ವಿಶೇಷ ಭಕ್ತಿಸತ್ಸಂಗದಲ್ಲಿ ಹೇಳಿದಂತೆ ಸಾಧನೆಯ ಪಂಚಸೂತ್ರಗಳ ಆಚರಣೆ ಮಾಡುವುದು ಎಂದರೆ ಭಗವಂತನ ಸ್ವರೂಪದಲ್ಲಿ ನವವಿಧ ಭಕ್ತಿಯನ್ನು ಮಾಡುವುದು

ವಿಶೇಷ ಭಕ್ತಿಸತ್ಸಂಗ ಶೃಂಖಲೆ : ಗುರುಕೃಪಾಯೋಗದ ಮೂಲತತ್ತ್ವಗಳನ್ನು ಬೋಧಿಸುವ ಶ್ರೀ ಗುರುಗೀತೆ !

‘೨೦೨೫ ರ ಗುರುಪೂರ್ಣಿಮೆಯ ನಂತರ ಭಾರತದಾದ್ಯಂತದ ಎಲ್ಲಾ ಸಾಧಕರಿಗಾಗಿ ಭಕ್ತಿಸತ್ಸಂಗದಲ್ಲಿ ವಿಶೇಷ ಸರಣಿಯನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಸಾಧನೆಯ ‘ವಿಚಾರಿಸುವುದು, ಹೇಳಿದ್ದನ್ನು ಕೇಳುವುದುಞ, ಸ್ವೀಕರಿಸುವುದು, ಕಲಿಯುವುದು ಮತ್ತು ವರದಿ ನೀಡುವುದು’ ಈ ಪಂಚಸೂತ್ರಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. ೨೭/೨೪ ನೆಯ ಸಂಚಿಕೆಯಲ್ಲಿ ಈ ಲೇಖನಮಾಲೆಯ ಎರಡನೆಯ ಭಾಗದಲ್ಲಿ ನಾವು ‘ಅರ್ಜುನಭಾವ’ ಎಂದರೆ ಅರ್ಜುನನಂತೆಯೇ ‘ವಿಚಾರಿಸುವುದು, ಕೇಳಿಸಿಕೊಳ್ಳುವುದು, ಸ್ವೀಕರಿಸುವುದು, ಕಲಿಯುವುದು ಮತ್ತು ವರದಿ ನೀಡುವುದು’ ಎಂಬ ವೃತ್ತಿ !’, ಹಾಗೆಯೇ ಭಕ್ತಿಸತ್ಸಂಗದ ಮೂಲಕ ಕಲಿಸಿಕೊಡಲಾಗುತ್ತಿರುವ ಸಾಧನೆಯ ಪಂಚಸೂತ್ರಗಳಿಂದಾಗಿ ಸಾಧಕರಿಂದ ಸರಾಸರಿ ಶೇ. ೨೦ ರಷ್ಟು ಕ್ರಿಯಮಾಣವನ್ನು ಬಳಸಲು ಸಾಧ್ಯವಾಗುವುದು, ಈ ಅಂಶಗಳನ್ನು ನೋಡಿದೆವು. ಈ ವಾರದ ಲೇಖನಮಾಲೆಯ ಉಳಿದ ಭಾಗವನ್ನು ಇಲ್ಲಿ ನೀಡಲಾಗಿದೆ.      ಭಾಗ ೩

ಈ ಹಿಂದಿನ ಭಾಗ-೨ ಓದಲು ಈ ಲಿಂಕ್‌ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/172190.html

೪ ಅ. ಗುರುಗಳು ಶಿಷ್ಯರನ್ನು ರೂಪಿಸುವ ಪದ್ಧತಿ

ಗುರುಗಳು ಶಿಷ್ಯರನ್ನು ದಾಸ, ಸೇವಕ ಅಥವಾ ಗುಲಾಮರನ್ನಾಗಿ ಮಾಡುವುದಿಲ್ಲ, ಬದಲಾಗಿ ಅವರು ಶಿಷ್ಯನನ್ನು ಆಧ್ಯಾತ್ಮಿಕ ಸ್ವರೂಪದಲ್ಲಿ ರೂಪಿಸುತ್ತಾರೆ. ಗುರುಗಳು ಶಿಷ್ಯನ ಕೇವಲ ಮನಸ್ಸು ಅಥವಾ ಬುದ್ಧಿಯ ಮೇಲೆ ಸಾಧನೆಯ ಸಂಸ್ಕಾರಗಳನ್ನು ಮಾಡುವುದಿಲ್ಲ, ಬದಲಾಗಿ ಅದರೊಂದಿಗೆ ವಿವಿಧ ಪ್ರಕಟ ಮತ್ತು ಅಪ್ರಕಟ ಅನುಭೂತಿಗಳ ಮೂಲಕ ಶಿಷ್ಯನ ಲಿಂಗದೇಹವನ್ನು ರೂಪಿಸುತ್ತಾರೆ. ಆದ್ದರಿಂದ ಗುರು ಮತ್ತು ಶಿಷ್ಯರ ಸಹವಾಸವು ಅಲ್ಪ ಕಾಲಾವಧಿಯದ್ದಾಗಿದ್ದರೂ, ಗುರುಕೃಪೆಯಿಂದ ಶಿಷ್ಯನ ಆಧ್ಯಾತ್ಮಿಕ ಉನ್ನತಿಯಾಗಿ ಅವನು ಸ್ವತಃ ಸಿದ್ಧನಾಗುತ್ತಾನೆ. ಇದೇ ಪ್ರಕ್ರಿಯೆಯು ವಿಶೇಷ ಭಕ್ತಿಸತ್ಸಂಗದ ಮೂಲಕವೂ ನಡೆಯುತ್ತಿದೆ. ವಿಶೇಷ ಭಕ್ತಿಸತ್ಸಂಗದಲ್ಲಿ ಹೇಳಲಾದ ಪಂಚಸೂತ್ರಗಳ ಆಚರಣೆಯಿಂದ ಸಾಧಕರಿಂದ ನವವಿಧಭಕ್ತಿಯ ಆಚರಣೆಯು ಮಾಡಲ್ಪಡುತ್ತಿದೆ.

೪ ಆ. ಸಾಧನೆಯಲ್ಲಿನ ಪಂಚಸೂತ್ರಗಳ ಆಚರಣೆಯಿಂದ ನವವಿಧ ಭಕ್ತಿಯ ಆಚರಣೆಯಾಗುವುದು

೪ ಇ. ವಿಶೇಷ ಭಕ್ತಿಸತ್ಸಂಗದಲ್ಲಿ ಕಲಿಸಲಾಗುವ ಸಾಧನೆಯ ಪಂಚ ಸೂತ್ರಗಳ ಆಚರಣೆಯಿಂದ ಜೀವದ ಲಿಂಗದೇಹದ ಮೇಲೆ ನವವಿಧಭಕ್ತಿಯ ಸಂಸ್ಕಾರವಾಗುವುದು

ಶ್ರೀ. ನಿಷಾದ ದೇಶಮುಖ

ವಿಶೇಷ ಭಕ್ತಿಸತ್ಸಂಗದಲ್ಲಿ ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಅಲ್ಲ, ಬದಲಾಗಿ ಆಧ್ಯಾತ್ಮಿಕ ಸ್ತರದಲ್ಲಿ ಸಾಧನೆಯ ಪಂಚಸೂತ್ರಗಳ ಆಚರಣೆಯನ್ನು ಕಲಿಸಿ ಕೊಡಲಾಗುತ್ತದೆ, ಉದಾ. ಔಪಚಾರಿಕತೆಗಾಗಿ ವಿಚಾರಿಸುವುದಲ್ಲ, ಬದಲಾಗಿ ತನ್ನ ಸಾಧನೆಯೆಂದು ಜವಾಬ್ದಾರ ಸಾಧಕರು ಮತ್ತು ಸಂತರನ್ನು ಮನಮುಕ್ತವಾಗಿ ವಿಚಾರಿಸುವುದು. ಆದ್ದರಿಂದ ಯಾವ ರೀತಿ ಸಖ್ಯಭಕ್ತಿಯಲ್ಲಿ ಭಕ್ತನು ಭಗವಂತನೊಂದಿಗೆ ಮಾತನಾಡುವಾಗ ಅದರಲ್ಲಿ ಔಪಚಾರಿಕತೆ ಇರುವುದಿಲ್ಲವೋ, ಸ್ವತಃದ ಪ್ರತಿಷ್ಠೆಯ ವಿಚಾರ ಇರುವುದಿಲ್ಲವೋ ಅಥವಾ ಅನಾವಶ್ಯಕ ವಿಷಯಗಳನ್ನು ಹೇಳುವುದೂ ಇರುವುದಿಲ್ಲವೋ; ಆದರೆ ಅದರ ಬದಲಿಗೆ ಮನಮುಕ್ತವಾಗಿ ಮಾತನಾಡುವುದು, ಸಮರ್ಪಣೆ ಮತ್ತು ಪ್ರೀತಿ ಇರುತ್ತದೆ. ಇವೇ ಗುಣಗಳನ್ನು ನಿರ್ಮಿಸುವ ಧ್ಯೇಯವನ್ನು ವಿಶೇಷ ಭಕ್ತಿಸತ್ಸಂಗದ ಮಾಧ್ಯಮದಿಂದ ಜೀವವು ತೆಗೆದುಕೊಳ್ಳುತ್ತದೆ.

ಈ ರೀತಿ ಆಧ್ಯಾತ್ಮಿಕ ಸ್ತರದ ಕಲಿಕೆಗನುಸಾರ ಯಾವ ಸಮಯ ದಲ್ಲಿ ಜೀವವು ತಳಮಳದಿಂದ ಧ್ಯೇಯವನ್ನು ತಲುಪಲು ಪ್ರಯತ್ನಿಸುತ್ತದೆಯೋ, ಆಗ ದೇವರು ಸಹ ಅವನಿಗೆ ಸಹಾಯ ಮಾಡುತ್ತಾನೆ. ಈ ಸಹಾಯದ ಪ್ರತಿಧ್ವನಿಯು ಅನುಭೂತಿಗಳ ಸ್ವರೂಪದಲ್ಲಿ ಜೀವದ ಲಿಂಗದೇಹದ ಮೇಲೆ ಮೂಡುತ್ತದೆ ಮತ್ತು ಅದರಿಂದ ಜೀವಕ್ಕೆ ‘ಸಾಧನೆಯ ಪ್ರಯತ್ನಗಳನ್ನು ಈ ರೀತಿ ಮಾಡಲಾಗುತ್ತದೆ ?’, ‘ದೇವರ ಸೇವೆಯನ್ನು ಈ ರೀತಿ ಮಾಡಲಾಗುತ್ತದೆ ?’, ಎಂಬುದರ ಆತ್ಮಬೋಧವಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಧನೆಯ ಪಂಚಸೂತ್ರಗಳ ಆಚರಣೆಯಿಂದ ಜೀವದ ಲಿಂಗದೇಹದ ಮೇಲೆ ನವವಿಧ ಭಕ್ತಿಯ ಸಂಸ್ಕಾರಗಳಾಗುತ್ತವೆ ಮತ್ತು ಜೀವಕ್ಕೆ ದೇವರೊಂದಿಗೆ ಏಕರೂಪವಾಗುವುದು ಬಹಳ ಸುಲಭವಾಗುತ್ತದೆ.

೫. ಜ್ಞಾನ, ಕರ್ಮ ಮತ್ತು ಭಕ್ತಿ ಈ ಮೂರೂ ಸ್ತರಗಳಲ್ಲಿ, ಅಂದರೆ ಸರ್ವಸಮಾವೇಶಕ ಸ್ತರದಲ್ಲಿರುವ ವಿಶೇಷ ಭಕ್ತಿಸತ್ಸಂಗ ಶೃಂಖಲೆ

ಈ ಲೇಖನದ ‘ಅಂಶ ೧’ ರಂತೆ ವಿಶೇಷ ಭಕ್ತಿಸತ್ಸಂಗ ಶೃಂಖಲೆಯ ಅಡಿಯಲ್ಲಿ ಸಾಧನೆ ಮಾಡುವ ಸಾಧಕರಿಂದ ಆಗುತ್ತಿರುವ ತಪ್ಪುಗಳ ಬೋಧ, ಅಂದರೆ ಜ್ಞಾನವನ್ನು ಅವರಿಗೆ ನೀಡಲಾಗುತ್ತದೆ. ಮುಂದೆ ಪಂಚಸೂತ್ರಗಳ ಆಚರಣೆ ಮಾಡುವ ಧ್ಯೇಯವನ್ನು ನೀಡಿ ಭಕ್ತಿಸತ್ಸಂಗದಲ್ಲಿ ಸಹಭಾಗಿಯಾದ ಜೀವ ಗಳಿಂದ ಯೋಗ್ಯ ಕರ್ಮವನ್ನು ಮಾಡಿಸಿಕೊಂಡು ಅವರ ಕ್ರಿಯಮಾಣ ಶಕ್ತಿಯಲ್ಲಿ ವೃದ್ಧಿ ಮಾಡಲಾಗುತ್ತದೆ ಮತ್ತು ಕರ್ಮ ಮಾಡುವಾಗ ದೇವರ ಅನುಸಂಧಾನದಲ್ಲಿರಲು ಕಲಿಸಿ ಲಿಂಗ ದೇಹದ ಮೇಲೆ ನವವಿಧಭಕ್ತಿಯ ಸಂಸ್ಕಾರಗಳನ್ನು ಮೂಡಿಸ ಲಾಗುತ್ತದೆ. ಇದರಿಂದ ವಿಶೇಷ ಭಕ್ತಿಸತ್ಸಂಗ ಶೃಂಖಲೆಯು ಜ್ಞಾನ, ಕರ್ಮ ಮತ್ತು ಭಕ್ತಿ ಈ ಮೂರೂ ಸ್ತರಗಳಲ್ಲಿ, ಅಂದರೆ ಸರ್ವಸಮಾವೇಶಕ ಸ್ತರದಲ್ಲಿ ಜೀವಗಳ ಉದ್ಧಾರ ಮತ್ತು ಕಲ್ಯಾಣಕ್ಕಾಗಿ ಕಾರ್ಯನಿರತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

೬. ಕೃತಜ್ಞತೆ ಮತ್ತು ಪ್ರಾರ್ಥನೆ

ಗುರುಗಳು ಶಿಷ್ಯನ ಉದ್ಧಾರ ಮತ್ತು ಕಲ್ಯಾಣಕ್ಕಾಗಿ ಮಾಡುತ್ತಿರುವ ಸೂಕ್ಷ್ಮ ಸ್ತರದ ಕಾರ್ಯವು ಶಬ್ದಾತೀತ, ಹೆಚ್ಚಿನಾಂಶ ಅಪ್ರಕಟ ಮತ್ತು ಅಜ್ಞಾತ ಸ್ವರೂಪದ್ದಾಗಿರುತ್ತದೆ. ಅನೇಕ ಶಿಷ್ಯರಿಗೆ ‘ಗುರುಗಳು ನಮ್ಮನ್ನು ಹೇಗೆ ರೂಪಿಸಿದರು ?’, ಇದರ ಸ್ವಲ್ಪ ಅರ್ಥ ಅಥವಾ ಅರಿವು ಸ್ವಲ್ಪ ಸಮಯದ ನಂತರ ಅಥವಾ ಕೆಲವು ವರ್ಷಗಳ ನಂತರ ಆಗುತ್ತದೆ. ವರ್ತಮಾನ ಕಾಲದಲ್ಲಿ ‘ಸಮಷ್ಟಿ ಗುರುಗಳು ವಿಶೇಷ ಭಕ್ತಿಸತ್ಸಂಗಗಳ ಮೂಲಕ ಅರ್ಹ ಸಾಧಕರನ್ನು ಯಾವ ರೀತಿಯಲ್ಲಿ ರೂಪಿಸುತ್ತಿದ್ದಾರೆ ?’, ಈ ಸಂದರ್ಭದಲ್ಲಿ ಎರಡು ಮಾತುಗಳನ್ನು ಬರೆಯಲು ನನಗೆ ಸಾಧ್ಯವಾಯಿತು; ಅದಕ್ಕಾಗಿ ನಾನು ಶ್ರೀ ಗುರುಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಅರ್ಜುನನು ಅರ್ಹನಾಗಿದ್ದನು; ಆದ್ದರಿಂದ ಶ್ರೀಕೃಷ್ಣನು ಅರ್ಜುನನೊಬ್ಬನಿಗೆ ಮಾತ್ರ ಶ್ರೀಮದ್ಭಗವದ್ಗೀತೆಯ ‘ಪರಮ ಗುಹ್ಯ’ ಜ್ಞಾನವನ್ನು ನೀಡಿದನು. ನಮ್ಮೆಲ್ಲಾ ಸಾಧಕರ ಅರ್ಹತೆ ಇಲ್ಲದಿದ್ದರೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನಾವು ತಳಮಳದಿಂದ ಮಾಡುತ್ತಿರುವ ಪ್ರಯತ್ನಗಳಿಂದಾಗಿ ನಮಗೆ ಗುರುಕೃಪಾಯೋಗದ ಮೂಲತತ್ತ್ವಗಳ ಬೋಧವನ್ನು ನೀಡುವ ‘ಶ್ರೀ ಗುರುಗೀತೆ’ಯನ್ನು ವಿಶೇಷ ಭಕ್ತಿಸತ್ಸಂಗದ ಮಾಧ್ಯಮದಿಂದ ನೀಡುತ್ತಿದ್ದಾರೆ. ‘ಈ ಜ್ಞಾನಕ್ಕನುಸಾರ ನಮಗೆ ಪ್ರತ್ಯಕ್ಷ ಆಚರಣೆ ಮಾಡಿ ಶ್ರೀ ಗುರುಚರಣಗಳಲ್ಲಿ ಸರ್ವಸ್ವವನ್ನು ಸಮರ್ಪಿಸಲು ಸಾಧ್ಯವಾಗಲಿ, ಎಂದು ಮೂರೂ ಗುರುಗಳ ಚರಣಗಳಲ್ಲಿ ಪ್ರಾರ್ಥನೆ !’

(ಮುಕ್ತಾಯ)

– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ದೊರಕಿದ ದಿನಾಂಕ ೧.೮.೨೦೨೫ ಮತ್ತು ಸಮಯ ಮಧ್ಯಾಹ್ನ ೧೨.೦೬)