೧. ಕಮಲಪುಷ್ಪದ ಮಹಾತ್ಮೆ !
ಶ್ರೀಸಮರ್ಥರು ದಶರಥನಂದನ ಶ್ರೀರಾಮರ ಸಗುಣ ರೂಪವನ್ನು ದೊಡ್ಡ ರಸಿಕತೆಯಿಂದ, ಭಾವಭಕ್ತಿಯಿಂದ ವರ್ಣನೆ ಮಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ವಿಭಿನ್ನ ಕುರುಹುಗಳಲ್ಲಿ ಎಲ್ಲಕ್ಕಿಂತ ಶ್ರೇಷ್ಠ ಹಾಗೂ ಪವಿತ್ರ ಸ್ಥಾನ ಕಮಲಪುಷ್ಪದ್ದಾಗಿದೆ. ಕಮಲ ಕೆಸರಿನಲ್ಲಿ ಉಗಮವಾಗುತ್ತದೆ, ಬೆಳೆಯುತ್ತದೆ ಹಾಗೂ ಅರಳುತ್ತದೆ. ಸುತ್ತಮುತ್ತಲೂ ರಾಡಿಯಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ, ಅಳುತ್ತಾ ಕುಳಿತುಕೊಳ್ಳದೆ ತನ್ನ ವಿಕಾಸವನ್ನು ತಾನೇ ಸಾಧಿಸುತ್ತದೆ. ಕಮಲದ ದೃಷ್ಟಿ ಶಾಶ್ವತವಾಗಿ ಊರ್ಧ್ವಮುಖವಾಗಿರುತ್ತದೆ. ಕಮಲ ಸೂರ್ಯನ ಕಡೆಗೆ ಗಮನವಿಟ್ಟು ತನ್ನ ಜೀವನದ ಧ್ಯೇಯವನ್ನು ಸಾಧಿಸುತ್ತದೆ. ಕಮಲ ಮನುಷ್ಯರಿಗೆ ಕಲಿಸುವ ಅಂಶವೆಂದರೆ, ಯೋಗಾಯೋಗದಿಂದ ಪರಿಸ್ಥಿತಿಗನುಸಾರ ಪ್ರತಿಕೂಲ ಪರಿಸ್ಥಿತಿಯಲ್ಲಿ ಜನ್ಮ ತಾಳಿದರೂ, ಉಚ್ಚಧ್ಯೇಯವನ್ನಿಟ್ಟು ತನ್ನ ಉದ್ಧಾರ ಮಾಡಿಕೊಳ್ಳುವುದು ತನ್ನ ಕೈಯಲ್ಲಿಯೆ ಇರುತ್ತದೆ. ಕಮಲಪುಷ್ಪ ಶತದಳ ಅಥವಾ ಸಹಸ್ರದಳ ಕೂಡ ಇರುತ್ತದೆ. ವಿಭಿನ್ನ ಸಂಪ್ರದಾಯ, ಜಾತಿ, ಪಂಥ, ಭಾಷೆಗಳಿಂದ ಸಿಂಗರಿಸಲ್ಪಟ್ಟ ನಮ್ಮ ಭಾರತೀಯ ಸಂಸ್ಕೃತಿಯು ಅನೇಕತೆಯಿಂದ ಏಕತೆಯನ್ನು ಸಾಧಿಸುವ ಒಂದು ರೀತಿಯ ಕಮಲವೇ ಆಗಿದೆ.
೨. ಶ್ರೀರಾಮರ ಅವಯವಗಳು ಕಮಲದಂತೆಯೆ ಇರುವವು
ಶ್ರೀರಾಮಚಂದ್ರರು ಸೌಂದರ್ಯದ ಗಣಿಯಾಗಿದ್ದಾರೆ. ಆದ್ದರಿಂದ ಶ್ರೀರಾಮರ ಅನೇಕ ಭಕ್ತರು ರೂಪಸಂಪನ್ನ ಶ್ರೀರಾಮರ ಪ್ರತಿಯೊಂದು ಅವಯವಕ್ಕೆ ಸನಾತನ ಧರ್ಮವು ಶ್ರೇಷ್ಠ ಹಾಗೂ ಪವಿತ್ರವೆಂದು ತಿಳಿದಿರುವ ಕಮಲದ ಉಪಮೆಯನ್ನು ನೀಡಿದ್ದಾರೆ. ನಯನಕಮಲ, ಹೃದಯಕಮಲ, ವದನಕಮಲ, ಹಸ್ತಕಮಲ, ಚರಣಕಮಲ. ಕಮಲವೆಂದರೆ ಅಲಿಪ್ತತೆ, ಅನಾಸಕ್ತಿಯ ಆದರ್ಶ, ಮಾಂಗಲ್ಯದ ಮಹಿಮೆ, ಪ್ರಕಾಶದ ಪೂಜೆ, ಸೌಂದರ್ಯದ ನಿರ್ಮಿತಿಯಾಗಿದೆ. ಎಲ್ಲ ದೇವರಿಗೆ ಕಮಲದ ಆಕರ್ಷಣೆಯಿದೆ. ಬ್ರಹ್ಮದೇವರು ಕಮಲಾಸನದಲ್ಲಿ ಕುಳಿತಿದ್ದಾರೆ. ವಿಷ್ಣು ಕಮಲಾಸನ, ಲಕ್ಷ್ಮಿ ಕಮಲಾಸನ, ಸೂರ್ಯ ಸ್ವತಃ ಆಕಾಶದ ನೀಲ ಸರೋವರ ದಲ್ಲಿನ ರಕ್ತ ಕಮಲವೇ ಆಗಿದೆ. ಈ ರೀತಿ ಕಮಲದ ಮಹಾತ್ಮೆಯಿದೆ.

೩. ಅನುಷ್ಠಾನದಲ್ಲಿ ಒಂದು ಕಮಲಪುಷ್ಪ ಕಡಿಮೆಯಾದಾಗ ಶ್ರೀರಾಮರ ಪ್ರಯತ್ನ ಹಾಗೂ ದೇವಿಯ ಆಶೀರ್ವಾದ !
ಕೌಶಲ್ಯೆಯು ಶ್ರೀರಾಮರ ಲೋಚನವನ್ನು ‘ರಾಜೀವಲೋಚನ’ ಎನ್ನುತ್ತಾಳೆ. ಅದರ ಒಂದು ಕಥೆಯನ್ನು ದೇವೀ ಭಾಗವತದಲ್ಲಿ ಹೇಳಲಾಗಿದೆ. ಶ್ರೀರಾಮರು ದೇವಿಯ, ಅಂದರೆ ಆದಿಶಕ್ತಿಯ ಉಪಾಸನೆ ಮಾಡುತ್ತಾರೆ. ೧೦೮ ಕಮಲಪುಷ್ಪಗಳನ್ನು ಮಹಾ ಮಾಯಿಗೆ ಅರ್ಪಿಸಲಿಕ್ಕಿರುತ್ತದೆ. ಎಲ್ಲ ಸಿದ್ಧತೆ ಮಾಡಿ ಶ್ರೀರಾಮರು ಅನುಷ್ಠಾನಕ್ಕೆ ಕುಳಿತು ಭಾವಭಕ್ತಿಯಿಂದ ಮಂತ್ರೋಚ್ಚಾರ ಸಹಿತ ಒಂದೊಂದೇ ಪುಷ್ಪವನ್ನು ಶ್ರೀಚರಣಗಳಿಗೆ ಅರ್ಪಿಸುತ್ತಾರೆ. ದೇವಿ ಮಾತೆ ಪರೀಕ್ಷೆ ಮಾಡುತ್ತಾಳೆ. ಅನುಷ್ಠಾನದಲ್ಲಿ ಒಂದು ಕಮಲ ಪುಷ್ಪ ಕಡಿಮೆಯಾದಾಗ ಶ್ರೀರಾಮರಿಗೆ ಈಗ ಏನು ಮಾಡಬೇಕೆಂದು ತಿಳಿಯಲಿಲ್ಲ. ಪೂಜೆಯಿಂದ ಎದ್ದು ಹೋಗುವ ಹಾಗಿಲ್ಲ. ಚಿಕ್ಕಂದಿನಲ್ಲಿ ಕೌಶಲ್ಯೆ ಮಾತೆ ‘ರಾಜೀವಲೋಚನ’ ಎನ್ನುತ್ತಿದ್ದಳು, ಅಂದರೆ ನಾನು ನನ್ನ ಚಕ್ಷುವನ್ನು ದೇವೀಮಾತೆಗೆ ಅರ್ಪಿಸಬಹುದು.’ ಅವರು ತಕ್ಷಣ ಬತ್ತಳಿಕೆಯಿಂದ ಬಾಣ ತೆಗೆದು ತನ್ನ ನೇತ್ರವನ್ನು ತೆಗೆದು ದೇವೀ ಮಾತೆಗೆ ಅರ್ಪಿಸಲು ಸಿದ್ಧರಾಗುತ್ತಾರೆ, ಅಷ್ಟರಲ್ಲಿ ದೇವಿ ಅವರ ಕೈಹಿಡಿದು ಪ್ರಸನ್ನತೆಯಿಂದ ಆಶೀರ್ವಾದ ನೀಡುತ್ತಾಳೆ. ‘ರಾಜೀವ’ ಈ ಶಬ್ದದ ಅರ್ಥ ಸೂರ್ಯಪ್ರಕಾಶಿ ಕಮಲ, ಅದೇ ರೀತಿ ಅಶ್ರುಭರಿತ ಕಣ್ಣು !
೪. ಶ್ರೀರಾಮರು ರಾಜೀವಲೋಚನ ಆಗಿದ್ದಾರೆ !
‘ರಾಜೀವ ಈ ಶಬ್ದದ ಇನ್ನೊಂದು ಅರ್ಥ ಗುಣಸಂಪನ್ನ ವ್ಯಕ್ತಿ ಎಂದಾಗುತ್ತದೆ ! ರಾಜೀವ ಎಂದರೆ, ದಯಾಳು, ಪರೋಪಕಾರಿ ದೃಢ ವೃತ್ತಿ, ವಿವೇಕಿ ವ್ಯಕ್ತಿ, ಇನ್ನೊಂದು ಅರ್ಥ ಸಿಗುತ್ತದೆ ಅದು ಕರ್ತವ್ಯದ ಪಾಲನೆ ಮಾಡುವಾಗ ಬುದ್ಧಿ ಹಾಗೂ ವಿವೇಕವನ್ನು ಜಾಗೃತವಾಗಿಟ್ಟು ನಿರ್ಣಯ ತೆಗೆದುಕೊಳ್ಳುವವನು !
ಎಲ್ಲ ಅರ್ಥದಲ್ಲಿ ಶ್ರೀರಾಮರು ರಾಜೀವಲೋಚನ ಆಗಿದ್ದಾರೆ. ಮನುಷ್ಯನ ವ್ಯಕ್ತಿತ್ತ್ವ, ಅವನ ಸ್ವಭಾವ ಅವನ ಕಣ್ಣುಗಳಲ್ಲಿ ಪ್ರತಿಬಿಂಬಿಸುತ್ತದೆ. ಶ್ರೀರಾಮರ ಕಣ್ಣುಗಳು ಅತ್ಯಂತ ಅಶ್ರುಭರಿತ ಪಾರದರ್ಶಕ, ಚೈತನ್ಯಮಯ ಹಾಗೂ ಪರಕೀಯರನ್ನೂ ತನ್ನತ್ತ ಸೆಳೆದುಕೊಳ್ಳುವಂತಹದ್ದಾಗಿವೆ.
– ಶ್ರೀಮತಿ. ಸ್ನೇಹಲ ಪಾಶುಪತ, ಚಿಂಚವಡ, ಪುಣೆ. (ಆಧಾರ : ‘ಶ್ರೀರಾಮನಾಮಾವಲಿ’ ಈ ಪುಸ್ತಕದಿಂದ)

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು