ನಾನು ಸ್ವಿಟ್ಜರ್ಲೆಂಡ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದೆ. ಆ ಮನೆಯ ಒಡತಿಯಾದ ಶ್ರೀಮತಿ ಕ್ರಿಸ್ಟಿನಾ ಅವರಿಗೆ ೬೭ ವರ್ಷ ವಯಸ್ಸು, ಅವರು ಶಿಕ್ಷಕಿಯಾಗಿ ನಿವೃತ್ತರಾಗಿದ್ದರು. ನಿಜ ಹೇಳಬೇಕೆಂದರೆ, ಅಲ್ಲಿನ ನಿವೃತ್ತಿ ವೇತನ ಎಷ್ಟು ಹೆಚ್ಚಿರುತ್ತದೆ ಎಂದರೆ, ಅವರ ಮುಂದಿನ ಜೀವನದ ಊಟ-ತಿಂಡಿಗೆ ಯಾವುದೇ ಕೊರತೆಯಿರಲಿಲ್ಲ. ಆದರೂ ಆಶ್ಚರ್ಯದ ಸಂಗತಿಯೆಂದರೆ, ಅವರು ಒಬ್ಬ ೮೭ ವರ್ಷದ ವೃದ್ಧ ಮಹಿಳೆಯ ಸೇವೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ನಾನು ಕುತೂಹಲದಿಂದ ಅವರನ್ನು ಕೇಳಿದೆ, ‘ಹೆಚ್ಚಿನ ಹಣದ ಆಸೆಯಿಂದ ನೀವು ಈ ಕೆಲಸ ಮಾಡುತ್ತಿದ್ದೀರಾ ?. ಅದಕ್ಕೆ ಅವರು ನೀಡಿದ ಉತ್ತರ ನನಗೆ ಆಶ್ಚರ್ಯವನ್ನುಂಟು ಮಾಡಿತು. ಅವರು ಹೇಳಿದರು, ‘ಇಲ್ಲ, ನಾನು ಇದನ್ನು ಹಣಕ್ಕಾಗಿ ಮಾಡುತ್ತಿಲ್ಲ. ನಾನು ನನ್ನ ಈ ಕೆಲಸದ ಸಮಯವನ್ನು ‘ಟೈಮ್ ಬ್ಯಾಂಕ್’ನಲ್ಲಿ ಜಮೆ ಮಾಡುತ್ತಿದ್ದೇನೆ. ನಾನು ವೃದ್ಧೆಯಾದಾಗ, ಈ ‘ಟೈಮ್ ಬ್ಯಾಂಕ್’ನಿಂದ ನನಗೆ ಬೇಕಾದ ಸಮಯವನ್ನು ಮರಳಿ ಪಡೆಯುತ್ತೇನೆ.’

ಏನಿದು ‘ಟೈಮ್ ಬ್ಯಾಂಕ್’ ಪರಿಕಲ್ಪನೆ ?
‘ಟೈಮ್ ಬ್ಯಾಂಕ್’ ಎನ್ನುವ ವ್ಯವಸ್ಥೆ ಇದೆ ಎಂದು ಕೇಳಿಯೇ ನನಗೆ ದೊಡ್ಡ ಆಘಾತವಾಯಿತು. ನಾನು ಅವರ ಬಳಿ ಈ ಬಗ್ಗೆ ವಿವರವಾಗಿ ಕೇಳಿದೆ. ಅದಕ್ಕೆ ಅವರು ಹೇಳಿದರು. ಸ್ವಿಸ್ ಸರಕಾರವು ಒಂದು ಕಲ್ಯಾಣ ಕಾರ್ಯಕ್ರಮವಾಗಿ ಇದನ್ನು ಆರಂಭಿಸಿದೆ. ಒಬ್ಬ ವ್ಯಕ್ತಿಯು ತಾನು ಆರೋಗ್ಯವಂತನಾಗಿರುವಾಗ ತನಗಿಂತ ಹಿರಿಯರಾದ ವೃದ್ಧರ ಸೇವೆ ಮಾಡುತ್ತಾನೆ ಮತ್ತು ಯಾವಾಗ ಅವನು ವೃದ್ಧನಾಗುತ್ತಾನೆಯೋ, ಈ ವ್ಯಕ್ತಿ ಮುಂದೆ ವಯಸ್ಸಾಗಿ ತನಗೆ ಸೇವೆಯ ಅಗತ್ಯ ಬಿದ್ದಾಗ, ಈ ಹಿಂದೆ ತಾನು ಮಾಡಿದ ಸೇವೆಯ ಬದಲಾಗಿ ಅಷ್ಟೇ ಸಮಯದ ಸೇವೆಯನ್ನು ಬೇರೆಯವರಿಂದ ಪಡೆಯ ಬಹುದು. ಈ ರೀತಿ ಅವರು ಮಾಡಿದ ಸೇವೆಯ ಸಮಯವು ಸಾಮಾಜಿಕ ಕಲ್ಯಾಣ ಇಲಾಖೆಯ ಖಾತೆಯಲ್ಲಿ ಜಮೆಯಾಗುತ್ತದೆ.
ಆ ಮನೆಯ ಒಡತಿಯು ವಾರದಲ್ಲಿ ಎರಡು ಬಾರಿ, ತಲಾ ೨ ಗಂಟೆಗಳ ಕಾಲ ವೃದ್ಧರಿಗಾಗಿ ಅವರ ಕೆಲವು ವಸ್ತುಗಳ ಖರೀದಿಗೆ ಅಥವಾ ಅವರ ಮನೆಗೆಲಸಕ್ಕೆ ಅಥವಾ ಅವರೊಂದಿಗೆ ಹರಟೆ ಹೊಡೆಯಲು, ಓದಲು ಅಥವಾ ಹೊರಗೆ ವಾಕಿಂಗ್‌ಗೆ ಸಮಯ ಕಳೆಯುತ್ತಿದ್ದರು. ಈ ರೀತಿ ಒಂದು ವರ್ಷದ ವರೆಗೆ ಸೇವೆ ಸಲ್ಲಿಸಿದ ನಂತರ, ಅವರ ಸೇವೆಯನ್ನು ಲೆಕ್ಕಹಾಕಿ ಅವರಿಗೆ ‘ಟೈಮ್ ಬ್ಯಾಂಕ್ ಕಾರ್ಡ್’ ನೀಡಲಾಗುತ್ತದೆ. ಅದರಲ್ಲಿ ಆ ಸೇವೆಯ ಸಮಯವನ್ನು ನಮೂದಿಸಲಾಗಿರುತ್ತದೆ. ಯಾವಾಗ ಆ ಸೇವಾಕರ್ತೆ ವೃದ್ಧರಾಗುತ್ತಾರೋ, ಆಗ ಅವರಿಗೆ ಈ ‘ಟೈಮ್ ಬ್ಯಾಂಕ್ ಕಾರ್ಡ್’ ಮೂಲಕ ಸೇವೆ ಪಡೆಯಲು ಸಾಧ್ಯವಾಗುತ್ತದೆ. ಅವರ ಟೈಮ್ ಕಾರ್ಡ್ ಅನ್ನು ಪರಿಶೀಲಿಸಿ, ‘ಟೈಮ್ ಬ್ಯಾಂಕ್’ ಅವರಿಗಾಗಿ ಸೇವಾಕರ್ತರನ್ನು ಅವರ ಮನೆಗೆ ಅಥವಾ ಆಸ್ಪತ್ರೆಗೆ ಕಳುಹಿಸಿಕೊಡುತ್ತದೆ.
೧. ಮನೆ ಒಡತಿಯ ಕಾಲಿನ ಮೂಳೆ ಮುರಿತ ಮತ್ತು ‘ಟೈಮ್ ಬ್ಯಾಂಕ್’ನಿಂದ ಸೇವಾಕರ್ತರ ಲಭ್ಯತೆ
ಒಂದು ದಿನ ನನಗೆ ನನ್ನ ಮನೆ ಒಡತಿಯ ಫೋನ್ ಬಂದಿತು. ಅವರು, ‘ನಾನು ಕೆಲವು ವಸ್ತುಗಳನ್ನು ತೆಗೆಯಲು ಸ್ಟೂಲ್ ಮೇಲೆ ನಿಂತಿದ್ದೆ. ಸಮತೋಲನ ತಪ್ಪಿ ಬಿದ್ದೆ ಮತ್ತು ನನ್ನ ತೊಡೆಯ ಮೂಳೆ ಮುರಿದಿದೆ’ ಎಂದು ಹೇಳಿದರು. ನಾನು ರಜೆ ಪಡೆದು ಅವರನ್ನು ಆಸ್ಪತ್ರೆಗೆ ತಲುಪಿಸಿದೆ. ನಾನು ಅವರ ಸೇವೆಯನ್ನು ಮಾಡಲು ರಜೆ ಪಡೆಯುತ್ತಿದ್ದೆ; ಆದರೆ ಅವರು ಹೇಳಿದರು, ‘ಅದರ ಅವಶ್ಯಕತೆಯಿಲ್ಲ. ನಾನು ನನ್ನ ‘ಟೈಮ್ ಬ್ಯಾಂಕ್’ನಿಂದ ಸೇವೆಗಾಗಿ ‘ಟೈಮ್ ವಿಡ್ರಾವಲ್ ಫಾರ್ಮ್’ (ಸೇವೆ ಪಡೆಯಲು ಸಲ್ಲಿಸುವ ಅರ್ಜಿ) ಭರ್ತಿ ಮಾಡಿದ್ದೇನೆ ಮತ್ತು ‘ಟೈಮ್ ಬ್ಯಾಂಕ್’ ಈಗ ನನ್ನನ್ನು ನೋಡಿಕೊಳ್ಳುತ್ತದೆ.’ ಮುಂದೆ ನಿಜವಾಗಿಯೂ ೨ ಗಂಟೆಯೊಳಗೆ ‘ಟೈಮ್ ಬ್ಯಾಂಕ್’ನಿಂದ ಸೇವಾಕರ್ತರು ಹಾಜರಾದರು. ಒಂದು ತಿಂಗಳ ವರೆಗೆ ಆ ಸೇವಾ ಸ್ವಯಂಸೇವಕರು ಮನೆ ಒಡತಿಯ ಮನೆಯನ್ನು ನಿಭಾಯಿಸಿದರು. ಅವರಿಗಾಗಿ ಅಡುಗೆ ಮಾಡಿ ಊಟ ಬಡಿಸಿದರು. ಅವರೊಂದಿಗೆ ಹರಟೆ ಹೊಡೆದು ಅವರನ್ನು ಸಂತೋಷವಾಗಿರಿಸಿದರು. ಸೇವಾಕರ್ತರ ಸಹಾಯದಿಂದ ಮನೆ ಒಡತಿಯು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾದರು. ಅವರು ಗುಣಮುಖರಾದ ತಕ್ಷಣ ಮತ್ತೆ ಸೇವಾ ಕಾರ್ಯದಲ್ಲಿ ತೊಡಗಿಕೊಂಡರು. ಅವರ ಪ್ರಕಾರ, ‘ತಾವು ಎಷ್ಟು ದಿನ ಕಾರ್ಯಕ್ಷಮರಾಗಿರುತ್ತಾರೋ, ಅಲ್ಲಿಯವರೆಗೆ ಗರಿಷ್ಠ ಸಮಯವನ್ನು ‘ಟೈಮ್ ಬ್ಯಾಂಕ್’ನಲ್ಲಿ ವ್ಯಯಿಸಲು ಬಯಸುತ್ತಾರೆ.’
ಭಾರತದಲ್ಲಿ ಅಧ್ಯಾತ್ಮದ ಆಧಾರದಲ್ಲಿ ‘ಟೈಮ್ ಬ್ಯಾಂಕ್’ ಆರಂಭಿಸಬೇಕಿದೆ !

ಈ ಲೇಖನವು ಸ್ವಿಟ್ಜರ್ಲೆಂಡ್‌ನ ‘ಟೈಮ್ ಬ್ಯಾಂಕ್’ ಪದ್ಧತಿಯ ಕುರಿತಾಗಿದೆ. ಭಾರತವು ಮೂಲತಃ ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ಹೊಂದಿದೆ; ಆದರೆ ಪ್ರಸ್ತುತ ಪಾಶ್ಚಿಮಾತ್ಯ ಮತ್ತು ಸಾಮ್ಯವಾದಿ ವಿಚಾರಧಾರೆಗಳಿಂದಾಗಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ‘ವೃದ್ಧಾಶ್ರಮ’ ಎಂಬ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ. ನಿಜ ಹೇಳಬೇಕೆಂದರೆ, ಇಂದು ಭಾರತದಲ್ಲಿ ‘ಟೈಮ್ ಬ್ಯಾಂಕ್’ ಪದ್ಧತಿಯ ಬಗ್ಗೆ ಯೋಚಿಸುವ ಅಗತ್ಯವೇ ಬರಬಾರದಿತ್ತು. ಆದರೆ ಒಂದು ವೇಳೆ ಅದರ ಬಗ್ಗೆ ಯೋಚಿಸುವುದಾದರೆ, ಅದಕ್ಕೆ ‘ಹಿಂದೂಕರಣ’ ಅಂದರೆ ಅಧ್ಯಾತ್ಮದ ದೃಷ್ಟಿಕೋನವನ್ನು ಜೋಡಿಸಬೇಕು. ಪೋಷಕರು ಮತ್ತು ಹಿರಿಯರ ಸೇವೆ ಮಾಡುವುದರಿಂದ ವ್ಯಕ್ತಿಯ ಐಹಿಕ ಮತ್ತು ಪಾರಮಾರ್ಥಿಕ ಪ್ರಗತಿಯಾಗುತ್ತದೆ, ಅಷ್ಟೇ ಅಲ್ಲದೆ ಪಿತೃಋಣ ಮತ್ತು ಸಮಾಜದ ಋಣವೂ ತೀರುತ್ತದೆ. ಇದರಿಂದ ವೃದ್ಧರು ಮತ್ತು ಅವರ ಸೇವೆ ಮಾಡುವವರಲ್ಲಿ ಸಾಧನೆಯ ಭಾವ ಬೆಳೆಯುತ್ತದೆ ಹಾಗೂ ಮನುಷ್ಯಜನ್ಮದ ಮೂಲ ಗುರಿಯಾದ ‘ಈಶ್ವರಪ್ರಾಪ್ತಿ’ಯನ್ನು ಸಾಧಿಸಲು ಸಹಕಾರಿಯಾಗುತ್ತದೆ. ಭಾರತ ಸರಕಾರವು ಅಧ್ಯಾತ್ಮದ ಆಧಾರದ ಮೇಲೆ ಇಂತಹ ‘ಟೈಮ್ ಬ್ಯಾಂಕ್’ ಪದ್ಧತಿಯನ್ನು ಜಾರಿಗೆ ತರುವ ಬಗ್ಗೆ ಯೋಚಿಸಬೇಕು. – ಸಂಪಾದಕರು
೨. ‘ಟೈಮ್ ಬ್ಯಾಂಕ್’ನಲ್ಲಿ ಪಾಲ್ಗೊಳ್ಳಲು ಸ್ವಿಸ್ ನಾಗರಿಕರ ಆಸಕ್ತಿ
ಪ್ರಸ್ತುತ ಸ್ವಿಟ್ಜರ್ಲೆಂಡ್‌ನಲ್ಲಿ ‘ಟೈಮ್ ಬ್ಯಾಂಕ್’ ವಿಷಯವು ಸರ್ವಸಮ್ಮತವಾಗಿದೆ. ಇದರಿಂದ ಸರಕಾರಕ್ಕೆ ಕೇವಲ ಆರ್ಥಿಕ ಲಾಭ ಮಾತ್ರವಲ್ಲ, ಅನೇಕ ಸಾಮಾಜಿಕ ಸಮಸ್ಯೆಗಳೂ ಬಗೆ ಹರಿದಿವೆ. ಸಮಾಜದಲ್ಲಿ ಪರಸ್ಪರ ಸಾಮರಸ್ಯ ಮತ್ತು ಸಹಿಷ್ಣುತೆ ಬೆಳೆಯಲು ಇದು ಸಹಕಾರಿಯಾಗಿದೆ. ಬಹುಸಂಖ್ಯಾತ ಸ್ವಿಸ್ ನಾಗರಿಕರು ಈ ಪರಿಕಲ್ಪನೆಯನ್ನು ಬೆಂಬಲಿಸಿದ್ದಾರೆ. ಸರಕಾರದ ಸಮೀಕ್ಷೆಯ ಪ್ರಕಾರ, ಹೆಚ್ಚಿನ ಸಂಖ್ಯೆಯ ಜನರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸಿದ್ದಾರೆ. ಹೀಗಾಗಿ, ಸ್ವಿಟ್ಜರ್ಲೆಂಡ್ ಸರಕಾರವು ಇಂತಹ ಕಾನೂನುಗಳನ್ನು ಜಾರಿಗೆ ತರಲು ಹೆಚ್ಚು ಆಸಕ್ತಿ ವಹಿಸಿದೆ.

೩. ಭಾರತೀಯ ವೃದ್ಧರ ಭವಿಷ್ಯ ಉಜ್ವಲವಾಗಲು…
ಭಾರತದ ಹಿರಿಯ ನಾಗರಿಕರ ದೊಡ್ಡ ಸಂಘಟನೆಯು ಈ ಹಿಂದೆಯೇ ಎರಡು ಬಾರಿ ಒಂದು ಪ್ರಯತ್ನ ಮಾಡಿತ್ತು: ಸಮರ್ಥರಾಗಿರುವ ಹಿರಿಯರು ಅತಿ ಹಿರಿಯರ ಸೇವೆಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು ಎಂಬ ವಿಚಾರವನ್ನು ಮಂಡಿಸಿತ್ತು. ಆದರೆ ‘ಎಲ್ಲವನ್ನೂ ಸರಕಾರವೇ ಮಾಡಬೇಕು’ ಎಂಬ ಮನೋಭಾವದಿಂದ ಅನೇಕರು ಇದನ್ನು ನಿರ್ಲಕ್ಷಿಸಿದರು. ನಾವು ಕೂಡ ಮುಂದೊಂದು ದಿನ ವೃದ್ಧರಾಗುತ್ತೇವೆ ಮತ್ತು ಪ್ರಸ್ತುತ ವಿಭಕ್ತ ಕುಟುಂಬಗಳ ಪದ್ಧತಿ ಹೆಚ್ಚಾಗುತ್ತಿರುವುದರಿಂದ, ನಮ್ಮ ವೃದ್ಧಾಪ್ಯದಲ್ಲಿ ನಮಗೆ ಯಾರಾದರೂ ಆಸರೆಯಾಗುತ್ತಾರೆ ಎಂಬ ಭಾವನೆಯಿಂದ ಇಂದಿನ ಯುವಕರು ವೃದ್ಧರ ಬಗ್ಗೆ ಯೋಚಿಸಿ ಸೇವಾಭಾವವನ್ನು ಬೆಳೆಸಿಕೊಂಡಲ್ಲಿ ಭಾರತೀಯ ವೃದ್ಧರ ಭವಿಷ್ಯ ಉಜ್ವಲವಾಗಲಿದೆ. – ಓರ್ವ ಧರ್ಮಪ್ರೇಮಿ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು