
‘ಎಲ್ಲಾ ದೇವರು ಸಮಾನರು, ಎಲ್ಲಾ ದೇವರು ಒಂದು’ ಎಂಬುದು ಹಿಂದೂಗಳ ನಂಬಿಕೆ. ‘ನಾವು ಯಾವುದೇ ದೇವರಿಗೆ ನಮಸ್ಕರಿಸಿದರೂ, ಅದು ನಮ್ಮ ದೇವರಿಗೇ ತಲುಪುತ್ತದೆ’ ಎಂದು ಹಿಂದೂಗಳು ಭಾವಿಸುತ್ತಾರೆ. ಆದರೆ ಅಬ್ರಹಾಮಿಕ್ ಪಂಥಗಳು (ಯಹೂದಿ, ಕ್ರೈಸ್ತ ಮತ್ತು ಇಸ್ಲಾಂ) ಹಾಗೆ ನಂಬುವುದಿಲ್ಲ. ಅವರು ‘ದೇವರು ಒಬ್ಬನೇ’ ಎಂದು ಹೇಳುತ್ತಾರೆ. ಪ್ರಗತಿಪರರು ಸಂದರ್ಶನವೊಂದರಲ್ಲಿ ಪಾದ್ರಿಯೊಬ್ಬರಿಗೆ ‘ಎಲ್ಲಾ ಧರ್ಮಗಳು ಸಮಾನ, ಎಲ್ಲಾ ದೇವರುಗಳು ಒಂದು’ ಎಂದಾಗ, ಅದಕ್ಕೆ ಅವರು ನೀಡಿದ ಉತ್ತರ ಬಹಳ ಮುಖ್ಯವಾದುದು. ಅವರು ಹೇಳಿದರು, (ದೇವರು ಒಬ್ಬನೇ. ನೀವು ರಾಮ, ಕೃಷ್ಣ ಎನ್ನುತ್ತೀರಲ್ಲವೇ, ಅವರು ದೇವರಲ್ಲ, ಅವರು ಕೇವಲ ಸಂತರು !’)ಪ್ರಗತಿಪರರು ಯಾರನ್ನು ‘ಸೆಕ್ಯುಲರ್’ (ಜಾತ್ಯತೀತ) ಎಂದು ಪರಿಗಣಿಸುತ್ತಾರೋ, ಆ ಸೂಫಿಗಳೂ ಕೂಡ ‘ದೇವರು ಒಬ್ಬನೇ’, ಎಂದೇ ಹೇಳುತ್ತಿದ್ದರು. ಅವರು ಎಲ್ಲಾ ದೇವರುಗಳನ್ನು ಸಮಾನವಾಗಿ ಗೌರವಿಸುವವರಾಗಿರಲಿಲ್ಲ.
‘ಎಲ್ಲಾ ದೇವರುಗಳು ಒಂದು’ ಮತ್ತು ‘ದೇವರು ಒಬ್ಬನೇ’ ಎನ್ನುವುದರ ನಡುವಿನ ವ್ಯತ್ಯಾಸ ಸಮಾಜವಾದಿಗಳಿಗೆ ಮತ್ತು ಪ್ರಗತಿಪರರಿಗೆ ತಿಳಿಯುವಷ್ಟರಲ್ಲಿ ಹಿಂದೂಗಳು ನಾಶವಾಗಿರುತ್ತಾರೆ. ‘ಹಿಂದೂ-ಮುಸಲ್ಮಾನ ಮಾಡಬೇಡಿ’ ಎಂಬ ಪ್ರಗತಿಪರರ ‘ಸೆಕ್ಯುಲರ್’ ಅಸ್ತ್ರವೂ ಅಷ್ಟರೊಳಗೆ ನಿಷ್ಕ್ರಿಯವಾಗಿರುತ್ತದೆ. ಎಲ್ಲೆಡೆ ಇಸ್ಲಾಂನ ಆಡಳಿತ ಇದ್ದರೆ ಮತ್ತು ‘ನಾವು ಇದೇ ಕಟುನಿಷ್ಠೆಯ ವಿರುದ್ಧ ಧ್ವನಿ ಎತ್ತುತ್ತಿದ್ದೆವು’, ಎಂದು ಇದೇ ‘ಸೆಕ್ಯುಲರ್ ಪ್ರಗತಿಪರರು’ ಅಂದು ಅಳುತ್ತಾ ಪಿಸುಗುಟ್ಟುತ್ತಾರೆ; ಒಂದು ವೇಳೆ ಅವರು ಅಲ್ಲಿಯವರೆಗೆ ಜೀವಂತವಾಗಿದ್ದರೆ ಮಾತ್ರ !
– ಶ್ರೀ. ಪ್ರಸನ್ನ ಶಿವರಾಮ ಬರ್ವೆ, ಪಣಜಿ, ಗೋವಾ.
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು