|

ಕರ್ಣಾವತಿ (ಗುಜರಾತ) – ತನ್ನ ಗುರುತನ್ನು ಮರೆಮಾಚಿ ಹುಡುಗಿಯರನ್ನು ಜಾಲಕ್ಕೆ ಎಳೆದುಕೊಳ್ಳುವವರಿಗೆ ಸರಕಾರ ಪಾಠವನ್ನು ಕಲಿಸಲಿದೆ, ಅವರು ಮತ್ತೆ ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಯಾರಾದರೂ ‘ಸಲೀಂ’ ತನ್ನನ್ನು ‘ಸುರೇಶ’ ಎಂದು ಹೇಳಿಕೊಂಡು ನಮ್ಮ ಹುಡುಗಿಯರನ್ನು ವಂಚಿಸಿದರೆ, ಆತನನ್ನು ಕ್ಷಮಿಸಲಾಗುವುದಿಲ್ಲ. ಸರಕಾರವು ಪ್ರೇಮದ ವಿರೋಧಿಯಲ್ಲ; ಆದರೆ ವಂಚನೆ ಮತ್ತು ನಕಲಿ ಗುರುತಿನ ಆಧಾರದ ಮೇಲೆ ನಡೆಯುವ ಇಂತಹ ಪ್ರಕರಣಗಳನ್ನು ಸಹಿಸುವುದಿಲ್ಲ ಎಂದು ಗುಜರಾತ ಗೃಹಸಚಿವ ಹರ್ಷ ಸಂಘವಿ ಅವರು ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದರು. ಮನೆಯಿಂದ ಓಡಿಹೋಗಿ ಮದುವೆಯಾಗುವವರಿಗೆ ವಿವಾಹ ನೋಂದಣಿ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
"If 'Salim' poses as 'Suresh' to deceive, he WILL NOT be spared!" 🚨🔥
Deputy Chief Minister Harsh Sanghavi (@sanghaviharsh) issues a fierce warning against ‘Love Jihad’
⚠️ Total Crackdown: Deep probes into all suspicious marriage registrations.
👪 Family First: Parental… pic.twitter.com/YXE2iQ5vGA
— Sanatan Prabhat (@SanatanPrabhat) February 21, 2026
ಹೊಸ ನಿಯಮಗಳ ಪ್ರಕಾರ, ವಿವಾಹ ನೋಂದಣಿಯ ಸಮಯದಲ್ಲಿ ಎರಡೂ ಕಡೆಯವರ ಗುರುತು, ವಯಸ್ಸು ಮತ್ತು ಒಪ್ಪಿಗೆಯ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ. ಸರಕಾರವು ಈ ಪ್ರಕ್ರಿಯೆಯಲ್ಲಿ ಪೋಷಕರ ಮಾಹಿತಿ ಮತ್ತು ಅವರ ಪಾತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಅವರ ಒಪ್ಪಿಗೆಯಿಲ್ಲದೆ ವಿವಾಹ ನಡೆಯಲು ಸಾಧ್ಯವಾಗುವುದಿಲ್ಲ.
ಮುಸಲ್ಮಾನರು ಮತ್ತು ಮಸೀದಿಗಳೇ ಇಲ್ಲದ ಜಿಲ್ಲೆಗಳಿಂದ ‘ನಿಕಾಹ್’ (ವಿವಾಹ) ಪ್ರಮಾಣಪತ್ರಗಳ ವಿತರಣೆ!
ಗೃಹಸಚಿವ ಹರ್ಷ ಸಂಘವಿ ಅವರು ಮಾತನಾಡಿ, ಪಂಚಮಹಲ್ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಮುಸಲ್ಮಾನ ಅಥವಾ ಒಂದು ಮಸೀದಿಯೂ ಇರಲಿಲ್ಲ. ಆದರೂ ಇಲ್ಲಿ ನೂರಾರು ನಿಕಾಹ್ (ವಿವಾಹ) ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಬನಾಸಕಾಂತ, ನವಸಾರಿ ಮತ್ತು ಮೆಹ್ಸಾನಾ ಜಿಲ್ಲೆಗಳಲ್ಲೂ ಇಂತಹದ್ದೇ ಪ್ರಕರಣಗಳು ನಡೆದಿವೆ. ಸರಕಾರವು ಪ್ರೇಮವಿವಾಹ ವಿರೋಧಿಯಲ್ಲ; ಆದರೆ ಹುಡುಗಿಯರ ಗೌರವ ಮತ್ತು ಸನಾತನ ಧರ್ಮದ ರಕ್ಷಣೆಗಾಗಿ ಈ ಸುಧಾರಣೆಯನ್ನು ತರಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!