ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !

ಹಿಂದೂ ಸಂಸ್ಕೃತಿಯಲ್ಲಿ ಹೇಳಲಾದ ದಾನದ ಮಹತ್ವ !

ಭಾರತೀಯ ಸಂಸ್ಕೃತಿಯಲ್ಲಿ ದಾನಧರ್ಮಕ್ಕೆ ವಿಶೇಷ ಮಹತ್ವವಿದೆ. ದಾನದಲ್ಲಿ ಧನದಾನ, ಅನ್ನದಾನ, ವಸ್ತ್ರದಾನ, ಜ್ಞಾನದಾನ ಮುಂತಾದ ಪ್ರಕಾರಗಳಿವೆ. ದಾನವು ಪಾಪನಾಶಕವಾಗಿದ್ದು, ಅದು ಪುಣ್ಯಬಲದ ಪ್ರಾಪ್ತಿಯನ್ನು ಮಾಡಿಕೊಡುತ್ತದೆ. ‘ಈ ಪೃಥ್ವಿಯ ಮೇಲೆ ದಾನಧರ್ಮದಂತಹ ಬೇರೆ ನಿಧಿ (ಸಂಪತ್ತು) ಇಲ್ಲ’ ಎಂದು ಮಹಾಭಾರತದಲ್ಲಿ ಹೇಳಲಾಗಿದೆ.

‘೧೭.೫.೨೦೨೬ ರಿಂದ ೧೫.೬.೨೦೨೬ ರ ಅವಧಿಯಲ್ಲಿ ‘ಅಧಿಕ ಮಾಸ’ (ಮಲಮಾಸ) ಇರಲಿದೆ. ಈ ಮಾಸದಲ್ಲಿ ನಾಮಸ್ಮರಣೆ, ಸತ್ಸಂಗ, ಸತ್ಸೇವೆ, ತ್ಯಾಗ, ದಾನ ಮುಂತಾದವುಗಳಿಗೆ ಹೆಚ್ಚಿನ ಮಹತ್ವವಿರುತ್ತದೆ. ಈ ಮಾಸದಲ್ಲಿ ದಾನ ಮಾಡಿದರೆ ಅದರ ಫಲವು ಅನೇಕ ಪಟ್ಟು ಹೆಚ್ಚಾಗಿ ದೊರೆಯುತ್ತದೆ.

೧. ಅನ್ನದಾನದ ಅಸಾಧಾರಣ ಮಹತ್ವ !

‘ಅನ್ನದಾನ’ ಇದನ್ನು ಶ್ರೇಷ್ಠ ಕರ್ಮವೆಂದು ನಂಬಲಾಗಿದೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ, ಯಾವ ಗೃಹಸ್ಥನು ಹಣವನ್ನು ಸಂಪಾದಿಸುತ್ತಾನೋ ಮತ್ತು ಯಾರ ಮನೆಯಲ್ಲಿ ಪ್ರತಿದಿನ ಅನ್ನ ಬೇಯುತ್ತದೆಯೋ, ಅವನು ಅನ್ನದಾನ ಮಾಡುವುದು ಅವನ ಕರ್ತವ್ಯವೇ ಆಗಿದೆ. ‘ಸದ್ಭಾವನೆಯಿಂದ ‘ಸತ್ಪಾತ್ರರಿಗೆ ಅನ್ನದಾನ’ ಮಾಡಿದರೆ ಅನ್ನದಾತನಿಗೆ ಅದರ ಯೋಗ್ಯ ಫಲ ದೊರೆಯುತ್ತದೆ, ಹಾಗೆಯೇ ಎಲ್ಲ ಪಾಪಗಳಿಂದ ಅವನ ಉದ್ಧಾರವಾಗಿ ಅವನು ಈಶ್ವರನ ಸಮೀಪಕ್ಕೆ ಹೋಗುತ್ತಾನೆ’, ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಅನ್ನದಾನ ಮಾಡುವುದರಿಂದ ಅನ್ನದಾತನಿಗೆ ಆಧ್ಯಾತ್ಮಿಕ ಮಟ್ಟದಲ್ಲಿಯೂ ಲಾಭವಾಗುತ್ತದೆ.

೨. ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ !

ಪ್ರಸ್ತುತ ಧರ್ಮಗ್ಲಾನಿಯ ಕಾಲವಾಗಿರುವುದರಿಂದ ‘ಧರ್ಮ ಪ್ರಸಾರವು’ ಕಾಲಕ್ಕನುಸಾರ ಆವಶ್ಯಕ ಕಾರ್ಯವಾಗಿದೆ. ‘ಧರ್ಮಪ್ರಸಾರದ ಕಾರ್ಯವನ್ನು ಮಾಡುವ ಸಂತರು, ಸಂಸ್ಥೆ ಅಥವಾ ಸಂಘಟನೆಗಳಿಗೆ ಅನ್ನದಾನ ಮಾಡುವುದು’ ಅತ್ಯಂತ ಶ್ರೇಷ್ಠ ದಾನವಾಗಿದೆ. ಸನಾತನ ಸಂಸ್ಥೆಯು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಟಿಬದ್ಧವಾಗಿದೆ. ಸನಾತನ ಸಂಸ್ಥೆಯ ಆಶ್ರಮಗಳು ಮತ್ತು ಸೇವಾಕೇಂದ್ರಗಳ ಮೂಲಕ ಧರ್ಮಪ್ರಸಾರದ ಕಾರ್ಯವನ್ನು ಮಾಡಲಾಗುತ್ತದೆ. ಪ್ರಸ್ತುತ ಕಾಲದಲ್ಲಿ ರಾಷ್ಟ್ರ ಮತ್ತು ಧರ್ಮದ ಸೇವೆಯನ್ನು ಮಾಡುವ ಮಹತ್ವವನ್ನು ಗಮನದಲ್ಲಿಟ್ಟು ನೂರಾರು ಸಾಧಕರು ಆಶ್ರಮಗಳಲ್ಲಿ ನೆಲೆಸಿ ಪೂರ್ಣಾವಧಿ ಸೇವೆಯನ್ನು ಮಾಡುತ್ತಿದ್ದಾರೆ. ಧರ್ಮಜಾಗೃತಿಯ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನಕ್ಕಾಗಿ ಧನರೂಪದಲ್ಲಿ ಸಹಾಯ ಮಾಡುವ ಅವಕಾಶ ಅರ್ಪಣೆದಾರರಿಗೆ ಲಭಿಸಿದೆ.

ಅಧಿಕ ಮಾಸದ ನಿಮಿತ್ತ ಸಾಧಕರಿಗಾಗಿ ಅನ್ನದಾನಕ್ಕಾಗಿ ಧನರೂಪದಲ್ಲಿ ಸಹಾಯ ಮಾಡಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಅರ್ಪಣೆದಾರರು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು.

ಅನ್ನದಾನಕ್ಕಾಗಿ ಸಂಸ್ಥೆಗೆ ಧನಾದೇಶವನ್ನು ನೀಡುವುದಿದ್ದರೆ ಅದನ್ನು ‘ಸನಾತನ ಸಂಸ್ಥೆ’ ಈ ಹೆಸರಿನಲ್ಲಿ ನೀಡಬೇಕು.

https://www.sanatan.org/en/donate  ಇಲ್ಲಿಯೂ ದಾನ (ಅರ್ಪಣೆ) ನೀಡುವ ಸೌಲಭ್ಯವಿದೆ.’

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೧೫.೪.೨೦೨೬)

ಸಂಪರ್ಕ

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦

ವಿ-ಅಂಚೆ ವಿಳಾಸ : [email protected] 

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ, ಪಿನ್ – ೪೦೩೪೦೧