|
(ಲಿವ್-ಇನ್, ಅಂದರೆ ಲಿವ್-ಇನ್ ರಿಲೇಶನ್‌ಶಿಪ್ ಅರ್ಥಾತ್ ವಿವಾಹವಾಗದೆ ಜೊತೆಯಲ್ಲಿ ವಾಸಿಸುವುದು)

ಪ್ರಯಾಗರಾಜ (ಉತ್ತರ ಪ್ರದೇಶ) – ವಿವಾಹಿತ ಪುರುಷನೊಬ್ಬ ಇನ್ನೊಬ್ಬ ಮಹಿಳೆಯೊಂದಿಗೆ ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿ ವಾಸಿಸುತ್ತಿದ್ದರೆ, ಅದನ್ನು ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಅವಲೋಕಿಸಿದೆ. ಈ ಅವಲೋಕನವನ್ನು ದಾಖಲಿಸುವಾಗ, ನೈತಿಕತೆ ಮತ್ತು ಕಾಯ್ದೆ ಇವೆರಡೂ ಭಿನ್ನವಾದ ವಿಷಯಗಳು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಮಹಿಳೆಯ ಕುಟುಂಬದವರಿಂದ ಬರುತ್ತಿರುವ ಬೆದರಿಕೆಯ ಹಿನ್ನೆಲೆಯಲ್ಲಿ ‘ಲಿವ್-ಇನ್’ನಲ್ಲಿ ವಾಸಿಸುತ್ತಿರುವ ಜೋಡಿಯು ನ್ಯಾಯಾಲಯದಿಂದ ರಕ್ಷಣೆ ಕೋರಿತ್ತು.
ನ್ಯಾಯಾಲಯವು, ಕಾಯ್ದೆಯ ಪ್ರಕಾರ ಯಾವುದೇ ಅಪರಾಧವು ಸಾಬೀತಾಗದಿದ್ದಲ್ಲಿ, ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಸಾಮಾಜಿಕ ಅಭಿಪ್ರಾಯಗಳು ಮತ್ತು ನೈತಿಕತೆಯು ನ್ಯಾಯಾಲಯದ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಹೇಳಿದೆ.
ಒಬ್ಬ ವ್ಯಕ್ತಿ ವಿವಾಹವಾದ ನಂತರ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧದಲ್ಲಿರುವುದು ಅಪರಾಧವಾಗಿದೆ ಎಂದು ಮಹಿಳೆಯ ಕುಟುಂಬದವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇದಕ್ಕೆ ನ್ಯಾಯಾಲಯವು ಮೇಲಿನ ಅಭಿಪ್ರಾಯವನ್ನು ದಾಖಲಿಸಿದೆ. ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ತರುಣ್ ಸಕ್ಸೇನಾ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಇದರ ನಂತರ, ಈ ಜೋಡಿಯ ಸುರಕ್ಷತೆಯ ಜವಾಬ್ದಾರಿಯನ್ನು ಶಹಜಹಾನ್‌ಪುರದ ಪೊಲೀಸ್ ವರಿಷ್ಠಾಧಿಕಾರಿಗೆ ವಹಿಸಲಾಗಿದೆ.
ಸಂಪಾದಕೀಯ ನಿಲುವುಇಂತಹ ನಿರ್ಧಾರಗಳಿಂದ ಹಿಂದೂ ಕುಟುಂಬ ವ್ಯವಸ್ಥೆಯು ಕುಸಿಯಲು ಹಾಗೂ ಸಂಸ್ಕೃತಿಯ ನಾಶವಾಗಲು ಹೆಚ್ಚು ಸಮಯ ಹಿಡಿಯಲಾರದು. ಭಾರತವು ಪಾಶ್ಚಾತ್ಯೀಕರಣಗೊಳ್ಳಬಾರದು ಎಂಬುದು ಬಹುತೇಕ ಹಿಂದೂಗಳ ಆಶಯವಾಗಿದೆ. ಆದ್ದರಿಂದ ಸರ್ವೋಚ್ಚ ನ್ಯಾಯಾಲಯವು ಈ ನಿರ್ಧಾರವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡು, ಕುಟುಂಬ ವ್ಯವಸ್ಥೆಯನ್ನು ಉಳಿಸಲು ಪ್ರಯತ್ನಿಸಬೇಕು ಎಂಬುದು ಜನತೆಯ ನಮ್ರ ಅಪೇಕ್ಷೆಯಾಗಿದೆ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ