ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು

ಶ್ರೀ. ಗುರುಪ್ರಸಾದ ಗೌಡ

೧. ಕ್ರಿಕೆಟ್ ಆಟಗಾರರು ಮತ್ತು ಚಲನಚಿತ್ರ ನಟ-ನಟಿಯರನ್ನು ಆದರ್ಶವಾಗಿರಿಸಿದ್ದ ಸಾಧಕಿಯೊಬ್ಬಳು ಶ್ರೀ. ಗುರುಪ್ರಸಾದ ಗೌಡರನ್ನು ನೋಡಿ ‘ಸಾಧನೆ ಮಾಡಿ ಒಳ್ಳೆಯ ಸಾಧಕಿ ಮತ್ತು ಸಂತರಾಗಬೇಕೆಂದು ಅನಿಸುತ್ತದೆ’ ಎಂದು ಹೇಳುವುದು

‘ಹುಬ್ಬಳ್ಳಿಯಲ್ಲಿ ಪ್ರಸಾರ ಸೇವೆ ಮಾಡುವಾಗ ನಾನು ಮತ್ತು ಶ್ರೀ. ಗುರುಪ್ರಸಾದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೪೪ ವರ್ಷ) ಹಗರಿಬೊಮ್ಮನಹಳ್ಳಿಯಲ್ಲಿ ಒಂದು ಕಾರ್ಯಕ್ರಮಕ್ಕಾಗಿ ಹೋಗಿದ್ದೆವು. ಅಲ್ಲಿ ಒಬ್ಬ ಯುವ ಸಾಧಕಿಯು, ‘ಇದು ವರೆಗೆ ನನಗೆ ಕ್ರಿಕೆಟ್ ಆಟಗಾರರು ಅಥವಾ ಚಲನಚಿತ್ರ ನಟ-ನಟಿಯರು ಆದರ್ಶ ಆಗಿದ್ದರು; ಆದರೆ ನಿಮ್ಮನ್ನು ಮತ್ತು ಶ್ರೀ. ಗುರುಪ್ರಸಾದ ಅಣ್ಣನವರನ್ನು ನೋಡಿ ನನಗೆ ನಿಮ್ಮಂತೆಯೇ ಸಾಧನೆ ಮಾಡಿ ಒಳ್ಳೆಯ ಸಾಧಕಿ ಮತ್ತು ಸಂತಳಾಗಬೇಕು. ಇಂದಿನಿಂದ ನೀವೇ ನನ್ನ ಪ್ರೇರಣಾಸ್ಥಾನವಾಗಿದ್ದೀರಿ,’ ಎಂದಳು. ಆ ಸಾಧಕಿಯು ರಜೆಯಲ್ಲಿ ಆಶ್ರಮದಲ್ಲಿದ್ದು ಸಾಧನೆಯನ್ನು ಹೆಚ್ಚಿಸುವ ನಿಶ್ಚಯವನ್ನೂ ವ್ಯಕ್ತಪಡಿಸಿದಳು.’

ಸೌ. ತಾರಾ ಶೆಟ್ಟಿ

೨. ಸಾಧಕಿಗೆ ಸೇವೆಯಲ್ಲಿ ತೊಂದರೆ ಬಂದಾಗ ಶ್ರೀ. ಗುರುಪ್ರಸಾದ ಗೌಡರು ಸಾಧಕಿಯ ಪತಿಯೊಂದಿಗೆ ಮಾತನಾಡಿದ ನಂತರ ಅವರಲ್ಲಿ ಕಂಡುಬಂದ ಬದಲಾವಣೆ

ಒಬ್ಬ ಸಾಧಕಿಗೆ ಮನೆಯಲ್ಲಿ ಸೇವೆಗೆ ತೊಂದರೆಯಾಗುತ್ತಿತ್ತು. ಆಕೆಯನ್ನು ಪ್ರತ್ಯಕ್ಷ ಭೇಟಿಯಾಗಲು ನಾನು ಮತ್ತು ಗುರುಪ್ರಸಾದ ಅಣ್ಣನವರು ಹೋಗಿದ್ದೆವು. ನಾವು ಅವರೊಂದಿಗೆ ಮಾತನಾಡುತ್ತಿದ್ದಾಗ ಅವರ ಪತಿ ಊಟಕ್ಕೆ ಮನೆಗೆ ಬಂದರು. ಅವರೊಂದಿಗೆ ಶ್ರೀ. ಗುರುಪ್ರಸಾದ ಅಣ್ಣನವರು ಅತ್ಯಂತ ಆತ್ಮೀಯವಾಗಿ ಮಾತನಾಡಿದರು. ಈ ಭೇಟಿಯು ಅವರ ಮೇಲೆ ಒಳ್ಳೆಯ ಪ್ರಭಾವ ಬೀರಿತು, ಅವರು ಸ್ವತಃ ಕಚೇರಿಯ ಕೆಲಸ ಮುಗಿಸಿ ಪುನಃ ನಮ್ಮನ್ನು ಭೇಟಿಯಾಗಿ ಸಾಧನೆಯ ಬಗ್ಗೆ ವಿವರವಾಗಿ ಚರ್ಚಿಸಿದರು. ನಂತರ ಮನೆಗೆ ಹೋಗಿ ಅವರು ತಮ್ಮ ಪತ್ನಿಯಾದ ಸಾಧಕಿಗೆ, ‘ಮುಂದಿನ ಬಾರಿ ಈ ಅಣ್ಣನವರು ಮತ್ತು ಅಕ್ಕ ನಮ್ಮೂರಿಗೆ ಬಂದಾಗ, ಅವರು ನಮ್ಮ ಮನೆಯಲ್ಲೇ ಇರಲಿ’ ಎಂದು ಹೇಳಿದರು. ಇದರಿಂದ ‘ಸಾಧಕನ ಚೈತನ್ಯದಿಂದ ಮತ್ತು ನಿರಪೇಕ್ಷಪ್ರೇಮದಿಂದ ಸಮಾಜದ ವ್ಯಕ್ತಿಗಳು ಹೇಗೆ ಆಕರ್ಷಿತರಾಗುತ್ತಾರೆ’ ಎಂಬುದು ನನ್ನ ಗಮನಕ್ಕೆ ಬಂದಿತು.

೩. ಶ್ರೀ. ಗುರುಪ್ರಸಾದ ಗೌಡರನ್ನು ನೋಡಿ ಸಣ್ಣ ಮಕ್ಕಳು ಸಹ ಆನಂದಿತರಾಗುವುದು

ನಾವು ಇರುವ ಮನೆಯ ಕೆಳಗೆ ಒಬ್ಬ ಸಾಧಕರ ಮನೆಯ ಒಂದೂವರೆ ವರ್ಷದ ಮಗು ಶ್ರೀ. ಗುರುಪ್ರಸಾದಅಣ್ಣನವರನ್ನು ನೋಡಿ ಆನಂದದಿಂದ ನಗುತ್ತದೆ. ಅಣ್ಣನವರು ಪ್ರಯಾಣದಲ್ಲಿ ಇರುವಾಗಲೂ ಸಣ್ಣ ಮಕ್ಕಳು ಅಣ್ಣನವರನ್ನು ನೋಡಿ ನಗುತ್ತವೆ.

‘ಸಾಧನೆಯಿಂದ ಸಾಧಕರಲ್ಲಿ ‘ಚೈತನ್ಯ ಮತ್ತು ನಿರಪೇಕ್ಷಪ್ರೇಮ’ ಎಂಬ ದೈವೀ ಗುಣಗಳು ತಾನಾಗಿಯೇ ಮೂಡುತ್ತವೆ. ಅದರಿಂದ ಅಧ್ಯಾತ್ಮಪ್ರಸಾರವೂ ಹೆಚ್ಚು ಪರಿಣಾಮಕಾರಿಯಾಗುತ್ತದೆ’, ಎಂಬುದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕೃಪೆಯಿಂದ ಕಲಿಯಲು ಸಿಕ್ಕಿದ್ದಕ್ಕಾಗಿ ನಾನು ಶ್ರೀಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.’

– ಸೌ. ತಾರಾ ಶೆಟ್ಟಿ (ಆಧ್ಯಾತ್ಮಿಕ ಮಟ್ಟ ಶೇ. ೬೪, ವಯಸ್ಸು ೫೩ ವರ್ಷ), ಹುಬ್ಬಳ್ಳಿ. (೨೭.೩.೨೦೨೬)