
ರಂಗಾರೆಡ್ಡಿ (ತೆಲಂಗಾಣ) – ಇಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿಯೊಬ್ಬನು ಜುಲೈ 10 ರ ರಾತ್ರಿ ತನ್ನ ಪತ್ನಿ, ಮಕ್ಕಳು ಹಾಗೂ ದೂರು ನೀಡಿದ್ದ 16 ವರ್ಷದ ಹುಡುಗಿ ಮತ್ತು ಆಕೆಯ ಸಂಬಂಧಿಕರು ಸೇರಿದಂತೆ ಒಟ್ಟು 6 ಜನರ ಹತ್ಯೆ ಮಾಡಿದ್ದಾನೆ. ಆರೋಪಿಗೆ ಮುಂಗಡ ಜಾಮೀನು ಮಂಜೂರಾದ ನಂತರ, ಕಳೆದ ತಿಂಗಳು ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಸಿಕ್ಕಿತ್ತು. ಹತ್ಯೆಯ ಮಾಡಿ ಆರೋಪಿಯು ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 35 ವರ್ಷದ ಈ ಆರೋಪಿಯ ಹೆಸರು ರಾಜು ಕುಮಾರ. ಆರೋಪಿಯು ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ಹುಡುಗಿ ದೂರು ನೀಡಿದ್ದಳು.
ದೂರು ನೀಡಿದ್ದ 16 ವರ್ಷದ ಹುಡುಗಿಯ ಮನೆಗೆ ಆರೋಪಿಯು ರಾತ್ರಿ ಸುಮಾರು 10:45 ರ ವೇಳೆಗೆ ತಲುಪಿದ್ದನು. ಬಾಗಿಲು ತಟ್ಟಿದಾಗ ಸಂತ್ರಸ್ತೆಯ ತಾಯಿ ಬಾಗಿಲು ತೆರೆದರು, ತಕ್ಷಣವೇ ಶಂಕಿತ ಆರೋಪಿಯು ಆಕೆಯ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದನು. ತದನಂತರ ನಿದ್ರೆಯಲ್ಲಿದ್ದ ಸಂತ್ರಸ್ತೆಯ 60 ವರ್ಷದ ಅಜ್ಜಿಯನ್ನೂ ಹತ್ಯೆ ಮಾಡಿದನು. ನಂತರ ಆರೋಪಿಯು 16 ವರ್ಷದ ಸಂತ್ರಸ್ತೆಯನ್ನು ಬಲವಂತವಾಗಿ ಕಾರಿಗೆ ಎಳೆದುಕೊಂಡು ಹೋಗಿ, ಗ್ರಾಮದ ಕೆರೆಯ ಬಳಿ ಕರೆದೊಯ್ದು ಚಾಕುವಿನಿಂದ ತೀವ್ರವಾಗಿ ಇರಿದು ಕೊಂದಿದ್ದಾನೆ. ಶಂಕಿತನು ಸಂತ್ರಸ್ತೆಯ ಮೃತದೇಹವನ್ನು ಕೆರೆಯ ಪಕ್ಕದಲ್ಲೇ ಬಿಟ್ಟು ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.
ಅದಾದ ನಂತರ ರಾತ್ರಿ 11:30 ರ ಸುಮಾರಿಗೆ ಆತ ತನ್ನ ಮನೆಗೆ ಹೋಗಿ 31 ವರ್ಷದ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಅದೇ ಕ್ರೂರ ರೀತಿಯಲ್ಲಿ ತನ್ನ 4 ವರ್ಷದ ಮತ್ತು 18 ತಿಂಗಳ ಮಗು ಹೀಗೆ ಇಬ್ಬರು ಮಕ್ಕಳನ್ನೂ ನಿರ್ದಯವಾಗಿ ಕೊಂದಿದ್ದಾನೆ. ಇಬ್ಬರೂ ಮಕ್ಕಳು ನಿದ್ರಿಸುತ್ತಿದ್ದಾಗ ಆತ ಅವರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಮಾಡಿದ ನಂತರ ಆರೋಪಿಯು ತನ್ನ ತಂದೆಗೆ ದೂರವಾಣಿ (ಫೋನ್) ಕರೆ ಮಾಡಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ