
ಇಂದಿನ ಧಾವಂತದ ಜೀವನದಲ್ಲಿ ’ಪ್ಯಾಕ್ ಮಾಡಿದ’ ಆಹಾರ ಪದಾರ್ಥಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಅವು ಅನುಕೂಲಕರ, ಅಗ್ಗ ಮತ್ತು ತಕ್ಷಣ ತಿನ್ನಲು ಸಿಗುತ್ತವೆ ಎಂಬ ಕಾರಣಕ್ಕೆ ‘ವೇಫರ್ಸ್’ ನಂತಹ ಪದಾರ್ಥಗಳು ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರ ಅಚ್ಚುಮೆಚ್ಚಿನವುಗಳಾಗಿವೆ; ಆದರೆ ಈ ಅನುಕೂಲತೆಯ ಹಿಂದೆ ಅಡಗಿರುವ ಅಜಾಗರೂಕತೆ ಮತ್ತು ಗ್ರಾಹಕರಿಗಾಗುತ್ತಿರುವ ವಂಚನೆ ಈಗ ಗಂಭೀರ ಸಮಸ್ಯೆಯಾಗುತ್ತಿದೆ. ಇತ್ತೀಚೆಗೆ ಒಂದು ಸಂಸ್ಥೆಯ ‘ವೇಫರ್ಸ್’ ಪ್ಯಾಕೆಟ್‌ನಲ್ಲಿ ಶೇ. ೨೫ ರಷ್ಟು ‘ವೇಫರ್ಸ’ಗಳು ಸೀದಿರುವುದು (ಸುಟ್ಟು ಹೋಗಿರುವುದು) ಕಂಡುಬಂದಿದೆ. ಇಲ್ಲಿ ಗುಣಮಟ್ಟದ ತಪಾಸಣೆಯು (ಕ್ವಾಲಿಟಿ ಕಂಟ್ರೋಲ್) ವಿಫಲವಾಗಿದೆಯೇ ? ಸಂಸ್ಥೆಯ ವ್ಯವಸ್ಥೆಯಲ್ಲಿನ ಗುಣಮಟ್ಟದ ಮಾನದಂಡಗಳಿಗೆ ಒಳಪಡದೆ ಸೀದಿರುವ ‘ವೇಫರ್ಸ’ಗಳು ಪ್ಯಾಕೆಟ್ ಒಳಗೆ ಹೇಗೆ ಬಂದವು ? ಅಥವಾ ಈ ತಪಾಸಣೆಯು ಕೇವಲ ಹೆಸರಿಗಷ್ಟೇ ನಡೆಯುತ್ತಿದೆಯೇ ? ಗ್ರಾಹಕರು ಇಂತಹ ಘಟನೆಗಳತ್ತ ದುರ್ಲಕ್ಷ್ಯ ಮಾಡುತ್ತಾರೆ. ದೂರು ನೀಡುವುದಿಲ್ಲ. ಇದರಿಂದಾಗಿ ಸಂಸ್ಥೆಗಳಿಗೆ ಈ ವಿಷಯದಲ್ಲಿ ಯಾವುದೇ ಕಾಳಜಿ ಇರುವುದಿಲ್ಲ. ’ಸರಕು ಮಾರಾಟವಾಗುತ್ತಿದೆ ಎಂದರೆ ಎಲ್ಲವೂ ಸರಿಯಾಗಿದೆ’ ಎಂಬ ಮಾನಸಿಕತೆ ನಿರ್ಮಾಣವಾಗುತ್ತದೆ. ಗ್ರಾಹಕನಿದ್ದಾನೆಂದೇ ಉತ್ಪನ್ನಗಳು ಖರ್ಚಾಗುತ್ತವೆ; ಆದರೂ ಗ್ರಾಹಕರ ಕುರಿತಾದ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಲಾಗುತ್ತಿಲ್ಲ ಎನ್ನುವುದು ವಾಸ್ತವವಾಗಿದೆ. ಈ ನಿರ್ಲಕ್ಷ್ಯದ ದೊಡ್ಡ ಅಪಾಯವೆಂದರೆ ಆರೋಗ್ಯದ ಮೇಲಾಗುವ ಪರಿಣಾಮ. ಸೀದಿರುವ, ಕೆಟ್ಟ ಅಥವಾ ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಹೊಟ್ಟೆನೋವು, ಆಮ್ಲಪಿತ್ತ (ಎಸಿಡಿಟಿ) ಅಥವಾ ಇತರ ಕಾಯಿಲೆಗಳಾದರೆ ಅದರ ಹೊಣೆ ಯಾರು ಹೊರುತ್ತಾರೆ ? ಸಂಸ್ಥೆಯೋ ಅಥವಾ ಮಾರಾಟಗಾರನೋ ? ಅಂತಹ ಸಮಯದಲ್ಲಿ ’ಗ್ರಾಹಕ ಹಿತಾಸಕ್ತಿ’ ಎಂಬ ಪದವು ಕೇವಲ ಸಂಕಲ್ಪನೆಗೆ ಮಾತ್ರ ಸೀಮಿತವಾಗಿರುತ್ತದೆ. ಜಾಹೀರಾತು ತೋರಿಸುವಾಗ ಮಾತ್ರ ಎಲ್ಲವೂ ಶುದ್ಧ ಮತ್ತು ಉತ್ತಮ ಗುಣಮಟ್ಟದ್ದನ್ನು ಬಳಸಲಾಗಿದೆ ಎಂದು ತೋರಿಸಲಾಗುತ್ತದೆ. ವಾಸ್ತವದಲ್ಲಿ ಸ್ಥಿತಿಯೇ ವಿಭಿನ್ನವಾಗಿರಬಹುದು. ಒಂದು ವೇಳೆ ಸೀದಿರುವ ‘ವೇಫರ್ಸ್’ ಪ್ಯಾಕೆಟ್ ಒಳಗೆ ಹೋದದ್ದು ತಿಳಿಯುವುದಿಲ್ಲವೆಂದಾದರೆ, ಅದರ ಜೊತೆಗೆ ಬೇರೆ ಯಾವುದಾದರೂ ಕಸ ಅಥವಾ ಸಣ್ಣ ಹುಳ ಹೋದರೂ ತಿಳಿಯಲು ಸಾಧ್ಯವಿಲ್ಲ, ಹೀಗೂ ಆಗಬಹುದು.
ಹೊರಗಿನಿಂದ ದೊಡ್ಡದಾಗಿ ಕಾಣುವ ‘ವೇಫರ್ಸ್’ ಪ್ಯಾಕೆಟ್ ತೆರೆದಾಗ ಒಳಗಡೆ ಕಡಿಮೆ ಪ್ರಮಾಣದ ‘ವೇಫರ್ಸ್’ ಇರುತ್ತವೆ. ಬೆಲೆ ಹೆಚ್ಚಾಗಿರುತ್ತದೆ, ಆದರೆ ಉತ್ಪನ್ನದ ಪ್ರಮಾಣ ಕಡಿಮೆಯಿರುತ್ತದೆ. ದೊಡ್ಡ ಗಾತ್ರದ ಗಾಳಿ ತುಂಬಿದ ಪ್ಯಾಕೆಟ್‌ನಲ್ಲಿ ಕಡಿಮೆ ‘ವೇಫರ್ಸ್’ ನೀಡುವುದು ಗ್ರಾಹಕರಿಗೆ ಮಾಡುವ ಬಹಿರಂಗ ವಂಚನೆಯಲ್ಲವೇ ? ಗ್ರಾಹಕರು ಸಹ ದೂರು ನೀಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಇತ್ತೀಚೆಗೆ ಅನುಕೂಲಕ್ಕಾಗಿ ‘ಪ್ಯಾಕೆಟ್’ ಆಹಾರಗಳನ್ನು ಹೆಚ್ಚು ಖರೀದಿಸಲಾಗುತ್ತದೆ. ಮಕ್ಕಳಿಗೆ ಇಂತಹ ಪದಾರ್ಥಗಳ ಅಭ್ಯಾಸವಾಗಿರುತ್ತದೆ ಮತ್ತು ಅದರ ರುಚಿಯೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕರಿಗೆ ಇಷ್ಟವಾಗುತ್ತದೆ. ಆದ್ದರಿಂದ ಇಂತಹ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿದೆ; ಆದರೆ ಅದರಲ್ಲಿನ ದೋಷಗಳ ಬಗ್ಗೆ ಯಾರೂ ದೂರು ನೀಡುವುದಿಲ್ಲ.
ಪ್ಯಾಕೆಟ್ ಆಹಾರ ಪದಾರ್ಥಗಳು ಕ್ಷಣಿಕವಾಗಿ ನಾಲಿಗೆಯ ರುಚಿಯನ್ನು ತಣಿಸಿದರೂ, ಆ ಪದಾರ್ಥಗಳು ಪೌಷ್ಠಿಕವಾಗಿರುತ್ತವೆ ಎಂದೇನಿಲ್ಲ. ಆದ್ದರಿಂದ ಗ್ರಾಹಕರು ಸಹ ಜಾಗರೂಕರಾಗಿ ಮತ್ತು ಎಚ್ಚರಿಕೆಯಿಂದ ಪದಾರ್ಥಗಳನ್ನು ಖರೀದಿಸುವುದು ಹಾಗೂ ಅದರ ಗುಣಮಟ್ಟದ ಬಗ್ಗೆ ಜಾಗೃತರಾಗಿರುವುದು ಅವಶ್ಯಕವಾಗಿದೆ !
– ಸೌ. ವೈಷ್ಣವಿ ಹರಾಳೆ, ದೇವದ ಆಶ್ರಮ, ಪನವೇಲ್.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು