ನೂರಾರು ಹಿಂದೂಗಳ ಸಹಭಾಗ

ಸಿಲ್ಹೆಟ್ (ಬಾಂಗ್ಲಾದೇಶ) – ‘ಬಾಂಗ್ಲಾದೇಶ ಅಗ್ನಿವೀರ’ ಎಂಬ ಪ್ರಖರ ಹಿಂದುತ್ವನಿಷ್ಠ ಸಂಘಟನೆಯಿಂದ ಇಲ್ಲಿನ ಲಮಾಬಜಾರ್ ಮೂರು ಮಂದಿರ ಪರಿಸರದಲ್ಲಿ ಮಾರ್ಚ್ 27 ರಂದು ಶ್ರೀರಾಮನವಮಿ ಉತ್ಸವವನ್ನು ಅತ್ಯಂತ ಉತ್ಸಾಹ ಮತ್ತು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಇಲ್ಲಿನ ಶಿವಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಸರದ ನೂರಾರು ಭಕ್ತರು ಪಾಲ್ಗೊಂಡಿದ್ದರು. ಸ್ಥಳೀಯ ಹಿಂದುತ್ವನಿಷ್ಠರು ಈ ಸಮಾರಂಭದ ಮಾಹಿತಿಯನ್ನು ‘ಸನಾತನ ಪ್ರಭಾತ’ಕ್ಕೆ ನೀಡಿದ್ದಾರೆ.
🌞 Uplifting, heartening pictures of Ramnavmi celebrations in a Shiva temple in Sylhet, Bangladesh ! Organized by Bangladesh Agniveer !
🎇 It was a day of pure joy – morning prayers, children filling the temple with colour through art, soulful music, and yagna for peace, and a… pic.twitter.com/bLL3R6KyHE
— Sanatan Prabhat (@SanatanPrabhat) March 28, 2026
ಸಮಾರಂಭ ನಡೆದದ್ದು ಹೀಗೆ

ಕಾರ್ಯಕ್ರಮದ ಆರಂಭದಲ್ಲಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ನಂತರ ಭಜನೆಗಳ ಪ್ರಸ್ತುತಿ ನಡೆಯಿತು. ಸಣ್ಣ ಮತ್ತು ಹದಿಹರೆಯದ ಮಕ್ಕಳ ಮೂರು ಬೇರೆ-ಬೇರೆ ಗುಂಪುಗಳಲ್ಲಿ ಚಿತ್ರಕಲೆ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಶ್ರೀರಾಮ ಜನ್ಮವನ್ನು ಆಚರಿಸಲಾಯಿತು. ಮಧ್ಯಾಹ್ನ 12.30 ಕ್ಕೆ ಜಾಗತಿಕ ಶಾಂತಿ ಮತ್ತು ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾ, ‘ವೈದಿಕ ಶಾಂತಿ ಯಜ್ಞ’ವನ್ನು ಮಾಡಲಾಯಿತು. ನಂತರ ‘ಬ್ರಹ್ಮ ಸಂಗೀತ’ವನ್ನು ಪ್ರಸ್ತುತಪಡಿಸಲಾಯಿತು.
ಈ ಸಮಾರಂಭದ ನಂತರ ಒಂದು ಚರ್ಚಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಯುವ ಮನಸ್ಸುಗಳ ಸದೃಢ ಮಾನಸಿಕ ವಿಕಾಸಕ್ಕಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಂತ ಅವಶ್ಯಕ ಎಂದು ವಕ್ತಾರರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ಸಂಪಾದಕೀಯ ನಿಲುವುಬಾಂಗ್ಲಾದೇಶದ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದರೂ, ಅವರು ಈ ರೀತಿ ಸಂಘಟಿತರಾಗಿ ಉಪಾಸನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ ! |
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’