ಜಾಗತಿಕ ಇಂಧನ ಭದ್ರತೆಗೆ ಒಂದು ದೊಡ್ಡ ಅಪಾಯ

ಇರಾನ್ ಮತ್ತು ಇಸ್ರೈಲ್ ನಡುವಿನ ಸಂಘರ್ಷ

೧. ಇರಾನ್ ಆಯತೊಲ್ಲಾ ಖಮೇನಿ ಹತ್ಯೆ

ಅಮೆರಿಕಾ ಮತ್ತು ಇಸ್ರೈಲ್ ನಡೆಸಿದ ದಾಳಿಯಲ್ಲಿ ಇರಾನಿನ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖಮೇನಿ ಸಹಿತ ಅವರ ಕುಟುಂಬಸ್ಥರು ಮತ್ತು ಹಿರಿಯ ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಇರಾನ್‌ನಲ್ಲಿ ಇದುವರೆಗೆ ೫೫೫ ಮಂದಿ ಮೃತಪಟ್ಟಿದ್ದು, ೧೩೧ ನಗರಗಳು ಹಾನಿಗೊಳಗಾಗಿವೆ. ಇರಾನಿನ ‘ಕೊರಾನಕ್’ ನೌಕಾ ನೆಲೆಯ ಮೇಲೆ ನಡೆದ ದಾಳಿಯಲ್ಲಿ ೩ ಇರಾನಿ ನೌಕೆಗಳು ಮುಳುಗಿವೆ ಎಂಬ ಮಾಹಿತಿ ಹೊರಬಿದ್ದಿದೆ.

೨. ಇರಾನ್‌ನಿಂದ ನೆರೆ ರಾಷ್ಟ್ರಗಳ ಮೇಲೆ ದಾಳಿ ಮತ್ತು ತೈಲ ರಾಜಕಾರಣ

ಇರಾನ್ ದೇಶವು ಸೌದಿ ಅರೇಬಿಯಾದ ವಿಶ್ವದ ಅತಿದೊಡ್ಡ ‘ಸೌದಿ ಅರಾಮಕೊ’ ತೈಲ ಸಂಸ್ಕರಣಾ ಘಟಕದ (ರಾಸತನುರಾ) ಮೇಲೆ ‘ಡ್ರೋನ್’ ಮೂಲಕ ದಾಳಿ ನಡೆಸಿತು, ಇದರಿಂದ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇದರೊಂದಿಗೆ ಬಹ್ರೇನ್‌ನ ‘ಸಲ್ಮಾನ್’ ಬಂದರಿನ ಮೇಲೆಯೂ ಇರಾನ್ ದಾಳಿ ನಡೆಸಿದೆ. ಈ ಬಂದರಿನ ಮೂಲಕ ಅಮೇರಿಕನ್ ಯುದ್ಧ ಸಾಮಗ್ರಿಗಳನ್ನು ಸಾಗಿಸಲಾಗುತ್ತಿದೆ ಎಂಬ ಸಂಶಯ ಇರಾನ್‌ಗೆ ಇತ್ತು. ಈ ಎರಡೂ ದಾಳಿಗಳ ಹಿಂದೆ ಜಗತ್ತನ್ನು ಒತ್ತೆಯಾಳಾಗಿರಿಸಲು ಇರಾನ್ ಬಳಿ ಇರುವ ‘ತೈಲ’ ಎಂಬ ಅತಿದೊಡ್ಡ ಆಯುಧವೇ ಕಾರಣವಾಗಿದೆ. ಇರಾನ್ ‘ಸ್ಟ್ರೈಟ್ ಆಫ್ ಹಾರ್ಮುಜ್’ (ಹಾರ್ಮುಜ್ ಜಲಸಂಧಿ) ಅನ್ನು ಮುಚ್ಚಿದ್ದು, ಜಗತ್ತಿನ ತೈಲಪೂರೈಕೆಯನ್ನು ಅಸ್ತವ್ಯಸ್ತಗೊಳಿಸಲು ಪ್ರಯತ್ನಿಸುತ್ತಿದೆ.

೩. ಖಮೇನಿ ಆಡಳಿತದ ಸ್ವರೂಪ ಮತ್ತು ಸಂಘರ್ಷದ ಐತಿಹಾಸಿಕ ಹಿನ್ನೆಲೆ

ಆಯತೊಲ್ಲಾ ಖಮೇನಿಯವರ ೩೭ ವರ್ಷಗಳ ಆಡಳಿತವು ಅತ್ಯಂತ ಕ್ರೂರ ಮತ್ತು ದಬ್ಬಾಳಿಕೆಯಿಂದ ಕೂಡಿತ್ತು. ವಿಶೇಷವಾಗಿ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳಿದ್ದವು. (ಉದಾ. ಮದುವೆಯ ವಯಸ್ಸು, ಶಿಕ್ಷಣದ ಹಕ್ಕು) ಆದ್ದರಿಂದ ಅವರ ಸಾವಿನ ನಂತರ ಇರಾನಿನ ಮಹಿಳೆಯರಲ್ಲಿ ಸಂತಸದ ವಾತಾವರಣ ಕಂಡುಬರುತ್ತಿದೆ.

ಡಾ. (ಪ್ರಾ.) ಶಾಂಭವಿ ಥಿಟೆ

೩ ಅ. ಸಂಘರ್ಷದ ಐತಿಹಾಸಿಕ ಹಿನ್ನೆಲೆ

೩ ಅ ೧. ವರ್ಷ ೧೯೫೩ ರ ಅಧಿಕಾರ ಬದಲಾವಣೆ : ಅಮೆರಿಕ ಮತ್ತು ಬ್ರಿಟನ್‌ಗಳು ಇರಾನಿನ ಅಂಧಿನ ಪ್ರಧಾನಿ ಮೊಸಾದೆಗ್ ಅವರನ್ನು ಕೆಳಗಿಳಿಸಿ ಶಾ (ಪಹಲವಿ/ಮನೆತನ) ಅವರ ಅಧಿಕಾರವನ್ನು ಬಲಪಡಿಸಿದ್ದವು, ಅದರ ಪ್ರಭಾವವು ಇಂದಿಗೂ ಕೇಳಿಬರುತ್ತಿವೆ.

೩ ಅ ೨. ವರ್ಷ ೧೯೭೯ ರ ಇಸ್ಲಾಮಿಕ್ ಕ್ರಾಂತಿ : ಈ ಕ್ರಾಂತಿಯ ನಂತರ ಇರಾನ್‌ನಲ್ಲಿ ಧರ್ಮಾಧಾರಿತ ಆಡಳಿತ ಬಂದಿತು. ಅಂದಿನಿಂದ ‘ಡೆತ್ ಟು ಅಮೆರಿಕ’ (ಅಮೆರಿಕಾಕ್ಕೆ ಸಾವು) ಮತ್ತು ಇಸ್ರೈಲ್‌ಅನ್ನು ಜಗತ್ತಿನ ಭೂಪಟದಿಂದ ಅಳಿಸಿಹಾಕುವ ಗುರಿಯನ್ನು ಇರಾನ್ ಇಟ್ಟುಕೊಂಡಿದೆ

೩ ಅ ೩. ಭಯೋತ್ಪಾದಕ ಸಂಘಟನೆಗಳು : ಇರಾನ್ ಇಸ್ರೈಲ್ ವಿರುದ್ಧ ‘ಹಮಾಸ್’ ಮತ್ತು ‘ಹಿಜ್ಬುಲ್ಲಾ’ದಂತಹ ಜಿಹಾದಿ ಸಂಘಟನೆಗಳಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿದೆ.

೪. ಇರಾನ್‌ನಲ್ಲಿ ಅಧಿಕಾರಕ್ಕಾಗಿ ಸಂಘರ್ಷ

ಆಯತೊಲ್ಲಾ ಖಮೇನಿ ಅವರ ಸಾವಿನ ನಂತರ ಇರಾನ್‌ನಲ್ಲಿ ಅಧಿಕಾರಕ್ಕಾಗಿ ೨ ಗುಂಪುಗಳು ಸಕ್ರಿಯವಾಗಿವೆ, ಒಂದು ಅಮೆರಿಕಾದಲ್ಲಿರುವ ರೆಜಾ ಪಹಲವಿಯದ್ದು ಮತ್ತು ಇನ್ನೊಂದು ಖಮೇನಿ ಅವರ ಪುತ್ರನದ್ದಾಗಿದೆ. ಅಧಿಕಾರ ಯಾರ ಕೈ ಸೇರುತ್ತದೆ ಎಂಬುದರ ಮೇಲೆ ಯುದ್ಧದ ಭವಿಷ್ಯ ನಿರ್ಧಾರವಾಗಲಿದೆ.

ಮೂರನೇ ಮಹಾಯುದ್ಧದ ಮುನ್ಸೂಚನೆ

ಅಮೇರಿಕಾ ಮತ್ತು ಇಸ್ರೈಲ್‌ಗಳು ಇರಾನ್ ಮೇಲೆ ದೊಡ್ಡ ಪ್ರಮಾಣದ ಕ್ಷಿಪಣಿ ಮತ್ತು ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿವೆ. ಫೆಬ್ರವರಿ ೨೮ ರಂದು ಅಮೆರಿಕಾ ಮತ್ತು ಇಸ್ರೈಲ್‌ಗಳು ಇರಾನ್ ಮೇಲೆ ನಡೆಸಿದ ಈ ಬೃಹತ್ ದಾಳಿಯು ಕೇವಲ ಸೇನಾ ನೆಲೆಗಳಿಗೆ ಸೀಮಿತವಾಗಿರದೆ ಜನವಸತಿ ಪ್ರದೇಶಗಳ ಮೇಲೆಯೂ ನಡೆದಿದೆ. ಈ ದಾಳಿಯಲ್ಲಿ ಬಾಲಕಿಯರ ಶಾಲೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಿಂದ ೧೦೦ ಮಂದಿ ಸಾವನ್ನಪ್ಪಿದ್ದಾರೆ.

ಖಮೇನಿ ಸಾವು ಮತ್ತು ಇಸ್ಲಾಮಿಕ್ ಗಣರಾಜ್ಯದ ಅಂತ್ಯ ?

ಖಮೇನಿ ಸಾವಿನಿಂದ ಇರಾನ್‌ನಲ್ಲಿ ರಾಜಕೀಯ ಭೂಕಂಪ ಸಂಭವಿಸಿದೆ. ರೆಜಾ ಪಹಲವಿ ಅವರು ಇಸ್ಲಾಮಿಕ್ ಗಣರಾಜ್ಯ ಕೊನೆಗೊಂಡಿದೆ ಎಂದು ಘೋಷಿಸಿದರು; ಆದರೆ ನಿಜವಾಗಿಯೂ ಹಾಗಾಗಿದೆಯೇ ? ಈಗ ಅನೇಕ ಪ್ರಶ್ನೆಗಳು ಎದ್ದಿವೆ. ಸೇನಾ ದಂಗೆಯಾಗಿ ಸೇನಾ ಮುಖ್ಯಸ್ಥರು ಅಧಿಕಾರವನ್ನು ಕೈಗೆತ್ತಿಕೊಂಡು ಕ್ರಾಂತಿ ಮಾಡುವರೇ ? ಅಥವಾ ನಿಜವಾದ ಪ್ರಜಾಪ್ರಭುತ್ವ ಪ್ರಾರಂಭವಾಗಿ ದೇಶಭ್ರಷ್ಟ ನಾಯಕರು ಮತ್ತು ಆಂತರಿಕ ವಿರೋಧಿಗಳು ಸೇರಿ ಚುನಾವಣೆ ನಡೆಸುವರೇ ? ಅಥವಾ ಪಾಶ್ಚಾತ್ಯರ ಪರವಾಗಿರುವ ಅಮೆರಿಕಾದ ‘ಕೈಗೊಂಬೆ ಸರಕಾರ’ ಅಸ್ತಿತ್ವಕ್ಕೆ ಬರುವುದೇ ? ಮುಂಬರುವ ದಿನಗಳಲ್ಲಿ ಇರಾನ್‌ನ ಭವಿಷ್ಯ ತಿಳಿಯಲಿದೆ. ಜನರ ಪ್ರತಿಭಟನೆಗಳೂ ಹೆಚ್ಚುತ್ತಿವೆ, ಸೇನೆ ತಟಸ್ಥವಾಗಿದೆ; ಆದರೆ ಆರ್ಥಿಕ ಸಂಕಷ್ಟ ಮತ್ತು ನೆರೆ ರಾಷ್ಟ್ರಗಳ ಹಸ್ತಕ್ಷೇಪದಿಂದಾಗಿ ಅನಿಶ್ಚಿತತೆ ಇದೆ. ಸದ್ಯಕ್ಕೆ ಸ್ವಾತಂತ್ರ್ಯದ ಆಶಾವಾದವಿದೆ; ಆದರೆ ಇರಾನ್ ಇತಿಹಾಸವು ಎಚ್ಚರಿಕೆಯಿಂದ ಇರುವಂತೆ ಪಾಠ ಕಲಿಸುತ್ತದೆ.

– ಡಾ. (ಪ್ರಾ.) ಶಾಂಭವಿ ಥಿಟೆ ೨೦೨೬)

೫. ಮೂರನೇ ಮಹಾಯುದ್ಧ ಮತ್ತು ಜಾಗತಿಕ ಮಹಾಶಕ್ತಿಗಳ ಪಾತ್ರ

ಇಂದಿನ ಕಾಲದಲ್ಲಿ ಮಹಾಯುದ್ಧವು ಕೇವಲ ಕ್ಷಿಪಣಿಗಳಿಂದ ಮಾತ್ರವಲ್ಲ, ಸೈಬರ್ ದಾಳಿಗಳು ಮತ್ತು ಇಂಧನ ರಾಜಕಾರಣದ (ಆಯಿಲ್ ಪಾಲಿಟಿಕ್ಸ್) ಮೂಲಕವೂ ನಡೆಯುತ್ತಿದೆ.

ಅ. ಚೀನಾ : ಚೀನಾದ ಇಂಧನ ಅವಶ್ಯಕತೆಯು ಇರಾನ್ ಮೇಲೆ ಅವಲಂಬಿತವಾಗಿರುವುದರಿಂದ ಈ ಯುದ್ಧ ನಿಲ್ಲಬೇಕು ಎಂದು ಅದು ಬಯಸುತ್ತದೆ. ಚೀನಾದ ಮುಖ್ಯ ಆಸಕ್ತಿ ತೈಲದಲ್ಲಿದೆ. ಇರಾನ್ ಕುಸಿದರೆ ಚೀನಾಕ್ಕೆ ದೊಡ್ಡ ಆರ್ಥಿಕ ಹೊಡೆತ ಬೀಳಲಿದೆ.

ಆ. ರಷ್ಯಾ : ರಷ್ಯಾ ಸದ್ಯಕ್ಕೆ ಉಕ್ರೇನ್ ಯುದ್ಧದಲ್ಲಿ ತೊಡಗಿರುವುದರಿಂದ ನೇರವಾಗಿ ಈ ಸಂಘರ್ಷಕ್ಕೆ ಇಳಿಯುವ ಸಾಧ್ಯತೆ ಕಡಿಮೆಯಿದೆ. ರಷ್ಯಾ ಕೂಡ ತೆರೆಮರೆಯಿಂದ ಇರಾನ್ ಅನ್ನು ಬೆಂಬಲಿಸುತ್ತಿದೆ.

ಇ. ಅಮೆರಿಕಾ : ಅಮೆರಿಕಾಕ್ಕೆ ಇರಾನ್‌ನಲ್ಲಿರುವ ತೈಲ ಸಂಗ್ರಹ ಮತ್ತು ‘ಸ್ಟ್ರೈಟ್ ಆಫ್ ಹಾರ್ಮುಜ್’ ಮೇಲೆ ವರ್ಚಸ್ಸು ಸಾಧಿಸುವುದರಲ್ಲಿ ಹೆಚ್ಚು ಆಸಕ್ತಿಯಿದೆ.

೬. ಭಾರತದ ಮೇಲಾಗುವ ಪರಿಣಾಮಗಳು ಮತ್ತು ಪ್ರತಿಕ್ರಿಯೆ

೬ ಅ. ಭಾರತದಲ್ಲಿನ ಪ್ರತಿಕ್ರಿಯೆಗಳು : ಖಮೇನಿ ಸಾವಿನ ನಂತರ ಭಾರತದ ಕೆಲವು ಭಾಗಗಳಲ್ಲಿ (ವಿಶೇಷವಾಗಿ ಲಕ್ಷ್ಮಣಪುರಿ ಮತ್ತು ಕಾಶ್ಮೀರ) ಶೋಕ ವ್ಯಕ್ತಪಡಿಸಲಾಯಿತು. ಈ ಮಾನಸಿಕತೆಯು ಆತಂಕಕಾರಿಯಾಗಿದೆ; ಏಕೆಂದರೆ ಖಮೇನಿ ಭಾರತೀಯ ಮುಸಲ್ಮಾನರ ಹಿತಕ್ಕಾಗಿ ಯಾವುದೇ ಕಾರ್ಯವನ್ನೂ ಮಾಡಿರಲಿಲ್ಲ.

೬ ಆ. ಆರ್ಥಿಕ ಹೊಡೆತ : ಈ ಯುದ್ಧದಿಂದ ಕಚ್ಚಾ ತೈಲ ಪೂರೈಕೆ ಅಸ್ತವ್ಯಸ್ತವಾಗಬಹುದು, ಇದರ ಪರಿಣಾಮವಾಗಿ ಭಾರತದಲ್ಲಿ ಇಂಧನ ದರ ಏರಿಕೆ, ಹಣದುಬ್ಬರ ಮತ್ತು ಷೇರು ಮಾರುಕಟ್ಟೆಯಲ್ಲಿ ಕುಸಿತ ಉಂಟಾಗಬಹುದು. ಭಾರತದ ಶೇ. ೪೦ ರಷ್ಟು ತೈಲ ಪೂರೈಕೆಯು ‘ಸ್ಟ್ರೈಟ್ ಆಫ್ ಹಾರ್ಮುಜ್’ ಮೂಲಕವೇ ನಡೆಯುತ್ತದೆ. ಈ ಮಾರ್ಗ ಮುಚ್ಚಲ್ಪಟ್ಟರೆ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಈ ಯುದ್ಧದ ಹಿನ್ನೆಲೆಯಲ್ಲಿ ಭಾರತವು ‘ಇಂಡಿಯಾ-ಮಿಡಲ್ ಈಸ್ಟ್ ಯುರೋಪ್ ಎಕನಾಮಿಕ್ ಕಾರಿಡಾರ್’ನಂತಹ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕಾಗುತ್ತದೆ.

೭. ಭಾರತದ ಪಾತ್ರ ಮತ್ತು ಪರಿಣಾಮ

ಭಾರತವು ಈ ವಿಷಯದಲ್ಲಿ ತಟಸ್ಥ ನೀತಿಯನ್ನು ಅನುಸರಿಸಿದೆ. ಭಾರತಕ್ಕೆ ಒಂದು ಕಡೆ ಇಸ್ರೈಲ್ ಮತ್ತು ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಬೇಕಿದೆ, ಮತ್ತೊಂದೆಡೆ ಚಾಬಹಾರ್ ಬಂದರು ಮತ್ತು ಇರಾನ್‌ನಲ್ಲಿರುವ ವ್ಯಾಪಾರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬೇಕಿದೆ.

ಸಾರಾಂಶ

ಇರಾನ್ ಮತ್ತು ಇಸ್ರೈಲ್ ನಡುವಿನ ಈ ಸಂಘರ್ಷವು ಈಗ ಕೇವಲ ಸೈನಿಕ ಮಟ್ಟದಲ್ಲಷ್ಟೇ ಉಳಿಯದೆ ಜಾಗತಿಕ ಇಂಧನ ಭದ್ರತೆಗೆ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಅಧಿಕಾರದ ಮಹತ್ವಾಕಾಂಕ್ಷೆಯೇ ಈ ಯುದ್ಧದ ಮೂಲ ಕಾರಣವಾಗಿದ್ದು, ಈ ಯುದ್ಧವು ಆದಷ್ಟು ಬೇಗ ನಿಲ್ಲುವುದು ಜಾಗತಿಕ ಆರ್ಥಿಕತೆ ಮತ್ತು ಶಾಂತಿಗಾಗಿ ಅತ್ಯಗತ್ಯವಾಗಿದೆ.

ಡಾ. (ಪ್ರಾ.) ಕು. ಶಾಂಭವಿ ಥಿಟೆ, ವಿದೇಶಾಂಗ ನೀತಿ ಸಂಶೋಧಕರು ಮತ್ತು ಸಹಾಯಕ ಪ್ರಾಧ್ಯಾಪಕರು, ಕುಮಾರಗುರು ಗ್ರೂಪ್ ಆಫ್  ಇನ್‌ಸ್ಟಿಟ್ಯೂಷನ್’ ಕೊಯಮುತ್ತೂರು, ತಮಿಳುನಾಡು(೩.೩.೨೦೨೬)