
ಪ್ರಶ್ನೆ : ಅಂಕೆ ಮತ್ತು ಅವುಗಳ ಉಚ್ಚಾರ ಇವುಗಳ ಸ್ಪಂದನಗಳು ಪರಸ್ಪರ ಪೂರಕವಾಗಿರುತ್ತವೆಯೇ ? ಉದಾ. ‘೧’ ಈ ಅಂಕೆ ಮತ್ತು ‘ಒಂದು’ ಈ ಶಬ್ದ ಇವುಗಳ ಸ್ಪಂದನಗಳು ಒಂದಕ್ಕೊಂದು ಪೂರಕವಾಗಿರುತ್ತವೆಯೇ ? ಇದ್ದರೆ ಅದರ ಶಾಸ್ತ್ರವೇನು ?
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೩.೯.೨೦೨೫)
ಶ್ರೀ. ರಾಮ ಹೊನಪ :
೧. ಅಂಕೆ ಮತ್ತು ಕುಂಡಲಿನಿಶಕ್ತಿ ಇವುಗಳ ಪರಸ್ಪರ ಸಂಬಂಧ !
ವ್ಯಕ್ತಿಯ ಮೂಲಾಧಾರಚಕ್ರದ ಮೇಲೆ ಒಂದು ಸೂಕ್ಷ್ಮ ಕಮಲವಿರುತ್ತದೆ. ಅದರಲ್ಲಿ ಸರಸ್ವತಿದೇವಿಯ ಅಂಕಶಕ್ತಿ ಇದೆ. ಅದಕ್ಕೆ ‘ಬೀಜಶಕ್ತಿ’, ಎಂದಲೂ ಕರೆಯುತ್ತಾರೆ. ಅಂಕಶಕ್ತಿಯಿಂದ ಕಮಲದ ೯ ಸೂಕ್ಷ್ಮ ಪಕಳೆಗಳು ತಯಾರಾಗುತ್ತವೆ. ಈ ಸೂಕ್ಷ್ಮ ಕಮಲವು ಅನುಕ್ರಮವಾಗಿ ೦ ದಿಂದ ೯ ಈ ಅಂಕೆಗಳಿಗೆ ಸಂಬಂಧಿಸಿವೆ. ಇವುಗಳಲ್ಲಿನ ‘೦’ ಈ ಸಂಖ್ಯೆಯು ಕಮಲದ ಮಧ್ಯಭಾಗಕ್ಕೆ ಸಂಬಂಧಿಸಿದೆ ಮತ್ತು ೧ ರಿಂದ ೯ ಅಂಕೆಗಳು ಕಮಲದ ೯ ಪಕಳೆಗಳಿಗೆ ಸಂಬಂಧಿಸಿವೆ.
೨. ಅಂಕಿಗಳ ವೈಶಿಷ್ಟ್ಯಗಳು
ವ್ಯಕ್ತಿಯ ಮೂಲಾಧಾರಚಕ್ರದ ಮೇಲಿರುವ ಕಮಲದಲ್ಲಿನ ಅಂಕಶಕ್ತಿಯಲ್ಲಿ ತ್ರಿಗುಣ ಮತ್ತು ಪಂಚತತ್ತ್ವಗಳಿವೆ. ಈ ಶಕ್ತಿಯಲ್ಲಿ ಕಾರ್ಯಕ್ಕನುಸಾರ ವಿಸ್ತಾರ, ಅಂದರೆ ೦ ದಿಂದ ೯ ಅಂಕೆಗಳಿವೆ. ಈ ಅಂಕೆಗಳು ಗಣಿತದ ಮೂಲವಾಗಿವೆ. ಆದ್ದರಿಂದ ಅಂಕೆಗಳಿಗೆ ಗಣಿತದ ‘ನವಮೂಲ’ ಅಥವಾ ‘ನವಮೂಳ’, ಎಂದು ಕರೆಯುತ್ತಾರೆ. ಅಂಕಶಕ್ತಿಯ ಹಂತಹಂತಗಳಿಂದ ಆದ ವಿಸ್ತಾರವೆಂದರೆ ವಿವಿಧ ಅಂಕೆಗಳು.
೩. ಸರಸ್ವತಿದೇವಿಯಿಂದ ನಿರ್ಮಿತಿಯಾದ ಅಂಕೆಶಾಸ್ತ್ರ

ವ್ಯಕ್ತಿಯ ಮೂಲಾಧಾರಚಕ್ರದಲ್ಲಿನ ಅಂಕಿಶಕ್ತಿಯು ಸರಸ್ವತಿ ದೇವಿಯ ಅಂಶವಾಗಿದೆ. ಅಂಕಿಶಕ್ತಿಯಲ್ಲಿ ಸರಸ್ವತಿದೇವಿಯ ‘ಗಣನಿ’ ಮತ್ತು ‘ಮಾಲಿನಿ’, ಈ ಎರಡು ಉಪಶಕ್ತಿಗಳಿವೆ.
೩ ಅ. ಸರಸ್ವತಿದೇವಿಯ ‘ಗಣಿನಿ’ ಈ ಶಕ್ತಿಯ ಕಾರ್ಯ : ಅಂಕೆಗಳ ಕ್ರಮವನ್ನು ನಿರ್ಧರಿಸುವುದು ‘ಗಣಿನಿ ಶಕ್ತಿ’ಯ ಕಾರ್ಯವಾಗಿದೆ. ವ್ಯಕ್ತಿಯ ಮೂಲಾಧಾರಚಕ್ರದ ಮೇಲಿನ ಕಮಲದಲ್ಲಿನ ಅಂಕಶಕ್ತಿಯ ಪ್ರಕಟೀಕರಣವು ಯಾವಾಗ ಹಂತಹಂತಗಳಿಂದ ಆಗುತ್ತದೆಯೋ, ಆಗ ಆ ಕಮಲದಿಂದ ಅಂಕೆಗಳಿಗೆ ಸಂಬಂಧಿಸಿದ ಒಂದೊಂದು ಪಕಳೆಗಳು ಅರಳುತ್ತವೆ.
ಯಾವಾಗ ವ್ಯಕ್ತಿಯ ಮೂಲಾಧಾರಚಕ್ರದ ಮೇಲೆ ಕಮಲದಲ್ಲಿನ ಮೊದಲನೇ ಸೂಕ್ಷ್ಮ ಪಕಳೆಯು (ದಳವು) ಅರಳುತ್ತದೆಯೋ, ಆಗ ‘ಗಣಿನಿ’ ಈ ಶಕ್ತಿಯಿಂದ ಆ ಪಕಳೆಗೆ ‘೧’ ಎಂಬ ಅಂಕ ಪ್ರಾಪ್ತವಾಗುತ್ತದೆ. ಅನಂತರ ಅಂಕಶಕ್ತಿಯಿಂದ ಇನ್ನೊಂದು ಪಕಳೆಯ ನಿರ್ಮಿತಿ ಆಗುತ್ತದೆ. ಆ ಪಕಳೆಗೆ ‘ಗಣನಿ’ ಈ ಶಕ್ತಿಯಿಂದ ‘೨’ ಎಂಬ ಅಂಕೆ ಪ್ರಾಪ್ತವಾಗುತ್ತದೆ. ಅನಂತರ ಕ್ರಮವಾಗಿ ೩ ರಿಂದ ೯ ಪಕಳೆಗಳಿಗಾಗಿ ಕ್ರಮವಾಗಿ ೩ ರಿಂದ ೯ ಎಂಬ ಅಂಕೆಗಳು ಪ್ರಾಪ್ತವಾಗುತ್ತವೆ. ಇವುಗಳಿಂದ ವ್ಯಕ್ತಿಯ ಮೂಲಾಧಾರಚಕ್ರದ ಮೇಲೆ ೯ ಪಕಳೆಗಳ (ದಳಗಳ) ಕಮಲವು ಸಿದ್ಧವಾಗುತ್ತದೆ.
೩ ಆ. ಸರಸ್ವತಿದೇವಿಯ ‘ಮಾಲಿನಿ’, ಈ ಶಕ್ತಿಯ ಕಾರ್ಯ : ಸರಸ್ವತಿದೇವಿಯ ‘ಮಾಲಿನಿ’ ಈ ಶಕ್ತಿಯು ವಿವಿಧ ಅಂಕೆಗಳು, ಗುಣಾಕಾರ, ಭಾಗಾಕಾರ ಮತ್ತು ವ್ಯವಕಲನ ಇತ್ಯಾದಿ ಗಣಿತದ ಮಾಲೆಯನ್ನು ಸಿದ್ಧಪಡಿಸಿತು. ಆದ್ದರಿಂದ ಅದಕ್ಕೆ ‘ಮಾಲಿನಿ’, ಎಂದು ಕರೆಯುತ್ತಾರೆ. ‘ಮಾಲಿನಿ’ ಎಂಬ ಶಕ್ತಿಯು ಗಣಿತದ ಜ್ಞಾನವನ್ನು ಋಷಿಗಳಿಗೆ ಸೂಕ್ಷ್ಮದಿಂದ ಪ್ರದಾನಿಸಿತು.
೪. ಋಷಿಗಳ ಅಂಕಗಳ ಬಗೆಗಿನ ಅದ್ಭುತ ಕಾರ್ಯ !
೪ ಅ. ಋಷಿಗಳಿಗೆ ಮೂಲಾಧಾರಚಕ್ರದ ಮೇಲಿನ ಅಂಕೆಗಳ ಬಗ್ಗೆ ಸಂಪೂರ್ಣ ಜ್ಞಾನವಾಗುವುದು : ಸತ್ಯಯುಗದಲ್ಲಿನ ಋಷಿಗಳಿಗೆ ‘ವ್ಯಕ್ತಿಯ ಕುಂಡಲಿನೀಚಕ್ರದಲ್ಲಿನ ಮೂಲಾಧಾರಚಕ್ರದ ಮೇಲಿನ ಅಂಕಶಕ್ತಿ, ಅದರಿಂದ ಉತ್ಪತ್ತಿಯಾಗುವ ಅಂಕೆಗಳು, ಅಂಕೆಗಳ ಗುಣಧರ್ಮ, ಅಂಕೆಗಳಿಗೆ ಸಂಬಂಧಿಸಿದ ‘ಗಣನಿ’ ಮತ್ತು ‘ಮಾಲಿನಿ’ ಎಂಬ ಶಕ್ತಿಗಳ ಕಾರ್ಯ’, ಇವುಗಳ ಬಗ್ಗೆ ಸೂಕ್ಷ್ಮದಿಂದ ಜ್ಞಾನ ಪ್ರಾಪ್ತವಾಯಿತು.
೪ ಆ. ಋಷಿಗಳು ಈಶ್ವರೀ ಜ್ಞಾನದಿಂದ ಸಂಖ್ಯೆಗಳ ಆಕಾರ ಮತ್ತು ಉಚ್ಚಾರವನ್ನು ನಿರ್ಧರಿಸಿದರು : ಋಷಿಗಳಿಗೆ ವ್ಯಕ್ತಿಯ ಮೂಲಾಧಾರಚಕ್ರದ ಮೇಲಿನ ಕಮಲದ ಅಂಕೆಗಳ ಶಕ್ತಿಯಲ್ಲಿ ಯಾವುದೇ ಆಕಾರವು ಕಾಣಿಸಲಿಲ್ಲ. ಅಲ್ಲಿ ಏನೂ ಕಾಣಿಸದಿರುವುದರಿಂದ ಋಷಿಗಳು ಅದಕ್ಕೆ ‘ಶೂನ್ಯ’ ಎಂಬ ಅಂಕೆಯನ್ನು ನೀಡಿದರು. ಅನಂತರ ಋಷಿಗಳಿಗೆ ಕಮಲದ ಮೊದಲನೇ ಪಕಳೆಯಲ್ಲಿ ೧, ಎರಡನೇಯ ಪಕಳೆಯಲ್ಲಿ ೨, ಹೀಗೆ ಕ್ರಮವಾಗಿ ೯ ಪಕಳೆಗಳ ವರೆಗೆ ಕ್ರಮವಾಗಿ ೧ ರಿಂದ ೯ ಅಂಕೆಗಳು ಕಾಣಿಸಿದವು.
ಋಷಿಗಳು ‘ಮೊದಲು ‘೦’ ಎಂಬ ಸಂಖ್ಯೆಯೊಂದಿಗೆ ಸ್ಪಂದಿಸುವ ‘ಶೂನ್ಯ’ ಎಂಬ ಶಬ್ದವನ್ನು ಈಶ್ವರೀ ಜ್ಞಾನದಿಂದ ಶೋಧಿಸಿದರು. ಅನಂತರ ಋಷಿಗಳು ‘ಶೂನ್ಯ’ ಎಂಬ ಪದವನ್ನು ಉಚ್ಚರಿಸಲು ಆವಶ್ಯಕವಾಗಿರುವ ಅಗ್ನಿಯು ಮಣಿಪುರಚಕ್ರದ ಮೇಲೆ ಸುಲಭವಾಗಿ ದೊರಕುತ್ತದೆಯೇ ? ನಂತರ ಆ ಪದವು ಮುಂದೆ ಸ್ವರಯಂತ್ರದಿಂದ ಸುಲಭವಾಗಿ ಉಚ್ಚರಿಸಬಹುದೇ ?’, ಎಂಬುದರ ಬಗ್ಗೆ ಸೂಕ್ಷ್ಮದಿಂದ ಅಧ್ಯಯನ ಮಾಡಿದರು. ಈ ಅಧ್ಯಯನದ ನಂತರ ಋಷಿಗಳು ೦ ಈ ಅಂಕೆಗೆ ‘ಶೂನ್ಯ’, ಎಂಬ ಶಬ್ದವನ್ನು ನೀಡಿದರು. ನಂತರ ಋಷಿಗಳು ಈ ಅಂಕೆಯ ಆಕಾರ ಮತ್ತು ಉಚ್ಚಾರವನ್ನು ನಿಶ್ಚಿತಗೊಳಿಸಿದರು. ಈ ಪ್ರಕ್ರಿಯೆಯನ್ನು ಋಷಿಗಳು ಮುಂದೆ ೧ ರಿಂದ ೯ ರ ವರೆಗಿನ ಅಂಕೆಗಳ ವಿಷಯದಲ್ಲಿಯೂ ಮಾಡಿದರು.
೪ ಇ. ೧೦ ರಿಂದ ೧೦೦ ಈ ಸಂಖ್ಯೆಗಳ ಉತ್ಪತ್ತಿ : ಋಷಿಗಳು ಮೊತ್ತಮೊದಲು ೦ ದಿಂದ ೯ ಈ ಅಂಕೆಗಳ ಆಕಾರ ಮತ್ತು ಉಚ್ಚಾರವನ್ನು ನಿಶ್ಚಿತಪಡಿಸಿದರು. ಈ ಅಂಕೆಗಳನ್ನು ಆ ಕಾಲದ ಜನರು ತಮ್ಮ ದೈನಂದಿನ ಜೀವನದಲ್ಲಿ ಬಳಸತೊಡಗಿದರು. ಅನಂತರ ಜನಸಂಖ್ಯೆ ಮತ್ತು ಪರಸ್ಪರರ ವಹಿವಾಟುಗಳು ಕ್ರಮೇಣ ಹೆಚ್ಚಾಗತೊಡಗಿದವು. ಆಗ ಕೆಲವು ಋಷಿಗಳು ೦ ದಿಂದ ೯ ಈ ಸಂಖ್ಯೆಗಳ ಆಧಾರದಿಂದ ಮುಂದೆ ೧೦ ರಿಂದ ೧೦೦ ಈ ಸಂಖ್ಯೆಗಳನ್ನು ‘ವ್ಯವಹಾರ ಮತ್ತು ಶಿಕ್ಷಣ’ಕ್ಕಾಗಿ ದಾಖಲಿಸಿದರು.’
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ದೊರಕಿದ ದಿನಾಂಕ, ಸಮಯ ಮತ್ತು ಒಟ್ಟು ಅವಧಿ : ೨.೧೦.೨೦೨೫, ಬೆಳಗ್ಗೆ ೧೦.೩೦, ೧೫ ಸೆಕೆಂಡ್)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !
ಡ್ರೋನ್ನಿಂದ ಉಡಾಯಿಸಬಹುದಾದ ಕ್ಷಿಪಣಿಯ ಪರೀಕ್ಷೆ ಪೂರ್ಣ