
ಭೋಪಾಲ್ – ಅಕ್ರಮ ಲಾಭ ಪಡೆಯಲು ಮಾಧ್ಯಮ (ಪತ್ರಿಕಾ) ಸ್ವಾತಂತ್ರ್ಯವನ್ನು ಬಳಸಿಕೊಳ್ಳುವಂತಿಲ್ಲ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಹೇಳಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿದ್ದರೂ, ಅಕ್ರಮ ಲಾಭಕ್ಕಾಗಿ ಮಾಧ್ಯಮ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 384 (ಸುಲಿಗೆ) ಮತ್ತು 420 (ವಂಚನೆ) ಅಡಿಯಲ್ಲಿ ದಾಖಲಾದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪತ್ರಕರ್ತರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಿಮಾಂಶು ಜೋಶಿ ಅವರ ಪೀಠವು ಈ ನಿರೀಕ್ಷಣೆ ಮಾಡಿದೆ. ವಂಚನೆ ಮತ್ತು ಸುಲಿಗೆಯ ಆರೋಪ ಎದುರಿಸುತ್ತಿರುವ ಪತ್ರಕರ್ತನ ಅರ್ಜಿಯನ್ನು ನ್ಯಾಯಾಲಯವು ಭಾಗಶಃ ಅಂಗೀಕರಿಸಿದೆ. ನ್ಯಾಯಾಲಯವು ಸೆಕ್ಷನ್ 420 ರ ಅಡಿಯಲ್ಲಿನ ವಂಚನೆಯ ಆರೋಪವನ್ನು ರದ್ದುಗೊಳಿಸಿದೆ; ಆದರೆ ಸೆಕ್ಷನ್ 384 ರ ಅಡಿಯಲ್ಲಿ ಸುಲಿಗೆಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದುವರಿಸಲು ಅನುಮತಿ ನೀಡಿದೆ.
1. ಪತ್ರಕರ್ತನು ಸಮಾಜದ ರಕ್ಷಕನಾಗಿ ಕೆಲಸ ಮಾಡುತ್ತಾನೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡುವ ಕಾರ್ಯವನ್ನು ನಿರ್ವಹಿಸುತ್ತಾನೆ. ಆದಾಗ್ಯೂ, ಮಾಧ್ಯಮ ಸ್ವಾತಂತ್ರ್ಯದ ಗುರಾಣಿಯನ್ನು ಅಕ್ರಮ ಲಾಭ ಪಡೆಯುವ ಅಸ್ತ್ರವನ್ನಾಗಿ ಮಾಡಲು ಬಿಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
2. ಈ ಪ್ರಕರಣದಲ್ಲಿ ಯಾದವ ಸಮುದಾಯದ ಜಿಲ್ಲಾಧ್ಯಕ್ಷ ಕೋಕಲಾಲ್ ಯಾದವ್ ಅವರು 5 ಆಗಸ್ಟ್ 2023 ರಂದು ಪತ್ರಕರ್ತನ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಪ್ರಕಾರ, ಸದರಿ ಪತ್ರಕರ್ತ ಜುಲೈ 18, 2023 ರಂದು ಕೋಕಲಾಲ್ ಯಾದವ್ ಮತ್ತು ಇತರರನ್ನು ಭೇಟಿಯಾಗಿದ್ದನು. ತನ್ನನ್ನು ಪತ್ರಕರ್ತನೆಂದು ಪರಿಚಯಿಸಿಕೊಂಡು, ಕಂದಾಯ ನಿರೀಕ್ಷಕರ ಕಚೇರಿಯ ಸಮೀಪವಿರುವ ಅವರ ಕಟ್ಟಡ ನಿರ್ಮಾಣವು ಅಕ್ರಮವಾಗಿದೆ ಎಂದು ಹೇಳಿದ್ದನು. ಈ ಪತ್ರಕರ್ತ ಕೋಕಲಾಲ್ ಅವರ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದನು ಮತ್ತು ಹಣ ನೀಡದಿದ್ದರೆ ಅಕ್ರಮ ನಿರ್ಮಾಣದ ಬಗ್ಗೆ ಲೇಖನ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದನು ಎಂದು ದೂರಲಾಗಿತ್ತು.
3. ಕೋಕಲಾಲ್ ಅವರು ಹಣ ನೀಡಲು ನಿರಾಕರಿಸಿದರು. ನಂತರ, ಈ ಪತ್ರಕರ್ತ ‘ಪ್ರದೇಶ್ ಟುಡೇ’ ಪತ್ರಿಕೆಯಲ್ಲಿ ಈ ಬಗ್ಗೆ ಲೇಖನವನ್ನು ಪ್ರಕಟಿಸಿದನು. ಸ್ಮಾರಕ ನಿರ್ಮಾಣದಲ್ಲಿ ಅಕ್ರಮಗಳು ನಡೆದಿವೆ ಎಂದು ಪತ್ರಕರ್ತ ಲೇಖನದಲ್ಲಿ ಆರೋಪಿಸಿದ್ದನು.
4. ಈ ಲೇಖನದ ಆಧಾರದ ಮೇಲೆ ಕೋಕಲಾಲ್ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿದ್ದರು.
5. ಈ ಪ್ರಕರಣದ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯಕ್ಕೆ ವಂಚನೆಗೆ ಸಂಬಂಧಿಸಿದ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದ್ದರಿಂದ ನ್ಯಾಯಾಲಯವು ಪತ್ರಕರ್ತನನ್ನು ವಂಚನೆಯ ಆರೋಪದಿಂದ ಮುಕ್ತಗೊಳಿಸಿತು. ಆದರೆ, ಸೆಕ್ಷನ್ 384 ರ ಅಡಿಯಲ್ಲಿ ಸುಲಿಗೆಗೆ ಸಂಬಂಧಿಸಿದ ಆರೋಪಗಳು ಪ್ರಾಥಮಿಕ ಹಂತದಲ್ಲಿ ಸಾಬೀತಾಗಿವೆ ಎಂದು ನ್ಯಾಯಾಲಯ ನಮೂದಿಸಿದೆ.
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ
ಹಿಂದೂ ಮಹಿಳಾ ವೈದ್ಯರನ್ನು ಬೆನ್ನಟ್ಟಿ ಪೀಡಿಸುತ್ತಿದ್ದ ಆಜಂ ವಿರುದ್ಧ ಮೊಕದ್ದಮೆ ದಾಖಲು : Uttarakhand Lady Doctor Harassed
ರಂಗಾರೆಡ್ಡಿ (ತೆಲಂಗಾಣ)ಯಲ್ಲಿ ಜಾಮೀನಿನ ಮೇಲೆ ಹೊರಬಂದ ಆರೋಪಿಯಿಂದ ಪತ್ನಿ, ಮಕ್ಕಳು, ದೂರುದಾರನೂ ಸೇರಿದಂತೆ ಸೇರಿ 6 ಜನರ ಹತ್ಯೆ
ಸರ್ವೋಚ್ಚ ನ್ಯಾಯಾಲಯ: ನ್ಯಾಯಮೂರ್ತಿಗಳೆದುರು ದಾಖಲೆಗಳನ್ನು ಎಸೆದ ವ್ಯಕ್ತಿ
ಬಂಟ್ವಾಳದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಮುಸ್ಲಿಮನಿಗೆ 20 ವರ್ಷಗಳ ಜೈಲು ಶಿಕ್ಷೆ