
‘ಹಿಂದೂಗಳೇ, ಆಪತ್ಕಾಲವು ಸಮೀಪಿಸುತ್ತಿದೆ. ಈ ಕಾಲದಲ್ಲಿ ಶ್ರೀರಾಮ ಮತ್ತು ಮಾರುತಿಯ ಆಶೀರ್ವಾದದಿಂದ ನಾವು ಪಾರಾಗಬಹುದು. ಈ ಆಪತ್ಕಾಲದ ನಂತರ ರಾಮರಾಜ್ಯವು ಸ್ಥಾಪನೆ ಆಗಲಿದೆ. ಆಪತ್ಕಾಲದಲ್ಲಿ ನಿಮ್ಮನ್ನು, ನಿಮ್ಮ ಕುಟುಂಬವನ್ನು, ಊರನ್ನು ಮತ್ತು ರಾಷ್ಟ್ರವನ್ನು ರಕ್ಷಿಸಿ ಕೊಳ್ಳಲು, ಹಾಗೆಯೇ ಮುಂಬರುವ ರಾಮರಾಜ್ಯಕ್ಕೆ ಪೂರಕವಾದ ರಾಮಭಕ್ತರನ್ನು ನಿರ್ಮಿಸುವ ವ್ಯಾಪಕ ಉದ್ದೇಶದಿಂದ, ಪ್ರತಿದಿನ ಒಂದು ಬಾರಿ ಶ್ರೀರಾಮರಕ್ಷಾಸ್ತೋತ್ರ ಮತ್ತು ಮಾರುತಿಸ್ತೋತ್ರ ಅಥವಾ ಹನುಮಾನ್ ಚಾಲೀಸಾವನ್ನು ಪಠಿಸಿ. ಇದರೊಂದಿಗೆ ನಿಮ್ಮ ನಿಯಮಿತ ಸಾಧನೆಯನ್ನು ಸಹ ಮುಂದುವರಿಸಿ. ಒಂದು ವೇಳೆ ನಿಮ್ಮ ಪ್ರಾಂತ್ಯದಲ್ಲಿ ಹನುಮಂತನ ಬೇರೆ ಯಾವುದೇ ಸ್ತೋತ್ರಗಳು ಪ್ರಚಲಿತವಿದ್ದರೆ, ಅವುಗಳನ್ನು ಪಠಿಸಬಹುದು. ಸ್ತೋತ್ರವನ್ನು ಪಠಿಸುವಾಗ ಅದರ ಹೆಚ್ಚಿನ ಪರಿಣಾಮಕ್ಕಾಗಿ ಸ್ತೋತ್ರದ ಪ್ರತಿಯೊಂದು ಪದದ ಅರ್ಥ ಮತ್ತು ಭಾವಾರ್ಥವನ್ನು ತಿಳಿದುಕೊಂಡು ಭಾವಪೂರ್ಣವಾಗಿ ಪಠಿಸಬೇಕು. ಈ ಎರಡು ದೇವತೆಗಳ ಉಪಾಸನೆ ಮಾಡುವುದು ಕಾಲಾನುಸಾರ ಅಗತ್ಯವಿರುವ ಸಾಧನೆಯಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೩.೧.೨೦೨೬)
ದೇವರಕೋಣೆಯಲ್ಲಿರುವ ಶ್ರೀರಾಮನ ಪೂಜೆ ಮಾಡುವಾಗ ಹನುಮಂತನನ್ನೂ ಪೂಜಿಸಿ
‘ಶ್ರೀರಾಮ ಮತ್ತು ಹನುಮಂತನು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ಶ್ರೀರಾಮನ ಉಪಾಸನೆಯಲ್ಲಿ ಹನುಮಂತನಿಗೂ ಸ್ಥಾನವಿದೆ. ಶ್ರೀರಾಮರಕ್ಷಾಸ್ತೋತ್ರದಲ್ಲೂ ಹನುಮಂತನ ಉಲ್ಲೇಖವಿದೆ. ಇದಕ್ಕಾಗಿ ದೇವರಕೋಣೆಯಲ್ಲಿ ಶ್ರೀರಾಮನ ಚಿತ್ರ ಅಥವಾ ಪ್ರತಿಮೆ ಇದ್ದರೆ, ಅದರೊಂದಿಗೆ ಹನುಮಂತನ ಚಿತ್ರ ಅಥವಾ ಪ್ರತಿಮೆ ಇಟ್ಟು ಅವನಿಗೂ ನಿಯಮಿತ ಪೂಜೆ ಮಾಡಬೇಕು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೩.೧.೨೦೨೬)
(ಶ್ರೀರಾಮರಕ್ಷಾ ಮತ್ತು ಮಾರುತಿಸ್ತೋತ್ರ ಇವುಗಳ ಅರ್ಥವನ್ನು ಅರಿತುಕೊಳ್ಳಲು ಓದಿ ಸನಾತನದ ಕಿರುಗ್ರಂಥ ‘ಶ್ರೀರಾಮರಕ್ಷಾಸ್ತೋತ್ರ, ಮಾರುತಿಸ್ತೋತ್ರ ಮತ್ತು ಹನುಮಾನ ಚಾಲಿಸಾ (ಅರ್ಥಸಹಿತ)’)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !