ಇತ್ತೀಚೆಗಷ್ಟೇ ದುಬಾರಿ ಕಾರುಗಳು, ಕೈಗಡಿಯಾರಗಳು ಮತ್ತು ‘ಬ್ರಾಂಡೆಡ್ ಸ್ನೀಕರ್ಸ್’ಗಳ (ರಬ್ಬರ್ ಸೋಲ್ ಇರುವ ಆರಾಮದಾಯಕ ಬೂಟುಗಳು) ಬಗ್ಗೆ ಹುಚ್ಚು ಇರುವ ಗಾಯಕ ಬಾದಶಹನು, ಭಾರತದಲ್ಲಿ ಮುಕೇಶ ಅಂಬಾನಿ, ಶಾರುಖ್ ಖಾನ್ ಅಂತಹ ಕೆಲವೇ ಜನರ ಬಳಿ ಇರುವ ‘ರೋಲ್ಸ್ ರಾಯ್ಸ್ ಕಲ್ಲಿನನ್ ಸೀರಿಸ್-೨’ ಎಂಬ ಐಷಾರಾಮಿ ಕಾರನ್ನು ಖರೀದಿಸಿದರು. ಆದರೆ, ಈ ಕಾರನ್ನು ಖರೀದಿಸಿದ ಕೇವಲ ೧೫ ನಿಮಿಷಗಳಲ್ಲೇ ಅವರಿಗೆ ಪಶ್ಚಾತ್ತಾಪವಾಯಿತು ! ಈ ಬಗ್ಗೆ ಬಾದಶಹಾ ಅವರು ಹೀಗೆ ಹೇಳಿದ್ದಾರೆ, ‘ನಾನು ಆ ಕಾರನ್ನು ಖರೀದಿಸುವ ನಿರ್ಧಾರವನ್ನು ತುಂಬಾ ಅವಸರದಲ್ಲಿ ತೆಗೆದುಕೊಂಡೆ ಎಂದು ನನಗನ್ನಿಸುತ್ತದೆ. ಯಾವ ದಿನ ನಿರ್ಧರಿಸಿದನೋ, ಅದೇ ದಿನ ಕಾರನ್ನು ತೆಗೆದುಕೊಂಡೆ ಮತ್ತು ೧೫ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ಕಾರು ಅತ್ಯುತ್ತಮವಾಗಿದೆ ಮತ್ತು ಅದನ್ನು ಖರೀದಿಸಿದ ಆರಂಭದಲ್ಲಿ ರಾಜನಂತೆ ಅನುಭವವಾಯಿತು; ಆದರೆ ಆ ಸಂತೋಷ ಕೇವಲ ೧೦ ರಿಂದ ೧೫ ನಿಮಿಷಗಳ ಕಾಲ ಮಾತ್ರ ಉಳಿಯಿತು. ಅದರ ನಂತರ ನನಗೆ ಅನ್ನಿಸಿತು, ‘ಈಗ ಮುಂದೆ ಏನು ? ಇಷ್ಟು ದುಬಾರಿ ಕಾರನ್ನು ಖರೀದಿಸಿ ಸಾಧಿಸಿದ್ದಾದರೂ ಏನು ?’ ಒಬ್ಬ ಪ್ರಸಿದ್ಧ ಮತ್ತು ಶ್ರೀಮಂತ ಗಾಯಕ ಹೇಳಿದ ವ್ಯಥೆಯಿದು; ಆದರೆ ಇದು ಸಾಮಾನ್ಯ ಮನುಷ್ಯನ ದೈನಂದಿನ ಕಥೆಯೂ ಹೌದು !

‘ನಮ್ಮ ಬಳಿ ಸಾಕಷ್ಟು ಹಣವಿರಬೇಕು, ಸಂಪತ್ತು, ಗಾಡಿಗಳು, ಆಸ್ತಿ ಇರಬೇಕು, ನಮಗೂ ಮತ್ತು ನಮ್ಮ ಮಕ್ಕಳಿಗೂ ಯಾವುದಕ್ಕೂ ಕೊರತೆಯಾಗಬಾರದು’ ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇಂದಿನ ಕಾಲದಲ್ಲಿ ಜೀವನ ನಡೆಸಲು ಅಥವಾ ದೈನಂದಿನ ವ್ಯವಹಾರಗಳು ಸುಗಮವಾಗಿ ನಡೆಯಲು ಹಣವು ಒಂದು ಅವಿಭಾಜ್ಯ ಅಂಗವಾಗಿದೆ ಎಂಬುದು ನಿಜ. ಆದರೆ ಜೀವನದಲ್ಲಿ ‘ಚಿರಂತನ’, ಅಂದರೆ ನಿರಂತರವಾಗಿ ಉಳಿಯುವ ಸುಖ ಅಥವಾ ‘ಆನಂದ’ವನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ ಎಂಬುದರಲ್ಲಿ ಎರಡು ಮತಗಳಿರಬಾರದು. ಈಗ ಇದನ್ನೇ ನೋಡಿ, ಮನಸ್ಸಿನಲ್ಲಿ ವಿಚಾರ ಬಂದ ತಕ್ಷಣ ೧೫ ಕೋಟಿ ರೂಪಾಯಿ ಖರ್ಚು ಮಾಡಿ ರಾಜವೈಭವದ ಕಾರನ್ನು ಖರೀದಿಸಿದರು; ಆದರೆ ಅದರಿಂದ ಸಿಕ್ಕ ಸಂತೋಷ ಅಲ್ಪಕಾಲ ಮಾತ್ರ ಉಳಿಯಿತು. ನಂತರ ಮನಸ್ಸಿನಲ್ಲಿ ‘ನಾವು ಈ ಕೆಲಸ ಮಾಡಿ ಏನು ಪಡೆದುಕೊಂಡೆವು ?’ ಎಂಬಂತಹ ವಿಚಾರಗಳು ಬರತೊಡಗಿದವು. ಇದಕ್ಕೆ ಮುಖ್ಯ ಕಾರಣವೇನು ? ಆ ಗಾಯಕನು ಭೌತಿಕ ವಸ್ತುಗಳನ್ನು ಖರೀದಿಸುವ ಮೂಲಕ ಸುಖವನ್ನು ಪಡೆಯಲು ಪ್ರಯತ್ನಿಸುತ್ತಿದ್ದನು; ಆದರೆ ಅದರಲ್ಲಿ ಅವನು ಯಶಸ್ವಿಯಾಗಲಿಲ್ಲ. ಇಂತಹ ಒಂದು ಮಾತ್ರವಲ್ಲ, ಅನೇಕ ಉದಾಹರಣೆಗಳನ್ನು ನೀಡಬಹುದು. ಅನೇಕ ಬಾರಿ ಮನುಷ್ಯನು ಜೀವನಾವಶ್ಯಕವೆಂದು ತೋರುವ ವಸ್ತುಗಳನ್ನು ಮತ್ತು ಭೌತಿಕ ಸೌಲಭ್ಯಗಳನ್ನು ಪಡೆಯಲು ಅಪಾರವಾಗಿ ಶ್ರಮಿಸುತ್ತಾನೆ. ಆದರೆ ಆ ವಸ್ತು ಸಿಕ್ಕ ಮೇಲೆ ಅದರಿಂದ ಸಿಗುವ ಸುಖ ನಿಜಕ್ಕೂ ಎಷ್ಟು ಕಾಲ ಉಳಿಯುತ್ತದೆ ? ಎಂಬ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮಾಡಬೇಕು. ದೈನಂದಿನ ಜೀವನದಲ್ಲಿ ಮನುಷ್ಯನು ಸುಖ ಅಥವಾ ಆನಂದವನ್ನು ಪಡೆಯಲು ಪಂಚೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಮಾಧ್ಯಮದಿಂದ ಬಾಹ್ಯವಾಗಿ ಪ್ರಯತ್ನಿಸುತ್ತಿರುತ್ತಾನೆ; ಆದರೆ ಅವೆಲ್ಲವೂ ನಿಷ್ಫಲವಾಗುತ್ತವೆ. ಮಾನವ ಜೀವನದಲ್ಲಿ ನಿರಂತರವಾಗಿ ಉಳಿಯುವ ಆನಂದವು ಭೌತಿಕ ವಸ್ತುಗಳ ಮೇಲೆ ಅವಲಂಬಿತವಾಗಿಲ್ಲ, ಬದಲಾಗಿ ಅದು ಮನಸ್ಸಿನ ಆಂತರಿಕ ಸ್ಥಿತಿಯಾಗಿದೆ. ಜೀವನದಲ್ಲಿ ಶಾಶ್ವತ ಸುಖ ಅಂದರೆ ಆನಂದವನ್ನು ಪಡೆಯಲು ಅಧ್ಯಾತ್ಮದ ಹಾದಿಯನ್ನು ಹಿಡಿದು, ಪಾರಮಾರ್ಥಿಕ ಜೀವನದತ್ತ ಸಾಗುವುದು ಅಪೇಕ್ಷಿತವಾಗಿದೆ. ಅತ್ಯಂತ ಅಪರೂಪವಾದ ಈ ಮನುಷ್ಯ ಜನ್ಮವು ‘ಚಿರಂತನ ಆನಂದ’ವನ್ನು ಪಡೆಯಲಿಕ್ಕಾಗಿಯೇ ದೊರೆತಿದೆ; ಆದರೆ ಈಶ್ವರನಲ್ಲಿ ಶರಣಾಗತಿಯಿಲ್ಲದೆ (ಭಕ್ತಿಯಿಲ್ಲದೆ) ಈ ಆನಂದ ಸಿಗಲು ಸಾಧ್ಯವಿಲ್ಲ !
– ಶ್ರೀಮತಿ ಧನಶ್ರೀ ದೇಶಪಾಂಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು