ವಿಶೇಷ ಭಕ್ತಿಸತ್ಸಂಗ ಮಾಲಿಕೆ : ಗುರುಕೃಪಾಯೋಗದಲ್ಲಿನ ಮೂಲತತ್ತ್ವದ ಬೋಧನೆ ನೀಡುವ ಶ್ರೀ ಗುರುಗೀತೆ !

‘೨೦೨೫ ರ ಗುರುಪೂರ್ಣಿಮೆಯ ನಂತರ ಭಾರತದಾದ್ಯಂತದ ಎಲ್ಲಾ ಸಾಧಕರಿಗಾಗಿ ಭಕ್ತಿ ಸತ್ಸಂಗದಲ್ಲಿ ವಿಶೇಷ ಸರಣಿಯನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಸಾಧನೆಯ ‘ವಿಚಾರಿಸುವುದು, ಹೇಳಿದ್ದನ್ನು ಕೇಳುವುದು, ಸ್ವೀಕರಿಸುವುದು, ಕಲಿಯುವುದು ಮತ್ತು ವರದಿ ನೀಡುವುದು’ ಈ ಪಂಚಸೂತ್ರಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. ೧೯.೨.೨೦೨೬ ರಂದು ಪ್ರಕಟವಾದ ಮೊದಲ ಭಾಗದಲ್ಲಿ ನಾವು ವಿಶೇಷ ಭಕ್ತಿಸತ್ಸಂಗದ ಮೂಲಕ ಹೇಳಲಾದ ಪ್ರಯತ್ನಗಳಿಂದ ಸಾಧಕರ ನಿಜವಾದ ಅರ್ಥದಲ್ಲಿ ಗುರುಕೃಪಾಯೋಗದ ಪ್ರಕಾರ ಸಾಧನೆಯು ನಡೆಯುತ್ತಿದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಈಗ ‘ಪಂಚಸೂತ್ರ ಕಲಿಸುವ ವಿಶೇಷ ಭಕ್ತಿಸತ್ಸಂಗ ಮಾಲಿಕೆಯ ಕಾಲಕ್ಕನುಗುಣವಾದ ಮಹತ್ವ ಮತ್ತು ಲಾಭಗಳನ್ನು’ ನೋಡೋಣ.
ಸ್ಥೂಲದಲ್ಲಿನ ಆಪತ್ಕಾಲವನ್ನು ಪ್ರತ್ಯಕ್ಷ ಎದುರಿಸಲು ಸಾಧಕರಲ್ಲಿ ಕಾಲಾನುಸಾರ ಆವಶ್ಯಕವಿರುವ ‘ಅರ್ಜುನಭಾವ’ವು ವಿಶೇಷ ಭಕ್ತಿಸತ್ಸಂಗಗಳ ಮೂಲಕ ಮೂಡುತ್ತ್ತಿದೆ. ನಿಜವಾದ ಭಕ್ತರಿಗೆ ಸಂಕಟ ಬಂದಾಗಲೆಲ್ಲ ಭಗವಂತನು ಅವರನ್ನು ಆ ಸಂಕಟದಿಂದ ರಕ್ಷಿಸಲು ವಿವಿಧ ಮಾಧ್ಯಮಗಳ ಮೂಲಕ ಅವರಿಗೆ ಸಹಾಯ ಮಾಡುತ್ತಾನೆ.
ಭಾಗ – ೨
ಹಿಂದಿನ ಭಾಗ -೧ ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/171550.html
೧. ವ್ಯಷ್ಟಿ ಸ್ತರದಲ್ಲಿನ ಸ್ಥೂಲದ ಸಂಕಷ್ಟವನ್ನು ಎದುರಿಸಲು ದೇವರು ಭಾವಜಾಗೃತಿಯ ಪಾಠವನ್ನು ಕಲಿಸುವುದು
ಸಾಧಾರಣವಾಗಿ ೨೦೦೮-೨೦೦೯ ರ ಅವಧಿಯಲ್ಲಿ ಸನಾತನ ಸಂಸ್ಥೆಯ ಮೇಲೆ ನಿಷೇಧದ ಕರಿನೆರಳು ಇತ್ತು. ಈ ಸಂಕಟವು ಸ್ಥೂಲದ ರೂಪದಲ್ಲಿತ್ತು ಮತ್ತು ಅದು ತುಲನಾತ್ಮಕವಾಗಿ ವ್ಯಷ್ಟಿ ಸ್ತರದ್ದಾಗಿತ್ತು. ಈ ಸಂಕಟದಿಂದ ಪಾರಾಗಲು ಎಲ್ಲಾ ಸಾಧಕರ ಭಾವದ ಮಟ್ಟವು ಹೆಚ್ಚಾಗುವುದು ಆವಶ್ಯಕವಾಗಿತ್ತು. ಇದಕ್ಕಾಗಿ ಭಗವಂತನು ‘ಗೋಪೀಭಾವ’ ಗೋಪಿಯರ ಮನಸ್ಸಿನಲ್ಲಿ ಶ್ರೀಕೃಷ್ಣನ ಬಗ್ಗೆ ಇದ್ದ ಭಾವದಂತೆ ಕೆಲವು ಜೀವಿಗಳನ್ನು ಸನಾತನಕ್ಕೆ ಕಳುಹಿಸಿದನು. ಈ ಸಾಧಕರಿಂದಾಗಿ ‘ಪ್ರತ್ಯಕ್ಷ ಭಾವ ಎಂದರೆ ಹೇಗಿರುತ್ತದೆ ?’, ‘ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು ?’, ಎಂಬುದನ್ನು ಸಾಧಕರು ಸ್ಥೂಲರೂಪದಲ್ಲಿ ಕಲಿತರು. ಇದರಿಂದ ಅವರಿಗೆ ವ್ಯಷ್ಟಿ ಸ್ತರದ ಸಂಕಟವನ್ನು ಎದುರಿಸುವುದು ಸುಲಭ ಸಾಧ್ಯವಾಯಿತು.
೨. ಸಮಷ್ಟಿ ಸ್ತರದಲ್ಲಿನ ಸಂಕಟವನ್ನು, ಅಂದರೆ ಆಪತ್ಕಾಲವನ್ನು ಎದುರಿಸಲು ‘ಅರ್ಜುನಭಾವ’ ಆವಶ್ಯಕವಾಗಿರುವುದು
೨೦೨೫ ರಿಂದ ಸಮಷ್ಟಿ ಸ್ತರದಲ್ಲಿನ ಸ್ಥೂಲ ಆಪತ್ಕಾಲವು ಪ್ರಾರಂಭವಾಗಿದೆ. ಬರಲಿರುವ ಆಪತ್ಕಾಲವು ಎಷ್ಟು ಭೀಕರವಾಗಿ ಇರಲಿದೆ ಎಂದರೆ, ಇಡೀ ಪೃಥ್ವಿಯೇ ಒಂದು ಕುರುಕ್ಷೇತ್ರ (ರಣರಂಗ)ವಾಗಲಿದೆ ಮತ್ತು ಪ್ರತಿಯೊಬ್ಬ ಸಾಧಕನು ತಾನು ಅರ್ಜುನನ ಸ್ಥಾನದಲ್ಲಿ ನಿಂತಿರುವುದನ್ನು ಅನುಭವಿಸಲಿದ್ದಾನೆ. ಈ ಪ್ರಚಂಡ ಭೀಕರ ಆಪತ್ಕಾಲವನ್ನು ಎದುರಿಸಲು ಸಾಧಕರಲ್ಲಿ ‘ಅರ್ಜುನಭಾವ’ವಿದ್ದರೆ ಮಾತ್ರ ಅವರು ಸಂತರು (ಗುರುಗಳು), ಸದ್ಗುರುಗಳು ಮತ್ತು ಪರಾತ್ಪರ ಗುರುಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವನ್ನು ಗ್ರಹಿಸಿ ಬದುಕಲು ಸಾಧ್ಯವಾಗುವುದು.
೨ ಅ. ಸಾಧನೆಯ ಪಂಚಸೂತ್ರಗಳು ಎಂದರೆ ‘ಅರ್ಜುನಭಾವ’: ‘ಅರ್ಜುನಭಾವ’ ಎಂದರೆ ಅರ್ಜುನನಂತೆ ‘ವಿಚಾರಿಸುವುದು, ಕೇಳಿಸಿಕೊಳ್ಳುವುದು, ಸ್ವೀಕರಿಸುವುದು, ಕಲಿಯುವುದು ಮತ್ತು ವರದಿ ನೀಡುವುದು’ ಎಂಬ ವೃತ್ತಿ ! ಇದರ ಸಂಕ್ಷಿಪ್ತ ವಿಶ್ಲೇಷಣೆ ಹೀಗಿದೆ:

ಅ. ವಿಚಾರಿಸುವುದು : ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ರಣರಂಗದಲ್ಲಿಯೂ ಅರ್ಜುನನು ಶ್ರೀಕೃಷ್ಣನಿಗೆ ಮನಸ್ಸಿನಲ್ಲಿನ ದ್ವಂದ್ವಗಳ ಕುರಿತು ಪ್ರಶ್ನೆಗಳನ್ನು ಕೇಳುತ್ತಾನೆ ಮತ್ತು ಮಾರ್ಗದರ್ಶನ ಪಡೆಯುತ್ತಾನೆ. ಮಾರ್ಗದರ್ಶನದ ಬಗ್ಗೆ ಸಂಶಯ ಬಂದಾಗ ಪ್ರತಿಪ್ರಶ್ನೆಯನ್ನೂ ಕೇಳುತ್ತಾನೆ. ಇದರಿಂದಾಗಿ ಇಂದು ಮಾನವಕುಲಕ್ಕೆ ಭಗವದ್ಗೀತೆಯಂತಹ ಮಹಾನ್ ತತ್ತ್ವಜ್ಞಾನವಿರುವ ಗ್ರಂಥ ಲಭಿಸಿತು.
ಆ. ಹೇಳಿದ್ದನ್ನು ಕೇಳುವುದು : ಶ್ರೀಕೃಷ್ಣನು ಅರ್ಜುನನಿಗೆ ‘ಪರಮ ಗುಹ್ಯ’ವಾದ ಗೀತೆಯ ಜ್ಞಾನವನ್ನು ಹೇಳುತ್ತಾನೆ. ಅದನ್ನು ಅರ್ಜುನನು ಮನಸ್ಸಿನಲ್ಲಿ ಬೇರೆ ಯಾವುದೇ ವಿಚಾರವನ್ನು ಮಾಡದೇ ನಿಷ್ಠೆಯಿಂದ ಕೇಳುತ್ತಾನೆ.
ಇ. ಸ್ವೀಕರಿಸುವುದು : ಅರ್ಜುನನು ಶ್ರೀಕೃಷ್ಣನು ಹೇಳಿದ ಗೀತೆಯ ಜ್ಞಾನವನ್ನು ಕೇವಲ ಮೇಲ್ನೋಟಕ್ಕೆ ಕೇಳಿಸಿಕೊಳ್ಳುವುದಿಲ್ಲ, ಬದಲಾಗಿ ಅದನ್ನು ಸ್ವೀಕರಿಸಿ ಪುನಃ ಯುದ್ಧ ಮಾಡಲು ಆರಂಭಿಸುತ್ತಾನೆ. ಶ್ರೀಕೃಷ್ಣನು ಯಾರೊಂದಿಗೆ ಯುದ್ಧ ಮಾಡಲು ಅಥವಾ ಯುದ್ಧದಿಂದ ಹಿಂದೆ ಸರಿಯಲು ಹೇಳುತ್ತಿದ್ದನೋ, ಅದನ್ನು ಅರ್ಜುನನು ಸ್ವೀಕರಿಸುತ್ತಿದ್ದನು. ಶ್ರೀಕೃಷ್ಣನು ರಥದ ಚಕ್ರವು ಭೂಮಿಯಲ್ಲಿ ಹೂತುಹೋಗಿ ಸಿಲುಕಿಕೊಂಡಿದ್ದ ಕರ್ಣನನ್ನು ವಧಿಸಲು ಹೇಳಿದಾಗ, ಅರ್ಜುನನು ತನ್ನ ಸ್ವಂತ ಅಭಿಪ್ರಾಯಕ್ಕೆ ಅಂಟಿಕೊಳ್ಳದೆ ಕರ್ಣನನ್ನು ವಧಿಸುತ್ತಾನೆ ಮತ್ತು ಆಧ್ಯಾತ್ಮಿಕ ನ್ಯಾಯವನ್ನು ಪಾಲಿಸುತ್ತಾನೆ.
ಈ. ಕಲಿಯುವುದು : ಶ್ರೀಕೃಷ್ಣನು ಅರ್ಜುನನಿಗೆ ರಣರಂಗದಲ್ಲಿ ಗೀತೆಯನ್ನು ಹೇಳುತ್ತಿರುವಾಗ ಅರ್ಜುನನು ಅದರಿಂದ ಕಲಿಯುತ್ತಾನೆ ಮತ್ತು ಯುದ್ಧಕ್ಷೇತ್ರದಲ್ಲಿ ಎದುರಿಗಿರುವ ತನ್ನ ಪ್ರತಿಸ್ಪರ್ಧಿಗಳಿಂದಲೂ ಕಲಿಯುತ್ತಾನೆ.
ಉ. ವರದಿ ನೀಡುವುದು : ಅರ್ಜುನನು ರಣರಂಗದಲ್ಲಿ ಮುಕ್ತ ಮನಸ್ಸಿನಿಂದ ಶ್ರೀಕೃಷ್ಣನಿಗೆ ತನ್ನ ಮನಸ್ಸಿನಲ್ಲಿ ನಡೆಯುತ್ತಿರುವ ದ್ವಂದ್ವವನ್ನು ಹೇಳುತ್ತಾನೆ ಮತ್ತು ಮುಂದೆಯೂ ಮನಮುಕ್ತವಾಗಿ ತನ್ನ ಸ್ಥಿತಿಯನ್ನು ಹೇಳುತ್ತಾನೆ.
ಇದರಿಂದಾಗಿ ಸಾಧನೆಯ ಪಂಚಸೂತ್ರವನ್ನು ಆಚರಿಸುವುದು ಎಂದರೆ ತನ್ನಲ್ಲಿ ‘ಅರ್ಜುನಭಾವ’ವನ್ನು ನಿರ್ಮಿಸಿಕೊಳ್ಳುವುದು ಎಂದೂ ಹೇಳಬಹುದು.
೩. ‘ಅರ್ಜುನಭಾವ’ ಇದ್ದರೆ ಮಾತ್ರ ಆಪತ್ಕಾಲದಲ್ಲಿ ಬದುಕಲು ಸಾಧ್ಯವಾಗುವುದು !
ಯಾವಾಗ ತೀವ್ರ ಸಮಷ್ಟಿ ಪ್ರಾರಬ್ಧ ಮತ್ತು ಅಲ್ಪ ಸಮಷ್ಟಿ ಕ್ರಿಯಮಾಣವಿರುತ್ತದೆಯೋ, ಆ ಕಾಲವೇ ಆಪತ್ಕಾಲ. ಒಬ್ಬ ವ್ಯಕ್ತಿಯು ಸಾಧನೆಯಿಲ್ಲದೆ ತನ್ನ ಮಂದ ವ್ಯಷ್ಟಿ ಪ್ರಾರಬ್ಧವನ್ನೂ (ಸಮಷ್ಟಿ ಪ್ರಾರಬ್ಧದ ೦.೦೦೦೦೧ ಅಂಶ) ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಿರುವಾಗ, ಸಮಷ್ಟಿ ಪ್ರಾರಬ್ಧವನ್ನು ತಪ್ಪಿಸುವುದು ಅಥವಾ ಅದರ ತೀವ್ರತೆಯನ್ನು ಕಡಿಮೆ ಮಾಡುವುದು ಅಸಾಧ್ಯವೇ ಸರಿ. ಕೇವಲ ಗುರುಕೃಪೆಯಿಂದ ವ್ಯಷ್ಟಿ ಸ್ತರದ ಮಂದ ಮತ್ತು ಮಧ್ಯಮ ಪ್ರಾರಬ್ಧವು ದೂರವಾಗಬಹುದು ಮತ್ತು ತೀವ್ರ ಪ್ರಾರಬ್ಧವನ್ನು ಅನುಭವಿಸುವ ಶಕ್ತಿ ಸಿಗುತ್ತದೆ. ಕೇವಲ ಗುರುಗಳ ಮಾರ್ಗದರ್ಶನದಂತೆ ಸಮಷ್ಟಿ ಸಾಧನೆಯನ್ನು ಮಾಡುವುದರಿಂದ ಸಮಷ್ಟಿ ಸ್ತರದ ಮಂದ ಮತ್ತು ಮಧ್ಯಮ ಪ್ರಾರಬ್ಧವು ದೂರವಾಗಬಹುದು ಹಾಗೂ ತೀವ್ರ ಸಮಷ್ಟಿ ಪ್ರಾರಬ್ಧವನ್ನು ಅನುಭವಿಸುವ ಶಕ್ತಿ ದೊರೆಯುತ್ತದೆ. ಆದ್ದರಿಂದ ಆಪತ್ಕಾಲದಲ್ಲಿ ಕೇವಲ ‘ಅರ್ಜುನಭಾವ’ವಿರುವ ಜೀವಗಳು ಮಾತ್ರ ಗುರುಗಳ ಶಕ್ತಿ ಮತ್ತು ಚೈತನ್ಯವನ್ನು ಗ್ರಹಿಸಿ ಬದುಕಲು ಸಾಧ್ಯವಾಗುವುದು.
ಮುಂಬರಲಿರುವ ಆಪತ್ಕಾಲವು ಸಮಷ್ಟಿ ಸ್ತರದ ಆಪತ್ಕಾಲವಾಗಿದೆ. ಇದಕ್ಕಾಗಿಯೇ ಸಮಷ್ಟಿ ಗುರುಗಳ (ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ) ಮಾಧ್ಯಮದಿಂದ ಭಗವಂತನು ಸಾಧನೆ ಮಾಡುವ ಸಮಷ್ಟಿಗೆ ಸಾಧನೆಯ ಪಂಚಸೂತ್ರಗಳು ಅಂದರೆ ‘ಅರ್ಜುನಭಾವ’ವನ್ನು ಕಲಿಸುತ್ತಿದ್ದಾನೆ. ಇದರಿಂದ ಸಾಧಕರಿಗೆ ಆಪತ್ಕಾಲವನ್ನು ಎದುರಿಸಲು ಮತ್ತು ಜೀವಿಸಲು ಸಾಧ್ಯವಾಗುವುದು.
೪. ವಿಶೇಷ ಭಕ್ತಿಸತ್ಸಂಗದಿಂದ ಸಾಧಕರಿಂದ ಯೋಗ್ಯ ಕ್ರಿಯಮಾಣ ಬಳಕೆಯ ಪ್ರಮಾಣದಲ್ಲಿ ಹೆಚ್ಚಳವಾಗುವುದು
ವರ್ತಮಾನ ಕಲಿಯುಗದಲ್ಲಿ ಪ್ರತಿಯೊಬ್ಬ ಜೀವಿಗೆ ಸರಾಸರಿ ಶೇ. ೬೫ ರಷ್ಟು ಪ್ರಾರಬ್ಧವನ್ನು ಅನುಭವಿಸಬೇಕಾಗುತ್ತದೆ ಮತ್ತು ಶೇ. ೩೫ ರಷ್ಟು ಕ್ರಿಯಮಾಣವನ್ನು ಬಳಸಲು ಸಾಧ್ಯವಿರುತ್ತದೆ. ಈ ಕ್ರಿಯಮಾಣದ ಮೂಲಕ ಅಂದರೆ ಸಾಧನೆಯ ಮೂಲಕ ಅವನು ಶೇ. ೬೫ ಪ್ರಾರಬ್ಧದ ತೀವ್ರತೆಯನ್ನು ಕಡಿಮೆ ಮಾಡಿ ಕೊಳ್ಳಬಹುದು. ಸಾಧನೆಯನ್ನು ಬಿಟ್ಟು ಜೀವವು ಮಾಡುವ ಇತರ ಕ್ರಿಯಮಾಣ ಕರ್ಮಗಳು ಅವನ ಕೊಡು-ಕೊಳ್ಳುವ ಲೆಕ್ಕದಲ್ಲಿ ಅಂದರೆ ಪ್ರಾರಬ್ಧವನ್ನು ಹೆಚ್ಚಿಸುತ್ತವೆ. ಹೀಗಿದ್ದರೂ, ಸಾಧನೆ ಮಾಡುವ ಕೆಲವು ಜೀವಗಳು ಸಾಧನೆ ಮಾಡುವಾಗ ತಮ್ಮ ಮನಸ್ಸಿನಂತೆ ಸಾಧನೆ ಮಾಡುವುದು (ತಮ್ಮ ಇಚ್ಛೆಯಂತೆ ಸಾಧನೆ ಮಾಡುವುದು), ಸಾಂಪ್ರದಾಯಿಕ ಸಾಧನೆ ಮಾಡುವುದು (ಸಾಧನೆಯ ಪ್ರಕಾರಗಳಲ್ಲಿ ಸಿಲುಕಿಕೊಳ್ಳುವುದು), ತನ್ನನ್ನು ತಾನು ಸಾಧಕನೆಂದು ತಿಳಿಯುವುದು (ಇತರರನ್ನು ತುಚ್ಛವಾಗಿ ಕಾಣುವುದು, ಇತರರ ಅಭಿಪ್ರಾಯವನ್ನು ಸ್ವೀಕರಿಸದಿರುವುದು), ಮನಸ್ಸಿನಂತೆ ಗುರುಗಳನ್ನು ಮಾಡಿಕೊಳ್ಳುವುದು (ತನ್ನ ಇಷ್ಟಾನಿಷ್ಟಗಳಂತೆ ಸಾಧನೆ ಮಾಡುವುದು) ಇಂತಹ ತಪ್ಪುಗಳನ್ನು ಮಾಡುತ್ತಾರೆ. ಇದರ ಪರಿಣಾಮವಾಗಿ ಸಾಧಕನು ಸಾಧನೆ ಮಾಡಿ ಗಳಿಸಿದ ಸ್ವಲ್ಪಮಟ್ಟಿನ ಶಕ್ತಿಯೂ ತಪ್ಪು ಕ್ರಿಯಮಾಣದಿಂದಾಗಿ ನಷ್ಟವಾಗುತ್ತದೆ. ಇದರಿಂದ ಸಾಧಕನಿಗೆ ‘ಅನುಭೂತಿ ಬರುವುದು, ಅನಿಷ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಣೆ, ಆಧ್ಯಾತ್ಮಿಕ ಉನ್ನತಿ’ಯಂತಹ ಗುರಿಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ವರ್ತಮಾನ ಕಾಲದಲ್ಲಿ ಗುರುಕೃಪಾಯೋಗದ ಪ್ರಕಾರ ಸಾಧನೆ ಮಾಡುವ ಸಾಧಕರು ತಮ್ಮ ಕ್ರಿಯಮಾಣದ ಕೇವಲ ಸರಾಸರಿ ಶೇ. ೧೦ ರಷ್ಟು ಮಾತ್ರ ಸೂಕ್ತ ಬಳಕೆಯನ್ನು ಮಾಡುತ್ತಿದ್ದಾರೆ.
೩ ಅ. ಸಾಧಕರು ಬಳಸಿದ ಕ್ರಿಯಮಾಣ ಮತ್ತು ಅದರಿಂದ ಅವರಿಗೆ ಲಭಿಸುವ ಗುರಿ

೩ ಆ. ವಿಶೇಷ ಭಕ್ತಿಸತ್ಸಂಗದ ಮೂಲಕ ಕಲಿಸಲಾಗುವ ಸಾಧನೆಯ ಪಂಚಸೂತ್ರಗಳಿಂದ ಸಾಧಕರು ಸರಾಸರಿ ಶೇ. ೨೦ ರಷ್ಟು ಕ್ರಿಯಮಾಣವನ್ನು ಉಪಯೋಗಿಸಲು ಸಾಧ್ಯವಾಗುವುದು : ವಿಶೇಷ ಭಕ್ತಿಸತ್ಸಂಗಗಳ ಮೂಲಕ ಸಾಧಕರಿಗೆ ಸಾಧನೆಯ ಪಂಚಸೂತ್ರಗಳು, ಅಂದರೆ ಯೋಗ್ಯ ಕ್ರಿಯಮಾಣವನ್ನು ಬಳಸುವ ಬೋಧನೆಯನ್ನು ನೀಡಲಾಗುತ್ತಿದೆ. ಇದರಿಂದ ಸಾಧಕರಲ್ಲಿರುವ ಸ್ವಭಾವದೋಷಗಳು ಕಡಿಮೆಯಾಗುತ್ತಿದ್ದು, ಅವರಲ್ಲಿ ಗುಣಗಳು ನಿರ್ಮಾಣವಾಗಲು ಸಹಾಯವಾಗುತ್ತಿದೆ. ವ್ಯಷ್ಟಿ ಸ್ತರದಲ್ಲಿ ಕೆಲವು ಸಾಧಕರು ಅತ್ಯಂತ ತಳಮಳದಿಂದ ಪ್ರಯತ್ನ ಮಾಡುತ್ತಿದ್ದು, ಇದರಿಂದಾಗಿ ಅವರು ತಮ್ಮ ಕ್ರಿಯಮಾಣವನ್ನು ಶೇ. ೨೫ ರಷ್ಟು ಬಳಸಬಹುದು. ಹಾಗೆಯೇ ಕೆಲವು ಕಾರ್ಯಕರ್ತರು ಇನ್ನೂ ಯಾವುದೇ ಪ್ರಯತ್ನಗಳನ್ನು ಮಾಡದ ಕಾರಣ, ಮುಂದಿನ ಆಪತ್ಕಾಲದಲ್ಲಿ ಅವರಿಗೆ ತಮ್ಮ ಸ್ವಭಾವದೋಷಗಳ ಕಾರಣದಿಂದ ಶಿಕ್ಷೆಯನ್ನು ಅನುಭವಿಸಬೇಕಾಗುವುದು.
ಪ್ರತ್ಯಕ್ಷ ಗುರುತತ್ತ್ವವೇ ಈ ಸತ್ಸಂಗಗಳ ಮಾಧ್ಯಮದಿಂದ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಿರುವುದರಿಂದ, ಸತ್ಸಂಗದಲ್ಲಿನ ಅಂಶಗಳಂತೆ ತಳಮಳದಿಂದ ಪ್ರಯತ್ನಿಸುವ ಜೀವಗಳ ಮೇಲೆ ಗುರುಕೃಪೆಯಾಗಿ, ಸಾಧಕರಿಂದ ಸರಾಸರಿ ಶೇ. ೨೦ ರಷ್ಟು ಕ್ರಿಯಮಾಣವು ಬಳಸಲ್ಪಡಬಹುದು. ಇದರಿಂದಾಗಿ ಸಾಧಕರಿಗೆ ದೊಡ್ಡ ಮಟ್ಟದ ಅನಿಷ್ಟ ಶಕ್ತಿಗಳ ತೊಂದರೆಯ ವಿರುದ್ಧ ಹೋರಾಡುವುದು ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸುವುದು ಎಂಬ ಹಂತಗಳನ್ನು ತಲುಪಲು ಸಾಧ್ಯವಾಗುವುದು.
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ಲಭಿಸಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ಲಭಿಸಿದ ದಿನಾಂಕ ೧.೮.೨೦೨೫ ಮತ್ತು ಸಮಯ ಮಧ್ಯಾಹ್ನ ೧೨.೦೬)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !