ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ ವಿನಂತಿ !
೨೬.೩.೨೦೨೬ ರಂದು ಶ್ರೀರಾಮನವಮಿ ಮತ್ತು ೨.೪.೨೦೨೬ ರಂದು ಹನುಮಾನ ಜಯಂತಿ ಇದೆ. ಈ ನಿಮಿತ್ತ ನಮಗೆ ಸನಾತನದ ಗ್ರಂಥಗಳು, ಕಿರುಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಿಜ್ಞಾಸುಗಳಿಗೆ ತಲುಪಿಸುವ ಸುವರ್ಣಾವಕಾಶ ಲಭಿಸಿದೆ. ಈ ಸಂದರ್ಭದ ಲಾಭವನ್ನು ಪಡೆದುಕೊಳ್ಳಲು ಸಾಧಕರು ಮುಂದೆ ತಿಳಿಸಲಾದ ಗ್ರಂಥಗಳು ಮತ್ತು ಪ್ರಸಾರ ಸಾಹಿತ್ಯಗಳನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ವಿತರಿಸಲು ಪ್ರಯತ್ನಿಸಬೇಕು.

೧. ‘ಶ್ರೀರಾಮ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ)’ ಮತ್ತು ‘ಮಾರುತಿ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ)’ ಈ ಎರಡೂ ಕಿರುಗ್ರಂಥಗಳ ಕುರಿತು
ಹೆಚ್ಚಿನವರಿಗೆ ದೇವರ ಬಗ್ಗೆ ಇರುವ ಅಲ್ಪಸ್ವಲ್ಪ ಜ್ಞಾನವು ಸಾಮಾನ್ಯವಾಗಿ ಅವರು ಬಾಲ್ಯದಲ್ಲಿ ಓದಿದ ಅಥವಾ ಕೇಳಿದ ಕಥೆಗಳಿಂದ ಬಂದಿರುತ್ತದೆ. ಇಂತಹ ಅಲ್ಪ ಜ್ಞಾನದಿಂದಾಗಿ ಅವರಿಗೆ ದೇವರ ಮೇಲಿರುವ ನಂಬಿಕೆಯೂ ಅಲ್ಪವೇ ಆಗಿರುತ್ತದೆ. ದೇವತೆಗಳ ಬಗ್ಗೆ ಹೆಚ್ಚಿನ ಜ್ಞಾನ ಲಭಿಸಿದರೆ, ಅವರ ಮೇಲೆ ಹೆಚ್ಚಿನ ವಿಶ್ವಾಸ ಮೂಡಲು ಸಹಾಯವಾಗುತ್ತದೆ. ವಿಶ್ವಾಸವು ಮುಂದೆ ಶ್ರದ್ಧೆಯಾಗಿ ರೂಪಾಂತರಗೊಳ್ಳುವುದರಿಂದ ದೇವತೆಯ ಉಪಾಸನೆ ಮತ್ತು ಸಾಧನೆಯೂ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಆದುದರಿಂದಲೇ ಈ ಕಿರುಗ್ರಂಥಗಳಲ್ಲಿ ಶ್ರೀರಾಮ ಮತ್ತು ಮಾರುತಿಯ ಬಗ್ಗೆ ಇತರ ಕಡೆಗಳಲ್ಲಿ ಸಾಮಾನ್ಯವಾಗಿ ಸಿಗದ, ಆದರೆ ಅತ್ಯಂತ ಉಪಯುಕ್ತವಾದ ಅಧ್ಯಾತ್ಮಶಾಸ್ತ್ರೀಯ ಜ್ಞಾನವನ್ನು ನೀಡುವ ಬಗ್ಗೆ ವಿಶೇಷ ಒತ್ತು ನೀಡಲಾಗಿದೆ.
೨. ‘ಶ್ರೀರಾಮರಕ್ಷಾಸ್ತೋತ್ರ, ಮಾರುತಿಸ್ತೋತ್ರ ಮತ್ತು ಹನುಮಾನಚಾಲೀಸಾ’ ಹಾಗೂ ‘ಶ್ರೀರಾಮರಕ್ಷಾಸ್ತೋತ್ರ ಏವಂ ಹನುಮಾನ್ ಚಾಲೀಸಾ’ (ಹಿಂದಿಯಲ್ಲಿ) ಈ ಕಿರುಗ್ರಂಥಗಳೂ ಲಭ್ಯವಿವೆ.
೩. ‘ದೇವತೆಗಳು, ಅಧ್ಯಾತ್ಮಶಾಸ್ತ್ರ, ಸಾಧನೆ, ಧಾರ್ಮಿಕ ವಿಧಿಗಳು, ಆಚಾರಧರ್ಮ’ ಮುಂತಾದ ವಿಷಯಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ಒಳಗೊಂಡಿರುವ ಗ್ರಂಥಗಳು ಲಭ್ಯವಿವೆ.
ಯಾವ ಭಾಷೆಯಲ್ಲಿ ಗ್ರಂಥ ಲಭ್ಯವಿದೆಯೋ, ಆ ಭಾಷೆಯ ಕಾಲಮ್‌ನಲ್ಲಿ ಈ ಗುರುತು ಮಾಡಲಾಗಿದೆ.

ಅದೇ ರೀತಿ ಮೇಲಿನ ಗ್ರಂಥಗಳ ಇ-ಬುಕ್ ಸಹ ‘ಗುಗಲ್ ಪ್ಲೇ ಬುಕ್ಸ್’ ಮತ್ತು ‘ಅಮೇಜಾನ್ ಕಿಂಡಲ್’ನಲ್ಲಿ ಲಭ್ಯವಿದೆ.
೪. ದೇವತೆಗಳ ನಾಮಪಟ್ಟಿಗಳು : ವಿವಿಧ ದೇವತೆಗಳ ನಾಮಪಟ್ಟಿಗಳು ಹಾಗೂ ವಾಸ್ತುವಿನ ಶುದ್ಧಿಕರಣಕ್ಕಾಗಿ ಉಪಯುಕ್ತವಾದ ವಾಸ್ತುಚಪ್ಪರ.
೫. ದೇವತೆಗಳ ಸಾತ್ತ್ವಿಕ ಚಿತ್ರಗಳು ಮತ್ತು ಪದಕಗಳು : ಶಿವ, ದತ್ತ, ಗಣಪತಿ, ಶ್ರೀರಾಮ, ಶ್ರೀಕೃಷ್ಣ, ಮಾರುತಿ, ಶ್ರೀ ದುರ್ಗಾದೇವಿ, ಶ್ರೀ ಲಕ್ಷ್ಮಿ, ಅಷ್ಟದೇವತೆಗಳ ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಚಿತ್ರಗಳು (ಫ್ರೇಮ್ ಸಹಿತ) ಹಾಗೆಯೇ ಶಿವ-ದುರ್ಗೆ, ದತ್ತ-ಗಣಪತಿ, ಕೃಷ್ಣ-ಲಕ್ಷ್ಮಿ, ರಾಮ-ಮಾರುತಿ ಇವರುಗಳ ಚಿತ್ರವಿರುವ ಪದಕಗಳು (ಲಾಕೆಟ್‌ಗಳು) ದಾರ ಸಹಿತ ಲಭ್ಯವಿವೆ.
ಗ್ರಂಥಗಳು, ಉತ್ಪಾದನೆಗಳು ಇತ್ಯಾದಿಗಳ ಪ್ರದರ್ಶನವನ್ನು ಆಯೋಜಿಸಿ, ಪ್ರದರ್ಶನದ ಸ್ಥಳದಲ್ಲಿ ಗ್ರಂಥಗಳ ಮಾಹಿತಿಯನ್ನು ನೀಡುವ ‘ಫ್ಲೆಕ್ಸ್’ಗಳನ್ನು ಹಾಕಬಹುದು. ಸಾಧಕರು ಮತ್ತು ವಾಚಕರು ಮೇಲಿನ ಪ್ರಸಾರ ಸಾಹಿತ್ಯವನ್ನು ಸ್ಥಳೀಯ ವಿತರಕರಿಂದ ಪಡೆದುಕೊಳ್ಳಬೇಕು. ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮೇಲಿನ ಗ್ರಂಥಗಳು ಹಾಗೂ ಇತರ ಪ್ರಸಾರ ಸಾಹಿತ್ಯಕ್ಕಾಗಿ ಸ್ಥಳೀಯ ವಿತರಕರಲ್ಲಿ ಅಥವಾ ೯೩೨೨೩೧೫೩೧೭ ಈ ಸಂಪರ್ಕ ಸಂಖ್ಯೆಗೆ ಅಥವಾ sanatanshop. com ಜಾಲತಾಣದ ಮೂಲಕ ಬೇಡಿಕೆಯನ್ನು ಸಲ್ಲಿಸಬಹುದು.
ಸನಾತನದ ಗ್ರಂಥಸಾಗರವನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಯತ್ನಿಸಿ !
ಅಖಿಲ ವಿಶ್ವದಲ್ಲಿ ಧರ್ಮಾಧಾರಿತ ಹಿಂದೂ ರಾಷ್ಟ್ರದ ಅಡಿಪಾಯ ಹಾಕುವಲ್ಲಿ, ಹಾಗೆಯೇ ಜಿಜ್ಞಾಸುಗಳನ್ನು ಧರ್ಮಾಚರಣಿಗಳನ್ನಾಗಿ ಮಾಡುವಲ್ಲಿ ಸನಾತನವು ಪ್ರಕಟಿಸಿದ ಗ್ರಂಥಗಳ ಪಾಲು ಬಹಳ ದೊಡ್ಡದಿದೆ.
ಶ್ರೀರಾಮನವಮಿ ಮತ್ತು ಹನುಮಾನ ಜಯಂತಿ ನಿಮಿತ್ತ ಗ್ರಂಥ ಪ್ರದರ್ಶನವನ್ನು ಏರ್ಪಡಿಸುವಾಗ, ಹೆಚ್ಚಿನ ಸಂಖ್ಯೆಯ ಜಿಜ್ಞಾಸುಗಳಿಗೆ ಈ ಗ್ರಂಥಗಳನ್ನು ತಲುಪಿಸಲು ಪ್ರಯತ್ನಿಸಬೇಕು. ‘ಪ್ರದರ್ಶನದ ಸ್ಥಳದಲ್ಲಿ ಗರಿಷ್ಠ ಪ್ರಮಾಣದ ಗ್ರಂಥಗಳನ್ನು ಪ್ರದರ್ಶನಕ್ಕೆ (ಡಿಸ್ಪ್ಲೆ) ಇಡಲಾಗಿದೆಯೇ’ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸ್ಥಳದ ಅಭಾವದಿಂದ ಕೆಲವು ಗ್ರಂಥಗಳನ್ನು ಪ್ರದರ್ಶಿಸಲು ಸಾಧ್ಯವಾಗದಿದ್ದರೆ, ಗ್ರಂಥಗಳ ಮಾಹಿತಿಯನ್ನು ವಿವರವಾಗಿ ತಿಳಿಸುವ ‘ಗ್ರಂಥಸೂಚಿ’ಯನ್ನು ಪ್ರದರ್ಶನದಲ್ಲಿ ಇಡಬೇಕು. ಇಂತಹ ಸಂದರ್ಭದಲ್ಲಿ ಸಾಧ್ಯವಾದರೆ, ಹೊಸದಾಗಿ ಪ್ರಕಾಶನಗೊಂಡ ಗ್ರಂಥಗಳಿಗಾಗಿ ಪ್ರತ್ಯೇಕವಾದ ಜೋಡಣೆಯನ್ನು ಮಾಡಬಹುದು.
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
‘ವಾಟ್ಸಾಪ್’ ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುವ ಮೂಲಕ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಕದಿಯುವುದರಿಂದ ನಾಗರಿಕರು ಎಚ್ಚರದಿಂದಿರಬೇಕು!
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !