ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ…
ಲಕ್ಷ್ಮೇಶ್ವರ : ಮಾರ್ಚ್ ೮ ರ ಸಾಯಂಕಾಲ ೭ ಗಂಟೆಗೆ ಲಕ್ಷ್ಮೇಶ್ವರ ಪಟ್ಟಣದ ಕೆಂಚಲಾಪುರ ಓಣಿಯ ಮಾಗಡಿ ಇಂಡಸ್ಟ್ರೀಸ್ ಆವರಣದಲ್ಲಿ ಮಂಜುನಾಥ ಮಾಗಡಿಯವರು ತಮ್ಮ ಮಗಳಾದ ಚಿ. ಕೃತಿಕಾ ಇವರ ಹುಟ್ಟುಹಬ್ಬ ಆಚರಣೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮ ದಲ್ಲಿ ಸಾಧಕಾರದ ಸೌ. ಸುಮಾ ಕುಂಬಾರ, ಶ್ರೀಮತಿ ಶೋಭಾ ಇಟಗಿ, ಸೌ. ಶಾಂತಾ ಹುಲಕೋಟಿ, ಸೌ. ಗೀತಾ ಬಡಿಗೇರ, ಸೌ. ಮಲ್ಲಮ್ಮ ಕಮಡೊಳ್ಳಿ, ಸೌ.ಪುಷ್ಪಾ ಬದಿ, ಶ್ರೀಮತಿ. ದ್ರಾಕ್ಷಾಯಣಿ ಮುದಿಗೌಡರ, ಸೌ. ಬೇಬಿ ರುದ್ರಶೆಟ್ಟಿ, ಸುಶ್ರೀ ಲಕ್ಷ್ಮೀ ತಟ್ಟಿ, ಕು. ಪಾರ್ವತಿ ಹುಲಕೋಟಿ, ಕು. ಅನುಷಾ ಕುಂಬಾರ, ಕು. ಚೈತನ್ಯ ಅಗಡಿ, ಕು. ಲಕ್ಷ್ಮೀ ಅಗಡಿ, ಕು. ಸೌಜನ್ಯ ಅಗಡಿ, ಕು. ದೀಕ್ಷಾ ಅಗಡಿ ಇವರ ಸತ್ಕಾರವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳಿನ ಶ್ರೀ ಕಲ್ಯಾಣಪುರಮಠದ ಪೂ. ಶ್ರೀ ಮ.ನಿ.ಪ್ರ. ಅಭಿನವ ಬಸವಣ್ಣಜ್ಜನವರ ದಿವ್ಯ ಉಪಸ್ಥಿತಿ ಇತ್ತು. ಈ ಕಾರ್ಯಕ್ರಮದಲ್ಲಿ ಸರಿ ಸುಮಾರು ೮೦೦ ಜನರ ಉಪಸ್ಥಿತಿ ಇತ್ತು.
ಬೆಂಗಳೂರಿನ ಉಲ್ಲಾಳದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ !

ಬೆಂಗಳೂರು : ೮ ಮಾರ್ಚ್ ೨೦೨೬ ರಂದು ಬೆಂಗಳೂರಿನ ಉಲ್ಲಾಳ ಎಂಬಲ್ಲಿನ ಬಡಾವಣೆಯಲ್ಲಿ ‘ಉಪ್ಕಾರ್ ವೆಲ್ಫೇರ್ ಅಸೋಸಿಯೇಷನ್, ಬೆಂಗಳೂರು’ ಇದರ ವತಿಯಿಂದ ಊರ್ವ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಣರಾಗಿಣಿ ಶಾಖೆಯ ಬೆಂಗಳೂರು ಜಿಲ್ಲಾ ಸಮನ್ವಯಕರಾದ ಸೌ. ಭವ್ಯ ಗೌಡ, ‘ದರ್ಪಣ ವೆಲ್ನೇಸ್’ನ ಸಂಸ್ಥಾಪಕರಾದ ಸೌ. ನಂದಿನಿ ಶಿವಕುಮಾರ್ ಸೇರಿದಂತೆ ೧೦೦ ಕ್ಕೂ ಅಧಿಕ ಸ್ತ್ರೀ ಸಾಧಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಿಳೆಯರ ಪಾತ್ರದ ಮಹತ್ವವನ್ನು ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸಲಾಯಿತು. ಶಕ್ತಿಯ ಪ್ರತೀಕವಾಗಿರುವ ಮಹಿಳೆಯಿಂದ ಹಿಡಿದು ಗೃಹಿಣಿ, ತಾಯಿ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಹೇಗೆ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ತಿಳಿಸಲಾಯಿತು.
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು