನೆಯ ಮುಂದಿನ ಹಂತಕ್ಕೆ ಹೋಗುತ್ತಾನೆ. ಒಮ್ಮೆ ‘ಕೇಳಿಸಿಕೊಳ್ಳುವ ವೃತ್ತಿಯ’ ಬೀಜವು ಮೊಳೆಕೆಯೊಡೆಯಿತೆಂದರೆ, ಮುಂದೆ ಕ್ರಮೇಣ ಆತ್ಮಜ್ಞಾನದ ದೊಡ್ಡವೃಕ್ಷವು ಫಲಪ್ರದವಾಗುತ್ತದೆ, ಇದರಿಂದ ತಿಳಿಯುವುದೇನೆಂದರೆ, ಸಾಧನೆಯ ಮಾರ್ಗದಲ್ಲಿ ನಡೆಯುವಾಗ ಹೇಳಿದ ಪ್ರತಿಯೊಂದು ಅಂಶವನ್ನು ಕೇಳಿಸಿಕೊಂಡು ಅದರಂತೆ ಕೃತಿ ಮಾಡಿದರೆ ಮಾತ್ರ ಸಾಧಕನ ಆಧ್ಯಾತ್ಮಿಕ ಉನ್ನತಿ ಸಾಧ್ಯವಾಗುತ್ತದೆ.’
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೦.೧೨.೨೦೨೫)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !