೫ ನಿಮಿಷ ಪೊಲೀಸರನ್ನು ಪಕ್ಕಕ್ಕೆ ಸರಿಸಿದರೆ ಹಿಂದೂಗಳನ್ನು ಸೀಳಿ ಹಾಕುತ್ತೇವೆ! – ಮುಸಲ್ಮಾನರ ಬೆದರಿಕೆ Nepal Muslims Threaten Hindus

  • ನೇಪಾಳದಲ್ಲಿ ಮಸೀದಿಯ ಮುಂಭಾಗದಿಂದ ಹಿಂದೂಗಳು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದ್ದರಿಂದ ಮುಸಲ್ಮಾನರಿಂದ ಹಿಂಸಾಚಾರ

  • ೨ ಪೊಲೀಸರು ಸೇರಿದಂತೆ ೮ ಜನರಿಗೆ ಗಾಯ

  • ೧೮ ಮುಸಲ್ಮಾನರ ಬಂಧನ

ಕಾಠ್ಮಂಡು (ನೇಪಾಳ) – ನೇಪಾಳದ ಮಧೇಶ ಪ್ರಾಂತ್ಯದ ಭಾರತದ ಗಡಿಯ ಸಮೀಪವಿರುವ ರೌತಹಟ ಜಿಲ್ಲೆಯ ಗೌರ ನಗರಸಭೆ ವ್ಯಾಪ್ತಿಯಲ್ಲಿ, ಮಸೀದಿಯ ಮುಂಭಾಗದಿಂದ ಹಿಂದೂಗಳು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದ್ದಕ್ಕಾಗಿ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಲ್ಲುತೂರಾಟ ಮತ್ತು ಬೆಂಕಿ ಹಚ್ಚುವ ಕೃತ್ಯಗಳು ನಡೆದಿವೆ. ಇದರಲ್ಲಿ ೨ ಪೊಲೀಸರು ಸೇರಿದಂತೆ ೮ ಜನರು ಗಾಯಗೊಂಡಿದ್ದಾರೆ. ಹಿಂಸಾಚಾರದ ವಿಡಿಯೋವೊಂದರಲ್ಲಿ ಮುಸಲ್ಮಾನರು, ‘೫ ನಿಮಿಷ ಪೊಲೀಸರನ್ನು ಪಕ್ಕಕ್ಕೆ ಸರಿಸಿದರೆ ಹಿಂದೂಗಳನ್ನು ಸೀಳಿ ಹಾಕುತ್ತೇವೆ’ ಎಂದು ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಆಡಳಿತ ಮಂಡಳಿಯು ಅನಿರ್ದಿಷ್ಟ ಅವಧಿಯವರೆಗೆ ಸಂಚಾರ ನಿಷೇಧ (ಕರ್ಫ್ಯೂ) ಜಾರಿಗೊಳಿಸಿದೆ. ಆದರೂ ಗೌರ ಇಲ್ಲಿನ ಒಳಭಾಗಗಳಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಬೆಂಕಿ ಹಚ್ಚುವ ಘಟನೆಗಳು ಸಂಪೂರ್ಣವಾಗಿ ನಿಂತಿಲ್ಲ.

ಹಿಂಸಾಚಾರದ ಹಿನ್ನೆಲೆ

ಗೌರ ನಗರಸಭೆ-೬ ರ ಸನಗಡಾ ಗ್ರಾಮದಲ್ಲಿ ಫೆಬ್ರವರಿ ೧೯ ರ ಸಂಜೆ ಮಸೀದಿಯಲ್ಲಿ ರಮಜಾನ್ ಸಮಯದ ನಮಾಜ್ ನಡೆಯುತ್ತಿತ್ತು. ಅದೇ ಸಮಯದಲ್ಲಿ ಮಸೀದಿಯ ಮುಂಭಾಗದಿಂದ ವಾದ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿತ್ತು. ವಾದ್ಯ ಬಾರಿಸುವುದಕ್ಕೆ ಮುಸಲ್ಮಾನರು ಆಕ್ಷೇಪ ವ್ಯಕ್ತಪಡಿಸಿ ಮೆರವಣಿಗೆಯನ್ನು ತಡೆದರು. ತದನಂತರ ಎರಡೂ ಕಡೆಯ ನಡುವೆ ಘರ್ಷಣೆ ನಡೆಯಿತು. ಈ ವೇಳೆ ವಾಹನವೊಂದಕ್ಕೆ ಬೆಂಕಿ ಹಚ್ಚಲಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದೆಂದು ಆಡಳಿತವು ನೂರಾರು ಪೊಲೀಸರನ್ನು ನಿಯೋಜಿಸಿತು.

ಸಂಧಾನದ ನಂತರವೂ ಮತ್ತೆ ಕಲ್ಲುತೂರಾಟ

ಫೆಬ್ರವರಿ ೨೦ ರಂದು ಇಲ್ಲಿ ದಿನವಿಡೀ ಉದ್ವಿಗ್ನತೆ ಇತ್ತು; ಆದರೆ ಸಂಜೆ ಎರಡೂ ಕಡೆಯವರ ನಡುವೆ ೬ ಸೂತ್ರಗಳ ಒಪ್ಪಂದದೊಂದಿಗೆ ಸಂಧಾನವಾಯಿತು. ಆದರೂ ಫೆಬ್ರವರಿ ೨೧ ರ ಬೆಳಿಗ್ಗೆ ೯ ಗಂಟೆಗೆ ಮುಸಲ್ಮಾನರಿಂದ ಮತ್ತೆ ಕಲ್ಲುತೂರಾಟ ಆರಂಭವಾಯಿತು. ಇದರ ಪರಿಣಾಮ ಗೌರ ವಾರ್ಡ್ ಸಂಖ್ಯೆ ೪, ೫ ಮತ್ತು ೬ ರಲ್ಲೂ ಕಂಡುಬಂದಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು ಮತ್ತು ಅಶ್ರುವಾಯು ಸಿಡಿಸಿದರು. ಅಂತಿಮವಾಗಿ ಆಡಳಿತವು ಕರ್ಫ್ಯೂ ಜಾರಿಗೊಳಿಸಬೇಕಾಯಿತು.

ಸೇನೆ ನಿಯೋಜನೆಯಾದರೂ ಮುಂದುವರಿದ ಉದ್ವಿಗ್ನತೆ

ಮುಸಲ್ಮಾನರು ಅನೇಕ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ ೬ ಮೋಟಾರ್ ಸೈಕಲ್‌ಗಳು ಮತ್ತು ೨ ಜೀಪ್‌ಗಳನ್ನು ಸುಡಲಾಗಿದೆ. ಗೌರ ನಗರಸಭೆ-೪ ರ ಮಚಕುಟಿಯಾ ಟೋಲ್‌ನಲ್ಲಿ ದ್ವಿಚಕ್ರ ವಾಹನವೊಂದಕ್ಕೂ ಬೆಂಕಿ ಹಚ್ಚಲಾಗಿದೆ. ಕರ್ಫ್ಯೂ ಜಾರಿಗೊಳಿಸಿದ ನಂತರ ನೇಪಾಳ ಪೊಲೀಸ್ ಮತ್ತು ನೇಪಾಳಿ ಸೈನ್ಯವನ್ನು ನಿಯೋಜಿಸಲಾಗಿದೆ. ಮುಖ್ಯ ರಸ್ತೆ ಪರಿಸರವು ತುಲನಾತ್ಮಕವಾಗಿ ಶಾಂತವಾಗಿದ್ದರೂ, ಒಳಭಾಗಗಳಲ್ಲಿ ಇಂದಿಗೂ ಉದ್ವಿಗ್ನ ಸ್ಥಿತಿ ಇದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ೧೮ ಮುಸಲ್ಮಾನರನ್ನು ಬಂಧಿಸಿದ್ದಾರೆ.

ಮುಖ್ಯ ಜಿಲ್ಲಾಧಿಕಾರಿ ದಿನೇಶ ಸಾಗರ ಭೂಸಾಲ ಅವರು ಮಾತನಾಡಿ, ಪೂರ್ವಕ್ಕೆ ಮುಡಬಲವಾ ಗೇಟ್, ಪಶ್ಚಿಮಕ್ಕೆ ಲಾಲಬಕೈಯಾ ಅಣೆಕಟ್ಟು, ಉತ್ತರಕ್ಕೆ ಬಮ್ ಕಾಲುವೆ ಮತ್ತು ದಕ್ಷಿಣಕ್ಕೆ ಗೌರ ಕಸ್ಟಮ್ಸ್ ಕಚೇರಿಯವರೆಗೆ ಕರ್ಫ್ಯೂ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ನೇಪಾಳದಲ್ಲಿ ಹಿಂದೂಗಳ ಜನಸಂಖ್ಯೆ ಶೇ. ೮೧ ರಷ್ಟಿದ್ದರೆ, ಮುಸಲ್ಮಾನರ ಸಂಖ್ಯೆ ಕೇವಲ ಶೇ. ೫ ರಷ್ಟಿದೆ. ಹೀಗಿದ್ದರೂ ಅವರು ಹಿಂದೂಗಳನ್ನು ಸೀಳಿ ಹಾಕುವ ಬೆದರಿಕೆ ಹಾಕುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!
  • ಭಾರತದಲ್ಲಿ ಏನು ನಡೆಯುತ್ತಿದೆಯೋ, ಅದೇ ಈಗ ನೇಪಾಳದಲ್ಲೂ ನಡೆಯುತ್ತಿದೆ. ಇದರಿಂದ ಜಗತ್ತಿನಾದ್ಯಂತ ಇರುವ ಹಿಂದೂಗಳು ಹೇಡಿಗಳಾಗಿದ್ದಾರೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಈ ಮಾನಸಿಕತೆಯಿಂದ ಹಿಂದೂಗಳು ಹೊರಬರದಿದ್ದರೆ, ಮುಂದಿನ ಕೆಲವು ವರ್ಷಗಳಲ್ಲಿ ಅವರ ಅಸ್ತಿತ್ವವೇ ನಾಶವಾಗಲಿದೆ. ಈ ಬಗ್ಗೆ ಆಶ್ಚರ್ಯ ಪಡಬಾರದು!
  • ಭಾರತದಲ್ಲಿ ನಮಾಜ್ ಸಮಯದಲ್ಲಿ ಮಸೀದಿಯ ಮುಂದೆ ವಾದ್ಯಗಳನ್ನು ಬಾರಿಸಿದಾಗ ಮುಸಲ್ಮಾನರು ದಾಳಿ ನಡೆಸುವ ಘಟನೆಗಳು ಸದಾ ನಡೆಯುತ್ತಲೇ ಇರುತ್ತವೆ. ಆದ್ದರಿಂದ ಭಾರತದಲ್ಲಿ ಇಂತಹ ಸಮಯದಲ್ಲಿ ಪೊಲೀಸರು ಜಾಗರೂಕರಾಗಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ!