ಸಾಧಕರು, ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗಾಗಿ ಪ್ರಮುಖ ಮಾಹಿತಿ !
ಆರ್ಥಿಕ ವ್ಯವಹಾರಗಳ ದೃಷ್ಟಿಯಿಂದ ಏಪ್ರಿಲ್ ೧ ರಿಂದ ಮಾರ್ಚ್ ೩೧ ರ ವರೆಗೆ ಆರ್ಥಿಕ ವರ್ಷ ಎಂದು ನಿರ್ಧರಿಸಲಾಗಿದೆ. (ಮುಂದಿನ ಆರ್ಥಿಕ ವರ್ಷವು ೧.೪.೨೦೨೬ ರಿಂದ ೩೧.೩.೨೦೨೭ ರ ಅವಧಿಯಲ್ಲಿದೆ.) ‘ಟಿ.ಡಿ.ಎಸ್. (ಖಿಚಿ ಆಎಜಉಛಿಣಎಜ ಂಣ ಶೌಡಿಛಿಎ) ಕಡಿತವಾಗಬಾರದು’ ಎನ್ನುವ ಉದ್ದೇಶಕ್ಕಾಗಿ, ಮುಂದಿನ ಆರ್ಥಿಕ ವರ್ಷಕ್ಕೆ ೧೫ಉ ಅಥವಾ ೧೫ಊ ಫಾರ್ಮ್‌ಗಳಲ್ಲಿ ಯಾವುದಾದರೊಂದನ್ನು ಭರ್ತಿ ಮಾಡಿ ಸಲ್ಲಿಸುವ ಕುರಿತು ಪ್ರಮುಖ ಸೂಚನೆಗಳು ಇಲ್ಲಿವೆ.
೧. ಆರ್ಥಿಕ ವರ್ಷದ ಆರಂಭದಲ್ಲಿ ಪ್ರತಿಯೊಬ್ಬರೂ ‘ಬ್ಯಾಂಕಿನಲ್ಲಿ ನಿಮ್ಮ ಪ್ಯಾನ್‌ಕಾರ್ಡ್ ಸಂಖ್ಯೆ ನೋಂದಣಿಯಾಗಿದೆಯೇ ?’ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ನೋಂದಣಿ ಆಗದಿದ್ದರೆ, ಬಡ್ಡಿಯಿಂದ ಶೇ. ೨೦ ರಷ್ಟು ಮೊತ್ತವನ್ನು ‘ಟಿ.ಡಿ.ಎಸ್.’ ಎಂದು ಕಡಿತಗೊಳಿಸಲಾಗುತ್ತದೆ.
೨. ೧೫ಉ ಫಾರ್ಮ್
ಅ. ೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಆರ್ಥಿಕ ವರ್ಷದಲ್ಲಿ ಅಂದಾಜು ಒಟ್ಟು ಆದಾಯವು (ವಿವಿಧ ಠೇವಣಿಗಳ ಮೇಲಿನ ಬಡ್ಡಿ ಸೇರಿದಂತೆ) ತೆರಿಗೆ ಮುಕ್ತ ಮಿತಿಗಿಂತ (೪ ಲಕ್ಷ ರೂಪಾಯಿಗಳಿಗಿಂತ) ಕಡಿಮೆ ಇದ್ದರೆ, ಅವರು ೧೫ಉ ಫಾರ್ಮ್ ಅನ್ನು ಭರ್ತಿ ಮಾಡಬೇಕು.
ಆ. ನಿಯಮದ ಪ್ರಕಾರ, ವಯಸ್ಸು ೬೦ ವರ್ಷಕ್ಕಿಂತ ಕಡಿಮೆ ಇದ್ದು, ವಿವಿಧ ಠೇವಣಿಗಳ ಮೇಲಿನ ಬಡ್ಡಿಯು ಆರ್ಥಿಕ ವರ್ಷದಲ್ಲಿ ೫೦ ಸಾವಿರ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ‘ಟಿ.ಡಿ.ಎಸ್.’ ಕಡಿತವಾಗುವುದಿಲ್ಲ.
೩. ೧೫ಊ ಫಾರ್ಮ್
ಅ. ೬೦ ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರು ಮತ್ತು ಆರ್ಥಿಕ ವರ್ಷದ ಒಟ್ಟು ಅಂದಾಜು ಆದಾಯದ ಮೇಲೆ ಪಾವತಿಸಬೇಕಾದ ತೆರಿಗೆ ಶೂನ್ಯವಾಗಿದ್ದರೆ (ಓಇಟ ಖಿಚಿ), ಅವರು ೧೫ಊ ಫಾರ್ಮ್ ಸಲ್ಲಿಸಬೇಕು.
ಆ. ೬೦ ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಿಗೆ, ವಿವಿಧ ಠೇವಣಿಗಳ ಮೇಲಿನ ಬಡ್ಡಿಯು ಆರ್ಥಿಕ ವರ್ಷದಲ್ಲಿ ೧ ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ‘ಟಿ.ಡಿ.ಎಸ್.’ ಕಡಿತವಾಗುವುದಿಲ್ಲ, ಎಂಬ ನಿಯಮವಿದೆ.
ಇ. ೨೦೨೬-೨೭ ಆರ್ಥಿಕ ವರ್ಷಕ್ಕಾಗಿ, ೩೧ ಮಾರ್ಚ್ ೨೦೨೬ ರ ಒಳಗೆ ಯಾವುದೇ ದಿನ ೬೦ ವರ್ಷ ಪೂರೈಸುತ್ತಿದ್ದರೆ, ಅಂತಹವರು ೧೫ಊ ಫಾರ್ಮ್ ಸಲ್ಲಿಸಬಹುದು.
೪. ಕೆಲವರು ಹಳೆಯ ಆದಾಯ ತೆರಿಗೆ ಪದ್ಧತಿಯ ಪ್ರಕಾರ ರಿಟರ್ನ್ಸ್ ಸಲ್ಲಿಸುತ್ತಾರೆ (ಈಟಿಛಿಒಮೆ ಣಚಿ ಡಿಎಣಉಡಿಟಿ). ಅವರಿಗೆ ತೆರಿಗೆ ಮುಕ್ತ ಆದಾಯದ ಮಿತಿ ಈ ಕೆಳಗಿನಂತಿದೆ
ಅ. ೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ : ೨ ಲಕ್ಷ ೫೦ ಸಾವಿರ
ಆ. ೬೦ ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ : ೩ ಲಕ್ಷ
ಇ. ೮೦ ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ : ೫ ಲಕ್ಷ ಫಾರ್ಮ್ ಭರ್ತಿ ಮಾಡುವಾಗ ‘ನಿಮಗೆ ಮೇಲಿನವುಗಳಲ್ಲಿ ಯಾವ ನಿಯಮ ಅನ್ವಯಿಸುತ್ತದೆ ?’, ಎಂಬುದನ್ನು ಖಚಿತಪಡಿಸಿಕೊಳ್ಳಿ.
೫. ಎರಡೂ ಫಾರ್ಮ್‌ಗಳ ಬಗ್ಗೆ ಸಾಮಾನ್ಯ ಮಾಹಿತಿ
ವಿವಿಧ ಬ್ಯಾಂಕುಗಳಲ್ಲಿ ಠೇವಣಿಗಳಿದ್ದರೆ, ಪ್ರತಿ ಬ್ಯಾಂಕಿನಲ್ಲೂ ೧೫ಉ ಅಥವಾ ೧೫ಊ ಫಾರ್ಮ್ ಸಲ್ಲಿಸಬೇಕು. ಒಂದು ಬ್ಯಾಂಕಿನ ಒಂದಕ್ಕಿಂತ ಹೆಚ್ಚು ಶಾಖೆಗಳಲ್ಲಿ ಠೇವಣಿಗಳಿದ್ದರೆ, ಪ್ರತಿ ಶಾಖೆಯಲ್ಲೂ ಪ್ರತ್ಯೇಕ ಫಾರ್ಮ್ ನೀಡಬೇಕಾಗುತ್ತದೆ. ೧೫ಉ ಅಥವಾ ೧೫ಊ ಈ ಫಾರ್ಮ್‌ಗಳು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಲಭ್ಯವಿರುತ್ತವೆ. ಗ್ರಾಹಕರು ಪ್ರತಿ ಫಾರ್ಮ್‌ನ ೨ ಅಥವಾ ೩ ಪ್ರತಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು ಮತ್ತು ಒಂದು ಪ್ರತಿಯನ್ನು ಸ್ವೀಕೃತಿ ಆಗಿ ಇಟ್ಟುಕೊಳ್ಳಬೇಕು. ಪ್ರತಿಯೊಂದು ಬ್ಯಾಂಕ್ ತನ್ನದೇ ನಿಯಮಾವಳಿಗಳಿಗೆ ಅನುಗುಣವಾಗಿ ಎರಡೂ ಫಾರ್ಮ್‌ಗಳ ವಿನ್ಯಾಸದಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಿಕೊಂಡಿರುತ್ತದೆ. ಆದ್ದರಿಂದ, ಖಾತೆದಾರರು ತಮ್ಮ ಖಾತೆ ಇರುವ ಬ್ಯಾಂಕಿನಿಂದ ಫಾರ್ಮ್ ತಂದು ಭರ್ತಿ ಮಾಡಬೇಕಾಗುತ್ತದೆ. ಕೆಲವು ಬ್ಯಾಂಕುಗಳು ೧೫ಉ ಅಥವಾ ೧೫ಊ ಈ ಫಾರ್ಮ್‌ಗಳನ್ನು ‘ಆನ್‌ಲೈನ್’ದಲ್ಲಿ ತುಂಬಿಸುವ ಸೌಲಭ್ಯವಿರುತ್ತದೆ. ಅದಕ್ಕಾಗಿ ಸಂಬಂಧಿಸಿದ ಬ್ಯಾಂಕಿನ ‘ನೆಟ್‌ಬ್ಯಾಂಕಿಂಗ್’ ಸೌಲಭ್ಯವಿದ್ದರೆ, ಅದರ ಮೂಲಕವೂ ಈ ಪ್ರಯೋಜನವನ್ನು ಪಡೆಯಬಹುದು. ಹಾಗೆಯೇ ಸಂಬಂಧಿಸಿದ ಬ್ಯಾಂಕುಗಳ ಜಾಲತಾಣದಲ್ಲಿ ಈ ಫಾರ್ಮ್‌ಗಳು ಲಭ್ಯವಿದ್ದರೆ, ಅವುಗಳನ್ನು ‘ಡೌನ್‌ಲೋಡ್’ ಮಾಡಿ ‘ಪ್ರಿಂಟ್’ ತೆಗೆದುಕೊಂಡು, ಅದರಲ್ಲಿ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಬ್ಯಾಂಕಿನಲ್ಲಿ ಸಲ್ಲಿಸಬಹುದು.
೬. ‘ಟಿ.ಡಿ.ಎಸ್.’ ಕಡಿತವಾದರೆ ಮಾಡಬೇಕಾದ ಕೃತಿ
ಒಂದು ವೇಳೆ ಟಿ.ಡಿ.ಎಸ್. ಕಡಿತವಾಗಿದ್ದರೆ, ಆ ಮೊತ್ತವನ್ನು ಮರಳಿ ಪಡೆಯಲು ಆದಾಯ ತೆರಿಗೆ ಇಲಾಖೆಗೆ ‘ಆದಾಯ ತೆರಿಗೆ ವಿವರ ಪತ್ರ’ ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಮಾಹಿತಿ ಪರಿಶೀಲಿಸಿ, ಕಡಿತವಾದ ‘ಟಿ.ಡಿ.ಎಸ್.’ ಬಡ್ಡಿ ಸಮೇತ ಮರುಪಾವತಿ ಮಾಡುತ್ತದೆ. ಹಾಗಾಗಿ ‘ಟಿ.ಡಿ.ಎಸ್.’ ಕಡಿತವಾಗಬಾರದೆಂದು ಏಪ್ರಿಲ್ ಮೊದಲವಾರದಲ್ಲಿ ಮೇಲಿನ ಪ್ರಕ್ರಿಯೆ ಮಾಡಬೇಕು (೬.೩.೨೦೨೬)

ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !