ಹಿಂದೂ ಮಹಿಳಾ ವೈದ್ಯರನ್ನು ಬೆನ್ನಟ್ಟಿ ಪೀಡಿಸುತ್ತಿದ್ದ ಆಜಂ ವಿರುದ್ಧ ಮೊಕದ್ದಮೆ ದಾಖಲು : Uttarakhand Lady Doctor Harassed

AI-ರಚಿತ ಚಿತ್ರ

ರುದ್ರಪುರ (ಉತ್ತರಾಖಂಡ) – ಇಲ್ಲಿನ ಆಜಂ ಎಂಬ ಮುಸ್ಲಿಂ ಯುವಕ ಕಳೆದ 2 ವರ್ಷಗಳಿಂದ ಮಹಿಳಾ ವೈದ್ಯರೊಬ್ಬರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಸಂತ್ರಸ್ತ ಮಹಿಳಾ ವೈದ್ಯರು ದೂರು ನೀಡಿದ್ದಾರೆ. ಆರೋಪಿಯು ಕಳೆದ 2 ವರ್ಷಗಳಿಂದ ತನ್ನನ್ನು ಬೆನ್ನಟ್ಟುತ್ತಿದ್ದ ಮತ್ತು ತಾನು ಒಬ್ಬಂಟಿಯಾಗಿರುವುದನ್ನು ನೋಡಿ ಅಶ್ಲೀಲ ಕೃತ್ಯಗಳನ್ನು ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

1. ಸಂತ್ರಸ್ತ ಮಹಿಳಾ ವೈದ್ಯರು ಮಾತನಾಡಿ, ತಾನು 6 ವರ್ಷಗಳ ಹಿಂದೆ ಉಧಮಸಿಂಗ್ ನಗರದಿಂದ ರುದ್ರಪುರಕ್ಕೆ ವಾಸಿಸಲು ಬಂದಿದ್ದೆ. ಕಳೆದ 3 ವರ್ಷಗಳಿಂದ ಅವರು ರುದ್ರಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನೇತ್ರತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 5 – 6 ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಸಿತಾರಗಂಜ್ ನಿವಾಸಿಯಾದ ಆಜಂ ಎಂಬ ಯುವಕನ ಪರಿಚಯವಾಗಿ ಸ್ನೇಹ ಬೆಳೆದಿತ್ತು.

2. ಆರೋಪಿಯು ಮಹಿಳಾ ವೈದ್ಯರ ಮನೆಯ ಸಮೀಪದಲ್ಲೇ ವಾಸಿಸುತ್ತಿದ್ದರಿಂದ ಅವರ ನಡುವೆ ಒಳ್ಳೆಯ ಸ್ನೇಹ ಏರ್ಪಟ್ಟು, ಫೋನ್‌ನಲ್ಲೂ ಮಾತನಾಡುತ್ತಿದ್ದರು; ಆದರೆ ಆಜಂನ ವಿಚಿತ್ರ ನಡವಳಿಕೆಯಿಂದ ಬೇಸತ್ತ ಮಹಿಳಾ ವೈದ್ಯರು ಕಳೆದ 2 ವರ್ಷಗಳಿಂದ ಆತನೊಂದಿಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.

3. ಸಂವಹನ ನಿಲ್ಲಿಸಿದ ನಂತರವೂ ಆಜಂ ಮಹಿಳಾ ವೈದ್ಯರನ್ನು ಬಿಡಲಿಲ್ಲ. ಆತ ನಿರಂತರವಾಗಿ ವೈದ್ಯೆಗೆ ಫೋನ್ ಮಾಡಿ ಮತ್ತೆ ಸ್ನೇಹ ಬೆಳೆಸುವಂತೆ ಒತ್ತಡ ಹೇರುತ್ತಿದ್ದ. ಅಷ್ಟೇ ಅಲ್ಲದೆ, ವೈದ್ಯರು ಆಸ್ಪತ್ರೆಗೆ ಹೋಗುವ ದಾರಿಯಲ್ಲೂ ಆಕೆಯನ್ನು ಬೆನ್ನಟ್ಟಲು ಪ್ರಾರಂಭಿಸಿದ.

4. ತಾನು ಒಬ್ಬಂಟಿಯಾಗಿರುವುದನ್ನು ನೋಡಿ ಆತ ತನ್ನ ಕೆಬಿನ್ (ಕಚೇರಿ) ವರೆಗೂ ಬಂದು ಆಕ್ಷೇಪಾರ್ಹ ಕೃತ್ಯಗಳನ್ನು ಮಾಡುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಈ ಕಿರುಕುಳದಿಂದ ಬೇಸತ್ತ ವೈದ್ಯರು ಮಾನಸಿಕವಾಗಿ ನೊಂದಿದ್ದು, ತಮಗೆ ಅಸುರಕ್ಷಿತ ಭಾವನೆ ಮೂಡತೊಡಗಿತ್ತು.

5. ಕೊನೆಗೆ ಸಂತ್ರಸ್ತೆ ರುದ್ರಪುರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಆರೋಪಿ ಆಜಂ ವಿರುದ್ಧ ಲಿಖಿತ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಆಜಂನ ಬಂಧನಕ್ಕಾಗಿ ವಿವಿಧೆಡೆ ದಾಳಿ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಹೆಣ್ಣುಮಕ್ಕಳು, ಯುವತಿಯರು ಮತ್ತು ಮಹಿಳೆಯರ ಮೇಲೆ ಮತಾಂಧ ಮುಸ್ಲಿಮರು ವಕ್ರದೃಷ್ಟಿ ಬೀರಲು ಧೈರ್ಯ ಮಾಡದಂತೆ ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆ ಅತ್ಯಗತ್ಯ!