ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !
(ಲೇಖನ ಸಂಖ್ಯೆ ೧೧)
ಭಾರತೀಯ ಕಲೆಗಳಲ್ಲಿ ದೇವಿದೇವತೆಗಳಲ್ಲಿರುವ ಸಂಬಂಧ !
‘ಇಲ್ಲಿಯವರೆಗಿನ ಲೇಖನಗಳಲ್ಲಿ ನಾವು ಸಂಗೀತ ಮತ್ತು ನಾಟ್ಯ ಈ ಕಲೆಗಳ ಇತಿಹಾಸದ ಬಗ್ಗೆ ತಿಳಿದುಕೊಂಡೆವು. ಈಗ ಮುಂದಿನ ಲೇಖನಗಳಲ್ಲಿ ನಾವು ‘ಭಾರತೀಯ ಕಲೆಗಳಲ್ಲಿ ದೇವರೊಂದಿಗೆ ಇರುವ ಸಂಬಂಧ ಮತ್ತು ಅವುಗಳ ಮಾಧ್ಯಮದಿಂದ ಕಲೆಗೆ ಇರುವ ಆಧ್ಯಾತ್ಮಿಕ ಅಧಿಷ್ಠಾನ’, ಈ ಕುರಿತು ತಿಳಿದುಕೊಳ್ಳಲಿದ್ದೇವೆ. (ಭಾಗ ೧)
ಹಿಂದಿನ ಲೇಖನ ಸಂಖ್ಯೆ ೯ ಓದಲು ಲಿಂಕ್ ಮೇಲೆ ಕ್ಲಿಕ್ ಮಾಡಿ – https://sanatanprabhat.org/kannada/171364.html
ಭಾರತೀಯ ಸಂಸ್ಕೃತಿಯಲ್ಲಿ ಸಂಗೀತದ ಪರಂಪರೆಯು ಕೇವಲ ಕಲಾತ್ಮಕವಾಗಿರದೇ, ಆಧ್ಯಾತ್ಮಿಕ ತತ್ತ್ವದ ಮೇಲೆ ಆಧಾರಿತವಾಗಿದೆ. ಹಿಂದೂ ಧರ್ಮದಲ್ಲಿನ ದೇವಿದೇವತೆಗಳ ಮೂರ್ತಿಗಳನ್ನು ನೋಡಿದರೆ ಅವರ ಕೈಗಳಲ್ಲಿ ವಿವಿಧ ವಾದ್ಯಗಳಿರುವುದು ನಮ್ಮ ಗಮನಕ್ಕೆ ಬರುತ್ತದೆ. ಆ ವಾದ್ಯಗಳೆಂದರೆ, ದೈವೀ ಶಕ್ತಿ, ಸೃಷ್ಟಿಯ ನಿಯಂತ್ರಣ, ಆನಂದ, ಸೃಷ್ಟಿಯ ವಿನಾಶ, ಜ್ಞಾನ, ಭಕ್ತಿ ಮತ್ತು ಪ್ರೀತಿ ಇವುಗಳ ಪ್ರತೀಕವಾಗಿವೆ. ಶಿವನ ಡಮರುಗದ ನಾದದಿಂದ ಸೃಷ್ಟಿಯ ನಿರ್ಮಿತಿ ಆಯಿತು. ಶ್ರೀವಿಷ್ಣುವಿನ ಶಂಖನಾದದಿಂದ ಧರ್ಮಸಂಸ್ಥಾಪನೆಯ ಘೋಷಣೆಯಾಯಿತು. ಸರಸ್ವತಿಯ ವೀಣೆಯ ಸ್ವರಗಳಿಂದ ಜ್ಞಾನ ಮತ್ತು ಕಲೆಗಳು ಪ್ರಕಟವಾದವು ಮತ್ತು ಶ್ರೀಕೃಷ್ಣನ ಕೊಳಲು ಭಕ್ತರಿಗೆ ಭಕ್ತಿ, ಪ್ರೀತಿ ಮತ್ತು ಸಂಗೀತದಿಂದ ಮೋಕ್ಷಮಾರ್ಗದ ದಿಶೆ ತೋರಿಸಿತು.
‘ಸಂಗೀತರತ್ನಾಕರ’, ಎಂಬ ಗ್ರಂಥದಲ್ಲಿ ಸಂಗೀತ ಮತ್ತು ದೇವತೆಗಳ ಬಗ್ಗೆ ಮುಂದಿನಂತೆ ವರ್ಣಿಸಲಾಗಿದೆ.
‘ಸಾಮವೇದಾದಿದಂ ಗೀತಂ ಸಂಜಗ್ರಾಹ ಪಿತಾಮಹಃ ||
ಗೀತೇನ ಪ್ರೀಯತೇ ದೇವಃ ಸರ್ವಜ್ಞಃ ಪಾರ್ವತೀಪತಿಃ |
ಗೋಪೀಪತಿರನನ್ತೋಽಪಿ ವಂಶಧ್ವನಿವಶಂ ಗತಃ ||
ಸಾಮಗೀತಿರತೋ ಬ್ರಹ್ಮಾ ವೀಣಾಸಕ್ತಾ ಸರಸ್ವತೀ |
ಕಿಮನ್ಯೇ ಯಕ್ಷಗನ್ಧರ್ವದೇವದಾನವಮಾನವಾಃ ||
– ಸಙ್ಗೀತರತ್ನಾಕರ, ಅಧ್ಯಾಯ ೧, ಪ್ರಕರಣ ೧, ಶ್ಲೋಕ ೨೫,೨೬,೨೭
ಅರ್ಥ : ಬ್ರಹ್ಮದೇವನು ಸಾಮವೇದದಿಂದ ಗೀತೆಗಳನ್ನು ಸಂಗ್ರಹಿಸಿದನು. ಸರ್ವಜ್ಞನಾದ ಪಾರ್ವತಿಪತಿ ಶಂಕರನು ಗೀತ ಗಾಯನದಿಂದ ಪ್ರಸನ್ನನಾಗುತ್ತಾನೆ. ವಂಶಿಧ್ವನಿ (ಕೊಳಲಿನ ಮಧುರ ಧ್ವನಿ) ಆಲಿಸುತ್ತಲೇ ಗೋಪಿಪತಿ ಶ್ರೀಕೃಷ್ಣನು ವಶ ನಾಗುತ್ತಾನೆ. ಬ್ರಹ್ಮನು ಸಾಮಗೀತೆಯಲ್ಲಿ ಮಗ್ನನಾಗಿದ್ದಾನೆ. ಸರಸ್ವತಿಯು ವೀಣೆಯ ನಾದದಲ್ಲಿ ಆಸಕ್ತಳಾಗಿದ್ದಾಳೆ. ಇತರ ದೇವರು, ಯಕ್ಷ, ಗಂಧರ್ವ, ದಾನವ, ಹಾಗೆಯೇ ಮಾನವ ಇವರ ಬಗ್ಗೆ ಹೇಳುವುದೇನಿದೆ !’ (ಆಧಾರ : ‘ಸಂಗೀತರತ್ನಾಕರ’, ಅನುವಾದ : ಶ್ರೀ. ಲಕ್ಷ್ಮಿನಾರಾಯಣ ಗರ್ಗ)
ಹಿಂದೂ ದೇವತೆಗಳ ಕೈಗಳಲ್ಲಿನ ವಾದ್ಯಗಳು, ಸಂಗೀತವು ಕೇವಲ ಮನೋರಂಜನೆಯ ಸಾಧನವಾಗಿರದೇ ಅವು ಭಗವಂತನೊಂದಿಗೆ ಸಂವಾದ ಸಾಧಿಸುವ ಮಾಧ್ಯಮವಾಗಿವೆ. ಉತ್ಪತ್ತಿ, ಸ್ಥಿತಿ ಮತ್ತು ಲಯಕ್ಕೆ ಸಂಬಂಧಿಸಿದ ದೇವತೆಗಳು ಕ್ರಮವಾಗಿ ಬ್ರಹ್ಮದೇವ, ಶ್ರೀವಿಷ್ಣು ಮತ್ತು ಶಿವ ಇವರಿದ್ದಾರೆ; ಆದರೆ ಭಗವಾನ ಶಿವನು ಸಂಗೀತ, ನೃತ್ಯ ಮತ್ತು ನಾಟ್ಯದೊಂದಿಗೆ ಸಂಬಂಧಿಸಿದ ಮುಖ್ಯ ದೇವತೆಯಾಗಿದ್ದಾನೆ. ಆದ್ದರಿಂದ ಈ ಲೇಖಮಾಲೆಯಲ್ಲಿ ಉದ್ದೇಶಪೂರ್ವಕವಾಗಿ ಕಲೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವಾಗ ಮೇಲಿನ ಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಮೊಟ್ಟಮೊದಲಿಗೆ ನಾವು ಗಾಯನ, ವಾದನ, ನೃತ್ಯ ಮತ್ತು ನಾಟ್ಯ ಈ ಕಲೆಗಳ ಅಧಿಪತಿಯಾಗಿರುವ ಭಗವಾನ ಶಿವ ಮತ್ತು ವೇದಧಾರಿ ಬ್ರಹ್ಮದೇವನ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳಲಿದ್ದೇವೆ.
೧. ಭಗವಾನ ಶಿವ
ಭಾರತೀಯ ಪರಂಪರೆಯಲ್ಲಿ ಭಗವಾನ ಶಿವನಿಗೆ ನಾದ, ಲಯ, ತಾಂಡವ, ನೃತ್ಯ ಮತ್ತು ಸಂಗೀತದ ‘ಆದ್ಯ ಊರ್ಜೆ’ ಎಂದು ಪರಿಗಣಿಸಲಾಗುತ್ತದೆ. ‘ಓಂ’ ಇದು ಜಗತ್ತಿನ ಮೂಲಧ್ವನಿ, ಅಂದರೆ ಶಿವಸ್ವರೂಪದ ನಾದವಾಗಿದೆ; ಆದ್ದರಿಂದ ಶಿವನಾದ (‘ಓಂ’ಕಾರನಾದ)ವು ಸಂಗೀತದ ಮುಖ್ಯ ಸ್ರೋತವಾಗಿದೆ. ಆದ್ದರಿಂದ ಭಗವಾನ ಶಿವನಿಗೆ ಗಾಯನ, ವಾದನ, ನೃತ್ಯ ಮತ್ತು ನಾಟ್ಯ ಈ ಕಲೆಗಳ ‘ಅಧಿಷ್ಠಾತ್ರಿ ದೇವತೆ’ ಎಂದು ಕರೆಯುತ್ತಾರೆ.
೧ ಅ. ಭಗವಾನ ಶಿವ ಮತ್ತು ಸಂಗೀತ
೧ ಅ ೧. ‘ಭಗವಾನ ಶಿವನಿಗೆ ಸಂಗೀತಕಲೆಯ ಜನಕ ಎಂದು ಪರಿಗಣಿಸಲಾಗುತ್ತದೆ.’ (ಆಧಾರ : ಭಾರತೀಯ ಸಂಸ್ಕೃತಿಕೋಶ (ಆವೃತ್ತಿ ೧), ಖಂಡ ೯, ಪುಟ ೫೧೩))
೧ ಅ ೨. ಭಗವಾನ ಶಿವನಿಂದ ಸಂಗೀತದಲ್ಲಿನ ರಾಗಗಳ ಉತ್ಪತ್ತಿ
ಶಿವಶಕ್ತೇಃ ಸಮಾಯೋಗಾದ್ರಾಗಾಣಾಂ ಸಮ್ಭವೋ ಭವೇತ್ |
ಪಞ್ಚಾಸ್ಯಾತ್ ಪಞ್ಚ ರಾಗಾಃ ಸ್ಯುಃ ಷಠಸ್ತು ಗಿರಿಜಾಮುಖಾತ್ ||
– ಸಙ್ಗೀತದರ್ಪಣ, ಅಧ್ಯಾಯ ೨, ಶ್ಲೋಕ ೯
ಅರ್ಥ : ಶಿವ ಮತ್ತು ಶಕ್ತಿಯ ಸಂಯೋಗದಿಂದ ರಾಗಗಳ ಉತ್ಪತ್ತಿ ಆಯಿತು. ಮಹಾದೇವನ ೫ ಮುಖಗಳಿಂದ ೫ ರಾಗಗಳು ನಿರ್ಮಾಣವಾದವು, ಆರನೇ ರಾಗವು ಪಾರ್ವತಿಯ ಮುಖದಿಂದ ನಿರ್ಮಾಣವಾಯಿತು.
೧ ಆ. ಭಗವಾನ ಶಿವ ಮತ್ತು ವಾದ್ಯಗಳು
೧ ಆ ೧. ಡಮರುಗ : ಡಮರುಗವು ಅತ್ಯಂತ ಪವಿತ್ರ ಮತ್ತು ಶಕ್ತಿಶಾಲಿ ವಾದ್ಯವಾಗಿದೆ. ಅದು ಭಗವಾನ ಶಿವನಿಗೆ ಸಂಬಂಧಿಸಿದ ವಾದ್ಯವೆಂದು ಗುರುತಿಸಲಾಗುತ್ತದೆ. ಶಿವಪುರಾಣದಲ್ಲಿ ಉಲ್ಲೇಖಿಸಿ ದಂತೆ ಶಿವನ ಡಮರುಗದ ನಾದದಿಂದಲೇ ವಿಶ್ವದ ನಿರ್ಮಿತಿ ಆಯಿತು. ಭಗವಾನ ಶಿವನು ಯಾವಾಗ ತಾಂಡವ ನೃತ್ಯವನ್ನು ಮಾಡುತ್ತಾನೆಯೋ, ಆಗ ಅವನ ಕೈಯಲ್ಲಿ ಡಮರುಗ ಇರುತ್ತದೆ. ಈ ಡಮರುಗವು ಸಂಪೂರ್ಣ ಬ್ರಹ್ಮಾಂಡದ ಸ್ಪಂದನಗಳನ್ನು ಪ್ರತಿನಿಧಿಸುತ್ತದೆ.
೧ ಆ ೧ ಅ. ಡಮರುಗದ ಆಧ್ಯಾತ್ಮಿಕ ಮಹತ್ವ
೧. ಭಗವಾನ ಶಿವನ ತಾಂಡವ ನೃತ್ಯದ ಸಮಯದಲ್ಲಿ ಡಮರುಗದ ನಾದ ಸಂಪೂರ್ಣ ಬ್ರಹ್ಮಾಂಡದಲ್ಲಿ ಶಕ್ತಿಯನ್ನು ನಿರ್ಮಿಸುತ್ತದೆ. ಡಮರುಗದ ನಾದವು ಸೃಷ್ಟಿಯ ಉತ್ಪತ್ತಿಯಿಂದ ಹಿಡಿದು ಸಂಹಾರದ ವರೆಗಿನ ಪ್ರಕ್ರಿಯೆಗೆ ಚಾಲನೆ ನೀಡುವ ಪ್ರಣವ ನಾದವಾಗಿದೆ. ಈ ನಾದವು ಸಾಧನೆಗೆ ಪೂರಕವಾಗಿದೆ. ಡಮರುಗದ ಧ್ವನಿಯು ಮೂಲಾಧಾರಚಕ್ರದಿಂದ ಹಿಡಿದು ಸಹಸ್ರಾರಚಕ್ರದ ವರೆಗಿನ ಚಕ್ರಗಳ ಮೇಲೆ ಕಂಪನಗಳನ್ನು ನಿರ್ಮಾಣ ಮಾಡಿ ಆಧ್ಯಾತ್ಮಿಕ ಊರ್ಜೆಯನ್ನು ಪ್ರದಾನಿಸುತ್ತದೆ.
೨. ಡಮರುಗವು ಕೇವಲ ವಾದ್ಯವಲ್ಲ; ಅದೊಂದು ದೈವೀ ಸಾಧನವಾಗಿದೆ. ಅದು ಭಕ್ತನಿಗೆ ಶಿವತತ್ತ್ವದ ಅನುಭೂತಿಯ ಕಡೆಗೆ ಒಯ್ಯುವ ಮಾಧ್ಯಮವಾಗಿದೆ.
೧ ಆ ೨. ರುದ್ರವೀಣೆ : ಕೆಲವು ಕಥೆಗಳಿಗನುಸಾರ ಭಗವಾನ ಶಿವನು ಪಾರ್ವತಿಗಾಗಿ ರುದ್ರವೀಣೆಯನ್ನು ನಿರ್ಮಿಸಿದ್ದನು. ಪಾರ್ವತಿಯ ಸೌಂದರ್ಯದ ಪ್ರತೀಕವೆಂದು ರುದ್ರವೀಣೆಯನ್ನು ನಿರ್ಮಿಸಿದ್ದನು. ರುದ್ರವೀಣೆಯು ಅತ್ಯಂತ ಧೀರಗಂಭೀರವಾದ ವಾದ್ಯವಾಗಿದೆ. ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಮತ್ತು ಯೋಗಿಗಳು ರುದ್ರವೀಣೆಯ ವಾದನದ ಮಾಧ್ಯಮದಿಂದ ಸಂಗೀತ-ಸಾಧನೆಯನ್ನು ಮಾಡುತ್ತಿದ್ದರು.
೧ ಇ. ಶಿವ ಮತ್ತು ನೃತ್ಯ :
‘ನಾಟ್ಯಶಾಸ್ತ್ರ’, ‘ಅಭಿನಯದರ್ಪಣ’, ಇಂತಹ ಅನೇಕ ಪ್ರಾಚೀನ ಗ್ರಂಥಗಳಲ್ಲಿ ಶಿವನ ವೈಶ್ವಿಕ ನೃತ್ಯದ ಬಗ್ಗೆ ವರ್ಣಿಸಲಾಗಿದೆ. ಶಿವನ ‘ನಟರಾಜ’ ಈ ರೂಪ ಮತ್ತು ನೃತ್ಯವು ತಾಂಡವ ನೃತ್ಯದೊಂದಿಗೆ ಸಂಬಂಧಿಸಿದೆ. ಶಿವನ ನಟರಾಜ ಈ ಸ್ವರೂಪವು ಸೃಷ್ಟಿ-ಸ್ಥಿತಿ-ಲಯಗಳ ಬ್ರಹ್ಮಾಂಡದ ಚಕ್ರದ ಸಂಕೇತವಾಗಿದೆ.
೧ ಇ ೧. ಶಿವನ ‘ನಟರಾಜ’ ಈ ರೂಪದ ಕೆಲವು ಆಧ್ಯಾತ್ಮಿಕ ವೈಶಿಷ್ಟ್ಯಗಳು : ನಟರಾಜನ ಚತುರ್ಭುಜ ವಿಗ್ರಹದ ಒಂದು ಕೈಯಲ್ಲಿ ಡಮರುಗವಿದೆ. ಅದು ಉತ್ಪತ್ತಿಯ ಪ್ರತೀಕವಾಗಿದೆ. ಇನ್ನೊಂದು ಕೈಯಲ್ಲಿನ ಅಗ್ನಿಯು ಸಂಹಾರದ ಪ್ರತೀಕವಾಗಿದೆ. ಈ ಸಂಹಾರವು ಚರಾಚರವನ್ನು ಶುದ್ಧೀಕರಿಸುವುದಾಗಿದೆ. ಶಿವನ ಮೂರನೇ ಕೈ ಅಭಯಹಸ್ತವಾಗಿದೆ. ಅವನು ತನ್ನ ನಾಲ್ಕನೇ ಕೈಯನ್ನು ಕೆಳಗೆ ಬಿಟ್ಟಿದ್ದಾನೆ. ಅದು ಶರಣಾಗತಿಯ ಮಾರ್ಗವನ್ನು ತೋರಿಸುತ್ತದೆ. ನಟರಾಜನ ಕಾಲಿನ ಕೆಳಗೆ ಇರುವ ‘ಮೈಯ್ಯಾಲಕಾಮ’ (‘ಅಪಸ್ಮಾರ’ ಅಥವಾ ‘ಮುಯಲಕ’) ಎಂಬ ರಾಕ್ಷಸ, ಅಂದರೆ ಅಹಂಕಾರ ಮತ್ತು ಅಜ್ಞಾನದ ಪ್ರತೀಕವಾಗಿದೆ.
೧ ಇ ೨. ಶಿವನ ತಾಂಡವ ನೃತ್ಯ : ಶಿವನ ತಾಂಡವದ ಒಟ್ಟು ೭ ವಿಧಗಳಿವೆ. ಈ ೭ ತಾಂಡವ ನೃತ್ಯದ ವಿಧಗಳಲ್ಲಿ ವಿಶೇಷವಾಗಿ ಆನಂದ, ಅದ್ಭುತ ಮತ್ತು ರೌದ್ರ ಈ ರಸಗಳ ನಿರ್ಮಿತಿ ಆಗುತ್ತದೆ.
ಅ. ಆನಂದ ತಾಂಡವ : ಪರಮಾನಂದದ ಅನುಭೂತಿಯನ್ನು ನೀಡುವ ಶಿವನ ತಾಂಡವ ನೃತ್ಯವನ್ನು ‘ಆನಂದ ತಾಂಡವ’, ಎಂದು ಕರೆಯುತ್ತಾರೆ.
ಆ. ಸಂಹಾರ ತಾಂಡವ – ಪ್ರಳಯವನ್ನು ಮಾಡುವ : ಅನೇಕ ಯೋಗಿಗಳು ಶಿವನ ಈ ಆನಂದ ರೂಪದ ಆರಾಧನೆಯನ್ನು ಮಾಡುತ್ತಾರೆ.

ಕ್ರೋಧಾತ್ಮಕ, ಹಾಗೆಯೇ ಅಧರ್ಮ, ಅಸುರ ಮತ್ತು ಪಾಪಗಳನ್ನು ನಾಶಗೊಳಿಸುವ ಸಂಹಾರಕ ರೂಪದಲ್ಲಿರುವ ಶಿವನ ತಾಂಡವ ನೃತ್ಯವನ್ನು ‘ಸಂಹಾರ ತಾಂಡವ’, ಎಂದು ಕರೆಯಲಾಗುತ್ತದೆ. ಶಿವನ ಈ ರೀತಿಯ ನೃತ್ಯದಿಂದ ಪ್ರಳಯವಾಗುತ್ತದೆ.
೧ ಇ ೩. ಶಿವ ಮತ್ತು ನೃತ್ಯದಲ್ಲಿನ ‘ಕರಣ’ : ನೃತ್ಯದಲ್ಲಿ ಗತಿಶೀಲ ನೃತ (ಟಿಪ್ಪಣಿ) ಮತ್ತು ವಿಲಾಸಪೂರ್ಣ ಪದವಿನ್ಯಾಸದಂತಹ ಚಟುವಟಿಕೆಗಳಿಗೆ ‘ಕರಣ’, ಎಂದು ಕರೆಯುತ್ತಾರೆ. ‘ಈ ಕರಣಗಳ ನಿರ್ಮಿತಿಯು ಸಾಕ್ಷಾತ್ ಶಿವನ ತಾಂಡವ ನೃತ್ಯದಿಂದಾಗಿದೆ’, ಎಂದು ಭರತಮುನಿಗಳು ನಾಟ್ಯಶಾಸ್ತ್ರದಲ್ಲಿ ಹೇಳಿದ್ದಾರೆ.
ಟಿಪ್ಪಣಿ – ನೃತ : ನರ್ತನದ ‘ನೃತ, ನಾಟ್ಯ ಮತ್ತು ನೃತ್ಯ’, ಹೀಗೆ ಮೂರು ವಿಧಗಳಿವೆ. ನೃತವೆಂದರೆ ಭಾವ ಮತ್ತು ಅಭಿನಯ ವಿರಹಿತ ತಾಲ-ಲಯಗಳಿಗೆ ಸಮನ್ವಯವನ್ನು ಸಾಧಿಸುತ್ತ ದೈಹಿಕ ಚಲನೆ ಮತ್ತು ಪದನ್ಯಾಸ ಈ ಎರಡೂ ಒಟ್ಟಿಗೆ ಮಾಡುವುದು.
೧ ಈ. ಶಿವ ಮತ್ತು ನಾಟ್ಯ
೧ ಈ ೧. ಆದ್ಯನಟ ಶಿವ : ‘ಶಿವನು ಆದಿನಟನಾಗಿದ್ದಾನೆ’, ಎಂಬ ಶ್ರದ್ಧೆಯಿರುವುದರಿಂದ ಅವನಿಗೆ ‘ನಟರಾಜ’ ಎಂಬ ಬಿರುದು ಬಂದಿದೆ. ಬ್ರಹ್ಮಾಂಡವು ನಟರಾಜನ ನೃತ್ಯಶಾಲೆಯಾಗಿದೆ. ನಟರಾಜನು ಹೇಗೆ ನರ್ತಕನಾಗಿದ್ದಾನೆಯೋ ಅದೇ ರೀತಿ ಅವನು ಅದರ ಸಾಕ್ಷಿಯೂ ಆಗಿದ್ದಾನೆ.’ (ಆಧಾರ : ಸನಾತನ ಗ್ರಂಥ ‘ಶಿವನ ಬಗೆಗಿನ ಅಧ್ಯಾತ್ಮಶಾಸ್ತ್ರೀಯ ವಿವೇಚನೆ’)
೧ ಈ ೨. ಆದಿಶಂಕರಾಚಾರ್ಯರು ‘ಶಿವ ಸ್ವರ್ಣಮಾಲಾ ಸ್ತುತಿ’ಯಲ್ಲಿ ಭಗವಾನ ಶಿವನನ್ನು ‘ಮಹಾನಟ’ ಎಂದು ಉಲ್ಲೇಖಿಸಿದ್ದಾರೆ.
೨. ಬ್ರಹ್ಮದೇವನು ಸಂಗೀತ, ನೃತ್ಯ, ನಾಟ್ಯ, ವಾಸ್ತು, ಶಿಲ್ಪ ಇತ್ಯಾದಿ ಕಲೆಗಳ ಮತ್ತು ಪಂಚಮವೇದಗಳ, ಅಂದರೆ ನಾಟ್ಯವೇದವನ್ನು ನಿರ್ಮಿಸುವನಾಗಿದ್ದಾನೆ.ಬ್ರಹ್ಮದೇವನಿಗೆ ‘ವೇದಗಳ ಮೂಲ’ ಎಂದು ಪರಿಗಣಿಸಲಾಗುತ್ತದೆ. ಸೃಷ್ಟಿಯ ಆರಂಭದಲ್ಲಿ ಬ್ರಹ್ಮದೇವನು ತನ್ನ ನಾಲ್ಕು ಮುಖಗಳಿಂದ ಅಪೌರುಷೇಯವಾದ ನಾಲ್ಕು ವೇದಗಳು (ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ) ಪ್ರಕಟಿಸಿದನು. ಅವುಗಳಲ್ಲಿ ಸಂಗೀತಕ್ಕೆ ಸಂಬಂಧಿಸಿದ ಸಾಮವೇದವೂ ಒಳಗೊಂಡಿದೆ. ಬ್ರಹ್ಮದೇವನಿಗೆ ಸಂಬಂಧಿಸಿದ ಸಂಗೀತದ ಪರಂಪರೆಯು ವೈದಿಕ ಕಾಲದಿಂದಲೂ ನಡೆದು ಬಂದಿದೆ. ಅದರ ಮಂತ್ರ, ಭಜನೆ ಮತ್ತು ಶಾಸ್ತ್ರೀಯ ಸಂಗೀತವು ವಿಕಸನಗೊಂಡವು. ವೇದಗಳ ಮೂಲಕ ಸಂಗೀತ, ನೃತ್ಯ, ನಾಟ್ಯ, ವಾಸ್ತು, ಶಿಲ್ಪ ಇತ್ಯಾದಿ ಕಲೆಗಳ ಉಗಮವಾಗಿರುವುದರಿಂದ ಬ್ರಹ್ಮದೇವನಿಗೆ ‘ಕಲೆಗಳ ನಿರ್ಮಾಪಕ’ ಎಂದು ಪರಿಗಣಿಸುತ್ತಾರೆ. ಬ್ರಹ್ಮದೇವನು ಪಂಚಮವೇದಗಳ, ಅಂದರೆ ನಾಟ್ಯವೇದಗಳನ್ನೂ ನಿರ್ಮಿಸಿದ್ದಾನೆ.’
(‘ಭಾರತೀಯ ಕಲೆಗಳಲ್ಲಿ ದೇವಿದೇವತೆಗಳಿಗೆ ಇರುವ ಸಂಬಂಧ’, ಈ ವಿಷಯವನ್ನು ಮುಂದಿನ ಭಾಗದಲ್ಲಿ ನಾವು ಕಲೆಗೆ ಸಂಬಂಧಿಸಿದ ಇತರ ದೇವತೆಗಳ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳಲಿದ್ದೇವೆ. – ಸೌ. ರೇಣುಕಾ ಕ್ರಾಕ್)
– ಸೌ. ರೇಣುಕಾ ಕ್ರಾಕ್, ಸಂಗೀತ ಮತ್ತು ನಾಟ್ಯ ಅಧ್ಯಯನ ಕಾರರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩.೧೨.೨೦೨೫)

ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !