
‘ಪ್ರಸ್ತುತ ಇಡೀ ಜಗತ್ತು ಆಪತ್ಕಾಲದ ಹೊಸ್ತಿಲಿನಲ್ಲಿದೆ. ಯುದ್ಧ, ನೈಸರ್ಗಿಕ ವಿಕೋಪಗಳು, ಕೊರೊನಾದಂತಹ ಸಾಂಕ್ರಾಮಿಕ ರೋಗಗಳಂತಹ ವಿವಿಧ ಮಾಧ್ಯಮಗಳ ಮೂಲಕ ಆಪತ್ಕಾಲವು ಯಾವಾಗ ಬೇಕಾದರೂ ಬರಬಹುದು. ಇಲ್ಲಿಯವರೆಗೆ ದೇವರು ನಮ್ಮ ಸಾಧನೆಗಾಗಿ ಈ ಕಾಲವನ್ನು ತಡೆಹಿಡಿದಿದ್ದಾನೆ; ಆದರೆ ಅದು ಇಂದು ಅಥವಾ ನಾಳೆ ಬರುವುದಂತು ಖಚಿತ. ಈ ಭೀಕರ ಆಪತ್ಕಾಲದಲ್ಲಿ ಕೇವಲ ಸಾಧನೆ ಇದ್ದರೆ ಮಾತ್ರ ನಾವು ಬದುಕಲು ಸಾಧ್ಯ.
ಆದರೆ ಕೇವಲ ಬೌದ್ಧಿಕ ಮಟ್ಟದಲ್ಲಿ ಸಾಧನೆಯ ಮಹತ್ವವನ್ನು ಅರಿತು ಸಾಧನೆ ಮಾಡುವ ಕೆಲವು ಸಾಧಕರು ಶ್ರದ್ಧೆಯ ಅಭಾವದಿಂದ, ವಿಕಲ್ಪಗಳು, ಮಾಯೆಯ ಆಕರ್ಷಣೆ, ಆರ್ಥಿಕ ಲೋಭ ಅಥವಾ ಪರಿಸ್ಥಿತಿಯ ಕಾರಣಗಳಿಂದ ಸಾಧನೆಯನ್ನು ಬಿಡುತ್ತಿದ್ದಾರೆ. ಇಂತಹವರಿಗೆ ‘ನನಗೆ ಸಾಧನೆ ತಿಳಿದಿದೆ, ನಾನು ಹೊರಗಿದ್ದುಕೊಂಡೂ ನನ್ನ ಸಾಧನೆ ಮಾಡ ಬಹುದು’ ಎಂದು ಅನಿಸುತ್ತದೆ. ವಿಕಲ್ಪಗಳಿರುವ ಸಾಧಕರು ತಮ್ಮ ಮನಸ್ಸಿನಲ್ಲಿರುವ ಸಂದೇಹಗಳನ್ನು ಸರಿಯಾದ ರೀತಿಯಲ್ಲಿ ನಿವಾರಿಸಿಕೊಳ್ಳಬೇಕು. ಮಾಯೆಯ ಆಕರ್ಷಣೆ, ಆರ್ಥಿಕ ಲೋಭ ಅಥವಾ ಪರಿಸ್ಥಿತಿಯಿಂದ ಸಾಧನೆಯಲ್ಲಿ ವ್ಯತ್ಯಯವಾಗುತ್ತಿದ್ದರೆ, ಆ ಬಗ್ಗೆಯೂ ಮಾರ್ಗದರ್ಶನ ಪಡೆದು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ‘ನನಗೆ ಸಾಧನೆ ತಿಳಿದಿದೆ’ ಎಂದು ಅನಿಸಿದರೂ, ಅಂತರ್ಮುಖತೆ ಮತ್ತು ಮುಂದಿನ ಹಂತಗಳ ಸಾಧನೆ, ಇವುಗಳನ್ನು ನಿಯಮಿತವಾಗಿ ಇತರರಿಂದಲೇ ಕಲಿಯಬೇಕಾಗುತ್ತದೆ. ಅವರು ಸಹ ಮುಂದಿನ ಹಂತದ ಸಾಧನೆಯನ್ನು ಕಲಿಯುವುದಕ್ಕೆ ಒತ್ತು ನೀಡಬೇಕು.
ಮನಸ್ಸಿನಲ್ಲಿ ವಿಕಲ್ಪಗಳನ್ನು ಹೊಂದಿರುವ ಕೆಲವರು ಸಾಧನೆಯಿಂದ ದೂರ ಹೋಗುತ್ತಾರೆ, ಅಷ್ಟೇ ಅಲ್ಲದೆ ಅವರು ಇತರರೊಂದಿಗೆ ನಕಾರಾತ್ಮಕ ಚರ್ಚೆಗಳನ್ನು ಮಾಡಿ ಅವರಲ್ಲಿಯೂ ವಿಕಲ್ಪಗಳನ್ನು ನಿರ್ಮಿಸುತ್ತಾರೆ. ಇದರ ಗಂಭೀರ ಪರಿಣಾಮವು ಸಾಧಕರು ಮತ್ತು ಸಮಷ್ಟಿ ಕಾರ್ಯದ ಮೇಲೆ ಆಗುತ್ತದೆ. ಇದರಿಂದ ಪಾಪಕರ್ಮ ಸಂಭವಿಸುತ್ತದೆ. ಸಾಧಕರು ಅಂತಹವರಿಂದ ಎಚ್ಚರ ಮತ್ತು ಜಾಗರೂಕರಾಗಿರಬೇಕು.
ಸಾಧಕರೆ, ಆಪತ್ಕಾಲದ ತೀವ್ರತೆ ಮತ್ತು ‘ಇದು ಸಾಧನೆಗೆ ಸಿಕ್ಕಿರುವ ಕೊನೆಯ ಅವಕಾಶವಿರಬಹುದು’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಆಯಾ ಸಮಯದಲ್ಲಿ ಮೆಟ್ಟಿ ನಿಲ್ಲಿರಿ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೨.೫.೨೦೨೬)
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !