
ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !
(ಲೇಖನ ೧೧)
ಭಾರತೀಯ ಕಲೆಗಳೊಂದಿಗೆ ದೇವಿದೇವತೆಗಳಿಗಿರುವ ಸಂಬಂಧ !
‘ಈ ಲೇಖನದ ಹಿಂದಿನ ಭಾಗದಲ್ಲಿ ನಾವು ಸಂಗೀತದ ಆರಾಧ್ಯ ದೇವತೆಯಾದ ಭಗವಾನ ಶಿವನ ಮತ್ತು ಬ್ರಹ್ಮದೇವರಿಗೆ ಕಲೆಗಳೊಂದಿಗೆ ಇರುವ ಸಂಬಂಧವನ್ನು ತಿಳಿದುಕೊಂಡೆವು. ಈಗ ಈ ಭಾಗದಲ್ಲಿ ನಾವು ಭಗವಾನ ಶ್ರೀವಿಷ್ಣು, ಶ್ರೀಕೃಷ್ಣ, ರಾಮಭಕ್ತನಾದ ಹನುಮಂತ ಮತ್ತು ಗಣಪತಿ ಇವರ ಸಂಗೀತದೊಂದಿಗೆ ಇರುವ ಸಂಬಂಧವನ್ನು ತಿಳಿದುಕೊಳ್ಳಲಿದ್ದೇವೆ. (ಭಾಗ ೨)
ಹಿಂದಿನ ಲೇಖನ ಸಂಖ್ಯೆ ೧೦ ಓದಲು ಇಲ್ಲಿ ಲಿಂಕ್‌ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/172101.html
೩. ಭಗವಾನ ಶ್ರೀವಿಷ್ಣು
೩ ಅ. ಶ್ರೀವಿಷ್ಣು ಮತ್ತು ಸಂಗೀತ
೧. ವೈಕುಂಠದಲ್ಲಿ ಶೇಷಶಾಯಿಯಾದ ಭಗವಾನ ಶ್ರೀವಿಷ್ಣು ವಿಗೆ ‘ಸಂಗೀತ’ವು ಅತ್ಯಂತ ಪ್ರಿಯವಾಗಿದೆ. ವಿವಿಧ ಧರ್ಮ ಗ್ರಂಥಗಳು ಮತ್ತು ಪುರಾಣ ಗಳಲ್ಲಿಯೂ ‘ಶ್ರೀವಿಷ್ಣುವಿಗೆ ಸಾಮಗಾನವು ಪ್ರಿಯ ವಾಗಿದೆ’, ಎಂಬ ಉಲ್ಲೇಖಗಳು ಕಂಡುಬರುತ್ತವೆ.
೨. ಸಂತ ಪುರಂದರದಾಸರು ‘ವೆಂಕಟಾಚಲ ನಿಲಯಮ್ ವೈಕುಂಠಪುರ ವಾಸಮ್’ ಇದನ್ನು ರಚಿಸಿದ್ದಾರೆ. ಅದರಲ್ಲಿ ವೆಂಕಟೇಶನ, ಅಂದರೇ ಶ್ರೀವಿಷ್ಣುವಿನ ವರ್ಣನೆಯಿದ್ದು ಅದರಲ್ಲಿ ಇನ್ನೊಂದು ಚರಣದಲ್ಲಿ ಅವರು, ‘ತುಂಬರು ನಾರದ ಗಾನ ವಿಲೋಲಮ್ ||’, ಅಂದರೆ ‘ತುಂಬರು ಮತ್ತು ನಾರದರ ಗಾಯನ ದಿಂದ ಆನಂದಿತನಾಗುವ ಶ್ರೀವಿಷ್ಣು,’ ಎಂದು ಹೇಳಿದ್ದಾರೆ.
ಈ ರೀತಿ ದಕ್ಷಿಣ ಭಾರತದೊಂದಿಗೆ ಭಾರತದಾದ್ಯಂತ ಅನೇಕ ಸಂತರ ರಚನೆಗಳಲ್ಲಿ ಶ್ರೀವಿಷ್ಣು ಮತ್ತು ಸಂಗೀತದ ಸಂಬಂಧವು ಅನ್ಯೋನ್ಯವಾಗಿರುವುದು ಕಂಡುಬರುತ್ತದೆ.
೩ ಆ. ಶ್ರೀವಿಷ್ಣು ಮತ್ತು ವಾದ್ಯ
೩ ಆ ೧. ಶ್ರೀವಿಷ್ಣುವು ಕೈಯಲ್ಲಿ ಶಂಖನ್ನು ಹಿಡಿಯುವುದು : ಶ್ರೀವಿಷ್ಣುವು ತನ್ನ ಎಡಗೈಯಲ್ಲಿ ‘ಶಂಖ’ವನ್ನು ಹಿಡಿದಿದ್ದಾನೆ. ಶಂಖವು ಸುಷಿರ ವಾದ್ಯ (ಟಿಪ್ಪಣಿ ೧)ವಾಗಿದ್ದೂ ಅದರ ನಾದವು ದೈವಿಕವಾಗಿದೆ. ಶಂಖನಾದದಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಊರ್ಜೆ ನಿರ್ಮಿಸವ ಸಾಮರ್ಥ್ಯವಿದೆ. ಆದ್ದರಿಂದಲೇ ದೇವರಪೂಜೆ, ಧಾರ್ಮಿಕ ವಿಧಿಗಳು ಮತ್ತು ಕೆಲವು ಶುಭಕಾರ್ಯಗಳಲ್ಲಿ ಶಂಖನಾದವನ್ನು ಮಾಡಲಾಗುತ್ತದೆ.
ಟಿಪ್ಪಣಿ ೧ – ಸುಷಿರ ವಾದ್ಯ : ಊದುವುದು ಅಥವಾ ಗಾಳಿ ತುಂಬಿ ನುಡಿಸಲಾಗುವ ವಾದ್ಯ. ಇದರಲ್ಲಿ ಗಾಳಿಯ ಕಂಪನಗಳಿಂದ ಧ್ವನಿ ನಿರ್ಮಾಣವಾಗುತ್ತದೆ.
೩ ಇ. ಶ್ರೀವಿಷ್ಣು ಮತ್ತು ನೃತ್ಯ
೩ ಇ ೧. ಭಸ್ಮಾಸುರನ ವಧೆಗಾಗಿ ಶ್ರೀವಿಷ್ಣುವು ಮೋಹಿನಿ ರೂಪವನ್ನು ತಾಳುವುದು ಮತ್ತು ಭಸ್ಮಾಸುರನೊಂದಿಗೆ ಮನಮೋಹಕ ನೃತ್ಯ ಮಾಡುವುದು : ಭಗವಾನ ಶ್ರೀವಿಷ್ಣುವು ‘ಮೋಹಿನಿ ರೂಪ’ವನ್ನು ಧರಿಸಿದನು ಮತ್ತು ‘ಭಸ್ಮಾಸುರ’, ಎಂಬ ರಾಕ್ಷಸನನ್ನು ವಧಿಸಿದನು. ಶ್ರೀವಿಷ್ಣುವು ಭಸ್ಮಾಸುರನ ಜೊತೆಯಲ್ಲಿ ಯಾವ ಲಾಸ್ಯಮಯ (ಟಿಪ್ಪಣಿ ೨) ಮತ್ತು ಮನಮೋಹಕ ನೃತ್ಯವನ್ನು ಮಾಡಿದನೋ, ಅದೇ ನೃತ್ಯವು ಕಾಲಾಂತರದಿಂದ ‘ಮೋಹಿನಿಅಟ್ಟಮ್’, ಎಂಬ ಭಾರತೀಯ ಶಾಸ್ತ್ರೀಯ ನೃತ್ಯ ಶೈಲಿಯಲ್ಲಿ ಪ್ರಕಟವಾಯಿತು. ‘ಮೋಹಿನಿಅಟ್ಟಮ್’, ಈ ನೃತ್ಯದಲ್ಲಿ ಶ್ರೀವಿಷ್ಣುವು ಮಾಡಿದ ನೃತ್ಯದಂತೆಯೇ ಸುಕೋಮಲ, ಲಾಸ್ಯಭರಿತ ಚಲನೆಯು ಒಳಗೊಂಡಿದೆ. ಈ ನೃತ್ಯವನ್ನು ಹೆಚ್ಚಾಗಿ ಸ್ತ್ರೀಯರೇ ಮಾಡುತ್ತಾರೆ.
ಟಿಪ್ಪಣಿ ೨ – ಲಾಸ್ಯ ನೃತ್ಯ : ಇದು ದೇವಿ ಪಾರ್ವತಿಯು ಮಾಡಿದ ನಾಜೂಕು ಮತ್ತು ಸುಂದರ ನೃತ್ಯವಾಗಿದೆ. ಇದರಲ್ಲಿ ಸೌಂದರ್ಯ, ಆನಂದ ಮತ್ತು ಸೌಮ್ಯ ಭಾವನೆಯಿಂದ ಕೋಮಲ ಮತ್ತು ಲಯಬದ್ಧ ಚಲನೆಗಳಿಂದ ಪ್ರೀತಿ, ಕರುಣೆ ಮತ್ತು ಶೃಂಗಾರ, ಈ ರಸಗಳನ್ನು ವ್ಯಕ್ತಪಡಿಸಲಾಗುತ್ತದೆ.
೪. ಭಗವಾನ ಶ್ರೀಕೃಷ್ಣ

೪ ಅ. ಶ್ರೀಕೃಷ್ಣ ಮತ್ತು ಕೊಳಲು
‘ಕೊಳಲು’ ಎಂದಾಕ್ಷಣ ನಮಗೆ ಸುಮಧುರ ಕೊಳಲು ನಾದದಿಂದ ಸೃಷ್ಟಿಯನ್ನು ಮೋಹಿತ ಗೊಳಿಸುವ ಭಗವಾನ ಶ್ರೀಕೃಷ್ಣನ ಸ್ಮರಣೆಯಾಗುತ್ತದೆ. ಅನೇಕ ಸಂತರ ರಚನೆಗಳಲ್ಲಿ ಶ್ರೀಕೃಷ್ಣನ ದಿವ್ಯ ಕೊಳಲಿನ ವರ್ಣನೆ ಇದೆ, ಜಬ ಹರಿ ಮುರಲಿ ಅಧರ ಧರತ | ಥಿರ ಚರ, ಚರ ಥಿರ, ಪವನ ಥಕಿತ ರಹೈ, ಜಮುನಾ ಜಲ ನ ಬಹತ||
ಅರ್ಥ : ಯಾವಾಗ ಭಗವಾನ ಶ್ರೀಕೃಷ್ಣನು ಅವನ ಕೊಳಲನ್ನು ನುಡಿಸುತ್ತಾನೆಯೋ, ಆಗ ಆ ಕೊಳಲಿನ ದಿವ್ಯ ನಾದದಿಂದ ಚರಾಚರ ಸೃಷ್ಟಿಯು ಸ್ಥಿರವಾಗುತ್ತದೆ, ಗಾಳಿ ನಿಂತುಹೋಗುತ್ತದೆ ಮತ್ತು ಯಮುನೆಯೂ ಹರಿಯುವುದನ್ನು ಮರೆತುಬಿಡುತ್ತದೆ. ಅಂದರೆ ಕೊಳಲಿನ ದೈವೀ ನಾದದಿಂದ ಸಂಪೂರ್ಣ ಚರಾಚರ ಸೃಷ್ಟಿಯಲ್ಲಿ ಸ್ಥಿರತೆ ಬರುತ್ತದೆ ಮತ್ತು ಈ ನಾದದಿಂದ ಎಲ್ಲರೂ ಕೃಷ್ಣಮಯವಾಗುತ್ತಾರೆ.
ಭಗವಾನ ಶ್ರೀಕೃಷ್ಣನ ಕೊಳಲವಾದನವು ಎಲ್ಲ ಕಲಾವಿದರಿಗೆ ಆದರ್ಶವಾಗಿದೆ. ಇಡೀ ಸೃಷ್ಟಿಯನ್ನು ಮೋಹಿತಗೊಳಿಸುವ ಸಾಮರ್ಥ್ಯವು ಅವನ ವಾದನದಲ್ಲಿತ್ತು. ಕಲಾವಿದನು ಸಾಧನೆ ಜೋಡಿಸಿದರೆ ಅವನ ಕಲೆಯಿಂದಲೂ ಚೈತನ್ಯದ ಪ್ರಕ್ಷೇಪಣೆ ಯಾಗುತ್ತದೆ ಮತ್ತು ಕಲಾವಿದ ಮತ್ತು ಶ್ರೋತೃಗಳಿಗೆ ಆ ವಾದನದ ಆಧ್ಯಾತ್ಮಿಕ ಸ್ತರದ ಲಾಭವನ್ನು ಪಡೆಯಲು ಸಾಧ್ಯ ವಾಗುತ್ತದೆ.
೪ ಆ. ಶ್ರೀಕೃಷ್ಣ ಮತ್ತು ನೃತ್ಯ
೪ ಆ ೧. ಶ್ರೀಕೃಷ್ಣನು ಗೋಪಿಗಳೊಂದಿಗೆ ಉಚ್ಚ ಆಧ್ಯಾತ್ಮಿಕ ಮಟ್ಟದ ‘ರಾಸ ನೃತ್ಯ’ವನ್ನು ಮಾಡಿ ಅವರಿಗೆ ಏಕರೂಪತೆಯ ಅನುಭೂತಿ ನೀಡುವುದು : ಶರದ ಹುಣ್ಣಿಮೆಯ (ಆಶ್ವಯುಜ ಹುಣ್ಣಿಮೆ, ಶೀಗೆ ಹುಣ್ಣಿಮೆಯ) ರಾತ್ರಿ ಶ್ರೀಕೃಷ್ಣನು ರಾಸ ನೃತ್ಯದ ಮಾಧ್ಯಮದಿಂದ ಗೋಪಿಯರಿಗೆ ನೀಡಿದ ಭಗವಂತನ ಏಕರೂಪತೆಯ ಅನುಭೂತಿ ಎಲ್ಲರಿಗೂ ತಿಳಿದಿದೆ. ಶ್ರೀಕೃಷ್ಣ ಮತ್ತು ಗೋಪಿಯರು ಮಾಡಿದ ಈ ನೃತ್ಯವು ಉಚ್ಚ ಆಧ್ಯಾತ್ಮಿಕ ಮಟ್ಟದ ನೃತ್ಯವಾಗಿತ್ತು. ಈ ರಾಸ ನೃತ್ಯವನ್ನು ಮಾಡುವಾಗ ಗೋಪಿಯರು ತಮ್ಮ ದೇಹ ಬುದ್ಧಿಯನ್ನು ಮರೆತುಬಿಟ್ಟಿದ್ದರು. ಈ ನೃತ್ಯದ ಸಮಯದಲ್ಲಿ ಗೋಪಿಯರು ಮತ್ತು ಶ್ರೀಕೃಷ್ಣನು ಏಕರೂಪವಾಗಿದ್ದರು.
ಯಾವಾಗ ಕಲಾವಿದನು ತನ್ನ ದೇಹಬುದ್ಧಿಯನ್ನು ಮರೆಯುತ್ತಾನೆಯೋ, ಆಗಲೇ ಅವನು ನಿಜವಾಗಿಯೂ ಈಶ್ವರೀ ತತ್ತ್ವದ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ. ‘ನೃತ್ಯ-ಕಲಾವಿದನು ಭಾವಸ್ಥಿತಿಯಲ್ಲಿ ನೃತ್ಯ ಮಾಡಿದರೆ ಅವನಿಗೂ ಪರಮೇಶ್ವರನ ಅನುಭೂತಿ ಬರದೇ ಇರುವುದಿಲ್ಲ’, ಈ ಆದರ್ಶವನ್ನು ಭಗವಾನ ಶ್ರೀಕೃಷ್ಣ ಮತ್ತು ಅವನ ಪರಮ ಭಕ್ತರಾದ ಗೋಪಿಯರು ಎಲ್ಲ ನೃತ್ಯ-ಕಲಾವಿದರ ಮುಂದೆ ಇಟ್ಟಿದ್ದಾರೆ.
೫. ಹನುಮಾನ
ಅ. ಹನುಮಾನನು ಪ್ರಭು ಶ್ರೀರಾಮನ ಪರಮಭಕ್ತನಾಗಿದ್ದನು. ಅವನ ಜೀವನವೆಂದರೆ, ರಾಮನಾಮದ ನಿರಂತರ ಅಂತರ್ನಾದ ವಾಗಿದೆ ! ಕೈಗಳಲ್ಲಿ ಚಿಟಿಕೆಗಳನ್ನು (ಭಕ್ತರು ಕೀರ್ತನೆ ಮಾಡುವಾಗ ಬಾರಿಸುವ ಕೈತಾಳ) ಹಿಡಿದು ಶ್ರೀರಾಮನ ಭಕ್ತಿಯಲ್ಲಿ ಮಗ್ನ ನಾಗಿರುವ ಹನುಮಂತನ ವಿವಿಧ ಚಿತ್ರಗಳು ಇಂದಿಗೂ ನಮಗೆ ನೋಡಲು ಸಿಗುತ್ತವೆ. ರಾಮಭಕ್ತ ಹನುಮಂತನು ಕೇವಲ ಶೂರ ವೀರ ಜೊತೆಗೆ ಸಂಗೀತದಲ್ಲಿಯೂ ಪಂಡಿತನಾಗಿದ್ದನು.
ಆ. ಸಮರ್ಥ ರಾಮದಾಸರು ಮಾರುತಿಸ್ತೋತ್ರದಲ್ಲಿ ಹೇಳುತ್ತಾರೆ,
ಮಹಾಬಳಿ ಪ್ರಾಣದಾತಾ, ಸಕಳಾ ಉಠವಿ ಬಳೆ |
ಸೌಖ್ಯಕಾರಿ ದುಃಖಹಾರಿ ದೂರ್ತ ವೈಷ್ಣವ ಗಾಯಕಾ || ೨ ||
ಅರ್ಥ : ಮಾರುತಿಯು ಮಹಾಬಲಿ ಮತ್ತು ಪ್ರಾಣದಾತಾರ ನಾಗಿದ್ದಾನೆ. ಅವನು ಶಕ್ತಿಯನ್ನು ನೀಡಿ ಎಲ್ಲರಿಗೂ ಕಾರ್ಯಕ್ಕಾಗಿ ಪ್ರೇರಿಸುವನಾಗಿದ್ದಾನೆ. ಮಾರುತಿಯು ತನ್ನ ಭಕ್ತರಿಗೆ ಸುಖವನ್ನು ನೀಡುತ್ತಾನೆ ಮತ್ತು ದುಃಖವನ್ನು ದೂರಗೊಳಿಸುತ್ತಾನೆ. ಅವನು ದೂರ್ತ (ಬುದ್ಧಿವಂತ) ನಾಗಿದ್ದಾನೆ. ಪ್ರಖರ ರಾಮಭಕ್ತನಾಗಿ ರುವುದರಿಂದ ಅವನಿಗೆ ‘ವೈಷ್ಣವ’ ಎಂದು ಕರೆಯುತ್ತಾರೆ. ಅವನು ನಿರಂತರ ರಾಮನಾಮದ ಗಾಯನ (ಜಪ) ಮಾಡುತ್ತಿರುವುದರಿಂದ ಅವನಿಗೆ ‘ಗಾಯಕ’, ಎಂದು ಹೇಳುತ್ತಾರೆ.
ಹನುಮಂತನಂತೆ ನಾವು ಸಹ ಭಗವಂತನ ಭಕ್ತರಾಗಿ ಕಲೆಯ ಮಾಧ್ಯಮದಿಂದ ಈಶ್ವರನಿಗೆ ಭಾವಭಕ್ತಿಯಿಂದ ಆರಾಧಿಸಿದರೆ ನಮ್ಮ ಕಲೆಯು ಭಗವಂತನ ಚರಣಗಳಲ್ಲಿ ಅರ್ಪಣೆಯಾಗಿ ನಮಗೂ ಕೂಡ ಈಶ್ವರನ ಕೃಪೆ ಖಂಡಿತವಾಗಿಯೂ ಆಗುವುದು.
೬. ಶ್ರೀ ಗಣಪತಿ
ಎಲ್ಲ ವಿಧಿಗಳಲ್ಲಿ ಮೊದಲು ಶ್ರೀ ಗಣೇಶನನ್ನು ಪೂಜಿಸಲಾಗು ತ್ತದೆ; ಏಕೆಂದರೆ ಶ್ರೀ ಗಣೇಶನು ಎಲ್ಲ ವಿಘ್ನಗಳನ್ನು ನಿವಾರಿಸುವ ದೇವತೆಯಾಗಿದ್ದಾನೆ. ಅವನ ಆಶೀರ್ವಾದದಿಂದಲೇ ಎಲ್ಲ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಎಲ್ಲ ವಿಧಿಗಳಂತೆಯೇ ಸಂಗೀತದಲ್ಲಿಯೂ ಶ್ರೀ ಗಣೇಶನ ಸ್ಥಾನವು ಶ್ರೇಷ್ಠವಾಗಿದೆ.
೬ ಅ. ಪ್ರತಿಯೊಂದು ಕಲೆಯನ್ನು ಪ್ರಸ್ತುತಪಡಿಸುವ ಮೊದಲು ಶ್ರೀ ಗಣೇಶನ ಸ್ತುತಿ ಮಾಡಿ ಅವನ ಆಶೀರ್ವಾದ ಪಡೆಯುವುದು
ನಾಟ್ಯಶಾಸ್ತ್ರದ ಮೊದಲನೇ ಅಧ್ಯಾಯದಲ್ಲಿ ಹೇಳಿದಂತೆ ಸಂಗೀತಕ್ಕನುಸಾರ ಬ್ರಹ್ಮದೇವನು ನಾಟ್ಯಶಾಸ್ತ್ರವನ್ನು ನಿರ್ಮಿಸಿ ದನು. ವಿಶ್ವದಲ್ಲಿನ ಮೊದಲನೇ ನಾಟ್ಯವನ್ನು ಇಂದ್ರನ ಸಭೆಯಲ್ಲಿ ಪ್ರಸ್ತುತಗೊಳಿಸಲಾಗಿತ್ತು. ಆಗ ದೈತ್ಯರು ಅದರಲ್ಲಿ ವಿಘ್ನಗಳನ್ನುಂಟು ಮಾಡಿದರು. ‘ಈ ವಿಘ್ನಗಳು ದೂರವಾಗಿ ದೇವತೆಗಳ ರಕ್ಷಣೆ ಯಾಗಬೇಕು’, ಎಂದು ಬ್ರಹ್ಮದೇವನು ಶ್ರೀ ಗಣೇಶನ ಧ್ಯಾನ ಮಾಡಿದನು. ಅಂದಿನಿಂದ ಇದುವರೆಗೆ ಗಾಯನ, ವಾದನ, ನೃತ್ಯ ಮತ್ತು ನಾಟ್ಯದ ಆರಂಭವು ಗಣೇಶನ ವಂದನೆಯಿಂದಲೇ ಆಗುತ್ತದೆ. ಕೇವಲ ಸಂಗೀತ ಮಾತ್ರ ಅಲ್ಲ, ಪ್ರತಿಯೊಂದು ಕಲೆಯು ಪ್ರಸ್ತುತಗೊಳಿಸುವ ಮೊದಲು ಶ್ರೀ ಗಣೇಶನನ್ನು ಸ್ತುತಿಸಿ ಅವನ ಆಶೀರ್ವಾದ ಪಡೆಯಲಾಗುತ್ತದೆ.
ನೃತ್ಯದ ಮೇಲಾಧಾರಿತ ‘ಅಭಿನಯದರ್ಪಣಮ್’, ಈ ಗ್ರಂಥದ ‘ಪ್ರಾರ್ಥನಾದಿಕಮ್’ದಲ್ಲಿ ಮುಂದಿನಂತೆ ಹೇಳಲಾಗಿದೆ,
ವಿಘ್ನೇಶಂ ಮುರಜಾಧಿಪಂ ಚ ಗಗನಂ ಸ್ತುತ್ವಾ ಮಹೀಂ ಪ್ರಾರ್ಥಯೇತ್ |
ತತ್ತದ್ವಾದ್ಯಕದಮ್ಬಕಸ್ಯ ವಿಧಿನಾ ಪೂಜಾವಿಧಾಮಾನಯೇತ್ || – ಅಭಿನಯದರ್ಪಣ, ಶ್ಲೋಕ ೩೧
ಅರ್ಥ : (ಅಭಿನಯದ ಮೊದಲು ಕಲಾವಿದನು) ವಿಘ್ನರಾಜ ಭಗವಾನ ಗಣೇಶ ಮತ್ತು ನಟರಾಜ ಭಗವಾನ ಶಂಕರನನ್ನು ಸ್ತುತಿಸಬೇಕು. ಅನಂತರ ಆಕಾಶ ಮತ್ತು ಪೃಥ್ವಿಯನ್ನು ವಂದಿಸ ಬೇಕು. ಆಯಾ ವಾದ್ಯಯಂತ್ರಗಳನ್ನು ವಿಧಿಪೂರ್ವಕವಾಗಿ ಪೂಜೆ-ಅರ್ಚೆ ಮಾಡಬೇಕು.
೬ ಆ. ದಕ್ಷಿಣ ಭಾರತದಲ್ಲಿನ ಅನೇಕ ದೇವಸ್ಥಾನಗಳಲ್ಲಿ ಮೃದಂಗ ವನ್ನು ಬಾರಿಸುವ ಶ್ರೀ ಗಣೇಶನ ವಿಗ್ರಹಗಳು ಕಾಣಿಸುತ್ತವೆ.
೬ ಇ. ಶ್ರೀ ಗಣೇಶ ಮತ್ತು ನೃತ್ಯ
ಸಮರ್ಥ ರಾಮದಾಸಸ್ವಾಮಿಗಳ ಒಂದು ರಚನೆಯಲ್ಲಿ ಶ್ರೀ ಗಣೇಶನು ನೃತ್ಯವನ್ನು ಮಾಡುತ್ತಿರುವ ವರ್ಣನೆ ಕಂಡುಬರುತ್ತದೆ.
ತಾಂಡವ ನೃತ್ಯ ಕರಿ ಗಜಾನನ ||
ಧಿಮ-ಕಿತ್ರ ಧಿಮಕಿತ ವಾಜೇ ಮೃದಂಗ |
ಬ್ರಹ್ಮಾ ತಾಲ ಧರಿ ಗಜಾನನ ||
ಇದರಿಂದ ‘ಶ್ರೀ ಗಣೇಶನೂ ಕೂಡ ಗಾಯನ, ವಾದನ ಮತ್ತು ನೃತ್ಯಪ್ರಿಯವಾಗಿದ್ದಾನೆ’, ಎಂಬುದು ಕಂಡುಬರುತ್ತದೆ. ಕಲಾವಿದರು ಕಲೆಯ ಉಪಾಸನೆಯನ್ನು ಮನಃಪೂರ್ವಕವಾಗಿ ಮಾಡಿದರೆ ಅವರಿಗೆ ಶ್ರೀ ಗಣೇಶನ ಆಶೀರ್ವಾದವು ಖಂಡಿತ ವಾಗಿಯೂ ದೊರಕುವುದು.’
ಸಂಗ್ರ್ರಾಹಕರು : ಸೌ. ಅನಘಾ ಜೋಶಿ (ಆಧ್ಯಾತ್ಮಿಕ ಮಟ್ಟ ಶೇ. ೬೨, ಬಿ.ಎ. ಸಂಗೀತ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೫.೧೨.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !