ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರ

ಮೆಕ್ಸಿಕೋ ಸಿಟಿ (ಮೆಕ್ಸಿಕೋ) – ಮೆಕ್ಸಿಕೋ ಸೈನ್ಯವು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ದೇಶದ ಅತ್ಯಂತ ದೊಡ್ಡ ಮಾದಕವಸ್ತು ಕಳ್ಳಸಾಗಣೆದಾರ ನೆಮೆಸಿಯೊ ರುಬನ್ ಒಸೆಗುಯೆರಾ ಸರ್ವೆಂಟೆಸ್ ಉರ್ಫ್ ‘ಎಲ್ ಮೆಂಚೊ’ ನನ್ನು ಜಾಲಿಸ್ಕೋದಲ್ಲಿ ಹತ್ಯೆ ಮಾಡಲಾಗಿದೆ. ಜಗತ್ತಿನಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳ ಪೈಕಿ ಮೆಂಚೊ ಅತ್ಯಂತ ಪ್ರಮುಖನಾಗಿದ್ದನು. ಮೆಕ್ಸಿಕೋದ ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ಸೈನ್ಯದ ಕಾರ್ಯಾಚರಣೆಯ ವೇಳೆ ಮೆಂಚೊ ತೀವ್ರವಾಗಿ ಗಾಯಗೊಂಡಿದ್ದನು. ಅವನನ್ನು ವಿಮಾನದ ಮೂಲಕ ಮೆಕ್ಸಿಕೋ ಸಿಟಿಗೆ ಕರೆದೊಯ್ಯುವಾಗ ದಾರಿಯಲ್ಲೇ ಮೃತಪಟ್ಟಿದ್ದಾನೆ. ಅವನ ಮರಣದ ನಂತರ ಜಾಲಿಸ್ಕೋ ಸೇರಿದಂತೆ ಹಲವು ರಾಜ್ಯಗಳಲ್ಲಿ ಅವನ ಬೆಂಬಲಿಗರು ಹಿಂಸಾಚಾರ ಆರಂಭಿಸಿದ್ದು, ವಾಹನಗಳಿಗೆ ಬೆಂಕಿ ಹಚ್ಚುವುದು ಮತ್ತು ಹೆದ್ದಾರಿ ತಡೆ ನಡೆಸುತ್ತಿದ್ದಾರೆ.
ಅಮೆರಿಕಾ ಸರಕಾರವು ಎಲ್ ಮೆಂಚೊನ ಮೇಲೆ ೧೩೬ ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿತ್ತು. ಟ್ರಂಪ್ ಅವರು ಮೆಂಚೊನ ‘ಕಾರ್ಟೆಲ್’ ಗುಂಪನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿದ್ದರು. ಇದು ಮೆಕ್ಸಿಕೋದ ಅತ್ಯಂತ ಕುಖ್ಯಾತ ಅಪರಾಧ ಗುಂಪುಗಳಲ್ಲಿ ಒಂದಾಗಿದ್ದು, ಅಮೆರಿಕಾದ ೫೦ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಮೆಕ್ಸಿಕೋದಿಂದ ಅಮೆರಿಕಾಕ್ಕೆ ಈ ಗುಂಪು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿತ್ತು.
🔥 El Mencho Eliminated: Mexico Erupts After Cartel Kingpin eliminated
Nemesio Oseguera Cervantes, alias “El Mencho,” leader of the Jalisco New Generation Cartel, was killed in a Mexican military operation in Jalisco.
One of the world’s most wanted criminals, he carried a $15M… pic.twitter.com/2iRmNMiye2
— Sanatan Prabhat (@SanatanPrabhat) February 23, 2026
ಭಾರತೀಯರಿಗೆ ಮನೆಯಲ್ಲೇ ಇರುವಂತೆ ರಾಯಭಾರ ಕಚೇರಿಯಿಂದ ಸೂಚನೆ
ಮೆಕ್ಸಿಕೋದಲ್ಲಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾಗರಿಕರಿಗೆ ಜಾಗರೂಕರಾಗಿರಲು ಕರೆ ನೀಡಿದೆ. ಜಾಲಿಸ್ಕೋ, ತಮೌಲಿಪಾಸ್, ಮಿಚೋವಕನ್, ಗ್ವೆರೆರೊ ಮತ್ತು ನುವೆವೊ ಲಿಯೊನ್ ರಾಜ್ಯಗಳಲ್ಲಿರುವ ಭಾರತೀಯರು ಮುಂದಿನ ಸೂಚನೆ ಬರುವವರೆಗೆ ಮನೆಯಲ್ಲೇ ಇರಬೇಕು, ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸಬೇಕು, ಜಾಗರೂಕರಾಗಿರಬೇಕು ಮತ್ತು ಅನಗತ್ಯವಾಗಿ ಹೊರಗೆ ಹೋಗಬಾರದು ಎಂದು ಸೂಚಿಸಲಾಗಿದೆ. ಪರಿಸ್ಥಿತಿಯ ಬಗ್ಗೆ ಸ್ಥಳೀಯ ಮಾಧ್ಯಮಗಳ ಸುದ್ದಿಗಳ ಮೇಲೆ ನಿಗಾ ಇರಿಸಲು ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ೯೧೧ ಸಂಖ್ಯೆಗೆ ಸಂಪರ್ಕಿಸಲು ತಿಳಿಸಲಾಗಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ